Pineapple Side Effects: ಅತಿಯಾಗಿ ಅನಾನಸ್​ ತಿಂದ್ರೆ ಈ ಆರೋಗ್ಯ ಸಮಸ್ಯೆಗಳು ತಪ್ಪಿದಲ್ಲ

ಅನಾನಸ್‌ನ ಅಡ್ಡಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು. ಅನಾನಸ್ ಸೇವನೆಯು ಬಹುತೇಕರಲ್ಲಿ ಅಲರ್ಜಿ ಉಂಟು ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅನಾನಸ್ (Pineapple) ಸಿಹಿ ಮತ್ತು ರುಚಿಕಟ್ಟಾದ ಹಣ್ಣಾಗಿದ್ದು, ಹಲವಾರು ಔಷಧೀಯ ಉದ್ದೇಶಗಳಿಗಾಗಿ ಇದನ್ನು ಬಳಸಲಾದರೂ ಈ ಹಣ್ಣಿನಿಂದ ಅನೇಕ ಅಡ್ಡ ಪರಿಣಾಮಗಳೂ (Disadvantages) ಉಂಟಾಗುತ್ತವೆ ಎಂಬುವುದು ವಿಪರ್ಯಾಸ. ಎಂಬುವುದೇ ಸಮಾಧಾನಕರ ವಿಷಯ. ಮಿತವಾಗಿ ಮತ್ತು ಎಚ್ಚರಿಕೆಯಿಂದ ಬಳಸಿದಲ್ಲಿ, ಅನಾನಸ್‌ನ ಅಡ್ಡಪರಿಣಾಮಗಳಿಂದ (Side Effects) ತಪ್ಪಿಸಿಕೊಳ್ಳಬಹುದು. ಅನಾನಸ್ ಸೇವನೆಯು ಬಹುತೇಕರಲ್ಲಿ ಅಲರ್ಜಿ ಉಂಟು ಮಾಡಬಹುದು. ಮುಖ್ಯವಾಗಿ ಅನಾನಸ್ ನಲ್ಲಿ ಮಾಂಸವನ್ನು ಮೃದುಗೊಳಿಸುವ ಗುಣಗಳಿದ್ದು, ಅಲರ್ಜಿ (Allergy) ಪ್ರತಿಕ್ರಿಯೆಯನ್ನು ಪ್ರಚೋದಿಸಲು ಕಾರಣವಾಗುತ್ತವೆ. 

    ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ

    ಮುಖ್ಯವಾಗಿ ಅರ್ಧ ಕಪ್ ಅನಾನಸ್ ನಲ್ಲಿ ೧೫ ಗ್ರಾಂ ಕಾರ್ಬೋಹೈಡ್ರೇಟ್ ಗಳನ್ನು ಹೊಂದಿರುತ್ತದೆ. ಹೆಚ್ಚಿನ ರಕ್ತದಲ್ಲಿನ ಸಕ್ಕರೆಯ ಮಟ್ಟವು ಮಧುಮೇಹವನ್ನು ಉಂಟು ಮಾಡಬಹುದು. ಅನಾನಸ್ ನ ಮತ್ತೊಂದು ಗಂಭೀರವಾದ ಅಡ್ಡ ಪರಿಣಾಮವೆಂದರೆ, ದೇಹದಲ್ಲಿನ ರಕ್ತದ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವುದು. ಇದು ನಿಸ್ಸಂಶಯವಾಗಿ ತೊಂದರೆಗಳನ್ನು ಸೃಷ್ಟಿ ಮಾಡುತ್ತದೆ. ಈ ಹಣ್ಣಿನಲ್ಲಿ ನೈಸರ್ಗಿಕವಾಗಿಯೇ ಸಕ್ಕರೆ ಹೆಚ್ಚಾಗಿರುವುದರಿಂದ ಇಂತಹ ಪರಿಣಾಮವನ್ನು ಉಂಟಾಗುತ್ತದೆ.

    ಋತುಸ್ರಾವದಲ್ಲಿ ಅತಿಯಾದ ರಕ್ತಸ್ರಾವ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ

    ಬ್ರೋಮಿನ್ ಅನಾನಸ್ ರಸ ಮತ್ತು ಕಾಂಡದಲ್ಲಿ ಕಂಡು ಬರುವ ಕಿಣ್ವವಾಗಿದೆ. ಇದನ್ನು ನಾವು ಸೇವಿಸಿದಾಗ ಬ್ರೋಮಿನ್ ಎಂಬ ಕಿಣ್ವವು ನಮ್ಮ ದೇಹದಲ್ಲಿ ಪ್ರತಿಕ್ರಿಯೆ ಉಂಟು ಮಾಡುತ್ತದೆ. ಅನಾನಸ್ ಹಣ್ಣಿನ ಅತಿಯಾದ ಸೇವನೆಯು ಋತುಸ್ರಾವದಲ್ಲಿ ಅತಿಯಾದ ರಕ್ತಸ್ರಾವ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಬ್ರೋಮಿನ್ ನ ರೋಗಲಕ್ಷಣಗಳೆಂದರೆ, ವಾಕರಿಕೆ, ಅತಿಸಾರ ಮತ್ತು ಅಜೀರ್ಣ ಉಂಟಾಗಬಹುದು.

    ಇದನ್ನೂ ಓದಿ: Banana Benefits: ದಿನಕ್ಕೊಂದು ಬಾಳೆಹಣ್ಣು ಮಿಸ್ ಮಾಡದೆ ತಿನ್ನಿ! ಹಲವು ರೋಗಗಳಿಗೆ ಇದುವೇ ಮದ್ದು

    ಸಂವೇದನಾಶೀಲತೆ ಅಥವಾ ಹಲ್ಲಿನ ಕೊಳೆತಕ್ಕೆ ಕಾರಣವಾಗಬಹುದು

    ಅನಾನಸ್ ಹಣ್ಣು ಆರೋಗ್ಯಕರ ಹಾಗು ರುಚಿಕರವಾದ ಹಣ್ಣಾಗಿದ್ದರೂ ಕೂಡ, ಹಲ್ಲುಗಳ ಸಂವೇದನಾಶೀಲತೆ ಅಥವಾ ಹಲ್ಲಿನ ಕೊಳೆತಕ್ಕೆ ಕಾರಣವಾಗಬಹುದು. ಇದಕ್ಕೆ ಮುಖ್ಯವಾದ ಕಾರಣವೆಂದರೆ ಈ ಹಣ್ಣಿನಲ್ಲಿ ಆಮ್ಲೀಯ ಗುಣವನ್ನು ಹೊಂದಿದ್ದು, ಅವುಗಳನ್ನು ಹೆಚ್ಚಾಗಿ ಸೇವಿಸಿದಾಗ ಬಾಯಿಯಲ್ಲಿ ರಾಸಾಯನಿಕ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ಇದರ ಪರಿಣಾಮ ದಂತಕವಚವನ್ನು ಹಂತ ಹಂತವಾಗಿ ಮೃದುವಾಗಿಸುತ್ತದೆ. ಬಿಸಿ ಅಥವಾ ತಣ್ಣನೆಯ ಆಹಾರವನ್ನು ತೆಗೆದುಕೊಳ್ಳುವಾಗ ಹಲ್ಲು ನೋವು ಮತ್ತು ತೀವ್ರವಾದ ಸಂವೇದನೆ ಉಂಟಾಗಿ ದಂತಕ್ಷಯಕ್ಕೂ ಕಾರಣವಾಗಬಹುದು.

    ಔಷಧಿಗಳನ್ನು ತೆಗೆದುಕೊಂಡಾಗ ಉಂಟಾಗುವ ಪರಿಣಾಮ

    ಮುಖ್ಯವಾಗಿ ಅನಾನಸ್ ಹಣ್ಣಿನಲ್ಲಿ ಅಮೋಕ್ಸಿಸಿಲಿನ್ ಮತ್ತು ಟೆಟ್ರಾಸೈಕ್ಲಿನ್ ನಂತಹ ಕೆಲವು ಪ್ರತಿಜೀವಕಗಳೊಂದಿಗೆ ಸಂಯೋಜಿಸಿದಾಗ ಕೆಲವು ಅಡ್ಡ ಪರಿಣಾಮಗಳು ಹೆಚ್ಚಳಕ್ಕೆ ಕಾರಣವಾಗಬಹುದು. ಅದರಲ್ಲಿಯೂ, ಕೆಲವು ನಿರ್ದಿಷ್ಟವಾದ ಔಷಧಿಗಳನ್ನು ತೆಗೆದುಕೊಂಡಾಗ ಅಮೋಕ್ಸಿಸಿಲಿನ್ ಉಂಟು ಮಾಡುತ್ತದೆ. ಇದರ ರೋಗಲಕ್ಷಣಗಳೆಂದರೆ, ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು, ಮೂಗಿನಲ್ಲಿ ರಕ್ತ ಸುರಿಯುವುದು, ಶೀತ, ಜ್ವರ, ತಲೆತಿರುಗುವಿಕೆ ಇತ್ಯಾದಿ.

    ಇದನ್ನೂ ಓದಿ: Food Recipe: ಮಸೂರ್ ದಾಲ್ ನೊಂದಿಗೆ ಟೋಫು ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

    ಮಹಿಳೆಯರಲ್ಲಿ ಅನಾನಸ್ ಹಣ್ಣು ತಿಂದರೆ ಗರ್ಭಪಾತವಾಗ ಬಹುದು

    ಸಾಮಾನ್ಯವಾಗಿ ಮಹಿಳೆಯರಲ್ಲಿ ಅನಾನಸ್ ಹಣ್ಣು ತಿಂದರೆ ಗರ್ಭಪಾತವಾಗುವುದೆಂಬ ಭಯವಿದೆ. ಆದ್ದರಿಂದ ಗರ್ಭಿಣಿಯರಿಗೆ ಈ ಹಣ್ಣನ್ನು ತಿನ್ನಬಾರದೆಂದು ಸಲಹೆ ನೀಡಲಾಗುತ್ತದೆ. ಸಂಶೋಧನೆಯ ಪ್ರಕಾರ ಅನಾನಸ್ ಹಣ್ಣು ಬ್ರೋಮೆಲಿಯನ್ ಅಂಶವನ್ನು ಒಳಗೊಂಡಿರುವುದರಿಂದ ಗರ್ಭಕಂಠದ ಅತಿಸಾರ ಅಥವಾ ಗರ್ಭಪಾತ ಎನ್ನುವ ಅಪಾಯವನ್ನುಂಟು ಮಾಡುತ್ತದೆ.

    ಗರ್ಭಿಣಿಯರು ಈ ಹಣ್ಣನ್ನು ಸೇವಿಸಲೇಬಾರದು

    ಗರ್ಭಿಣಿಯರು ಈ ಹಣ್ಣನ್ನು ಸೇವಿಸಲೇಬಾರದು ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಮಲಬದ್ಧತೆ ಮತ್ತು ನಿದ್ರಾಹೀನತೆಯನ್ನು ನಿವಾರಿಸುತ್ತದೆಯಾದರೂ ಗರ್ಭಿಣಿಯರಿಗೆ ಇದು ಅಪಾಯಕಾರಿ. ಕೆಲವು ಗರ್ಭಿಣಿಯರ ಆರೋಗ್ಯದ ತಪಾಸಣೆಯ ನಂತರ ವೈದ್ಯರು ಅನಾನಸ್ ತಿನ್ನಬೇಕೆನ್ನುವ ಸಲಹೆ ನೀಡುವುದು ಉಂಟು. ಹಾಗಾಗಿ ಗರ್ಭಿಣಿಯರು ಈ ಹಣ್ಣನ್ನು ತಿನ್ನಬಹುದೇ ಅಥವಾ ಬೇಡವೇ ಎನ್ನುವುದರ ಬಗ್ಗೆ ವೈದ್ಯರಲ್ಲಿ ಮಾಹಿತಿ ಪಡೆದುಕೊಳ್ಳಲೇ ಬೇಕು.
    Published by:Swathi Nayak
    First published: