Women Health: ಮುಟ್ಟಿನ ದಿನಗಳಲ್ಲಿ ವ್ಯಾಯಾಮ ಮಾಡ್ಬೇಕಾ, ಮಾಡ್ಬಾರ್ದಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ

Should You Workout During Periods? : ಆದರೆ ಎಲ್ಲದ್ದಕ್ಕಿಂತ ಮುಖ್ಯವಾಗಿ, ನಿಮ್ಮ ದೇಹ ಏನೆನ್ನುತ್ತದೆ ಎಂಬುವುದನ್ನು ಆಲಿಸುವುದು ಅತ್ಯಂತ ಅಗತ್ಯ. ಮುಟ್ಟಿನ ದಿನಗಳಲ್ಲಿ ಮಹಿಳೆಯರು ಸಂಪೂರ್ಣ ವಿಶ್ರಾಂತಿ ಪಡೆಯಲು ಬಯಸಿದರೆ, ಅದು ಖಂಡಿತಾ ಒಳ್ಳೆಯದು ಮತ್ತು ಆ ವಿಷಯದಲ್ಲಿ ಅವರು ಯಾವುದೇ ತಪ್ಪಿತಸ್ಥ ಮನೋಭಾವ ಹೊಂದಬೇಕಿಲ್ಲ ಎನ್ನುತ್ತಾರೆ ನ್ಯಾನ್ಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೆಚ್ಚಿನ ಮಹಿಳೆಯರಿಗೆ(Women), ಪ್ರೀ ಮೆನ್‍ಸ್ಟ್ರುವೆಲ್ ಸಿಂಡ್ರೋಮ್‌ (PMS)  ಮತ್ತು ನೋವು ಮುಟ್ಟಿನ(Pain) ಜೊತೆ ಜೊತೆಗೆ ಬರುತ್ತದೆ. ಆಗ ಬರುವ ಅಸಹನೀಯವಾದ ನೋವು , ಮೂಡ್ ಸ್ವಿಂಗ್ಸ್‌ಗಳನ್ನು(Mood  Swings) ಉಂಟು ಮಾಡುತ್ತದೆ ಮಾತ್ರವಲ್ಲ, ಮಹಿಳೆಯ ಶಕ್ತಿಯನ್ನು ಕೂಡ ಬರಿದು ಮಾಡುತ್ತದೆ. ಈ ಕಾರಣದಿಂದಾಗಿ, ಮಹಿಳೆಯರು ಮುಟ್ಟಿನ(Periods) ಸಮಯದಲ್ಲಿ ವ್ಯಾಯಾಮ(Exercise) ಮಾಡಬೇಕೆ ಅಥವಾ ಅದನ್ನು ಸಂಪೂರ್ಣವಾಗಿ ಬಿಟ್ಟು ಬಿಟ್ಟು ಬಿಡಬೇಕೆ ಎಂದು ಗೊಂದಲಕ್ಕೆ ಒಳಗಾಗುತ್ತಾರೆ. ಮಹಿಳೆಯರಲ್ಲಿ ಏಳುವ ಈ ಪ್ರಶ್ನೆಗಳ ಕುರಿತು ಪೌಷ್ಟಿಕಾಂಶ ತಜ್ಞೆ ನ್ಯಾನ್ಸಿ ಡೆಹರಾ ಇನ್‍ಸ್ಟಾಗ್ರಾಂನಲ್ಲಿ(Instagram) ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ‘ಋತುಚಕ್ರದ ಸಂದರ್ಭದಲ್ಲಿ ವ್ಯಾಯಾಮ ಮಾಡುವುದರ’ ಪರಿಣಾಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಎನ್ನುತ್ತಾರೆ ಅವರು.

ನಾವು ವ್ಯಾಯಾಮ ಮಾಡಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುವುದು ಹೇಗೆ?
ನ್ಯಾನ್ಸಿಯ ಪ್ರಕಾರ, ಮುಟ್ಟಿನ ಸಮಯದಲ್ಲಿ ನೋವಿಲ್ಲದವರು ಅಥವಾ ಕಡಿಮೆ ನೋವು ಅನುಭವಿಸುವಂತವರು, ತೀವ್ರತೆಯಲ್ಲಿ ಕೊಂಚ ಹೊಂದಾಣಿಕೆ ಮಾಡಿಕೊಂಡು ವ್ಯಾಯಾಮ ಮಾಡಬಹುದು. ಮುಟ್ಟಿನ ಅವಧಿಗೆ ಮುನ್ನ ಪ್ರೊಜೆಸ್ಟೆರೋನ್ ಮಟ್ಟ ಹೆಚ್ಚಿರುವುದರಿಂದ, ಮಹಿಳೆಯರು ಚೇತರಿಸಿಕೊಳ್ಳಲು ದೀರ್ಘ ಸಮಯ ತೆಗೆದುಕೊಳ್ಳಬಹುದು ಎಂಬುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಪಿಎಂಎಸ್‍ನ ತೀವ್ರ ಪರಿಣಾಮಗಳನ್ನು ಅನುಭವಿಸುವ ಮಹಿಳೆಯರು , ವ್ಯಾಯಾಮ ಮಾಡುವ ಬಗ್ಗೆ ಯೋಚನೆ ಮಾಡದಿರುವುದೇ ಒಳ್ಳೆಯದು. ಆದರೂ, ಅಂತಹ ಮಹಿಳೆಯರು ಯೋಗ ಮತ್ತು ಸ್ಟ್ರೆಚ್ಚಿಂಗ್‍ಗಳನ್ನು ಮಾಡುವುದು ಲಾಭದಾಯಕ ಎಂದು ಪೌಷ್ಟಿಕಾಂಶ ತಜ್ಞೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹಗುರ ಚಟುವಟಿಕೆಗಳು ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದ ಹರಿವನ್ನು ಉತ್ತೇಜಿಸುತ್ತದೆ ಎನ್ನುತ್ತಾರೆ ಅವರು.

ಇದನ್ನೂ ಓದಿ: ಈ ಜ್ಯೂಸ್​ಗಳನ್ನು ಕುಡಿಯೋದ್ರಿಂದ ಒಂದು ವಾರದಲ್ಲಿ ತೂಕ ಇಳಿಸಬಹುದು

ಋತುಚಕ್ರದ ಸಮಯಕ್ಕೆ ಸೂಕ್ತವಾದ ವ್ಯಾಯಾಮ
ವರ್ಕೌಟ್ ಅಥವಾ ವ್ಯಾಯಾಮಗಳು ಕೇವಲ, ಅತಿ ತೀವ್ರತೆಯ ಮಧ್ಯಂತರ ತರಬೇತಿ, ಭಾರವಾದ ತೂಕ ಎತ್ತುವುದು ಅಥವಾ ಬಹಳ ದೂರ ಓಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಮುಟ್ಟಿನ ದಿನಗಳಲ್ಲಿ ಮಹಿಳೆಯರು ತಮ್ಮ ದಿನಚರಿಯಲ್ಲಿ ಹಗುರ ಚಟುವಟಿಕೆಗಳನ್ನು ಸೇರಿಸಿಕೊಳ್ಳುವುದು ಜಾಣತನವಾಗಿದೆ ಎಂದು ಸಲಹೆ ನೀಡುತ್ತಾರೆ

ತೂಕ ಎತ್ತುವಿಕೆ ಮತ್ತು ಅತಿ ತೀವ್ರತೆಯ ಕಾರ್ಡಿಯೋ ಬದಲಿಗೆ, ಯೋಗ ಮತ್ತು ಸ್ಟ್ರೆಚ್ಚಿಂಗ್ ವ್ಯಾಯಾಮಗಳನ್ನು ಮಾಡಬಹುದು. ಈ ಸಂದರ್ಭದಲ್ಲಿ ಈಜುವುದು, ಸೈಕಲ್ ಸವಾರಿ ಮತ್ತು ಲಘು ನಡಿಗೆಯನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು.

ಆದರೆ ಎಲ್ಲದ್ದಕ್ಕಿಂತ ಮುಖ್ಯವಾಗಿ, ನಿಮ್ಮ ದೇಹ ಏನೆನ್ನುತ್ತದೆ ಎಂಬುವುದನ್ನು ಆಲಿಸುವುದು ಅತ್ಯಂತ ಅಗತ್ಯ. ಮುಟ್ಟಿನ ದಿನಗಳಲ್ಲಿ ಮಹಿಳೆಯರು ಸಂಪೂರ್ಣ ವಿಶ್ರಾಂತಿ ಪಡೆಯಲು ಬಯಸಿದರೆ, ಅದು ಖಂಡಿತಾ ಒಳ್ಳೆಯದು ಮತ್ತು ಆ ವಿಷಯದಲ್ಲಿ ಅವರು ಯಾವುದೇ ತಪ್ಪಿತಸ್ಥ ಮನೋಭಾವ ಹೊಂದಬೇಕಿಲ್ಲ ಎನ್ನುತ್ತಾರೆ ನ್ಯಾನ್ಸಿ. ಮಹಿಳೆಯರು ತಮ್ಮ ದೇಹ ನೀಡುವ ಸಂಕೇತಗಳನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಅದಕ್ಕೆ ತಕ್ಕಂತೆ ವ್ಯಾಯಾಮ ಅಥವಾ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂಬುವುದು ಅವರ ಅಭಿಪ್ರಾಯ.

ಇದನ್ನೂ ಓದಿ: ಐಸ್ ಕ್ಯೂಬ್​ಗಳನ್ನು ಹೀಗೆ ಬಳಸಿದ್ರೆ ಮೊಡವೆಗಳಿಂದ ಶಾಶ್ವತ ಮುಕ್ತಿ ಗ್ಯಾರಂಟಿ

ಅಧ್ಯಯನ ಒಂದನ್ನು ಉಲ್ಲೇಖಿಸಿ, ನಿಯಮಿತವಾಗಿ ವರ್ಕೌಟ್ ಮಾಡುವ ಮಹಿಳೆಯರು ತಮ್ಮ ದೇಹಕ್ಕೆ ಹೆಚ್ಚು ಹೊಂದಿಕೊಂಡಿರುತ್ತಾರೆ ಮತ್ತು ಮುಂಬರುವ ಮುಟ್ಟಿನ ಅವಧಿಯನ್ನು ಕೂಡ ಊಹಿಸಿಕೊಳ್ಳಬಲ್ಲರು ಎನ್ನುತ್ತಾರೆ ನ್ಯಾನ್ಸಿ. ವ್ಯಾಯಾಮವು ಪಿಎಂಎಸ್ ಮತ್ತು ಮುಟ್ಟಿನ ನೋವನ್ನು ಕಡಿಮೆ ಮಾಡಬಲ್ಲದು ಎಂಬುದನ್ನು ಕೂಡ ತೋರಿಸಲಾಗಿದೆ ಎಂದು ಹೇಳುತ್ತಾರೆ ಅವರು.
Published by:Sandhya M
First published: