ಊಟವಾದ ತಕ್ಷಣ ಈ ತಪ್ಪು ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ

ತಡರಾತ್ರಿ ಆಹಾರ ಸೇವಿಸಿ ಹೊಟ್ಟೆ ಬಿರರಿಯುವಂತೆ ತಿಂದರೆ ನೀವು ಅನಾರೋಗ್ಯ ಪೀಡಿತರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಊಟವಾದ ತಕ್ಷಣ ಮಲಗುವ ಅಭ್ಯಾಸವಿದ್ದರೂ ಬೇಗ ಅನಾರೋಗಕ್ಕೆ ತುತ್ತಾಗುತ್ತೀರಿ.

news18
Updated:March 16, 2019, 4:21 PM IST
ಊಟವಾದ ತಕ್ಷಣ ಈ ತಪ್ಪು ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ
ಪ್ರಾತಿನಿಧಿಕ ಚಿತ್ರ
  • News18
  • Last Updated: March 16, 2019, 4:21 PM IST
  • Share this:
ಆರೋಗ್ಯದ ಬಗ್ಗೆ ಅತಿಯಾದ ಕಾಳಜಿವಹಿಸಿದರೆ ನಿಮ್ಮ ಆರೋಗ್ಯ ಸ್ಥಿರವಾಗಿರುತ್ತದೆ. ಸಮ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ನೀರು, ಆಹಾರ ಸೇವಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ಆಹಾರ ಸೇವನೆಯ ಸಮಯವು ಏರುಪೇರು ಆಗಬಹುದು. ಆದರೆ ಆಹಾರ ಸೇವನೆಯ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಉದರ ಮುಂತಾದ ಸಮಸ್ಯೆಯಿಂದ ಪಾರಾಗಬಹುದು.

ತಡರಾತ್ರಿ ಆಹಾರ ಸೇವಿಸಿ ಹೊಟ್ಟೆ ಬಿರರಿಯುವಂತೆ ತಿಂದರೆ ನೀವು ಅನಾರೋಗ್ಯ ಪೀಡಿತರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಊಟವಾದ ತಕ್ಷಣ ಮಲಗುವ ಅಭ್ಯಾಸವಿದ್ದರೂ ಬೇಗ ಅನಾರೋಗಕ್ಕೆ ತುತ್ತಾಗುತ್ತೀರಿ.

ಇದನ್ನೂ ಓದಿ: ಚಿಕ್ಕಪ್ಪನ ಕೊಲೆ ಪ್ರಕರಣ; ಸಿಎಂ ನಾಯ್ಡು ಕೈವಾಡವಿದೆ ಎಂದು ಜಗನ್​​​ ಆರೋಪ!

ಉತ್ತಮ ಆಹಾರ ಸೇವಿಸುವುದು ಏಷ್ಟು ಮುಖ್ಯವೋ, ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಆಹಾರ ಸೇವಿಸುವ ಸಮಯದಲ್ಲಿ ಕೆಲವು ಕ್ರಮಗಳನ್ನು ಅನುಸರಿಸಿದರೆ ಭಾದಿಸುವ ಕೆಲ ಕಾಯಿಲೆಯಿಂದ ಮುಕ್ತಿ ಪಡೆಯಬಹುದು.

ಊಟವಾದ ತಕ್ಷಣ ಈ ತಪ್ಪು ಮಾಡದಿರಿ

  • ಆಹಾರ ಸೇರಿಸದ ಕೂಡಲೇ ಹಾಸಿಗೆ ತಕ್ಷಣ ಹಾಸಿಗೆ ಒರಗುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಊಟವಾದ ತಕ್ಷಣ ಇಂತಹ ತಪ್ಪು ಮಾಡುವುದರಿಂದ ಜೀರ್ಣಕ್ರೀಯೆಯ ಮೇಲೆ ಪರಿಣಾಮ ಬೀರುತ್ತದೆ. ಸೇವಿಸಿದ ಆಹಾರ ಜೀರ್ಣವಾಗಲು ಹೊಟ್ಟೆಯಲ್ಲಿ ಡ್ರೊಕ್ಲೋರಿಕ್​ ಆಮ್ಲ ಉತ್ಪತ್ತಿಯಾಗುತ್ತದೆ. ಊಟ ಸೇವಿಸಿ ತಕ್ಷಣ ಮಲಗಿದರೆ ಡ್ರೋಕ್ಲೋರಿಕ್​ ಆಮ್ಲ ಹೊಟ್ಟೆಯಿಂದ ಹೊರಬಿದ್ದು ಅನ್ನನಾಳ ಮತ್ತು ಶ್ವಾಸಕೋಶದಲ್ಲಿ ಉರಿತ ಕಾಣಿಸಿಕೊಳ್ಳುತ್ತದೆ.
  • ಭೂರಿ ಭೋಜನವಾದ ಕೂಡಲೇ ತಕ್ಷಣ ನಿದ್ದೆ ಬರುವುದು ಸಹಜ. ಹಾಗೆಂದು ನಿದ್ದೆ ಮಾಡಲು ಮುಂದಾದರೆ ಶರೀರದ ಹೆಚ್ಚಿನ ಅಂಗಗಳ ಕೆಲಸ ನಿಶ್ಚಲವಾಗುತ್ತದೆ. ರಾತ್ರಿ ವೇಳೆಯಲ್ಲಿ ಕಡಿಮೆ ಪ್ರಮಾಣದ ಆಹಾರ ಸೇವಿಸುದರಿಂದ ಜೀರ್ಣಕ್ರೀಯೆ ಸುಲಭವಾಗುತ್ತದೆ.

  • ಊಟವಾದ ತಕ್ಷಣ ಮಲಗುವುದರಿಂದ ಡಯಾಬಿಟಿಸ್​, ಆಸಿಡಿಟಿ, ಹೊಟ್ಟೆಉರಿ, ಹೊಟ್ಟೆ ಉಬ್ಭರಿಸುವಿಕೆ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ನಿಮ್ಮ ಆರೋಗ್ಯವನ್ನು ಸರಿದೂಗಿಸಬೇಕಾದರೆ ಆಹಾರದ ಕಡೆ ಗಮನಹರಿಸುವುದು ಒಳಿತು.


First published:March 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ