• Home
  • »
  • News
  • »
  • lifestyle
  • »
  • Antibiotics Effects: ಡಾಕ್ಟರ್ ಸಲಹೆ ಇಲ್ಲದೇ ಮಾತ್ರೆಗಳನ್ನು ತಗೋಳೋದು ಲಿವರ್​ಗೆ ಅಪಾಯ

Antibiotics Effects: ಡಾಕ್ಟರ್ ಸಲಹೆ ಇಲ್ಲದೇ ಮಾತ್ರೆಗಳನ್ನು ತಗೋಳೋದು ಲಿವರ್​ಗೆ ಅಪಾಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Antibiotics Without Prescription: ವೈದ್ಯರ ಸಲಹೆಯಿಲ್ಲದೆ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಅಥವಾ ನಿಮ್ಮ ಸ್ವಂತವಾಗಿ ನಿಲ್ಲಿಸುವುದರಿಂದ ನಿಮಗೆ ಭವಿಷ್ಯದಲ್ಲಿ ತೊಂದರೆ ಉಂಟಾಗುತ್ತದೆ. ಯಾವೆಲ್ಲಾ ತೊಂದರೆಗಳು ಬರಬಹುದು ಎಂಬುದು ಇಲ್ಲಿದೆ.

  • Share this:

ಹವಾಮಾನದ (Climate) ಬದಲಾವಣೆಗೆ ತಕ್ಕಂತೆ ನೆಗಡಿ, ಕೆಮ್ಮು, ಜ್ವರ, ಡೆಂಗ್ಯೂ, ಮಲೇರಿಯಾ ಮೊದಲಾದ ರೋಗಗಳು (Health problem) ತಲೆ ಎತ್ತುತ್ತವೆ. ಸಣ್ಣ ರೋಗಲಕ್ಷಣಗಳಿದ್ದರೆ, ಅನೇಕ ನಾಗರಿಕರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಾರೆ. ಆಯುರ್ವೇದ ಅಥವಾ ಮನೆಮದ್ದುಗಳು ಹೆಚ್ಚು ತೊಂದರೆ ಉಂಟುಮಾಡುವುದಿಲ್ಲ. ಆದರೆ ಆ್ಯಂಟಿಬಯೋಟಿಕ್ (Antibiotics) ಔಷಧಗಳನ್ನು ತೆಗೆದುಕೊಳ್ಳುವುದು, ಪ್ಯಾರಸಿಟಮಾಲ್ ಮಾತ್ರೆಗಳನ್ನು ಸ್ವಂತವಾಗಿ, ವೈದ್ಯರ ಸಲಹೆ ಇಲ್ಲದೇ ತೆಗೆದುಕೊಳ್ಳುವುದು ಹಾನಿಕಾರಕ ಎಂದು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ವೈದ್ಯರ ಸಲಹೆಯಿಲ್ಲದೆ ಇಂತಹ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಅಥವಾ ನಿಮ್ಮ ಸ್ವಂತವಾಗಿ ನಿಲ್ಲಿಸುವುದರಿಂದ ನಿಮಗೆ ಭವಿಷ್ಯದಲ್ಲಿ ತೊಂದರೆ ಉಂಟಾಗುತ್ತದೆ. ಯಾವೆಲ್ಲಾ ತೊಂದರೆಗಳು ಬರಬಹುದು ಎಂಬುದು ಇಲ್ಲಿದೆ.


ವೈದ್ಯರ ಸಲಹೆ ಇಲ್ಲದೆ ಆ್ಯಂಟಿಬಯೋಟಿಕ್ ಔಷಧಗಳನ್ನು ಸೇವಿಸಬಾರದು ಎಂದು ನೋಯ್ಡಾದ ಫೆಲಿಕ್ಸ್ ಆಸ್ಪತ್ರೆಯ ಮೈಕ್ರೋಬಯಾಲಜಿಸ್ಟ್ ಡಾ. ರಿತಿಕಾ ಹೇಳುತ್ತಾರೆ. ವೈದ್ಯರು ಸೂಚಿಸಿದ ಔಷಧಿಯ ಕೋರ್ಸ್ ಅನ್ನು ರೋಗಿಗಳು ಪೂರ್ಣಗೊಳಿಸಬೇಕು. ಔಷಧಿಯನ್ನು ತೆಗೆದುಕೊಂಡ ನಂತರ ನಿಮಗೆ ಆರಾಮದಾಯಕ ಅನಿಸಿದರೆ ಆಂತರಿಕ ಸೋಂಕನ್ನು ಉಂಟುಮಾಡುವ ವೈರಸ್ ಸತ್ತಿದೆ ಎಂದು ಅರ್ಥವಲ್ಲ. ಔಷಧವು ಖಾಲಿ ಆಗುವವರೆಗೂ ಸೂಚಿಸಿದಂತೆ ಮುಂದುವರಿಸಬೇಕು.


ಇದರಿಂದ ವೈರಸ್ ಕ್ರಮೇಣ ಔಷಧದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ. ಆದರೆ, ಇದನ್ನು ನಿಲ್ಲಿಸಿದರೆ  ಮುಂದಿನ ಬಾರಿ ಮತ್ತೆ  ಅನಾರೋಗ್ಯಕ್ಕೆ ಒಳಗಾಗಬಹುದು. ಅಲ್ಲದೇ,  ಔಷಧವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಆಂಟಿಮೈಕ್ರೊಬಿಯಲ್ ಪ್ರತಿರೋಧವು ರೋಗ-ಉಂಟುಮಾಡುವ ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಅಥವಾ ಪರಾವಲಂಬಿಗಳು ಔಷಧಿಗಳಿಗೆ ನಿರೋಧಕವಾಗುವಂತಹ ಸಮಸ್ಯೆ ಎನ್ನಬಹುದು.


ಹೀಗಾಗಿ, ಔಷಧಿಯನ್ನು ಅರ್ಧದಲ್ಲಿ ಬಿಡುವುದು ಅಥವಾ ಸಲಹೆ ಇಲ್ಲದೆ ತೆಗೆದುಕೊಳ್ಳುವುದರಿಂದ, ರೋಗವು ಮರುಕಳಿಸಬಹುದು. ಈ ಕಾರಣದಿಂದಾಗಿ, ರೋಗಿಯು ಸಾಯುವ ಸಾಧ್ಯತೆಯಿದೆ. ಸಾಂಕ್ರಾಮಿಕ ರೋಗಗಳಲ್ಲಿ ಇತರರಿಗೆ ರೋಗ ಹರಡುವ ಸಾಧ್ಯತೆ ಇರುತ್ತದೆ.


ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಈ ವಿಚಾರಗಳನ್ನು ಮರೆಯಬೇಡಿ


ಪ್ರತಿಯೊಂದು ರೋಗಕ್ಕೂ ಈ ಔಷಧಿಗಳನ್ನು ತೆಗೆದುಕೊಳ್ಳಬಾರದು.


ಸೋಂಕಿನ ಸ್ವರೂಪವನ್ನು ತಿಳಿದ ನಂತರ ಈ ಔಷಧಿಗಳನ್ನು ಸೇವಿಸಿ.


ಮಾತ್ರೆಗಳ ಡೋಸ್ ಮತ್ತು ಅವಧಿಯನ್ನು ನಿಗದಿಪಡಿಸಬೇಕು.


ಔಷಧದ ಕೋರ್ಸ್ ಪೂರ್ಣಗೊಳಿಸಿ. ಮಧ್ಯೆ ಬಿಡಬೇಡಿ.


ಯಾವುದೇ ಮೂತ್ರಪಿಂಡ ಅಥವಾ ಪಿತ್ತಜನಕಾಂಗದ ಕಾಯಿಲೆ ಇದ್ದರೆ, ಈ ಔಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ತೆಗೆದುಕೊಳ್ಳಬೇಕು.


ಇದನ್ನೂ ಓದಿ: ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಲು ಈ ಅಹಾರಗಳನ್ನು ತಿನ್ನಿ


ಪ್ರತಿಜೀವಕಗಳ ಅನಗತ್ಯ ಬಳಕೆಯು ವಾಂತಿ, ತಲೆತಿರುಗುವಿಕೆ, ಅತಿಸಾರ, ಹೊಟ್ಟೆ ನೋವು, ಅಲರ್ಜಿಗಳು, ಯೋನಿ ಯೀಸ್ಟ್ ಸೋಂಕಿಗೆ ಕಾರಣವಾಗಬಹುದು.
ಸರಿಯಾದ ಪ್ರಮಾಣದಲ್ಲಿ ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳದಿರುವುದು ಯಕೃತ್ತಿನ ಮೇಲೆ ಪರಿಣಾಮ ಬೀರಬಹುದು. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಲಿವರ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದು ಫೆಲಿಕ್ಸ್ ಆಸ್ಪತ್ರೆ ಎಂಡಿ ಡಾ. ಡಿ. ಕೆ. ಗುಪ್ತಾ ಹೇಳಿದ್ದಾರೆ. ಈ ಸೋಂಕು ಹೆಚ್ಚಾದರೆ ಯಕೃತ್ತಿನ ಕಾರ್ಯ ಸ್ಥಗಿತಗೊಳ್ಳುತ್ತದೆ.


ತಪ್ಪಾದ ಪ್ರಮಾಣದಲ್ಲಿ ಈ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಥವಾ ತಪ್ಪಾದ ಔಷಧಿಗಳೊಂದಿಗೆ ಅವುಗಳನ್ನು ತೆಗೆದುಕೊಳ್ಳುವುದರಿಂದ ಮೂತ್ರಪಿಂಡ ಮತ್ತು ಯಕೃತ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಬ್ಯಾಕ್ಟೀರಿಯಾದ ಸೋಂಕಿನಲ್ಲಿ ಮಾತ್ರ ಈ ಮಾತ್ರೆಗಳನ್ನು ಬಳಸಬೇಕು. ಎಲ್ಲ ಪರೀಕ್ಷೆಗಳ ನಂತರ ಅಗತ್ಯ ಎಂದು ವೈದ್ಯರು ಹೇಳಿದರೆ ಮಾತ್ರ ತೆಗೆದುಕೊಳ್ಳಬೇಕು ಎನ್ನುತ್ತಾರೆ ವೈದ್ಯರು. ಈ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ ಎನ್ನುವುದು ತಜ್ಞರ ಅಭಿಪ್ರಾಯ.


ಇದನ್ನೂ ಓದಿ: ಓಟ್ಸ್​ ಒಳ್ಳೆಯದು ಅಂತ ಅತಿಯಾಗಿ ತಿನ್ಬೇಡಿ, ಈ ಸಮಸ್ಯೆಗಳು ಶುರುವಾಗ್ಬಹುದು


ವಿಶ್ವ ಆರೋಗ್ಯ ಸಂಸ್ಥೆಯು ಪ್ರಪಂಚದಾದ್ಯಂತದ ನಾಗರಿಕರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ 10 ಅಂಶಗಳಲ್ಲಿ ಆಂಟಿಬಯೋಟಿಕ್ ಮಾತ್ರೆಗಳು ಒಂದು ಎಂದು ತಿಳಿಸಿದೆ. ಇದು ಭವಿಷ್ಯದಲ್ಲಿ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.

Published by:Sandhya M
First published: