Eating Curd Good or Bad? ರಾತ್ರಿ ಹೊತ್ತು ಮೊಸರು ತಿನ್ನುವ ಮುನ್ನ ಈ ಅಂಶ ಗಮನಿಸಿ

ಊಟದ ಕೊನೆಯಲ್ಲಿ ನೀವು ಸೇವಿಸುವ ಮೊಸರನ್ನವು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಅಧ್ಯಯನದ ಪ್ರಕಾರ ಮೊಸರು ಎಂಬುದು ಒಂದು ಅಳತೆಯಿಲ್ಲದ ಪದಾರ್ಥವಾಗಿದ್ದು, ಇದು ನಿಮ್ಮ ಆಯುಸ್ಸನ್ನು ಹೆಚ್ಚಿಸಲು ಸಹಕರಿಸುತ್ತದೆ ಎಂದು ತಿಳಿದು ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ (digestion)ಆಹಾರವೆಂದರೆ ನೀರು. ಅದು ಬಿಟ್ಟರೆ ಮೊಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಹಾಲನ್ನು ಮೊಸರನ್ನಾಗಿಸುವ ಕ್ರಿಯೆಯಲ್ಲಿ ನಮ್ಮ ಜೀರ್ಣಾಂಗಗಳು ಮಾಡುವ ಮುಕ್ಕಾಲುಪಾಲು ಕೆಲಸವನ್ನು ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳೇ ಮುಗಿಸಿರುತ್ತವೆ. ಹಾಗಾಗಿ ಮೊಸರು ನಮಗೆ ಅತ್ಯುತ್ತಮವಾದ ಆಹಾರವಾಗಿದೆ. (good for your teeth and bones) ವೈದ್ಯರೂ ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ಮೊಸರನ್ನೇ ಆಹಾರವನ್ನಾಗಿ ಸ್ವೀಕರಿಸಲು ಸಲಹೆ ಮಾಡುತ್ತಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ( south india) ಊಟದ ಕೊನೆಯಲ್ಲಿ ಮೊಸರು ಇಲ್ಲವಾದಲ್ಲಿ ಊಟ (dinner) ಎಂಬುದು ಯಾವತ್ತಿಗೂ ಪರಿಪೂರ್ಣವಾಗುವುದಿಲ್ಲ. (curd) ಊಟದ ಕೊನೆಯಲ್ಲಿ ನೀವು ಸೇವಿಸುವ ಮೊಸರನ್ನವು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಅಧ್ಯಯನದ ಪ್ರಕಾರ ಮೊಸರು ನಿಮ್ಮ ಆಯುಸ್ಸನ್ನು ಹೆಚ್ಚಿಸಲು ಸಹಕರಿಸುತ್ತದೆ ಎಂದು ತಿಳಿದು ಬಂದಿದೆ.

  ಇದನ್ನು ಓದಿ: Weight Loss Tips: ಮೊಸರು ನಿಮ್ಮ ತೂಕ ಇಳಿಸಲು ಹೇಗೆಲ್ಲಾ ಸಹಕಾರಿ ಎಂದು ತಿಳಿದ್ರೆ ದಿನಾ ತಿನ್ನದೇ ಇರಲಾರಿರಿ..

  ಆಯುರ್ವೇದದ ಪ್ರಕಾರ
  ಇನ್ನು ರಾತ್ರಿ ಮೊಸರು ತಿನ್ನುವುದರಿಂದ ಯಾವುದೇ ಸಮಸ್ಯೆಗಳಿಲ್ಲ. ಆದರೆ ಕಫ, ಅಸ್ತಮಾ ಸಮಸ್ಯೆ ಇರುವವರು ಮಾತ್ರ ರಾತ್ರಿ ವೇಳೆ ಮೊಸರು ತಿನ್ನದಿದ್ದರೆ ಒಳಿತು, ಯಾಕೆಂದರೆ ಅವರಲ್ಲಿ ಕಫ ಜಾಸ್ತಿಯಾಗಿ ಅನಾರೋಗ್ಯ ಕಾಡಬಹುದು. ಮೊಸರನ್ನು ರಾತ್ರಿ ವೇಳೆ ಸೇವಿಸಬಾರದೆಂದು ಕೆಲವರು ಹೇಳುತ್ತಾರೆ. ಆಯುರ್ವೇದದ ಪ್ರಕಾರ (Ayurveda explains) ಮೊಸರು ಹುಳಿ ಮತ್ತು ಸಿಹಿಯಿಂದ ಕೂಡಿರುವುದರಿಂದ ದೇಹದಲ್ಲಿ ‘ಕಫ ದೋಷ’ವನ್ನುಂಟು ಮಾಡುತ್ತದೆ. ಹಾಗಾಗಿ ರಾತ್ರಿ ವೇಳೆ ಮತ್ತೆ ಮೊಸರು ಸೇವಿಸಿದರೆ ಕಫ ಹೆಚ್ಚಾಗಿ ಮೂಗಿನ ನಾಳಗಳಲ್ಲಿ ಲೋಳೆ ಅಥವಾ ಸಿಂಬಳ ಜಾಸ್ತಿ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ.

  ಮೊಸರು ಉತ್ತಮ ಬ್ಯಾಕ್ಟೀರಿಯಾದ (good bacteria ) ಅತ್ಯುತ್ತಮ ಮೂಲವಾಗಿದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ನಿಮ್ಮ ಹಲ್ಲು ಮತ್ತು ಮೂಳೆಗಳಿಗೆ ಒಳ್ಳೆಯದು. ಆದರೆ ಹೆಚ್ಚಿನ ಆಹಾರಗಳಂತೆ, ಮೊಸರು ಸೇವಿಸಲು ನೀವು ಅನುಸರಿಸಬೇಕಾದ ಕೆಲವು ನಿಯಮಗಳಿವೆ. ಮೊಸರನ್ನು ರಾತ್ರಿ ಹೊತ್ತು (night time) ಸೇವಿಸುತ್ತಾ ಇದ್ದರೆ ಅದು ನಿಧಾನವಾದ ವಿಷ ಎಂದೇ ಆಯುರ್ವೇದದಲ್ಲಿ ವ್ಯಾಖ್ಯಾನಿಸಲಾಗಿದೆ. ಏಕೆಂದರೆ ರಾತ್ರಿ ಸಮಯದಲ್ಲಿ ಮೊಸರಿನ (curd) ಜಿಡ್ಡಿನ ಅಂಶಗಳು ದೇಹಕ್ಕೆ ಸೇರಿ ಅದರಿಂದ ಕಫ ಸಮಸ್ಯೆ ಜಾಸ್ತಿಯಾಗುತ್ತದೆಯಂತೆ! ಹಾಗಾಗಿ ರಾತ್ರಿ ಹೊತ್ತು ಮೊಸರಿನ ಬಳಕೆ ನಿಷಿದ್ಧ ಎನ್ನುತ್ತಾರೆ.

  ಮೊಸರಿನಲ್ಲಿ ಹುಳಿ ಅಧಿಕವಾದರೆ: 
  ಮೊಸರು ರುಚಿಯಲ್ಲಿ ಹುಳಿಯಾಗಿದ್ದು, ಇದರಿಂದ ಬೊಜ್ಜು, ಕಫ, ಪಿತ್ತ ಹೆಚ್ಚಾಗಿ ಜೀರ್ಣದ ಸಾಮರ್ಥ್ಯವನ್ನೂ ಸಹ ಹೆಚ್ಚಿಸುತ್ತದೆ. ನಿಮಗೆ ಹೊಟ್ಟೆಯ ಊತ ಅಥವಾ ಉರಿಯು ಬಂದ ಸಂದರ್ಭಗಳಲ್ಲಿ ಮೊಸರನ್ನು ಸೇವಿಸಿದರೆ ಸಮಸ್ಯೆ ಇನ್ನೂ ಬಿಗಡಾಯಿಸಲಿದೆ. ಈ ಗುಣಲಕ್ಷಣವು ಹುಳಿಯಾದ ಮೊಸರಿನಲ್ಲಿ ಅಧಿಕವಿರುತ್ತದೆ. ನೀವು ಹಗಲಿನಲ್ಲಿ ಮೊಸರು ತಿನ್ನುತ್ತಿದ್ದರೆ, ಅದನ್ನು ಸಕ್ಕರೆ (sugar) ಇಲ್ಲದೆ ಸೇವಿಸಿ ಆದರೆ ನೀವು ರಾತ್ರಿಯಲ್ಲಿ ಮೊಸರು ತಿನ್ನುತ್ತಿದ್ದರೆ, ಸಕ್ಕರೆ ಅಥವಾ ಸ್ವಲ್ಪ ಕರಿಮೆಣಸು ಸೇರಿಸಿ.

  ಇದನ್ನು ಓದಿ:Sour Curd: ಹುಳಿ ಮೊಸರನ್ನು ಎಸೆಯುವ ಅಭ್ಯಾಸ ಇದ್ರೆ ಈಗಲೇ ನಿಲ್ಲಿಸಿ, ಈ ಆಹಾರ ಪದಾರ್ಥಗಳನ್ನು ತಯಾರಿಸಿ..

  ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಶಾಂತಗೊಳಿಸುತ್ತದೆ. ಮಂತ್ಯೆ ಕಾಳುಗಳನ್ನು ಸೇರಿಸಿದರೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಧೂಳಿನ ಅಲರ್ಜಿ ಇರುವವರು ರಾತ್ರಿ ಹೊತ್ತು ಮೊಸರು ನೇರವಾಗಿ ಅಥವಾ ಬೇರೆ ಯಾವುದೇ ಖಾದ್ಯದ ರೂಪದಲ್ಲಿ ಸೇವಿಸಲೇಬಾರದು. ಈ ಸಮಸ್ಯೆಯಿರುವವರು ರಾತ್ರಿ ಮೊಸರು ತಿಂದರೆ ಉಸಿರಾಟದ ತೊಂದರೆ ಉಂಟಾಗಿ, ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಬಿಸಿ ಮೊಸರನ್ನು ಎಂದಿಗೂ ಸೇವಿಸಬೇಡಿ(Never have hot curd.) ಎಂದು ಹೇಳಲಾಗುತ್ತದೆ.

  ಆಹಾರದಲ್ಲಿ ಸೇರಿಸುವುದು ಹೇಗೆ: 
  ನೀವು ಮೊಸರು ಪ್ರಿಯರಾಗಿದ್ದರೆ, ದಿನದ ಯಾವುದೇ ಸಮಯದಲ್ಲಿ ಅದನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಹೇಗೆ ಎಂದು ಹೇಳುತ್ತೇವೆ.

  ಮೊಸರು ಅನ್ನ (Curd rice): ಇದು ಹೊಟ್ಟೆಗೆ ತುಂಬಾ ಒಳ್ಳೆಯದು ಮತ್ತು ಬೇಸಿಗೆಯಲ್ಲಿ ಲಘು ಆಯ್ಕೆಯಾಗಿದೆ. ಮೊಸರಿಗೆ ಒಂದು ಚಮಚ ಸಕ್ಕರೆ ಸೇರಿಸಿ ತಿನ್ನುವುದು ಉತ್ತಮ, ಮಜ್ಜಿಗೆ/ಲಸ್ಸಿ ಈ ಎರಡು ಆಯ್ಕೆಗಳು ರಾತ್ರಿ ಹೊತ್ತು ಪಾನೀಯಗಳಂತೆ ಸೇವಿಸಬಹುದು. ಶೀತ ಸಮಸ್ಯೆಯಿದ್ದವರೂ ಎಚ್ಚರಿಕೆ ವಹಿಸಿ.

  ರೈತಾ (Raitha): ಸಾಮಾನ್ಯ ಭಾರತೀಯರ ಭಕ್ಷ್ಯವಾಗಿದೆ, ಈರುಳ್ಳಿ, ಸೌತೆಕಾಯಿ, ಟೊಮೆಟೊವನ್ನು ನಿಮ್ಮ ಮೊಸರಿಗೆ ಕೆಲವು ಗಿಡಮೂಲಿಕೆಗಳೊಂದಿಗೆ ಇದನ್ನು ತಯಾರಿ ಸವಿಯಬಹುದಾಗಿದೆ.

  ಕಧಿ:(Kadhi): ಮಜ್ಜಿಗೆಯೊಂದಿಗೆ ಹಿಟ್ಟು (ಬೇಸನ್) ಬೆರೆಸುವುದು. ಇದನ್ನು ಹೆಚ್ಚಾಗಿ ಅನ್ನದೊಂದಿಗೆ ತಿನ್ನಲಾಗುತ್ತದೆ (ನೀವು ಬ್ರೌನ್ ರೈಸ್ ಅನ್ನು ಆಯ್ಕೆ ಮಾಡಲು ಬಯಸಬಹುದು).
  Published by:vanithasanjevani vanithasanjevani
  First published: