Side Effects Of Paneer: ಪನೀರ್ ಅಂದ್ರೆ ಬಹಳ ಇಷ್ಟನಾ? ಜಾಸ್ತಿ ತಿನ್ನುವಾಗ ಎಚ್ಚರವಿರಲಿ..

Side Effects Of Panner On Health: ನೀವು ಕಳಪೆ ಗುಣಮಟ್ಟದ ಪನೀರ್ ತಿಂದರೆ ಆಹಾರ ವಿಷಪೂರಿತವಾಗುವ ಸಾಧ್ಯತೆಯೂ ಹೆಚ್ಚು. ಇದು ಹೆಚ್ಚಿನ ತೇವಾಂಶವನ್ನು ಹೊಂದಿರುವ ಆಹಾರ ಪದಾರ್ಥವಾಗಿದೆ. ಪನೀರ್‌ನಲ್ಲಿರುವ ಸೋಡಿಯಂ ಅಂಶವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪನೀರ್ ಹೆಸರನ್ನು ಕೇಳಿದ  ತಕ್ಷಣ ಬಾಯಲ್ಲಿ ನೀರು ಹರಿಯಲು ಆರಂಭವಾಗುತ್ತದೆ ಸಸ್ಯಾಹಾರಿಗಳೇ ಆಗಲಿ ಮಾಂಸಾಹಾರಿಗಳೇ ಆಗಲಿ, ಪನೀರ್ ತಿನ್ನಲು ಇಷ್ಟಪಡುತ್ತಾರೆ ಪನೀರ್ ಎಂದರೆ ಬಹಳಷ್ಟು ಜನರಿಗೆ ಇಷ್ಟ, ಇನ್ನು ಕೆಲವರಿಗೆ ಕಷ್ಟ. ಇದನ್ನು ವಿವಿಧ ಆಹಾರ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಪನೀರ್ ಟಿಕ್ಕಾ, ಪಲಾಕ್ ಪನೀರ್ ಹೀಗೆ. ಪನ್ನೀರಿನಲ್ಲಿ ಹಲವಾರು ಆರೋಗ್ಯಕರ ಅಂಶಗಳಿವೆ. ಪನೀರ್ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಇದು ನಮಗೆ ನೀಡುತ್ತದೆ. ಪನೀರ್ ಅನ್ನು ಇಷ್ಟಪಡದವರು ಸಾಮಾನ್ಯವಾಗಿ ಯಾರೂ ಇಲ್ಲ. ಕೆಲವರಂತೂ ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿ ತನಕ ಇದನ್ನು ಸೇವಿಸುತ್ತಾರೆ. ಇದನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್ ಮಾತ್ರವಲ್ಲದೆ ಕ್ಯಾಲ್ಸಿಯಂ, ಫಾಸ್ಪರಸ್, ಸೆಲೆನಿಯಮ್, ಫೈಬರ್ ಮತ್ತು ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ.

ಆದರೆ ನಿಮಗೆ ಗೊತ್ತಾ ಪನೀರಿನ ಅತಿಯಾದ ಸೇವನೆ ಸಹ ಆರೋಗ್ಯಕ್ಕೆ ಹಾನಿಕಾರಕ ಕೂಡ. ಅಲ್ಲದೇ ಕೆಲ ಆರೋಗ್ಯ ಸಮಸ್ಯೆಗಳಿರುವವರು ಪನೀರಿನ ಸೇವನೆ ಮಾಡದಿರುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ.

ಹಾಗಾದ್ರೆ ಯಾವ ಆರೊಗ್ಯ ಸಮಸ್ಯೆ ಇರುವವರು ಪನೀರಿನ ಸೇವನೆ ಕಡಿಮೆ ಮಾಡಬೇಕು ಇಲ್ಲಿದೆ.

 ಅತಿಸಾರ 

ಇದನ್ನೂ ಓದಿ: ಪಾಪ್​ ಕಾರ್ನ್​ನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ಗುಟ್ಟು ..

ಅತಿಸಾರದ ಸಮಸ್ಯೆ ಇರುವ ಜನರು ಪನೀರಿನ ಸೇವನೆ ಮಾಡದಿರುವುದು ಉತ್ತಮ.  ಯಾಕೆಂದರೆ ಅದು ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಯಾಕೆಂದರೆ ಇದರಲ್ಲಿ ಪ್ರೋಟೀನ್ ಹೆಚ್ಚಿರುತ್ತದೆ ಎಂಬುದು ಸತ್ಯ, ಅದೇ ಪ್ರೊಟೀನ್  ದೇಹದಲ್ಲಿ ಹೆಚ್ಚಾದಲ್ಲಿ  ಅತಿಸಾರವನ್ನ ಉಂಟು ಮಾಡುತ್ತದೆ.

ರಕ್ತದೊತ್ತಡ

ಪನೀರಿನ ಸೇವನೆ ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ, ಆದರೆ ಇದನ್ನು ರಕ್ತದೊತ್ತಡ ಇರುವ ಜನರು ಸೇವನೆ ಮಾಡಬಾರದು. ಇದು ರಕ್ತದೊತ್ತಡ ಹೆಚ್ಚು ಮಾಡುತ್ತದೆ. ಅಲ್ಲದೇ ಈ ಸಮಸ್ಯೆ ಇಲ್ಲದಿದ್ದಲ್ಲಿ ಸಹ ಹೆಚ್ಚು ಸೇವನೆ ಮಾಡುವುದು ಸಮಸ್ಯೆ ಆರಂಭವಾಗಲು ಕಾರಣವಾಗುತ್ತದೆ.

ಜೀರ್ಣಕ್ರಿಯೆ

ನಿಮಗೆ ಜೀರ್ಣಕ್ರಿಯೆಯ ಸಮಸ್ಯೆ ಇದ್ದಲ್ಲಿ ಪನೀರ್ ಸೇವನೆ ನಿಜಕ್ಕೂ ಸಮಸ್ಯೆಯನ್ನುಂಟು ಮಾಡುತ್ತದೆ. ನಿಮಗೆ ಮಲಬದ್ಧತೆ ಸಮಸ್ಯೆ ಹೆಚ್ಚು ದಿನಗಳಿಂದ ಇದ್ದಲ್ಲಿ ಪನೀರ್ ಸೇವನೆಯನ್ನು ತ್ಯಜಿಸುವುದು ಉತ್ತಮ.

ಸೋಂಕು

ಕೆಲವರಿಗೆ ಪನೀರ್ ಎಂದರೆ ಅಲರ್ಜಿ ಇರುತ್ತದೆ, ಆದರೆ ಇನ್ನು ಕೆಲವರು ಅತಿಯಾಗಿ ಸೇವನೆ ಮಾಡಲು ಹೋಗಿ ಅಲರ್ಜಿ ತಂದುಕೊಳ್ಳುತ್ತಾರೆ. ಎಂದಿಗೂ ಈ ತಪ್ಪು ಮಾಡಬಾರದು, ಅದರಲ್ಲೂ ಪನೀರ್​ ಅನ್ನು ಬೇಯಿಸದೆ ಎಂದಿಗೂ ಸೇವನೆ ಮಾಡಬೇಡಿ. ಅದು ನಿಮಗೆ ಅಲರ್ಜಿ ಉಂಟಾಗಲು ಕಾರಣವಾಗುತ್ತದೆ. ಪನೀರ್ ಸೇವನೆಯು ಡೈರಿ ಉತ್ಪನ್ನಗಳ ಅಲರ್ಜಿ ಹೊಂದಿರುವ ಜನರಿಗೆ ತೊಂದರೆ ಉಂಟುಮಾಡಬಹುದು. ಪನೀರ್ ಅನ್ನು ಉತ್ತಮ ಅಂಗಡಿಯಿಂದ ಖರೀದಿಸಬೇಕು. ಏಕೆಂದರೆ ಕೆಟ್ಟ ಗುಣಮಟ್ಟದ ಪನೀರ್ ಚರ್ಮದ ಅಲರ್ಜಿಯನ್ನು ಉಂಟುಮಾಡಬಹುದು.

ಇದನ್ನೂ ಓದಿ: ಬಾಳೆಹಣ್ಣು ಹಾಳಾಗದಂತೆ ಕಾಪಾಡಲು ಹೀಗೆ ಮಾಡಿ..

ನೀವು ಕಳಪೆ ಗುಣಮಟ್ಟದ ಪನೀರ್ ತಿಂದರೆ ಆಹಾರ ವಿಷಪೂರಿತವಾಗುವ ಸಾಧ್ಯತೆಯೂ ಹೆಚ್ಚು. ಇದು ಹೆಚ್ಚಿನ ತೇವಾಂಶವನ್ನು ಹೊಂದಿರುವ ಆಹಾರ ಪದಾರ್ಥವಾಗಿದೆ. ಪನೀರ್‌ನಲ್ಲಿರುವ ಸೋಡಿಯಂ ಅಂಶವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು ಅದು ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಪನೀರ್​ನಲ್ಲಿ  ಕೊಬ್ಬಿನ ಅಂಶ ಸಮೃದ್ಧವಾಗಿದೆ ಮತ್ತು ಜಡ ಜೀವನ ನಡೆಸುವ ಜನರಿಗೆ  ಪನೀರ್ ಸೇವನೆಯಿಂದ  ಬೊಜ್ಜುಬೆಳೆಯಬಹುದು.
Published by:Sandhya M
First published: