• Home
  • »
  • News
  • »
  • lifestyle
  • »
  • Skin Care Tips: ಅತಿಯಾಗಿ ಸ್ಕಿನ್​ಕೇರ್ ವಸ್ತುಗಳನ್ನು ಬಳಸೋದು ಹಾನಿಕಾರಕವಂತೆ, ತಜ್ಞರು ಹೇಳೋದು ಹೀಗೆ

Skin Care Tips: ಅತಿಯಾಗಿ ಸ್ಕಿನ್​ಕೇರ್ ವಸ್ತುಗಳನ್ನು ಬಳಸೋದು ಹಾನಿಕಾರಕವಂತೆ, ತಜ್ಞರು ಹೇಳೋದು ಹೀಗೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Side Effects of Skin Care Products: ಸಾಮಾನ್ಯವಾಗಿ ಸೌಂದರ್ಯವರ್ಧಕ ಉತ್ಪನ್ನಗಳು ಎಲ್ಲರಿಗೂ ಸೂಕ್ತವಲ್ಲ. ಪ್ರತಿಯೊಬ್ಬರ ಆರೋಗ್ಯ ಅಥವಾ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಇದನ್ನು ಬಳಸುವುದು ಉತ್ತಮ.

  • Share this:

ಇಂದಿನ ಜಗತ್ತಿನಲ್ಲಿ ಲುಕ್​ಗೆ (Look) ಹೆಚ್ಚಿನ ಮಹತ್ವವಿದೆ. ಸುಂದರವಾಗಿ (Beautiful) ಮತ್ತು ಆಕರ್ಷಕವಾಗಿ ಕಾಣಲು ಅನೇಕ ಜನರು ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಸಹಜವಾಗಿ, ಮಹಿಳೆಯರು (Women) ಈ ಬಗ್ಗೆ ವಿಶೇಷವಾಗಿ ತಿಳಿದಿರುತ್ತಾರೆ. ಈ ಕಾರಣದಿಂದಾಗಿ, ಮಾರುಕಟ್ಟೆಯಲ್ಲಿ ಸೌಂದರ್ಯ ಉತ್ಪನ್ನಗಳ (Skin Care Products) ಕಂಪನಿಗಳಿಗೆ ಗುರಿ ಎಂದರೆ ಗ್ರಾಹಕರು, ಅದರಲ್ಲೂ ಮಹಿಳೆಯರು. ತ್ವಚೆಯನ್ನು ಆರೋಗ್ಯವಾಗಿಡಲು ಮಾರುಕಟ್ಟೆಯಲ್ಲಿ ಹಲವಾರು ಸೌಂದರ್ಯವರ್ಧಕ ಉತ್ಪನ್ನಗಳು ಲಭ್ಯವಿವೆ. ಆದರೆ, ಸಾಮಾನ್ಯವಾಗಿ ಈ ಸೌಂದರ್ಯವರ್ಧಕ ಉತ್ಪನ್ನಗಳು ಎಲ್ಲರಿಗೂ ಸೂಕ್ತವಲ್ಲ. ಪ್ರತಿಯೊಬ್ಬರ ಆರೋಗ್ಯ ಅಥವಾ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಇದನ್ನು ಬಳಸುವುದು ಉತ್ತಮ. ಇದಕ್ಕಾಗಿ ಚರ್ಮರೋಗ ವೈದ್ಯರನ್ನು (Skin Doctor) ಸಂಪರ್ಕಿಸುವುದು ಸೂಕ್ತ. ಆದರೆ, ಯಾವ ಉತ್ಪನ್ನವನ್ನು ಬಳಸಬೇಕೆಂದು ಅನೇಕರಿಗೆ ಸಾಕಷ್ಟು ತಿಳಿದಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಸುಂದರವಾಗಿ ಕಾಣುವುದು ಯಾರ ಕೈಯಲ್ಲೂ ಇಲ್ಲ. ಆದರೆ, ಈ ಸತ್ಯವನ್ನು ಒಪ್ಪಿಕೊಳ್ಳುವುದು ಸಾಮಾನ್ಯವಾಗಿ ಕಷ್ಟ. ಮಾರುಕಟ್ಟೆಯಲ್ಲಿರುವ ಸೌಂದರ್ಯವರ್ಧಕಗಳು ನಿಮ್ಮ ಸೌಂದರ್ಯವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸುತ್ತವೆ, ಆದರೆ ಅದಕ್ಕಿಂತ ಹೆಚ್ಚಾಗಿ ಅವು ಅನೇಕ ಅಡ್ಡಪರಿಣಾಮಗಳಿಗೆ ಸಹ ಕಾರಣವಾಗುತ್ತದೆ.


ದೇಶದಲ್ಲಿ ಸೌಂದರ್ಯ ಉತ್ಪನ್ನಗಳ ವ್ಯಾಪಾರ ಜೋರಾಗಿದೆ


ವಿವಿಧ ಕಂಪನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೌಂದರ್ಯ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಸಹ ನಾವು ಇತ್ತೀಚೆಗೆ ಹೆಚ್ಚಾಗಿ ಕಾಣಬಹುದು. ಅನೇಕ ಜನರು ರೆಟಿನಾಲ್ ಮತ್ತು ನಿಯಾಸಿನಾಮೈಡ್‌ನಂತಹ ಉತ್ಪನ್ನಗಳನ್ನು ಅತಿಯಾಗಿ ಬಳಸುತ್ತಿದ್ದಾರೆ. ಅದರ ಬೇಡಿಕೆ ಹೆಚ್ಚಿದೆ. ಈ ಕಾರಣದಿಂದಾಗಿ, ದೇಶಾದ್ಯಂತ ಸೌಂದರ್ಯವರ್ಧಕಗಳ ವ್ಯಾಪಾರವು ಗಮನಾರ್ಹವಾಗಿ ಬೆಳೆದಿದೆ. ಅಲ್ಲದೇ, ಈ ಮಧ್ಯೆ ಭಾರತದಲ್ಲಿ ದೈನಂದಿನ ಸೌಂದರ್ಯವರ್ಧಕ ಉತ್ಪನ್ನಗಳ ಬಳಕೆಯಲ್ಲಿ 5.6% ಹೆಚ್ಚಳ ಕಂಡುಬಂದಿದೆ. ಆದರೆ, ತ್ವಚೆಯ ಕಾಂತಿ ಹೆಚ್ಚಿಸಲು ಬಳಸುವ ಈ ಉತ್ಪನ್ನಗಳು ಅಪಾಯಕಾರಿಯಾಗಿ ಪರಿಣಮಿಸುತ್ತಿವೆ ಎನ್ನಬಹುದು.


side effects of using more skin care products


ಸರಿಯಾದ ವಯಸ್ಸಿನಲ್ಲಿ ಸೌಂದರ್ಯವರ್ಧಕಗಳನ್ನು ಬಳಸುವುದು ಸೂಕ್ತ


ಸೌಂದರ್ಯವರ್ಧಕಗಳು ಬಹಳಷ್ಟು ರೆಟಿನಾಲ್ ಅನ್ನು ಹೊಂದಿರುತ್ತವೆ. ವಾಸ್ತವವಾಗಿ, ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ, ರೆಟಿನಾಲ್ ಬಳಕೆಯು 20 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ಚರ್ಮಕ್ಕೆ ಹಾನಿಕಾರಕವಾಗಿದೆ. ರೆಟಿನಾಲ್ ಬಳಕೆಯಿಂದಾಗಿ, ಅವರ ಮುಖದ ಮೇಲೆ ಮೊಡವೆ, ಕಲೆಗಳು, ಗುಳ್ಳೆಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹಲವಾರು ಅಧ್ಯಯನಗಳು ಸಾಬೀತು ಮಾಡಿದೆ.




ಸಾಕಷ್ಟು ನೀರು ಕುಡಿಯುವುದು ಚರ್ಮಕ್ಕೆ ಪ್ರಯೋಜನಕಾರಿ


ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ಚರ್ಮವನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ಇದಕ್ಕಾಗಿ ನೀವು ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯಬೇಕು. ತಜ್ಞರ ಪ್ರಕಾರ ಹೆಚ್ಚು ನೀರು ಕುಡಿಯುವುದು ಚರ್ಮದ ಆರೈಕೆಗೆ ಸಹಕಾರಿ. ಅದರ ಜೊತೆಗೆ ಸಮತೋಲಿತ ಮತ್ತು ಸಮಗ್ರ ಆಹಾರವೂ ಅತ್ಯಗತ್ಯ ಎಂಬುದನ್ನ ನೆನಪಿಟ್ಟುಕೊಳ್ಳಬೇಕು. ಅತಿಯಾಗಿ ಜಂಕ್ ಫುಡ್​ ತಿನ್ನುವುದು, ಅನಗತ್ಯವಾಗಿ ಸ್ವೀಟ್​ ಇರುವ ಪಾನೀಯಗಳನ್ನು ಕುಡಿಯುವುದು ಅಪಾಯಕಾರಿ.




ಸೌಂದರ್ಯವರ್ಧಕಗಳ ಅತಿಯಾದ ಬಳಕೆ


ಚರ್ಮದ ಆರೈಕೆ ತಜ್ಞರ ಪ್ರಕಾರ, 20 ರಿಂದ 30 ರ ಹರೆಯದ ಹುಡುಗಿಯರು ತಮ್ಮ ಸೌಂದರ್ಯವರ್ಧಕ ಉತ್ಪನ್ನಗಳ ಬಗ್ಗೆ ಬಹಳ ಜಾಗೃತರಾಗಿರಬೇಕು. ತಜ್ಞರ ಪ್ರಕಾರ, ಈ ವಯಸ್ಸಿನ ಹುಡುಗಿಯರು ಚರ್ಮದ ಆರೈಕೆ ಉತ್ಪನ್ನಗಳನ್ನು ತುಂಬಾ ವೇಗವಾಗಿ ಮತ್ತು ಅತಿಯಾಗಿ ಬಳಸುತ್ತಾರೆ. ಇದರಿಂದಾಗಿ ಚರ್ಮದ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ಸೌಂದರ್ಯವರ್ಧಕಗಳ ಅತಿಯಾದ ಬಳಕೆ ನಿಮ್ಮ ನೈಸರ್ಗಿಕ ಸೌಂದರ್ಯವನ್ನು ಹಾಳು ಮಾಡಬಹುದು.




ಇದನ್ನೂ ಓದಿ: ಚಳಿಗಾಲದಲ್ಲಿ ಈ ತಪ್ಪು ಮಾಡಿದ್ರೆ ಕಿಡ್ನಿ ಸಮಸ್ಯೆ ಕಟ್ಟಿಟ್ಟಬುತ್ತಿ


ಇಂದಿನ ಜಗತ್ತಿನಲ್ಲಿ, ನಿಮ್ಮ ಲುಕ್​, ಉಡುಗೆ ತುಂಬಾ ಮುಖ್ಯವಾಗಿದೆ. ಇದರಲ್ಲಿ ಸಾಮಾಜಿಕ ಜಾಲತಾಣಗಳು ಈ ವಿಷಯಗಳ ತೀವ್ರತೆಯನ್ನು ಹೆಚ್ಚಿಸಿವೆ. ಆದರೆ, ಕೆಲವು ಮನೆಮದ್ದುಗಳು ಮತ್ತು ತಜ್ಞರ ಮಾರ್ಗದರ್ಶನವು ಉತ್ತಮ ಚರ್ಮವನ್ನು ಪಡೆಯಲು ಖಂಡಿತವಾಗಿಯೂ ಪ್ರಯೋಜನಕಾರಿಯಾಗಿದೆ.

Published by:Sandhya M
First published: