ಸೌತೆಕಾಯಿಯನ್ನು (Cucumber) ಆಹಾರದಲ್ಲಿ (Food) ಸೇರಿಸುವುದು ಎಷ್ಟು ಉಪಯುಕ್ತವಾಗಿದೆ ಎಂಬ ಬಗ್ಗೆ ನಮಗೆ ಎಲ್ಲಾ ಮಾಹಿತಿ ಇದೆ. ಸೌತೆಕಾಯಿಯಲ್ಲಿ ನೀರಿನಾಂಶ ಅತಿ ಹೆಚ್ಚು. ಸೌತೆಕಾಯಿ ದೇಹವನ್ನು ಹೈಡ್ರೇಟ್ ಆಗಿ ಇಡಲು ಬಹಳ ಮುಖ್ಯ. ಬೇಸಿಗೆಯಲ್ಲಿ ಸೌತೆಕಾಯಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಸೌತೆಕಾಯಿ ಆರೋಗ್ಯಕ್ಕೆ (Health) ತುಂಬಾ ಉಪಯುಕ್ತವಾಗಿದೆ. ಆದರೆ ಕೆಲವು ತಜ್ಞರ ಪ್ರಕಾರ, ಸೌತೆಕಾಯಿಯನ್ನು ತಿನ್ನುವುದರಿಂದ ಕೆಲವು ಹಾನಿ ಉಂಟಾಗುತ್ತದೆ. ಕೆಲ ಆರೋಗ್ಯ ಸಮಸ್ಯೆಗಳಿಗೆ (Health Problem) ಈ ಸೌತೆಕಾಯಿ ಕಾರಣ ಎನ್ನುತ್ತಾರೆ ವೈದ್ಯರು. ಹಾಗಾದ್ರೆ ಈ ಸೌತೆಕಾಯಿಯ ಪ್ರಯೋಜನಗಳು ಹಾಗೂ ಅಡ್ಡ ಪರಿಣಾಮಗಳೇನು ಎಂಬುದು ಇಲ್ಲಿದೆ.
ಸೌತೆಕಾಯಿ ತಿನ್ನುವುದರಿಂದ ಆಗುವ ಪ್ರಯೋಜನಗಳು
ಸೌತೆಕಾಯಿಯ ಕತ್ತರಿಸಿದ ತುಂಡು ಕಣ್ಣಿನ ಊತವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಸಾಬೀತಾಗಿದೆ.
ತೂಕ ಇಳಿಕೆಗೆ ಸೌತೆಕಾಯಿ ತುಂಬಾ ಉಪಯುಕ್ತ ಎನ್ನಲಾಗುತ್ತದೆ
ಸೌತೆಕಾಯಿಯಲ್ಲಿ ಕ್ಯಾಲೋರಿ ಕಡಿಮೆ. ಇದರಲ್ಲಿ ವಿಟಮಿನ್ ಕೆ ಮತ್ತು ಎ ಕೂಡ ಸಮೃದ್ಧವಾಗಿದೆ. ಸೌತೆಕಾಯಿಯಲ್ಲಿ ಸುಮಾರು 95% ನೀರು ಇರುತ್ತದೆ.
ಸೌತೆಕಾಯಿಯಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ. ಫೈಬರ್ಗಳು ಮಲಬದ್ಧತೆಯನ್ನು ತಡೆಯಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸೌತೆಕಾಯಿಯು ಬೀಟಾ-ಕ್ಯಾರೋಟಿನ್ನಂತಹ ಆ್ಯಂಟಿ ಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿದೆ. ಅವು ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಸೌತೆಕಾಯಿಯಲ್ಲಿರುವ ವಿಟಮಿನ್-ಕೆ ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ ಮತ್ತು ಮೂಳೆಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ.
ಇದನ್ನೂ ಓದಿ: ಈ ಬಾರಿ ಕ್ರಿಸ್ಮಸ್ಗೆ ವಿಭಿನ್ನವಾದ ಗಿಫ್ಟ್ ಕೊಡಿ, ಇಲ್ಲಿದೆ ನೋಡಿ ಸೂಪರ್ ಐಡಿಯಾ
ಇದರಲ್ಲಿರುವ ವಿಟಮಿನ್ ಎ ಕಣ್ಣುಗಳಿಗೆ ಪ್ರಯೋಜನಕಾರಿಯಾಗಿದೆ, ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸೌತೆಕಾಯಿಯು ಲಿಗ್ನಾನ್ಸ್ ಎಂದು ಕರೆಯಲ್ಪಡುವ ಅನೇಕ ಫೈಟೊನ್ಯೂಟ್ರಿಯೆಂಟ್ಗಳನ್ನು ಸಹ ಒಳಗೊಂಡಿದೆ.
ಸೌತೆಕಾಯಿಯು ಬಿಸಿಲು, ಉರಿಯೂತ ಮತ್ತು ಚರ್ಮದ ಟೋನ್ ಅನ್ನು ಸುಧಾರಿಸಲು ಸಹ ಉಪಯುಕ್ತವಾಗಿದೆ.
ಸೌತೆಕಾಯಿಯಿಂದ ಉಂಟಾಗುವ ತೊಂದರೆಗಳು
ಸೌತೆಕಾಯಿಯು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಕೆಲವು ಸಂಶೋಧನೆಗಳು ಸಾಬೀತು ಮಾಡಿದ್ದು, ಆ ಸಮಸ್ಯೆಗಳೇನು ಎಂಬುದು ಇಲ್ಲಿದೆ.
ಬೇಯಿಸಿದ ಆಹಾರದೊಂದಿಗೆ ಹಸಿ ಸೌತೆಕಾಯಿಯನ್ನು ತಿನ್ನುವುದು ಸೂಕ್ತವಲ್ಲ ಎಂದು ಅನೇಕ ಪೌಷ್ಟಿಕತಜ್ಞರು ಹೇಳುತ್ತಾರೆ.
ತಜ್ಞರ ಪ್ರಕಾರ ಸೌತೆಕಾಯಿಯನ್ನು ಆಹಾರದೊಂದಿಗೆ ಸೇವಿಸಿದರೆ ಆಹಾರ ಜೀರ್ಣವಾಗಲು ಸಮಯ ಹಿಡಿಯುತ್ತದೆ. ಏಕೆಂದರೆ ಬೇಯಿಸಿದ ಆಹಾರ ಮತ್ತು ಹಸಿ ಆಹಾರ ಎರಡರ ಜೀರ್ಣಕ್ರಿಯೆಯ ಸಮಯ ವಿಭಿನ್ನವಾಗಿರುತ್ತದೆ.
ಕ್ಯುಕುರ್ಬಿಟಾಸಿನ್ ಮತ್ತು ಟೆಟ್ರಾಸೈಕ್ಲಿಕ್ ಟ್ರೈಟರ್ಪೆನಾಯ್ಡ್ಗಳು ಸೌತೆಕಾಯಿಯಲ್ಲಿ ವಿಷಕಾರಿ ಪದಾರ್ಥಗಳಾಗಿವೆ. ಇದು ಸೌತೆಕಾಯಿಗೆ ಕಹಿ ರುಚಿಯನ್ನು ನೀಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಇವುಗಳ ಅತಿಯಾದ ಸೇವನೆಯು ಹಾನಿಕಾರಕ.
ಸೌತೆಕಾಯಿಯಲ್ಲಿರುವ ಈ ವಿಷಕಾರಿ ವಸ್ತುಗಳು ಮಲಬದ್ಧತೆ, ವಾಯು ಮತ್ತು ಅನಿಲದಂತಹ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಅಲ್ಲದೇ, ಸೌತೆಕಾಯಿ ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ.
ಇದನ್ನೂ ಓದಿ: ನಿಮ್ಮ ಆಹಾರ ಕ್ರಮ ಹೀಗಿದ್ದರೆ ಹೃದಯದ ಸಮಸ್ಯೆ ಬರಲ್ಲ
ಅತಿಯಾದ ವಿಟಮಿನ್-ಸಿ ಕೂಡ ಹಾನಿಕಾರಕ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸೌತೆಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಆದ್ದರಿಂದ, ನೀವು ಸೌತೆಕಾಯಿಯನ್ನು ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ, ಅದು ಹಾನಿಕಾರಕವಾಗುತ್ತದೆ.
ಸೌತೆಕಾಯಿಯಲ್ಲಿರುವ ವಿಟಮಿನ್-ಸಿ ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಪ್ರೊ-ಆಕ್ಸಿಡೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಸ್ವತಂತ್ರ ರಾಡಿಕಲ್ಗಳನ್ನು ಸೃಷ್ಟಿಸುತ್ತದೆ ಮತ್ತು ದೇಹದಾದ್ಯಂತ ಹರಡುತ್ತದೆ. ಈ ಸ್ವತಂತ್ರ ರಾಡಿಕಲ್ ದೇಹಕ್ಕೆ ಒಳ್ಳೆಯದಲ್ಲ. ಅವು ಕ್ಯಾನ್ಸರ್, ಅಕಾಲಿಕ ವಯಸ್ಸಾದ ಮತ್ತು ಮೊಡವೆ ಇತ್ಯಾದಿಗಳ ಅಪಾಯವನ್ನು ಹೆಚ್ಚಿಸುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ