Health Tips: ಬಿಸಿ ಆಹಾರಕ್ಕೆ ನಿಂಬೆ ಹಣ್ಣು ಹಾಕಿದ್ರೆ ಏನ್ ಆಗುತ್ತೆ? ಇಲ್ಲಿದೆ ನೋಡಿ

Drinking lemon water with Food: ನಿಂಬೆಹಣ್ಣಿನ ಬಳಕೆ ನಿಮ್ಮ ದೈನಂದಿನ ಅಡುಗೆ ದಿನಚರಿಯಲ್ಲಿ ನಿಜವಾಗಿಯೂ ಮುಖ್ಯವಾಗಿದೆ. ಏಕೆಂದರೆ ನಿಂಬೆಯು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ನಿಮ್ಮ ದೇಹಕ್ಕೆ ದಿನನಿತ್ಯದ ಅಗತ್ಯವಿರುವ ಪೋಷಕಾಂಶ ನೀಡುವ ಆಹಾರ ಪದಾರ್ಥ ಆಗಿದೆ.

ಸಾಂರ್ಭಿಕ ಚಿತ್ರ

ಸಾಂರ್ಭಿಕ ಚಿತ್ರ

  • Share this:
ನಮ್ಮ ದೈನಂದಿನ ಆಹಾರದಲ್ಲಿ ನಿಂಬೆಹಣ್ಣು (Lemon) ಕೂಡ ಪ್ರಮುಖ ಆಹಾರಗಳಲ್ಲಿ ಒಂದಾಗಿದೆ. ಇದರಲ್ಲಿರುವ ವಿಟಮಿನ್ ಸಿ ಯ ನಿಯಮಿತ ಬಳಕೆಯು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಲ್ಲಿ ಅಗತ್ಯ ಉತ್ಕರ್ಷಣ ನಿರೋಧಕ ಪೋಷಕಾಂಶಗಳು (Antioxidant nutrients)  ಕೂಡ ಇವೆ. ನಿಂಬೆ ಹಣ್ಣಿನಲ್ಲಿರುವ ಈ ಪೋಷಕಾಂಶಗಳೇ ದೇಹದಲ್ಲಿನ ರೋಗನಿರೋಧಕ ಶಕ್ತಿ, ಕಬ್ಬಿಣದ ಹೀರಿಕೊಳ್ಳುವಿಕೆ, ಮೂಳೆ ಆರೋಗ್ಯ, ಚರ್ಮ, ಕೂದಲು ಮತ್ತು ಕಣ್ಣುಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಕೆಲವು ಜನರು ತಮ್ಮ ಬಿಸಿ ಬಿಸಿ ಆಹಾರಕ್ಕೆ ನಿಂಬೆ ರಸವನ್ನು ಸೇರಿಸುತ್ತಾರೆ. ಇಷ್ಟು ವರ್ಷಗಳ ಕಾಲ ಇದೇ ತಪ್ಪನ್ನು ಕೆಲವರು ಮಾಡಿಯೇ ಇರುತ್ತಾರೆ. ಆದರೆ ಇದು ತಪ್ಪಾದ ಕ್ರಮವಾಗಿದೆ. ಅದರ ಬಗ್ಗೆ ನಾವಿಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಹೌದು, ಬಿಸಿ ಅಡುಗೆಗಳಿಗೆ ನಿಂಬೆ ರಸವನ್ನು ಸೇರಿಸಸಬಾರದು ಎಂದು ಹೇಳುತ್ತಾರೆ. ಇದರ ಕುರಿತು ಪೌಷ್ಟಿಕತಜ್ಞ ಜೂಹಿ ಕಪೂರ್ ಅವರು “ಹಬೆಯಾಡುವ ಬಿಸಿ ಭಕ್ಷ್ಯಗಳಲ್ಲಿ ನಿಂಬೆ ರಸವನ್ನು ಸೇರಿಸುವುದನ್ನು ತಪ್ಪಿಸಬೇಕು ಎಂದು ಹಂಚಿಕೊಂಡಿದ್ದಾರೆ.

ಯಾಕೆ ಸೇರಿಸಬಾರದು?

"ನಿಂಬೆಹಣ್ಣಿನ ಬಳಕೆ ನಿಮ್ಮ ದೈನಂದಿನ ಅಡುಗೆ ದಿನಚರಿಯಲ್ಲಿ ನಿಜವಾಗಿಯೂ ಮುಖ್ಯವಾಗಿದೆ. ಏಕೆಂದರೆ ನಿಂಬೆಯು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ನಿಮ್ಮ ದೇಹಕ್ಕೆ ದಿನನಿತ್ಯದ ಅಗತ್ಯವಿರುವ ಪೋಷಕಾಂಶ ನೀಡುವ ಆಹಾರ ಪದಾರ್ಥ ಆಗಿದೆ. ನಮ್ಮ ದೇಹವು ವಿಟಮಿನ್ ಸಿ ಅನ್ನು ಸಂಗ್ರಹಿಸುವುದಿಲ್ಲ ಅಥವಾ ಉತ್ಪಾದಿಸುವುದಿಲ್ಲ. ಆದ್ದರಿಂದ ವಿಟಮಿನ್ ಸಿ ದೈನಂದಿನ ಸೇವನೆಯು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ಬಹಳ ಮುಖ್ಯವಾಗಿದೆ ”ಎಂದು ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ, ವಿಟಮಿನ್ ಸಿ ಅತ್ಯಂತ ಶಾಖ ಸೂಕ್ಷ್ಮವಾದ ಪೋಷಕಾಂಶ ಆಗಿದೆ ಮತ್ತು ಇದರಿಂದ ಪೌಷ್ಟಿಕಾಂಶವು ಶಾಖದಿಂದ ಸುಲಭವಾಗಿ ನಾಶವಾಗುತ್ತದೆ ಎಂದು ಗಮನಿಸಬಹುದು.

ಇದನ್ನೂ ಓದಿ: ಟೋಲ್‌ನಲ್ಲಿ ಮಹಿಳೆಯರ ಡಿಶ್ಯುಂ ಡಿಶ್ಯುಂ! ಕೆರಳಿದ ನಾರಿಯರ ಜಡೆಜಗಳದಿಂದ ಟ್ರಾಫಿಕ್ ಜಾಮ್!

“ಇದಕ್ಕಾಗಿಯೇ ನೀವು ಇನ್ನೂ ಬಿಸಿಯಾಗಿರುವ ಅಥವಾ ಇನ್ನೂ ಉರಿಯಲ್ಲಿ ಬೇಯಿಸುವ ಆಹಾರದ ಮೇಲೆ ನಿಂಬೆ ರಸವನ್ನು ಸೇರಿಸಬಾರದು. ಬಿಸಿಯಾಗಿರುವ ಆಹಾರದಲ್ಲಿ ನಿಂಬೆ ರಸವನ್ನು ಸೇರಿಸುವುದರಿಂದ ಆಹಾರದಲ್ಲಿ ವಿಟಮಿನ್ ಸಿ ನಾಶವಾಗಲು ಕಾರಣವಾಗುತ್ತದೆ ಮತ್ತು ಇದರಿಂದ ನಿಮಗೆ ಪೂರ್ಣ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ,” ಎಂದು ಅವರು ಹೇಳಿದರು.

Side Effects of Drinking too much lemon Water
ಸಾಂದರ್ಭಿಕ ಚಿತ್ರ


“ವಿಶೇಷವಾಗಿ ನಾವು ಕರ್ರಿ, ದಾಲ್, ಉಪ್ಮಾ, ಅಥವಾ ಪೋಹಾ ಅಂತಹ ಆಹಾರಗಳು ಮತ್ತು ನಿಂಬೆ ಚಹಾದಂತಹ ಪಾನೀಯಗಳನ್ನು ಸೇವನೆ ಮಾಡುವಾಗ ಆಹಾರವನ್ನು ಇನ್ನೂ ಬೇಯಿಸುವಾಗ ನಾವು ನಿಂಬೆಯನ್ನು ಹಿಂಡುತ್ತೇವೆ. ಆದ್ದರಿಂದ, ನೀವು ಯಾವುದೇ ಆಹಾರ ತಯಾರಿಕೆಯಲ್ಲಿ ನಿಂಬೆ ಬಳಸುತ್ತಿರುವುದನ್ನು ಗಮನದಲ್ಲಿಟ್ಟುಕೊಳ್ಳಿ. ಆಹಾರ ತಯಾರಿಕೆ ಆದ ಕೂಡಲೇ ನಿಂಬೆ ರಸವನ್ನು ಅದಕ್ಕೆ ಸೇರಿಸಬೇಡಿ. ಅದಕ್ಕೂ ಮುಂಚೆ ಸ್ವಲ್ಪ ಸಮಯ ಮೊದಲು ಆಹಾರವು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ನಿಂಬೆ ರಸವನ್ನು ಸೇರಿಸಿ”ಎಂದು ಕಪೂರ್ ಹೇಳಿದರು.

ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಆಹಾರ ತಂತ್ರಜ್ಞಾನ ಮತ್ತು ಪೋಷಣೆ ವಿಭಾಗದ ಮುಖ್ಯಸ್ಥೆ ಡಾ. ಸೌಂದರ್ ಕೌರ್ ಅವರು ʼವಿಟಮಿನ್ ಸಿ ಯ ಉತ್ತಮ ಮೂಲವಾಗಿರುವ ನಿಂಬೆ ರಸವನ್ನು ಊಟದಲ್ಲಿ ಸೇರಿಸಿದಾಗ ಕಬ್ಬಿಣವನ್ನು ಹೀರಿಕೊಳ್ಳಲು ನಿಂಬೆ ರಸವು ಸಹಾಯ ಮಾಡುತ್ತದೆ” ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಇದನ್ನೂ ಓದಿ: ಡಯಾಬಿಟಿಸ್​ ಇರುವವರು ವೈನ್ ಕುಡಿಯೋ ಮುಂಚೆ ಈ ಸ್ಟೋರಿ ಓದಿ

"ಆದರೆ, ವಿಟಮಿನ್ ಸಿ ಅಥವಾ ಆಸ್ಕೋರ್ಬಿಕ್ ಆಮ್ಲವು ತಾಪಮಾನ ಮತ್ತು ಬೆಳಕಿನ ಸೂಕ್ಷ್ಮ ವಿಟಮಿನ್ ಆಗಿದೆ. ಸಿ ಜೀವಸತ್ವದ ನಾಶವು 30° ಸಿ ಗಿಂತ ಕಡಿಮೆ ತಾಪಮಾನದಲ್ಲಿ ಸಂಭವಿಸಬಹುದು. ವಿಟಮಿನ್ ಸಿ ನೀರಿನಲ್ಲಿ ಕರಗುತ್ತದೆ ಮತ್ತು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುವ ನೀರಿನಲ್ಲಿಯೂ ಸಹ ಸೇರಿಕೊಳ್ಳುತ್ತದೆ. ಬಿಸಿ ಆಹಾರದ ಮೇಲೆ ನಿಂಬೆ ರಸವನ್ನು ಹಾಕುವುದರಿಂದ ವಿಟಮಿನ್ ಮತ್ತು ಅದರ ಎಂಜೈಮ್ಯಾಟಿಕ್ ಚಟುವಟಿಕೆಯನ್ನು ನಾಶಪಡಿಸಬಹುದು ”ಎಂದು ಅವರು ಹೇಳಿದರು.
First published: