Green Peas: ಅಡುಗೆಗೆ ಬಟಾಣಿ ಬಳಸುವ ಮುನ್ನ ಎಚ್ಚರ..!

Side Effect of Green Peas: ಹೆಚ್ಚಿನ ಪ್ರಮಾಣದ ಹಸಿರು ಬಟಾಣಿ ದೇಹದಲ್ಲಿ ವಿಟಮಿನ್ ಕೆ ಮಟ್ಟವನ್ನು ಹೆಚ್ಚಿಸುತ್ತದೆ. ಇದು ರಕ್ತವನ್ನು ತೆಳುಗೊಳಿಸುತ್ತದೆ ಮತ್ತು ಪ್ಲೇಟ್ಲೆಟ್ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ, ಗಾಯವು ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ

ಹಸಿರು ಬಟಾಣಿ

ಹಸಿರು ಬಟಾಣಿ

  • Share this:
    ಹಸಿ ಬಟಾಣಿ(Green Peas) ಕಾಳುಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತವೆ(Like). ಮಕ್ಕಳಂತೂ(Childrens) ಬಹಳ ಇಷ್ಟ ಪಟ್ಟು ತಮ್ಮ ತಟ್ಟೆಯಲ್ಲಿನ ಆಹಾರಕ್ಕಿಂತ(Food) ಹೆಚ್ಚಾಗಿ ಇವುಗಳನ್ನೇ ಸೇವಿಸುತ್ತಾರೆ. ನಾವು ಮನೆಗಳಲ್ಲಿ(Home) ತಯಾರು ಮಾಡುವ ವಿಶೇಷ ಬಗೆಯ ಕೆಲವೊಂದು ಅಡುಗೆಗಳಿಗೆ ಹಸಿ ಬಟಾಣಿ ಕಾಳುಗಳನ್ನು ಬಳಕೆ ಮಾಡುತ್ತೇವೆ. ಚಪಾತಿ(Chapathi) ಜೊತೆ ಸಾಗು ಮಾಡಲು, ಮಟರ್ ಪನೀರ್ ಮಾಡಲು. ಮಟರ್ ಪರೋಟ, ಪುಲಾವ್(Pulav) ಎಲ್ಲಾದಕ್ಕೂ ಬಟಾಣಿ ಇದ್ದರೇನೆ ರುಚಿ ಸಿಗೋದು. ಮ್ಯಾಂಗನೀಸ್, ವಿಟಮಿನ್ ಸಿ(Vitamin C) ಮತ್ತು ವಿಟಮಿನ್ ಕೆ(Vitamin K) ಗಳ ಒಳ್ಳೆಯತನದಿಂದ ಸಮೃದ್ಧವಾದ ಹಸಿರು ಬಟಾಣಿಗಳು ಯಾವುದೇ ಆರೋಗ್ಯಕರ(Healthy) ಆಹಾರಕ್ಕೆ ಅತ್ಯುತ್ತಮ ಸೇರ್ಪಡೆಯಾಗಿ ಎದ್ದು ಕಾಣುತ್ತವೆ.ಇನ್ನು ಬಟಾಣಿ ಕಾಳನ್ನು ಅದರ ಸಿಪ್ಪೆಯಿಂದ ತೆಗೆದು ಹಸಿ ಮತ್ತು ತಾಜಾವಾಗಿ ತಿಂದರೆ ಅದು ಅತ್ಯುತ್ತಮ ವಾಗಿರುವುದು. ಇದರಿಂದ ನಿಮಗೆ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ಉಂಟು ಮಾಡುವುದು. ಇದರ ಹೊರತಾಗಿ ಇದರಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಆ್ಯಂಟಿಆಕ್ಸಿಡೆಂಟ್ ಗಳು ಮಾತ್ರವಲ್ಲದೆ ಬಟಾಣಿ ಕಾಳಿನಲ್ಲಿ ಪ್ರೋಟೀನ್ ಮತ್ತು ನಾರಿನಾಂಶವಿದೆ. ಇದು ದೇಹಕ್ಕೆ ಅಮೂಲ್ಯವಾದ ಪೋಷಕಾಂಶಗಳನ್ನು ನೀಡುವುದು.ಆದ್ರೆ ಬಟಾಣಿ ಸೇವೆನೆಯಿಂದ ಹಲವು ಅಡ್ಡ ಪರಿಣಾಮ ಸಹ ಉಂಟಾಗಲಿದೆ..

    ಅಡುಗೆಗೆ ಬಟಾಣಿ ಬಳಸುವ ಮುನ್ನ ಒಮ್ಮೆ ಯೋಚಿಸಿ

    ಹಸಿ ಬಟಾಣಿ ಕಾಳುಗಳಲ್ಲಿ ಕಡಿಮೆ ಪ್ರಮಾಣದ ಕೊಬ್ಬಿನ ಅಂಶ ಮತ್ತು ಕ್ಯಾಲೊರಿ ಅಂಶಗಳು ಸಿಗುತ್ತವೆ ಮತ್ತು ನಾರಿನ ಅಂಶ ಸಹ ಇದರಲ್ಲಿ ಇರುವುದರಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಅತ್ಯುತ್ತಮ ಪಾತ್ರ ವಹಿಸುತ್ತದೆ.ನಾರಿನ ಅಂಶ ಹೆಚ್ಚಾಗಿ ಸಿಗುವುದರಿಂದ, ಹೊಟ್ಟೆ ತುಂಬಿದ ಅನುಭವ ಉಂಟು ಮಾಡಿ ಬೇರೆ ಬಗೆಯ ಅನಾರೋಗ್ಯಕರ ಆಹಾರಗಳನ್ನು ಸೇವನೆ ಮಾಡದಂತೆ ತಡೆಯುತ್ತದೆ. ಆದ್ರೆ ಇದನ್ನ ಹೊರತು ಪಡಿಸಿ ಬಟಾಣಿ ಸೇವನೆ ಆರೋಗ್ಯಕ್ಕೆ ಹಲವು ತೊಂದರೆ ಮಾಡಲಿದೆ .

    ಇದನ್ನೂ ಓದಿ: ಚಳಿಗಾಲದಲ್ಲಿ ಹಸಿರು ಬಟಾಣಿ ತಿನ್ನುವುದರಿಂದ ಸಿಗುವ 6 ಪ್ರಯೋಜನಗಳು ಹೀಗಿವೆ

    1)ವಿಟಮಿನ್ ಕೆ ಹೆಚ್ಚಳ: ವಿಟಮಿನ್ ಕೆ ಪ್ರಮಾಣ ಹೆಚ್ಚಾಗುತ್ತದೆ - ಬಟಾಣಿಯಲ್ಲಿ ಕಂಡುಬರುವ ವಿಟಮಿನ್ ಕೆ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುತ್ತದೆ.  ಆದರೆ ಹೆಚ್ಚಿನ ಪ್ರಮಾಣದಲ್ಲಿ ಬಟಾಣಿಗಳನ್ನು ಸೇವಿಸಬೇಡಿ. ಹೆಚ್ಚಿನ ಪ್ರಮಾಣದ ಹಸಿರು ಬಟಾಣಿ ದೇಹದಲ್ಲಿ ವಿಟಮಿನ್ ಕೆ ಮಟ್ಟವನ್ನು ಹೆಚ್ಚಿಸುತ್ತದೆ. ಇದು ರಕ್ತವನ್ನು ತೆಳುಗೊಳಿಸುತ್ತದೆ ಮತ್ತು ಪ್ಲೇಟ್ಲೆಟ್ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ, ಗಾಯವು ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೂ ಬಟಾಣಿ ಸೇವನೆಯಿಂದ ಹಾನಿಯಾಗುತ್ತದೆ.

    2)ಕೀಲು ನೋವು: ಯಾವಾಗ ಮೊಣಕಾಲು ನೋವು ಮತ್ತು ಮೂಳೆ ಸಮಸ್ಯೆ ಕಾಣಿಸಿಕೊಳ್ಳುತ್ತದೆಯೋ ಅಂತಹ ಸಮಯದಲ್ಲಿ ಕ್ಯಾಲ್ಸಿಯಂ, ಮೆಗ್ನಿಸಿಯಮ್ ಮತ್ತು ವಿಟಮಿನ್ ಡಿ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಆದ್ರೆ ಬಟಾಣಿಯನ್ನ ಅತಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಕ್ಯಾಲ್ಸಿಯಂ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ಯೂರಿಕ್ ಆಮ್ಲವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಹೆಚ್ಚಿದ ಯೂರಿಕ್ ಆಮ್ಲವು ಕೀಲು ನೋವಿಗೆ ಕಾರಣವಾಗಬಹುದು. ಬಟಾಣಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ.

    3)ಕೊಬ್ಬು ಹೆಚ್ಚಳ: ಹಸಿರು ಬಟಾಣಿ ತಿನ್ನುವುದರಿಂದ ದೇಹದ ಕೊಬ್ಬು ಹೆಚ್ಚಾಗುತ್ತದೆ. ಇದು ಪ್ರೋಟೀನ್ ಮತ್ತು ಫೈಬರ್‌ನ ಉತ್ತಮ ಮೂಲವಾಗಿದೆ, ಆದರೆ ಬಟಾಣಿಗಳನ್ನು ಅತಿಯಾಗಿ ಸೇವಿಸುವುದರಿಂದ ನಿಮಗೆ ಹಾನಿಯಾಗುತ್ತದೆ..

    4)ಪೋಷಕಾಂಶಗಳ ಕೊರತೆ: ಶರೀರಕ್ಕೆ ಪೋಷಕಾಂಶಗಳು ಲಭಿಸುವುದಿಲ್ಲ ಬಟಾಣಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹಕ್ಕೆ ಪೋಷಕಾಂಶಗಳು ಸಿಗುವುದಿಲ್ಲ. ಬಟಾಣಿಯಲ್ಲಿರುವ  ಫೈಟಿಕ್ ಆಮ್ಲ ಮತ್ತು ಲೆಕ್ಟಿನ್‌ಗಳು ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಪಡಿಸುತ್ತವೆ

    ಇದನ್ನೂ ಓದಿ: ಹಸಿ ಬಟಾಣಿಯನ್ನು ಒಂದಿಡೀ ವರ್ಷ ಹಾಳಾಗದಂತೆ ಇಡಬಹುದು, ಹೀಗೆ ಮಾಡಿ..!

    5)ಡಯೋರಿಯಾ ಸಮಸ್ಯೆ: ಬಟಾಣಿಗಳ ಅತಿಯಾದ ಸೇವನೆಯು ಹೊಟ್ಟೆ ನೋವು ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು. ಇದರಿಂದ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ. ಬಟಾಣಿ ಬಹಳಷ್ಟು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ದೊಡ್ಡ ಪ್ರಮಾಣದಲ್ಲಿ ಬಟಾಣಿ ತಿನ್ನುವುದರಿಂದ, ಅದು ಸುಲಭವಾಗಿ ಜೀರ್ಣವಾಗುವುದಿಲ್ಲ ಮತ್ತು ಬಟಾಣಿಯಲ್ಲಿರುವ ಲೆಕ್ಟಿನ್ ಹೊಟ್ಟೆಯಲ್ಲಿ ಉರಿಯೂತವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಬಟಾಣಿ ಅತಿಯಾಗಿ ಸೇವಿಸುವುದರಿಂದ ಅತಿಸಾರದ ಸಮಸ್ಯೆಯೂ ಉಂಟಾಗುತ್ತದೆ.
    Published by:ranjumbkgowda1 ranjumbkgowda1
    First published: