• Home
  • »
  • News
  • »
  • lifestyle
  • »
  • Tea Side Effects: ಟೀ ಜಾಸ್ತಿ ಕುಡಿದರೆ ಅನ್ನನಾಳದ ಕ್ಯಾನ್ಸರ್ ಬರುತ್ತಂತೆ

Tea Side Effects: ಟೀ ಜಾಸ್ತಿ ಕುಡಿದರೆ ಅನ್ನನಾಳದ ಕ್ಯಾನ್ಸರ್ ಬರುತ್ತಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Side Effects of Drinking Too Much Tea: ಉದಾಹರಣೆಗೆ, ಒಂದು ಕಪ್ ಚಹಾವು 150 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿದ್ದರೆ, ನಮ್ಮ ಅನ್ನನಾಳವು 127 ಡಿಗ್ರಿ ಫ್ಯಾರನ್‌ಹೀಟ್‌ವರೆಗೆ ತಾಪಮಾನವನ್ನು ತಲುಪಬಹುದು. ಹಾಗಾಗಿ ನೀವು ಬೇಸಿಗೆಯಲ್ಲಿ ಐಸ್ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು.

ಮುಂದೆ ಓದಿ ...
  • Share this:

ವಿಶ್ವದ ಅತ್ಯಂತ ಜನಪ್ರಿಯ ರಿಫ್ರೆಶ್ 9Refresh Drink) ಪಾನೀಯವೆಂದರೆ ಚಹಾ (Tea). ಕೆಲವರಿಗೆ ಕಾಫಿ ಎಂದರೆ ತುಂಬಾ ಇಷ್ಟ. ಆದರೆ, ಚಹಾವು ಬಹಳಷ್ಟು ಜನರ ಹೃದಯ ಗೆದ್ದಿದೆ ಎನ್ನಬಹುದು. ಇದನ್ನು ಪ್ರಪಂಚದಾದ್ಯಂತ ಹೆಚ್ಚಿನ ಜನರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಅನೇಕ ಅಧ್ಯಯನಗಳು ಚಹಾ ಕುಡಿಯುವ ಪ್ರಯೋಜನಗಳ ಬಗ್ಗೆ ದೊಡ್ಡ ಪಟ್ಟಿ ಮಾಡಿದೆ. ಇದು ಉರಿಯೂತವನ್ನು ಕಡಿಮೆ ಮಾಡುವುದು, ಹೃದ್ರೋಗ (Heart Problem) ಮತ್ತು ದೀರ್ಘಕಾಲದ ಕಾಯಿಲೆಗಳನ್ನು ನಿಯಂತ್ರಿಸುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಹಲವು ಪ್ರಯೋಜನಗಳನ್ನು ಹೊಂದಿದೆ.


ಚಹಾವು ಮನಸ್ಸನ್ನು ರಿಫ್ರೆಶ್​ ಮಾಡುವ ಪಾನೀಯಗಳಲ್ಲಿ ಜನಪ್ರಿಯ ಆಯ್ಕೆಯಾಗಿದೆ. ಆದರೆ ಇದರ ಅತಿಯಾದ ಸೇವನೆಯು ಕೆಲವು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದರಲ್ಲಿ ಸಂದೇಹವಿಲ್ಲ. ಹಾಗಾದ್ರೆ ಈ ಚಹಾ ಸೇವನೆ ಮಾಡುವುದರಿಂದ ಏನೆಲ್ಲಾ ಸಮಸ್ಯೆಯಾಗುತ್ತದೆ ಎಂಬುದು ಇಲ್ಲಿದೆ.


ದೇಹದ ನೈಸರ್ಗಿಕ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಬಹುದು:


ನೀವು ಆಯ್ಕೆ ಮಾಡುವ ಚಹಾವನ್ನು ಅವಲಂಬಿಸಿ, ಕೆಫೀನ್ ಸೇವನೆಯು ಬದಲಾಗುತ್ತದೆ. ಕಪ್ಪು ಚಹಾ, ಹಾಲು ಚಹಾ ಮತ್ತು ಹಸಿರು ಚಹಾವು ಸರಾಸರಿ 14-61 ಮಿಲಿಗ್ರಾಂ ಕೆಫೀನ್ ಅನ್ನು ಹೊಂದಿರುತ್ತದೆ. ಇದು 96 ಮಿಲಿಗ್ರಾಂ ಕೆಫೀನ್‌ನೊಂದಿಗೆ ಒಂದು ಕಪ್ ಕಾಫಿಗಿಂತ ಕಡಿಮೆಯಿದ್ದರೂ, ದೈನಂದಿನ ಚಹಾದಲ್ಲಿರುವ ಕೆಫೀನ್ ನಮ್ಮ ದೇಹದ ನೈಸರ್ಗಿಕ ಸಿರ್ಕಾಡಿಯನ್ ಸಮತೋಲನವನ್ನು ಹಾಳು ಮಾಡುವ ಸಾಮರ್ಥ್ಯವನ್ನು ಹೊಂದಿದೆ.


ನಮ್ಮ ಸರ್ಕಾಡಿಯನ್ ವ್ಯವಸ್ಥೆಯು 24-ಗಂಟೆಗಳ ಅವಧಿಯಲ್ಲಿ ನಮ್ಮ ದೇಹವು ಅನುಸರಿಸುವ ಕಾರ್ಯವಿಧಾನಗಳನ್ನು ಸಮತೋಲನಗೊಳಿಸುತ್ತದೆ, ನಾವು ಎಚ್ಚರವಾಗಿರುವಾಗ ಮತ್ತು ನಿದ್ದೆ ಮಾಡುವಾಗ. ಬೆಳಕು, ಒತ್ತಡ, ಕೆಲಸ ಮತ್ತು ಕೆಫೀನ್ ನಮ್ಮ ಸಿರ್ಕಾಡಿಯನ್ ಲಯವನ್ನು ಸಮತೋಲನ ಹಾಳು ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಹಬಹುದು.  ನ


ಮ್ಮ ನೈಸರ್ಗಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಇದು ಹಗಲಿನಲ್ಲಿ ಹೆಚ್ಚು ಜಾಗರೂಕತೆಯಿಂದ ಇರಲು, ರಾತ್ರಿ ಉತ್ತಮವಾಗಿ ನಿದ್ರೆ ಮಾಡಲು ಮತ್ತು ಒಟ್ಟಾರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾವು ಮಧ್ಯಾಹ್ನ ಅಥವಾ ಸಂಜೆ ಹೆಚ್ಚು ಕೆಫೀನ್ ಹೊಂದಿರುವ ಚಹಾವನ್ನು ಸೇವಿಸಿದರೆ, ಅದು ನಮ್ಮ ನಿದ್ರೆಗೆ ಭಂಗ ತರುತ್ತದೆ.


ಇದನ್ನೂ ಓದಿ: ಈ ಎರಡು ವಸ್ತುಗಳನ್ನು ಬಳಸಿದ್ರೆ ನಿಮ್ಮ ಮೊಡವೆ ಮಾಯವಾಗುತ್ತೆ


ಇದು ನಮ್ಮ ಸಿರ್ಕಾಡಿಯನ್ ರಿದಮ್ ಅನ್ನು ಸಹ ಅಡ್ಡಿಪಡಿಸಬಹುದು. ಸಂಶೋಧನೆಯ ಪ್ರಕಾರ, ನಿರಂತರವಾಗಿ ಸಿರ್ಕಾಡಿಯನ್ ವ್ಯವಸ್ಥೆಯ ಸಮತೋಲನ ಹಾಳಾದರೆ, ಹೃದಯರಕ್ತನಾಳದ ಸಮಸ್ಯೆಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ತೂಕ ಹೆಚ್ಚಾಗುವುದು ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಹಾಳಾಗಲು ಕಾರಣವಾಗಬಹುದು. ಆದ್ದರಿಂದ ಮುಂದಿನ ಬಾರಿ ನೀವು ರಾತ್ರಿಯ ಚಹಾವನ್ನು ಕುಡಿಯುವಾಗ, ಗಿಡಮೂಲಿಕೆ ಚಹಾವನ್ನು ಕುಡಿಯಬಹುದು.


ಅನ್ನನಾಳದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು:


ಬಿಸಿ ಚಹಾವನ್ನು ಕುಡಿಯುವುದು ಅನ್ನನಾಳದ ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಅಥವಾ ಅನ್ನನಾಳದ ಕ್ಯಾನ್ಸರ್ಗೆ ಕಾರಣವಾಗಬಹುದು. ಉತ್ತರ ಇರಾನಿನ ಜನರ ಮೇಲೆ  ನಡೆಸಿದ ಅಧ್ಯಯನದಲ್ಲಿ ಅನ್ನನಾಳದ ಕ್ಯಾನ್ಸರ್‌ಗೆ ಮುಖ್ಯ ಕಾರಣಗಳಲ್ಲಿ ಒಂದು ದೊಡ್ಡ ಪ್ರಮಾಣಲ್ಲಿ ಬ್ಲ್ಯಾಕ್​ ಚಹಾವನ್ನು ಕುಡಿಯುವುದು ಕಂಡುಬಂದಿದೆ.




ಇತರ ಅಧ್ಯಯನಗಳು ಇದೇ ರೀತಿಯ ಫಲಿತಾಂಶಗಳನ್ನು ಕಂಡುಕೊಂಡಿವೆ. ಬಿಸಿ ಕಾಫಿ ಮತ್ತು ಬಿಸಿ ಚಹಾ ಎರಡೂ ಅನ್ನನಾಳಕ್ಕೆ ಶಾಶ್ವತವಾದ ಹಾನಿಯನ್ನುಂಟುಮಾಡುತ್ತದೆ. ಇದರ ನಿಖರವಾದ ಮಾಹಿತಿ ಪಡೆಯಲು ಸಂಶೋಧಕರು ಇನ್ನೂ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಅನೇಕ ಅಧ್ಯಯನಗಳು ಇದು ನಮ್ಮ ಅನ್ನನಾಳದ ಆಂತರಿಕ ತಾಪಮಾನಕ್ಕೆ ಸಂಬಂಧಿಸಿದೆ ಎಂದು ಹೇಳುತ್ತವೆ.


ಇದನ್ನೂ ಓದಿ: ಕ್ಯಾರೆಟ್ ಸಿಪ್ಪೆಯಿಂದಲೂ ಇದೆ ಹಲವಾರು ಪ್ರಯೋಜನ, ಹೇಗೆಲ್ಲಾ ಯೂಸ್​ ಮಾಡ್ಬೋದು ನೋಡಿ


ಉದಾಹರಣೆಗೆ, ಒಂದು ಕಪ್ ಚಹಾವು 150 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿದ್ದರೆ, ನಮ್ಮ ಅನ್ನನಾಳವು 127 ಡಿಗ್ರಿ ಫ್ಯಾರನ್‌ಹೀಟ್‌ವರೆಗೆ ತಾಪಮಾನವನ್ನು ತಲುಪಬಹುದು. ಹಾಗಾಗಿ ನೀವು ಬೇಸಿಗೆಯಲ್ಲಿ ಐಸ್ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು.

Published by:Sandhya M
First published: