ಮುಖ ಅಂದವಾಗಿ (Skin Care) ಕಾಣಬೇಕೆಂದರೆ ಮುಖದ ಮೇಲೆ ಕೂದಲಿರಬಾರದು ಅನ್ನೋದು ಸಾಮಾನ್ಯವಾದ ಸಂಗತಿ. ಕೆಲವೊಬ್ಬರಿಗೆ ತುಟಿಗಳ ಮೇಲೆ, ಹಣೆಯ ಮೇಲೆ ಅಥವಾ ಕೆನ್ನೆಗಳ ಪಕ್ಕ ಹೆಚ್ಚಿನ ಕೂದಲಿರುತ್ತೆ. ಹಾಗೆ ಮುಖದ (Face) ಮೇಲೆ ಹೆಚ್ಚಿನ ಹೇರ್ ಇರುವವರು ಅದನ್ನು ನಿವಾರಣೆ ಮಾಡಿಕೊಳ್ಳುವ ವಿಧಾನದ ಬಗ್ಗೆ ಚಿಂತಿತರಾಗುತ್ತಾರೆ. ಕೆಲವೊಬ್ಬರು ಅದನ್ನ ಅವರು ಥ್ರೆಡ್ಡಿಂಗ್ ಮೂಲಕವೋ ಅಥವಾ ವ್ಯಾಕ್ಸ್, ಶೇವಿಂಗ್ (Shaving), ಲೇಸರ್ ಮೂಲಕವೋ ತೆಗೆಸಿಕೊಳ್ಳುತ್ತಾರೆ. ಆದರೆ ಈ ಎಲ್ಲ ವಿಧಾನಗಳಲ್ಲಿ ಯಾವುದು ಬೆಸ್ಟ್? ಅನ್ನೋದ್ರ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ.
ದೇಹದ ಮೇಲಿನ ಕೂದಲನ್ನು ತೆಗೆಯೋಕೆ ಶೇವಿಂಗ್, ವ್ಯಾಕ್ಸಿಂಗ್ ಅಥವಾ ಲೇಸರ್ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಆದಾಗ್ಯೂ, ಮುಖದ ಕೂದಲಿನ ವಿಷಯಕ್ಕೆ ಬಂದಾಗ ಬಹಳಷ್ಟು ಜನರು ಗೊಂದಲಕ್ಕೆ ಒಳಗಾಗುತ್ತಾರೆ ಅನ್ನೋದು ನಿಜ. ಹೆಚ್ಚಿನ ಮಹಿಳೆಯರು ರೇಜರ್‌ಗಳನ್ನು ಬಳಸುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ. ಮುಖದ ಕೂದಲನ್ನು ಶೇವಿಂಗ್ ಮಾಡುವುದರಿಂದ ಅದು ದಪ್ಪವಾಗಿ ಬೆಳೆದುಬಿಡುತ್ತದೇನೋ ಎಂದು ಭಯಪಡುತ್ತಾರೆ.
ಚರ್ಮವೈದ್ಯರಾದ ಡಾ. ಗುರ್ವೀನ್ ವಾರೈಚ್ ಅವರು ಈ ಬಗ್ಗೆ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಸಾಮಾನ್ಯವಾಗಿ ಹೇರ್ ರಿಮೂವಿಂಗ್ ಬಗ್ಗೆ ನಮ್ಮಲ್ಲಿರುವ ನಂಬಿಕೆಗಳ ಬಗ್ಗೆ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅತಿಯಾದ ಎಸಿ ಬಳಕೆ ಬೇಸಿಗೆಯಲ್ಲಿ ಒಳ್ಳೆಯದಲ್ಲ! ಬಹಳಷ್ಟು ಆರೋಗ್ಯದ ಸಮಸ್ಯೆಗಳಾಗಬಹುದು
ಫೇಶಿಯಲ್ ಶೇವಿಂಗ್ ಒಂದು ವಿವಾದಾತ್ಮಕ ವಿಷಯ!
ಫೇಶಿಯಲ್ ಶೇವಿಂಗ್‌ಅನ್ನು "ವಿವಾದಾತ್ಮಕ ವಿಷಯ" ಎಂದು ಕರೆದ ಡಾ. ಗುರ್ವೀನ್ ಲೇಸರ್ ನಂತರ, ಇದು ಮುಖದ ಕೂದಲನ್ನು ತೆಗೆದುಹಾಕುವ ಅತ್ಯಂತ ಪರಿಣಾಮಕಾರಿ ಮತ್ತು ಅನುಕೂಲಕರ ವಿಧಾನಗಳಲ್ಲಿ ಒಂದಾಗಿದೆ ಎಂದು ಹೇಳುತ್ತಾರೆ. ಕೂದಲು ವೇಗವಾಗಿ ಬೆಳೆಯುತ್ತದೆ ಎಂದಲ್ಲ, ಆದರೆ ಮೇಲ್ಮೈಯಿಂದ ಕೂದಲನ್ನು ಕತ್ತರಿಸುವುದರಿಂದ ವ್ಯಾಕ್ಸಿಂಗ್ ಅಥವಾ ಥ್ರೆಡಿಂಗ್‌ಗಿಂತ ವೇಗವಾಗಿ ಬೆಳೆಯುತ್ತವೆ” ಎಂದು ಅವರು ವಿವರಿಸಿದ್ದಾರೆ.
ಶೇವಿಂಗ್ ನಿಮ್ಮ ಕೂದಲನ್ನು ದಪ್ಪವಾಗಿ ಬೆಳೆಯುವಂತೆ ಮಾಡುತ್ತದೆ ಅನ್ನೋದು ಮಿಥ್ಯೆಯಾಗಿದೆ. ಶೇವಿಂಗ್ ಕೂದಲಿನ ಗಾತ್ರದ ಮೇಲೆ ಪರಿಣಾಮ ಬೀರುವುದಿಲ್ಲ. ಅದು ಕೂದಲನ್ನು ತೀಕ್ಷ್ಣವಾದ ಕೋನದಲ್ಲಿ ಕತ್ತರಿಸುತ್ತದೆ. ಆದ್ದರಿಂದ ಅದು ದಪ್ಪವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಇನ್ನು ಡಾ. ಗುರ್ವೀನ್ ಫೇಸ್ ಶೇವಿಂಗ್‌ನ ಕೆಲವು ಸಾಧಕ-ಬಾಧಕಗಳನ್ನು ವಿವರಿಸುತ್ತಾರೆ.
ಫೇಸ್ ಶೇವಿಂಗ್‌ನ ಅನುಕೂಲಗಳು
ಆದಾಗ್ಯೂ, ರೇಜರ್‌ಗಳನ್ನು ಆಯ್ಕೆಮಾಡುವಾಗ ಜಾಗರೂಕರಾಗಿರಬೇಕು. ಸದ್ಯ ಮಾರುಕಟ್ಟೆಯಲ್ಲಿ ಸಾಕಷ್ಟ ಬ್ರಾಂಡ್‌ಗಳು ಲಭ್ಯವಿರುವುದರಿಂದ ಸಾಕಷ್ಟು ಗೊಂದಲಕ್ಕೊಳಗಾಗುತ್ತಾರೆ. ನೀವು ಯಾವ ಭಾಗಕ್ಕೆ ಶೇವಿಂಗ್ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ರೇಜರ್ ಆಯ್ಕೆಯು ಸಹ ಭಿನ್ನವಾಗಿರುತ್ತದೆ. ಆದ್ದರಿಂದ ಸರಿಯಾದ ರೇಸರ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ