Signature Therapy: ಭೇದಿ, ತಲೆನೋವು ಸೇರಿದಂತೆ ನಾನಾ ಖಾಯಿಲೆಗಳಿಗೆ ಹೊಸಾ ಟ್ರೀಟ್ಮೆಂಟ್, ಸಿಗ್ನೇಚರ್ ಥೆರಪಿ ಬಗ್ಗೆ ತಿಳ್ಕೊಳಿ

ಸಿಗ್ನೇಚರ್ ಥೆರಪಿ ಎಂಬುದು ಹಲವು ಬಗೆಯ ಮಸಾಜ್ ಗಳ ಒಳಗೊಂಡಿರುವ ಒಂದು ವಿಶಿಷ್ಟ ರೀತಿಯ ಮಸಾಜ್ ಆಗಿದೆ.

ಸಿಗ್ನೇಚರ್ ಥೆರಪಿ ಬಗ್ಗೆ ಗೊತ್ತೇ ನಿಮಗೆ?

ಸಿಗ್ನೇಚರ್ ಥೆರಪಿ ಬಗ್ಗೆ ಗೊತ್ತೇ ನಿಮಗೆ?

  • Share this:
ಇಂದಿನ ರಭಸದ ಹಾಗೂ ಒತ್ತಡಗಳಿಂದ ಕೂಡಿದ ಜೀವನದಲ್ಲಿ ಒಮ್ಮೊಮ್ಮೆ ಮನುಷ್ಯನಿಗೆ ಸಂಪೂರ್ಣ ವಿಶ್ರಾಂತಿ ಬೇಕೆಂದು ಅನಿಸುವುದು ಸಾಮಾನ್ಯ. ಅದರಲ್ಲೂ ಇಂದು ಸಾಕಷ್ಟು ಒತ್ತಡದ ಕೆಲಸ ನಿರ್ವಹಣೆ ಮಾಡುತ್ತಿರುವುದರಿಂದ ಒಂದೊಮ್ಮೆಯಾದರೂ ದೇಹಕ್ಕೆ ಅತ್ಯುತ್ತಮವಾದ ವಿಶ್ರಾಂತಿ ಸಿಗಬೇಕೆಂದು ಬಯಸುತ್ತಾನೆ. ಅಷ್ಟೆ ಅಲ್ಲದೆ, ಇಂದಿನ ಆಹಾರ ಪದ್ಧತಿಗಳಿಂದಾಗಿ (Food Habits) ದೇಹದಲ್ಲಿ ಅನವಶ್ಯಕವಾದ ಕಲ್ಮಶ ಹಾಗೂ ವಿಷದಂತಹ ಪದಾರ್ಥಗಳು ಸೇರಿರುತ್ತವೆ. ಅದರಿಂದಲೂ ಮನುಷ್ಯ ಮುಕ್ತಿ ಪಡೆಯಲು ಖಂಡಿತ (Good Lifestyle) ಬಯಸುತ್ತಾನೆ. ಹಾಗಾದರೆ, ನೀವೂ ನಿಮ್ಮ ದೇಹಕ್ಕೆ ಅದ್ಭುತವಾದ ವಿಶ್ರಾಂತಿ ಹಾಗೂ ಕಲ್ಮಶಮುಕ್ತತೆ ಪಡೆಯಬೇಕೆಂದಿದ್ದರೆ ಒಂದೊಮ್ಮೆ ಸಿಗ್ನೇಚರ್ ಥೆರಪಿ (Signature Therapy) ಪಡೆಯಿರಿ. ಇದರಿಂದ ಅತ್ಯುತ್ತಮ ಫಲಿತಾಂಶ ನಿಮಗೆ ದೊರಕಬಹುದು.

ಆದರೆ, ಒಂದನ್ನು ನೆನಪಿಡಿ, ಈ ಚಿಕಿತ್ಸೆಗೆ ಒಳಗಾಗುವ ಮುಂಚೆ ಇದನ್ನು ನೀಡುವವರಿಗೆ ನೀವು ನಿಮ್ಮ ವೈದ್ಯಕೀಯ ಇತಿಹಾಸ ಹಾಗೂ ಸದ್ಯದ ನಿಮ್ಮ ದಿನಚರಿಯ ಬಗ್ಗೆ ಹೇಳುವುದು ಮುಖ್ಯವಾಗಿದೆ. ನಿಮಗೆ ಮೂಳೆ ಅಥವಾ ಮಾಂಸಖಂಡಗಳ ನೋವೇನಾದರೂ ಇದ್ದಲ್ಲಿ ನಿಮ್ಮ ವೈದ್ಯರ ಬಳಿ ತೆರಳಿ ಈ ಬಗ್ಗೆ ಸಲಹೆ ಪಡೆಯುವುದು ಉತ್ತಮ.

ಸಿಗ್ನೇಚರ್ ಥೆರಪಿ ಎಂದರೇನು?
ಹಾಗಾದರೆ, ಸಿಗ್ನೇಚರ್ ಥೆರಪಿ ಎಂದರೇನು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ನ್ಯೂಯಾರ್ಕ್ ನಗರದಲ್ಲಿ ಮಸಾಜ್ ಪರವಾನಗಿ ಪಡೆದು ತಮ್ಮದೆ ಆದ ಮಸಾಜ್ ಕೇಂದ್ರವನ್ನು ತೆರೆದು ನಡೆಸುತ್ತಿರುವ ಅರೇನಿಯಾ ಅರ್ಟಿಸ್ ಲಿಂಟನ್ ಅವರು ಹೇಳುವಂತೆ ಸಿಗ್ನೇಚರ್ ಥೆರಪಿ ಎಂಬುದು ಹಲವು ಬಗೆಯ ಮಸಾಜ್ ಗಳ ಒಳಗೊಂಡಿರುವ ಒಂದು ವಿಶಿಷ್ಟ ರೀತಿಯ ಮಸಾಜ್ ಆಗಿದೆ. ಈಗಾಗಲೇ, ಸ್ವಿಡೀಶ್, ಅಕ್ಯೂಪ್ರೆಶರ್, ಕ್ರೀಡೆಗಳಿಗೆ ಸಂಬಂಧಿಸಿದ ಹಲವು ಬಗೆಯ ಮಸಾಜ್ ಗಳಿವೆ. ಸಿಗ್ನೇಚರ್ ಥೆರಪಿಯಲ್ಲಿ ಈ ಎಲ್ಲ ಬಗೆಯ ಮಸಾಜ್ ಗಳು ಇರುವುದರಿಂದ ಇದು ಸಮಗ್ರವಾಗಿ ಎಲ್ಲ ಪ್ರಕಾರಗಳ ಲಾಭಗಳನ್ನು ದೇಹಕ್ಕೆ ಒದಗಿಸುತ್ತದೆ ಎನ್ನಲಾಗುತ್ತದೆ.

ಇದನ್ನೂ ಓದಿ: Weight Loss: ಸಣ್ಣಗಾಗ್ಬೇಕು ಅಂತ ಊಟ ಬಿಡ್ತಿದ್ದೀರಾ? ಇನ್ಮೇಲೆ ಅಪ್ಪಿ-ತಪ್ಪಿಯೂ ಈ ತಪ್ಪು ಮಾಡಲೇಬೇಡಿ!

ನಮ್ಮ ದೇಹದ ವಿವಿಧ ಅಂಗಾಂಗಗಳು ತೆರೆದು ಮಾಂಸಖಂಡಗಳಿಗೆ ವಿಶ್ರಾಂತಿ ನೀಡುವ ವಿಧವನ್ನೂ ಸಿಗ್ನೇಚರ್ ಥೆರಪಿ ಒಳಗೊಂಡಿದ್ದು ಸಾಮಾನ್ಯವಾಗಿ ನಮ್ಮ ದಿನಚರಿಯಲ್ಲಿ ನಾವು ಮಾಡುವ ಚಟುವಟಿಕೆಗಳಿಂದ ಈ ವಿಧಾನದ ಮಸಾಜ್ ಆಗುತ್ತಲೇ ಇರುತ್ತದೆ. ಈ ಸಂದರ್ಭದಲ್ಲಿ ನಿರ್ದಿಷ್ಟ ಮಾಂಸಖಂಡಗಳನ್ನು ಗುರಿಯಾಗಿಸಿ ಅವು ಮತ್ತಷ್ಟು ಹಿಗ್ಗುವಂತೆ ಮಾಡಿ ಹೆಚ್ಚಿನ ಮಟ್ಟದ ವಿಶ್ರಾಂತಿ ಒದಗಿಸುವ ವಿಧಾನಗಳ ಮೇಲೆ ಇದರಲ್ಲಿ ಹೆಚ್ಚು ಒತ್ತು ನೀಡಲಾಗುತ್ತದೆ. ಸ್ವಿಡೀಶ್ ವಿಧಾನವನ್ನು ಇದಕ್ಕಾಗಿ ಬಳಸಲಾಗುತ್ತದೆ. ಇನ್ನುಳಿದಂತೆ ಸಿಗ್ನೇಚರ್ ಥೆರಪಿಯಲ್ಲಿರುವ ಇತರೆ ಮಸಾಜ್ ಪ್ರಕಾರಗಳೆಂದರೆ :

ಡೀಪ್ ಟಿಶ್ಯು ಮಸಾಜ್
ಈ ರೀತಿಯ ಮಸಾಜ್ ಕೇವಲ ಶರೀರಕ್ಕಲ್ಲದೆ ಮಾನಸಿಕವಾಗಿಯೂ ಅಹ್ಲಾದತೆಯನ್ನು ನೀಡುತ್ತದೆ. ಇದು ಇತರೆ ಬಗೆಯ ಮಸಾಜ್ ಗಳಿಗಿಂತ ಭಿನ್ನವಾಗಿದ್ದು ಪರಿಣಾಮಕಾರಿಯಾದ ಅನುಭವ ನೀಡುವ ಮೂಲಕ ಮಸಲ್ ನೋವನ್ನು ಕಡಿಮೆಯಾಗಿಸುತ್ತದೆ ಮತ್ತು ಶರೀರದಲ್ಲಿ ಗಟ್ಟಿತನವನ್ನು ವೃದ್ಧಿಸುತ್ತದೆ ಎನ್ನಲಾಗಿದೆ. ಸ್ನಾಯುರಜ್ಜೆ ಅಥವಾ ಮಾಂಸಖಮ್ಡಗಳಲ್ಲಿ ನೋವಿದ್ದಾಗ ಅದರ ಉಪಶಮನಕ್ಕೆ ಇದು ಉತ್ತಮ ಎನ್ನಲಾಗಿದೆ. ಈ ಚಿಕಿತ್ಸೆಯ ಸಂದರ್ಭದಲ್ಲಿ ಹೆಚ್ಚುವರಿ ಒತ್ತಡ ಉಂಟಾಗುವಂತೆ ಮೊಣಕೈ ಹಾಗೂ ಮುಂಭಾಗದ ತೋಳುಗಳನ್ನು ಬಳಸಲಾಗುತ್ತದೆ.

ಸ್ವಿಡೀಶ್ ಮಸಾಜ್
ಇದೊಂದು ಬಗೆಯ ಮಸಾಜ್ ಥೆರಪಿಯಾಗಿದೆ. ಡೀಪ್ ಟಿಶ್ಯು ಮಸಾಜ್ ನಲ್ಲಿ ಸಾಮಾನ್ಯವಾಗಿ ಕನೆಕ್ಟಿವ್ ಟಿಶ್ಯುಗಳಿಗೆ ಹೆಚ್ಚಿನ ಗಮನ ಕೇಂದ್ರೀಕರಿಸಿ ಮಸಾಜ್ ಮಾಡಲಾದರೆ ಇದರಲ್ಲಿ ಶರೀರದ ಸೂಪರ್ ಫಿಶಿಯಲ್ ಮಸಲ್ ಗಳ ಮೇಲೆ ಹೆಚ್ಚು ಗಮನ ನೀಡಿ ಮಸಲ್ ವಿಶ್ರಾಂತಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದರಿಂದ ರಕ್ತ ಪ್ರವಹನ ಸುಧಾರಿಸುತ್ತದೆ ಹಾಗೂ ಇದು ನೋವಿನ ಉಪಶಮನಕ್ಕೆ ಉತ್ತಮವಾದ ಸ್ವಾಭಾವಿಕ ಮಾರ್ಗವಾಗಿದೆ. ಸಾಮಾನ್ಯವಾದ ಸ್ಟ್ರೆಚಿಂಗ್ ವ್ಯಾಯಾಮದೊಂದಿಗೆ ಈ ಮಸಾಜ್ ಅನ್ನು ಅಳವಡಿಸಿಕೊಂಡಾಗ ವ್ಯಾಯಾಮ ಮಾಡುವಾಗ ಉಂಟಾದ ನೋವುಗಳನ್ನೂ ಸಹ ಇದು ಮಾಯವಾಗುವಂತೆ ಮಾಡುತ್ತದೆ.

ಇದನ್ನೂ ಓದಿ: Weight Loss Tips: ಸರಿಯಾಗಿ ಒಂದು ತಿಂಗಳು ಈ ಆಹಾರಗಳನ್ನು ತಿಂದ್ರೆ ಬೊಜ್ಜು ಕರಗುತ್ತೆ

ಅಕ್ಯುಪ್ರೆಶರ್
ನಿಮಗೆಲ್ಲರಿಗೂ ಗೊತ್ತಿರುವಂತೆ ಇದೊಂದು ಚೀನಾ ಮೂಲದ ಮಸಾಜ್ ಪದ್ಧತಿಯಾಗಿದೆ. ಈ ವಿಧಾನದಲ್ಲಿ ದೇಹದ ಕೆಲವು ನಿರ್ದಿಷ್ಟ ಭಾಗಗಳನ್ನು ನಯವಾಗಿ ಅದುಮುವ ಮೂಲಕ ಒತ್ತಡ ನೀಡಲಾಗುತ್ತದೆ. ಇದರಿಂದ ಆ ಭಾಗಗಳಲ್ಲಿ ಶೇಖರಣೆಯಾಗಿರುವ ಶಕ್ತಿಯು ಮುಕ್ತಗೊಂಡು ಪ್ರವಹಿಸುತ್ತದೆ. ಭೇದಿ, ತಲೆನೋವುಗಳಿಂದ ಹಿಡಿದು ಮಸಲ್ ನೋವುಗಳವರೆಗೆ ಚಿಕಿತ್ಸೆ ನೀಡಲು ಈ ವಿಧಾನವನ್ನು ಬಳಸಲಾಗುತ್ತದೆ. ಇದು ದೇಹದಲ್ಲೆಲ್ಲ ಶಕ್ತಿ ಸಂಚಾರಕ್ಕೆ ಅವಕಾಶ ಮಾಡಿಕೊಡುವುದರಿಂದ ಶರೀರಕ್ಕೆ ಹೆಚ್ಚಿನ ಉತ್ಸಾಹ ಹಾಗೂ ಹುರುಪು ಸಿಗುತ್ತದೆ ಎನ್ನಲಾಗಿದೆ.

ಈ ಎಲ್ಲ ವಿಧಾನಗಳು ಸಿಗ್ನೇಚರ್ ಥೆರಪಿಯಲ್ಲಿ ಇರುವುದರಿಂದ ನಿಮ್ಮ ಶರೀರಕ್ಕೆ ಸಮಗ್ರವಾದ ಲಾಭಗಳು ದೊರೆಯುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ, ಸಿಗ್ನೇಚರ್ ಥೆರೆಪಿಯನ್ನು ನೀವು ಪಡೆಯಬೇಕೆಂದಿದ್ದರೆ ಈ ಮೇಲಿನ ಎಲ್ಲ ಮಸಾಜ್ ಗಳ ಲಾಭ ನಿಮ್ಮದಾಗಲಿದೆ. ಆದರೆ, ಮೊದಲೆ ಹೇಳಿದಂತೆ ಈ ಚಿಕಿತ್ಸೆಗೆ ಒಳಗಾಗುವ ಮುಂಚೆ ಒಮ್ಮೆ ವೈದ್ಯರ ಬಳಿ ಸಲಹೆ ಪಡೆಯುವುದು ಉತ್ತಮ.
Published by:guruganesh bhat
First published: