Tobacco Side Effects: ಪುರುಷರು ಮತ್ತು ಮಹಿಳೆಯರಿಗೆ ತಂಬಾಕು ಸೇವನೆ ಯಾವ ಅಡ್ಡ ಪರಿಣಾಮ ಬೀರುತ್ತದೆ?

ತಂಬಾಕು ತಿನ್ನುವುದರ ಮೇಲೆ ನಿಷೇಧ ಹೇರಲಾಗಿದೆ. ಹೀಗಿದ್ದಾಗಲೂ ಜನರು ತಂಬಾಕು, ಗುಟ್ಕಾ, ಪಾನ್ ಮಸಾಲಾ, ಧೂಮಪಾನ ಮಾಡುತ್ತಲೇ ಇರುತ್ತಾರೆ. ಜೊತೆಗೆ ತಮ್ಮ ಆರೋಗ್ಯಕ್ಕೆ ತಾವೇ ಕತ್ತರಿ ಹಾಕುತ್ತಾರೆ. ತಂಬಾಕು ತಿನ್ನುವುದು ಮಾರಕ ರೋಗಗಳನ್ನು ಎದುರಿಸುವಂತೆ ಮಾಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಂದು ವಿಶ್ವ ತಂಬಾಕು ರಹಿತ ದಿನ (World No Tobacco day). ಜಗತ್ತಿನಾದ್ಯಂತ ತಂಬಾಕು ರಹಿತ ದಿನವನ್ನು ಪ್ರತಿ ವರ್ಷ ಮೇ 31 ರಂದು ಆಚರಣೆ (Celebrate) ಮಾಡಲಾಗುತ್ತದೆ. ತಂಬಾಕು ಅನೇಕ ಕಾಯಿಲೆಗಳಿಗೆ (Disease) ಆಹ್ವಾನ ನೀಡುತ್ತದೆ. ಮನುಷ್ಯನ ಬಾಯಿ, ಶ್ವಾಸಕೋಶಕ್ಕೆ ಹಾನಿ ಉಂಟು ಮಾಡುತ್ತದೆ. ಹಾಗಾಗಿ ತಂಬಾಕು ತಿನ್ನುವುದರ ಮೇಲೆ ನಿಷೇಧ ಹೇರಲಾಗಿದೆ. ಹೀಗಿದ್ದಾಗಲೂ ಜನರು ತಂಬಾಕು, ಗುಟ್ಕಾ, ಪಾನ್ ಮಸಾಲಾ, ಧೂಮಪಾನ ಮಾಡುತ್ತಲೇ ಇರುತ್ತಾರೆ. ಜೊತೆಗೆ ತಮ್ಮ ಆರೋಗ್ಯಕ್ಕೆ ತಾವೇ ಕತ್ತರಿ ಹಾಕುತ್ತಾರೆ. ತಂಬಾಕು ತಿನ್ನುವುದು ಮಾರಕ ರೋಗಗಳನ್ನು ಎದುರಿಸುವಂತೆ ಮಾಡುತ್ತದೆ. ತಂಬಾಕು ಬಾಯಿ ಮತ್ತು ಹಲ್ಲನ್ನು ದುರ್ಬಗೊಳಿಸುತ್ತದೆ.

    ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ

    ಹೀಗಾಗಿ ತಂಬಾಕು ತಿನ್ನದಂತೆ ಜನರಿಗೆ ಅರಿವು ಮೂಡಿಸಲಾಗುತ್ತದೆ. ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ (GATS) 2009-10 ರ ಪ್ರಕಾರ, ಸುಮಾರು 35 ಪ್ರತಿಶತ ಭಾರತೀಯರು ತಂಬಾಕನ್ನು ಯಾವುದಾದರೂ ಒಂದು ರೂಪದಲ್ಲಿ ಬಳಕೆ ಮಾಡುತ್ತಾರೆ. ಇವರಲ್ಲಿ ಶೇ.47 ಪುರುಷರು ಮತ್ತು ಶೇ.20.2 ಮಹಿಳೆಯರು. ತಂಬಾಕು ದೇಹಕ್ಕೆ ಹೇಗೆ ಮಾರಕವಾಗುತ್ತದೆ ಎಂದು ಇಲ್ಲಿ ತಿಳಿಯೋಣ.

    ತಂಬಾಕಿನಿಂದ ಆರೋಗ್ಯಕ್ಕೆ ಹಾನಿ

    ತಂಬಾಕಿನಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ತಂಬಾಕು ಹಲ್ಲುಗಳನ್ನು ದುರ್ಬಲ ಮಾಡುತ್ತದೆ. ಮತ್ತು ಅಕಾಲಿಕವಾಗಿ ಹಲ್ಲುಗಳು ಬೀಳಲು ಕಾರಣವಾಗುತ್ತದೆ. ಇದು ವೈದ್ಯರ ಮಾತಾಗಿದೆ. ತಂಬಾಕು ಸೇವನೆಯಿಂದ ಹಲ್ಲು ಮತ್ತು ಬಾಯಿಗೆ ಸಂಬಂಧಿಸಿದ ರೋಗಗಳು ಬರುತ್ತವೆ. ಇದಲ್ಲದೆ ಇದು ದೃಷ್ಟಿ ಕ್ಷೀಣವಾಗುವಂತೆ ಮಾಡುತ್ತದೆ. ತಂಬಾಕು ಶ್ವಾಸಕೋಶಕ್ಕೆ ತುಂಬಾ ಅಪಾಯಕಾರಿ ಆಗಿದೆ.

    ಇದನ್ನೂ ಓದಿ: ವರ್ಕೌಟ್ ಮಾಡುವ 40 ನಿಮಿಷಗಳ ಮೊದಲು ಈ ಪದಾರ್ಥಗಳನ್ನು ಸೇವಿಸಿ ಎನರ್ಜಿ ಪಡೆಯಿರಿ!

    ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ತಂಬಾಕು

    ತಂಬಾಕಿನ ನಿಕೋಟಿನ್ ಅಂಶ ರಕ್ತದೊತ್ತಡ ಹೆಚ್ಚಲು ಕಾರಣ ಆಗಿದೆ. ನೀವು ಧೂಮಪಾನ ಮಾಡುವಾಗ, ಅದರ ಹೊಗೆ ಇಡೀ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಕಣ್ಣು, ಕಿವಿ ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಇದು ನೇರವಾಗಿ ಬಾಯಿಗೆ ಸಂಬಂಧಪಟ್ಟಿದೆ. ಆದ್ದರಿಂದ ಹೆಚ್ಚು ತಂಬಾಕು ಸೇವನೆಯು ಬಾಯಿಯ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯನ್ನು ಹೆಚ್ಚಿಚ್ಚು ಮಾಡುತ್ತದೆ.

    ಬಾಯಿ ಕ್ಯಾನ್ಸರ್ ಅಪಾಯ

    ತಂಬಾಕು ತಿನ್ನುವ ಹೆಚ್ಚಿನ ಜನರು ಬಾಯಿ ನೋವು, ಹುಣ್ಣು ಹಾಗೂ ಕ್ಯಾನ್ಸರ್ ಅಪಾಯಕ್ಕೆ ತುತ್ತಾಗುತ್ತಾರೆ. ತಂಬಾಕು ತಿನ್ನುವವರು ತಮ್ಮ ಬಾಯಿಯನ್ನು ಸಂಪೂರ್ಣವಾಗಿ ತೆರೆಯಲು ಸಾಧ್ಯ ಆಗುವುದಿಲ್ಲ. ಬಾಯಿಯ ಒಳಭಾಗದ ಎರಡೂ ಬದಿಗಳಲ್ಲಿ ಬಿಳಿ ಗೆರೆಗಳು ಕ್ಯಾನ್ಸರ್ ಬೆಳವಣಿಗೆಯ ಸಂಕೇತವಾಗಿದೆ. ಇದನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದೇ ಹೋದರೆ ಆರೋಗ್ಯಕ್ಕೆ ಅಪಾಯ ಮತ್ತು ಜೀವಕ್ಕೆ ಹಾನಿ ಉಂಟು ಮಾಡುತ್ತದೆ.

    ಮಿದುಳಿನ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ

    ತಂಬಾಕು ಸೇವನೆಯಿಂದ ವ್ಯಕ್ತಿ ನಿಕೋಟಿನ್ ಗೆ ವ್ಯಸನಿ ಆಗುತ್ತಾನೆ. ಮತ್ತು ಅದರ ಪರಿಣಾಮ ಮೆದುಳಿನ ಮೇಲೂ ಅಡ್ಡ ಪರಿಣಾಮ ಬೀರುತ್ತದೆ. ತಂಬಾಕು ಸೇವಿಸುವ ವ್ಯಕ್ತಿಗೆ ಅದನ್ನು ಸೇವಿಸುವುದರಿಂದ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಗುತ್ತಿದೆ ಎಂದು ಭಾವಿಸಿ ಅದಕ್ಕೆ ವ್ಯಸನಿ ಆಗುತ್ತಾನೆ. ಅಂತಹವರಿಗೆ ತಂಬಾಕು ಸಿಗದೇ ಹೋದರೆ ಅವರು ತುಂಬಾ ಚಡಪಡಿಸುತ್ತಾರೆ ಮತ್ತು ಅಸಮಾಧಾನಗೊಳ್ಳುತ್ತಾರೆ.

    ಇದನ್ನೂ ಓದಿ: ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು? ಯಾವ ಪದಾರ್ಥ ಸೇವನೆ ಮಾಡಬೇಕು? ಇಲ್ಲಿದೆ ಮಾಹಿತಿ

    ಗರ್ಭಪಾತದ ಅಪಾಯ

    ಒಂದು ವರದಿಯ ಪ್ರಕಾರ, ತಂಬಾಕು ತಿನ್ನುವ ಮಹಿಳೆಯರಲ್ಲಿ ಗರ್ಭಪಾತದ ಪ್ರಮಾಣವು ಸಾಮಾನ್ಯ ಮಹಿಳೆಯರಿಗಿಂತ ಸುಮಾರು 15 ಪ್ರತಿಶತ ಹೆಚ್ಚಾಗಿದೆ. ತಂಬಾಕು ಸೇವನೆಯಿಂದ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್, ಹೃದಯಾಘಾತ, ಉಸಿರಾಟದ ಕಾಯಿಲೆ, ಸಂತಾನೋತ್ಪತ್ತಿ ಅಸ್ವಸ್ಥತೆ, ನ್ಯುಮೋನಿಯಾ, ಮುಟ್ಟಿನ ಸಮಸ್ಯೆ ಉಂಟಾಗುತ್ತವೆ.
    Published by:renukadariyannavar
    First published: