Health Tips: ಉತ್ತಮ ಆರೋಗ್ಯಕ್ಕಾಗಿ ಅಮೃತಬಳ್ಳಿ ಸೇವನೆ ಮಾಡುವ ಮುನ್ನ ಎಚ್ಚರ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Immunity Booster: ಅಮೃತಬಳ್ಳಿ ಮಾತ್ರವಲ್ಲದೆ ಯಾವುದೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪದಾರ್ಥಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಸೇವನೆ ಮಾಡಬೇಕು.ಅಲ್ಲದೆ ಸಮತೋಲಿತ ಪ್ರಮಾಣದಲ್ಲಿ ಸೇವಿಸಬೇಕು.

  • Share this:

ಕೋವಿಡ್‌ -19(Covid-19) ರೋಗವು(Disease) ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿಬಿಟ್ಟಿದೆ. ಶರವೇಗದಲ್ಲಿ ಹಬ್ಬುತ್ತಿರುವ ಈ ರೋಗ, ಎಲ್ಲರಲ್ಲಿಯೂ ಭಯ(Fear) ಹುಟ್ಟಿಸಿದೆ. ಹೆಚ್ಚಿನ ರೋಗ ನಿರೋಧಕ ಶಕ್ತಿ(Immunity) ಹೊಂದಿದ್ದರೆ ಕೊರೊನಾದ(Corona) ಕಪಿಮುಷ್ಟಿಯಿಂದ ಪಾರಾಗಬಹುದು. ರೋಗ ನಿರೋಧಕ ಶಕ್ತಿ ವೃದ್ಧಿಯಾದಾಗ ಕೊರೋನಾ ಸೇರಿದಂತೆ ಅದರ ಯಾವುದೇ ರೂಪಾಂತರಿಗಳನ್ನು ಎದುರಿಸಲು ಸಾಧ್ಯ. ಹೀಗಾಗಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನ ನೀಡುವುದು ಸದ್ಯದ ಆಯ್ಕೆಯಾಗಬೇಕು(Choice). ಕೊರೋನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಮನೆಮನೆಗಳಲ್ಲಿ ಕಷಾಯ ಮಾಡಿಕೊಂಡು ಕುಡಿಯುವ ಅಭ್ಯಾಸ ಆರಂಭವಾಗಿತ್ತು..


ಈ ಪರಿಪಾಟ ಈಗಲೂ ಮುಂದುವರಿದಿದೆ. ಜೊತೆಗೆ ಜನರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎನ್ನಲಾದ ವಿಶೇಷ ಆಹಾರಗಳು ಅಥವಾ ವಿಟಮಿನ್‌ ಸಪ್ಲಿಮೆಂಟ್‌ಗಳ ಮೊರೆ ಹೋಗುತ್ತಿದ್ದಾರೆ. ಜೊತೆಗೆ ಹೆಚ್ಚಿನ ಜನರು ಅಲೋಪತಿ ಆಹಾರ ಪದ್ಧತಿ ಮೊರೆ ಹೋಗಿದ್ದಾರೆ. ಆದರೆ ಆಯುರ್ವೇದದಲ್ಲಿ ಉಲ್ಲೇಖಿಸಿರುವ ರೋಗನಿರೋಧಕ ಶಕ್ತಿ ಹೆಚ್ಚಿಸುವ ವಸ್ತುಗಳನ್ನು ಬಳಸುತ್ತಿದ್ದರೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಮ್ಮ ಈ ಪ್ರಯತ್ನವು ನಿಮಗೆ ಗೊತ್ತಿಲ್ಲದೆ ಸಮಸ್ಯೆಗೆ ಸಿಲುಕಿಸಬಹುದು.


ಇದನ್ನೂ ಓದಿ: N95 Maskನ್ನು ಎಷ್ಟು ಬಾರಿ ಬಳಕೆ ಮಾಡ್ಬೇಕು? ಹೆಚ್ಚು ಬಾರಿ ಬಳಸಿದ್ರೆ ಏನೇನು ಅಪಾಯಗಳಿವೆ? ಫುಲ್ ಡೀಟೆಲ್ಸ್


ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಮೃತಬಳ್ಳಿ


ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಮೃತಬಳ್ಳಿ ಪರಿಣಾಮಕಾರಿಯಾಗಿದ್ದು ಆಯುಷ್ ಇಲಾಖೆ ಕೂಡ ಇದರ ಕಷಾಯ ಮಾಡಿ ಕುಡಿಯುವಂತೆ ಸಲಹೆ ನೀಡಿದೆ. ಅಮೃತ ಬಳ್ಳಿ ಜ್ಯೂಸ್, ಮತ್ತು ಕಷಾಯವನ್ನು ಡೆಂಗ್ಯೂ, ಚಿಕೂನ್‌ಗುನ್ಯಾ, ಜ್ವರ ಮುಂತಾದ ಗಂಭೀರ ಕಾಯಿಲೆಗಳಿಗೆ ನೀಡಲಾಗುತ್ತದೆ. ಇದಲ್ಲದೆ, ಬದಲಾಗುತ್ತಿರುವ ಋತುವಿನಲ್ಲಿ ಅಮೃತ ಬಳ್ಳಿ ಅನೇಕ ರೀತಿಯ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳಿಂದ ರಕ್ಷಿಸುತ್ತದೆ. ಇನ್ನು ಅಮೃತಬಳ್ಳಿ ತಾಮ್ರ, ಕಬ್ಬಿಣ, ರಂಜಕ, ಸತು, ಕ್ಯಾಲ್ಸಿಯಂ, ಮೆಗ್ನೀಷಿಯಮ್ ಮತ್ತು ಅನೇಕ ಆಂಟಿ-ಆಕ್ಸಿಡೆಂಟ್, ಉರಿಯೂತ, ಕ್ಯಾನ್ಸರ್ ವಿರೋಧಿ ಗುಣಗಳಿಂದಲೂ ಕೂಡಿದೆ.


ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಮೃತಬಳ್ಳಿ ಸೇವಿಸುವ ಮುನ್ನ ಎಚ್ಚರ..


ಸೋಂಕಿನ ಅವಧಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ಅಮೃತಬಳ್ಳಿ ಸೇವನೆ ಮಾಡುತ್ತಿರುವುದು ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.. ಆದರೆ ಇದು ನಮಗೆ ಗೊತ್ತಿಲ್ಲದೇ ಹಲವಾರು ಆರೋಗ್ಯ ಸಮಸ್ಯೆಗಳನ್ನು ಸಹ ಉಂಟು ಮಾಡುತ್ತಿದೆ.. ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ಸೇರಿದಂತೆ 13 ವೈದ್ಯಕೀಯ ಕೇಂದ್ರಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದ್ದು, ಜನರು ಅಮೃತಬಳ್ಳಿ ಕಾಂಡದಿಂದ ರಸ ತೆಗೆದುಕೊಂಡು ಪುಡಿಮಾಡಿ ಸೇವನೆ ಮಾಡುತ್ತಾರೆ. ಆದ್ರೆ ದೀರ್ಘಕಾಲದವರೆಗೆ ಅಮೃತಬಳ್ಳಿಯನ್ನು ಸೇವಿಸುವ ಜನರಿಗೆ, ದೀರ್ಘಕಾಲದ ಯಕೃತ್ತಿನ ಕಾಯಿಲೆ ಅಥವಾ ಯಕೃತ್ತಿನ ವೈಫಲ್ಯದ ಸಮಸ್ಯೆ ಇರುವುದು ಕಂಡು ಬಂದಿದೆ.


ವರದಿಗಳ ಪ್ರಕಾರ ಕೆಜಿಎಂಯುನ ಗ್ಯಾಸ್ಟ್ರೋಎಂಟರಾಲಜಿಯ ಸಹ ಪ್ರಾಧ್ಯಾಪಕ ಡಾ.ಅಜಯ್ ಕುಮಾರ್ ಪಟ್ವಾ, 'ಶೇ.67.4ರಷ್ಟು ರೋಗಿಗಳಲ್ಲಿ ಯಕೃತ್ತಿನ ಸಮಸ್ಯೆಗಳಿಗೆ ಅಮೃತಬಳ್ಳಿಯೇ ಮುಖ್ಯ ಕಾರಣವಾಗಿದೆ. ಆದರೆ ಈ ಜನರಿಗೆ ಮಧುಮೇಹ, ಥೈರಾಯ್ಡ್, ಅಧಿಕ ರಕ್ತದೊತ್ತಡದಂತಹ ಯಾವುದೇ ಸಮಸ್ಯೆ ಇರಲಿಲ್ಲ'ವೆಂದು ತಿಳಿಸಿದ್ದಾರೆ.


ಇದನ್ನೂ ಓದಿ: Zinc ಇರೋ ಈ ಆಹಾರಗಳನ್ನು ತಿಂದ್ರೆ ಕೊರೊನಾ ನಿಮ್ಮ ಹತ್ತಿರಕ್ಕೂ ಬರಲ್ವಂತೆ, ಸೋಂಕಿತರಿಗೆ ವೈದ್ಯರು ಹೇಳೋದು ಇದನ್ನೇ!


ಅಮೃತಬಳ್ಳಿ ಸೇವನೆ ಮಾಡುವ ಮುನ್ನ ತಜ್ಞರ ಸಂಪರ್ಕ ಉತ್ತಮ


ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಮನೆಯಲ್ಲಿಯೇ ರೋಗನಿರೋಧಕ ಶಕ್ತಿ ಹೆಚ್ಚಳ ಮಾಡಿಕೊಳ್ಳುತ್ತೇವೆ ಎಂದು ಅಮೃತಬಳ್ಳಿಯನ್ನು  ಸೇವನೆ ಮಾಡುವ ಮುನ್ನ ತಜ್ಞವೈದ್ಯರನ್ನು ಸಂಪರ್ಕ ಮಾಡುವುದು ಉತ್ತಮ.. ಅಮೃತಬಳ್ಳಿ ಮಾತ್ರವಲ್ಲದೆ ಯಾವುದೇ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪದಾರ್ಥಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಸೇವನೆ ಮಾಡಬೇಕು.ಅಲ್ಲದೆ ಸಮತೋಲಿತ ಪ್ರಮಾಣದಲ್ಲಿ ಸೇವಿಸಬೇಕು. ಇಲ್ಲದಿದ್ದರೆ ನೀವು ಮುಂಬರುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

First published: