ತುಳಸಿ ಸಸ್ಯ ಪವಿತ್ರ ಎಂದು ಬಾಲ್ಯದಿಂದಲೂ ನಮಗೆ ತಿಳಿದಿದೆ. ನಾವು ಭಾರತದಲ್ಲಿ ದೇವರಾದ ಕೃಷ್ಣನ ಹೆಸರಿನಿಂದ ತುಳಸಿಯನ್ನು ಪೂಜಿಸುತ್ತೇವೆ, ಪ್ರತಿಯೊಬ್ಬ ಭಾರತೀಯ ಮನೆಯಲ್ಲೂ ತುಳಸಿ ಸಸ್ಯವನ್ನು ಕಾಣಬಹುದು. ಮತ್ತು ಇದು ಎಲ್ಲಾ ರೋಗಗಳಿಗೆ ಸಹಕಾರಿಯಾಗಿದೆ. ಆಯುರ್ವೇದ ಔಷಧಿಗಳ ಮೂಲವೇ ತುಳಸಿ . ಜನರು ಇದರ ತಾಜಾ ಎಲೆಗಳನ್ನು ತಿನ್ನುತ್ತಿದ್ದಾರೆ ಮತ್ತು ಇದನ್ನು ಸ್ಯಾಂಡ್ವಿಚ್ಗಳಂತಹ ವಿವಿಧ ಆಹಾರಗಳಿಗೆ ಬಳಸಲಾಗುತ್ತದೆ ಮತ್ತು ಇದರ ಪೇಸ್ಟ್ ಅನ್ನು ಗಾಯಗಳಿಗೆ ಬಳಸಲಾಗುತ್ತದೆ. ನಿಮಗೆ ತಿಳಿದಿರಲಿ, ತುಳಸಿ ಅನೇಕ ಅಡ್ಡಪರಿಣಾಮಗಳನ್ನು ಹೊಂದಿದೆ. 6 ಸಾಮಾನ್ಯ ಅಡ್ಡಪರಿಣಾಮಗಳು ಹಾಗೂ ಯಾರು ತುಳಸಿಯನ್ನು ಸೇವಿಸಬಾರದು ಎಂದು ತಿಳಿಯೋಣ.
ತುಳಸಿ ಸುಗಂಧಭರಿತ ಸಸ್ಯವಾಗಿದ್ದು, ಇದು ಪುದೀನ ಸಸ್ಯಗಳ ಲಾಮಿಯಾಸೀ ಕುಟುಂಬಕ್ಕೆ ಸೇರಿದೆ. ತುಳಸಿ ಗರ್ಭಾಶಯದ ಸಂಕೋಚನಕ್ಕೆ ಕಾರಣವಾಗುತ್ತದೆ. ಇದು ಗರ್ಭಿಣಿಯರ ಭ್ರೂಣಗಳ ಮೇಲೆ ಪರಿಣಾಮ ಬೀರುತ್ತದೆ ಇದರಿಂದ ಗರ್ಭಿಣಿಯರು ಸೇವಿಸಬಾರದು.ಇದು ಗರ್ಭಪಾತಕ್ಕೂ ಕಾರಣವಾಗಬಹುದು ಎಂದು TOI ವರದಿ ಮಾಡಿದೆ.
ರಕ್ತದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ತುಳಸಿ ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ಈ ಹಿಂದೆ ತಿಳಿಸಿದ್ದವು. ಆದರೆ ಈಗಿನ ವರದಿ ಅನುಸಾರ ಇದು ಸಕ್ಕರೆ ಮಟ್ಟವು ತುಂಬಾ ಕಡಿಮೆ ಮಾಡುವ ಅಂಶವನ್ನು ಹೊಂದಿದೆ. ಆದ್ದರಿಂದ ಈಗಾಗಲೇ ತುಳಸಿಯಿಂದ ಮಾಡಲ್ಪಟ್ಟ ಔಷಧಿಗಳನ್ನು ಸೇವಿಸುತ್ತಿದ್ದರೆ ಹಾಗೂ ತುಳಸಿಯಿಂದ ಮಾಡಿದ ಆಹಾರಗಳನ್ನು ಸೇವಿಸುತ್ತಿದ್ದರೆ ಈಗಲೇ ಅದನ್ನು ನಿಲ್ಲಿಸುವುದು ಉತ್ತಮ ಹಾಗೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.
ಎನ್ಸಿಬಿಐ ಪ್ರಾಣಿಗಳ ಮೇಲೆ ಸಂಶೋಧನೆ ನಡೆಸಿದ್ದು,ತುಳಸಿ ಸ್ತ್ರೀ ಹಾಗೂ ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದು ಎಂದು TOI ವರದಿ ತಿಳಿಸಿದೆ. ತುಳಸಿ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ವೃಷಣಗಳು, ಮೂತ್ರಜನಕಾಂಗದ ಗ್ರಂಥಿಗಳು, ಪ್ರಾಸ್ಟೇಟ್, ಗರ್ಭಾಶಯ ಮತ್ತು ಅಂಡಾಶಯದಂತಹ ಸಂತಾನೋತ್ಪತ್ತಿ ಅಂಗಗಳ ತೂಕವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ.
ತುಳಸಿಯ ಗುಣಗಳು ನಮ್ಮ ದೇಹದಲ್ಲಿನ ರಕ್ತವನ್ನು ದುರ್ಬಲಗೊಳಿಸುತ್ತವೆ. ಅಲೋಪತಿ ಔಷಧಿಗಳನ್ನು ತೆಗೆದುಕೊಳ್ಳಲು ಇಷ್ಟಪಡದ ಜನರಿಗೆ ಇದು ಉತ್ತಮ ಮನೆಮದ್ದು. ಈಗಾಗಲೇ ಹೆಪ್ಪುಗಟ್ಟುವಿಕೆ ತಡೆಗೆ ಔಷಧಿಗಳನ್ನು ತೆಗೆದುಕೊಳ್ಳುವ ಜನರು ತುಳಸಿ ಬಳಕೆಯನ್ನು ನಿಲ್ಲಿಸಬೇಕು.
ತುಳಸಿಯಲ್ಲಿ ಬಹಳಷ್ಟು ಯುಜೆನಾಲ್ ಇದೆ. ಪೆರುವಿನ ಲವಂಗ ಮತ್ತು ಬಾಲ್ಸಾಮ್ನಲ್ಲಿಯೂ ಯುಜೆನಾಲ್ ಕಂಡುಬರುತ್ತದೆ. ಆದರೆ ಯುಜೆನಾಲ್ ಅನ್ನು ಅಧಿಕವಾಗಿ ಸೇವಿಸುವುದರಿಂದ ಪಿತ್ತಜನಕಾಂಗದ ಹಾನಿ, ವಾಕರಿಕೆ, ಅತಿಸಾರ, ತ್ವರಿತ ಹೃದಯ ಬಡಿತ ಮತ್ತು ಸೆಳೆತವು ಉಂಟಾಗುತ್ತದೆ. ಆದ್ದರಿಂದ ತುಳಸಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ವೈಜ್ಞಾನಿಕವಾಗಿ ತುಳಸಿ ಪಾದರಸವನ್ನು ಹೊಂದಿರುವ ಕಾರಣ ಎಲೆಗಳನ್ನು ಅಗಿಯುವುದರಿಂದ ನಿಮ್ಮ ಹಲ್ಲುಗಳು ಕಲೆ ಆಗುತ್ತದೆ ಮತ್ತು ನಿಮ್ಮ ಹಲ್ಲುಗಳ ಹಳದಿ ಬಣ್ಣಕ್ಕೆ ಕಾರಣವಾಗಬಹುದು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ತುಳಸಿ ಎಲೆಗಳು ಆಮ್ಲೀಯ ಸ್ವರೂಪದಲ್ಲಿರುತ್ತವೆ ಮತ್ತು ನಿಮ್ಮ ಬಾಯಿ ಆಲ್ಕಲೈನ್ ಆಗಿರುತ್ತದೆ, ಇದು ನಿಮ್ಮ ಹಲ್ಲುಗಳ ದಂತಕವಚದ ಮೇಲೆ ಪರಿಣಾಮವನ್ನು ಬೀರಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ