• Home
 • »
 • News
 • »
 • lifestyle
 • »
 • Milk Before Bed: ಮಲಗುವ ಮುನ್ನ ಹಾಲು ಕುಡಿಯಬೇಕೇ..? ಬೇಡವೇ..?

Milk Before Bed: ಮಲಗುವ ಮುನ್ನ ಹಾಲು ಕುಡಿಯಬೇಕೇ..? ಬೇಡವೇ..?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಾಲು ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಡಿ ಮೊದಲಾದ ಅವಶ್ಯಕ ಪೋಷಕಾಂಶಗಳನ್ನು ಹೊಂದಿರುವ ಒಂದು ಆರೋಗ್ಯಕರವಾದ ಆಹಾರವಾಗಿದ್ದು ಮಕ್ಕಳಿಗೆ ಮಾತ್ರವಲ್ಲ, ಹಿರಿಯರಿಂದ ವೃದ್ದರವರೆಗೆ ಎಲ್ಲರ ಆರೋಗ್ಯಕ್ಕೂ ಪೂರಕವಾಗಿದೆ.

 • Share this:

  ಇಂದಿನ ಜೀವನದಲ್ಲಿ ಪ್ರತಿಯೊಬ್ಬರು ಹಾಲಿನ (milk ) ಬಳಕೆ ಮಾಡಲೇಬೇಕು, ತಿನ್ನುವ ಪದಾರ್ಥದಂತೆ ಹಾಲು ಕೂಡ ಅಷ್ಟೇ ಮುಖ್ಯ. ಹಾಲು ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಡಿ (calcium, vitamin A, vitamin D.) ಮೊದಲಾದ ಅವಶ್ಯಕ ಪೋಷಕಾಂಶಗಳನ್ನು ಹೊಂದಿರುವ ಒಂದು ಆರೋಗ್ಯಕರವಾದ ಆಹಾರವಾಗಿದ್ದು ಮಕ್ಕಳಿಗೆ ಮಾತ್ರವಲ್ಲ, ಹಿರಿಯರಿಂದ ವೃದ್ದರವರೆಗೆ ಎಲ್ಲರ ಆರೋಗ್ಯಕ್ಕೂ ಪೂರಕವಾಗಿದೆ. ಆಹಾರತಜ್ಞರ (dieticians)ಪ್ರಕಾರ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು (drinking milk)ಒಳ್ಳೆಯದು ಎನ್ನಲು ಕಾರಣವೇನೆಂದರೆ ಇದರಲ್ಲಿರುವ ಟ್ಪ್ರಿಪ್ಟೋಫ್ಯಾನ್ (tryptophan)ಎಂಬ ಪೋಷಕಾಂಶ ಜೀರ್ಣಕ್ರಿಯೆಯ ಬಳಿಕ ಸೆರೋಟೋನಿನ್ ಎಂಬ ರಸದೂತವಾಗಿ ಪರಿವರ್ತಿತವಾಗುವುದು. ಗಾಢ ಮತ್ತು ಸೊಂಪಾದ ನಿದ್ದೆಗೆ ಈ ರಸದೂತದ ಇರುವಿಕೆ ಅವಶ್ಯ. ಅದರಲ್ಲೂ ಹಾಲು ಕೊಂಚ ಬಿಸಿಯಾಗಿದ್ದರೆ ಸೇವಿಸಿದ ತಕ್ಷಣವೇ ಮಾನಸಿಕವಾಗಿ ನಿರಾಳತೆಯನ್ನು ನೀಡುತ್ತದೆ ಹಾಗೂ ದೇಹದ ಒತ್ತಡವನ್ನೂ(mental boost immediately) ನಿರಾಳವಾಗಿಸುವ ಮೂಲಕ ಹಾಯಾದ ಅನುಭವ ನೀಡುತ್ತದೆ ಎಂದು ಹೇಳುತ್ತಾರೆ.


  ಸರಳವಾದ ಮನೆಮದ್ದು(Simple housewares)
  ಸಾಕಷ್ಟು ನಿದ್ರೆಯ ಕೊರತೆಯು ಅನೇಕ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀಳಲಿದೆ.ವಾಸ್ತವವಾಗಿ, ಇದು ಪ್ರಮುಖ ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಲಾಗಿದೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೇವಲ 3 ಜನರಲ್ಲಿ 1 ಜನರು ಸಾಕಷ್ಟು ನಿದ್ರೆ ಯಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ. ಇದರ ಪರಿಣಾಮವಾಗಿ, ಅನೇಕ ಜನರು ತಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸರಳವಾದ ಮನೆಮದ್ದುಗಳನ್ನು ಹುಡುಕುತ್ತಿದ್ದಾರೆ.


  ಇದನ್ನು ಓದಿ: Health Tips: ಹಾಲು ಆರೋಗ್ಯಕ್ಕೆ ನಿಜಕ್ಕೂ ಒಳ್ಳೆಯದೇ?; ಅಸಲಿ ಸಂಗತಿ ಇಲ್ಲಿದೆ


  ನಿದ್ರಿಸಲು ಸಹಾಯ(Help to fall asleep)
  ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲನ್ನು ಸೇವಿಸುವುದು ಒಂದು ಸಂಪ್ರದಾಯವಾಗಿದೆ, ಇದು ವಿಶ್ರಾಂತಿಯನ್ನು ಬೆಳೆಸಲು, ಆತಂಕವನ್ನು ನಿವಾರಿಸಲು ಮತ್ತು ಹೆಚ್ಚು ಶಾಂತವಾದ ರಾತ್ರಿಯ ನಿದ್ರೆಗೆ ಅನುಕೂಲವಾಗುವಂತೆ ತಲೆಮಾರುಗಳ ಮೂಲಕ ಹೇಳಿಕೊಂಡು ಬರಲಾಗಿದೆ. ಅಧ್ಯಯನಗಳು ಮಲಗುವ ಮೊದಲು ಹಾಲು ಮತ್ತು ಚೀಸ್ ನಂತಹ ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ರಾತ್ರಿಯ ನಿದ್ರೆಗೆ ಉತ್ತೇಜಿಸುತ್ತದೇ ಎಂದು ಹೇಳಲಾದರೆ, ಹಾಲಿನಲ್ಲಿರುವ ಟ್ರಿಪ್ಟೊಫಾನ್ ಮತ್ತು ಮೆಲಟೋನಿನ್ ನಿಮಗೆ ನಿದ್ರಿಸಲು ಸಹಾಯ ಮಾಡಬಹುದು ಎನ್ನುತ್ತಾರೆ, ಆದರೂ ಇದು ಅಸ್ಪಷ್ಟವಾಗಿ ಉಳಿದಿದೆ ಎಂಬುದು ಕೆಲವರ ವಾದವಾಗಿದೆ.


  ಗಾಢನಿದ್ದೆ ಪಡೆಯಲು ನೆರವು(Aid to get dark)
  ಅಷ್ಟೇ ಅಲ್ಲ, ರಾತ್ರಿ ನಿದ್ದೆಯ ಸಮಯದಲ್ಲಿ ಟ್ಪ್ರಿಪ್ಟೋಫ್ಯಾನ್(tryptophan) ಜೀರ್ಣಗೊಳ್ಳುವ ವೇಳೆ ಮೆಲಟೋನಿನ್ ಎಂಬ ಪೋಷಕಾಂಶವೂ ಉತ್ಪತ್ತಿಯಾಗುತ್ತದೆ. ಈ ಮೆಲಟೋನಿನ್ ಮೆದುಳು ನಿದ್ದೆಯ ಸಮಯದಲ್ಲಿ ಕೇವಲ ನಿದ್ದೆಗೆ ಪೂರಕ ಕೆಲಸವನ್ನು ಮಾತ್ರವೇ ನಿರ್ವಹಿಸಲು ನೆರವಾಗುತ್ತದೆ. ಆದ್ದರಿಂದ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದನ್ನು  ಶಿಫಾರಸ್ಸು ಮಾಡುತ್ತಾರೆ.


  ಈ ಮೂಲಕ ನಿದ್ದೆ ಮಾಡಬೇಕಾದ ಸಮಯದಲ್ಲಿ ನಿದ್ದೆಗೆಡಬೇಕಾಗಿ ಬರುವ ಹಾಗೂ ತನ್ಮೂಲಕ ಎದುರಿಸಬೇಕಾದ ಇತರ ತೊಂದರೆಗಳಿಂದ ರಕ್ಷಣೆ ಪಡೆಯಬಹುದು. ಹಾಲಿನಲ್ಲಿರುವ ಕಾರ್ಬೋಹೈಡ್ರೇಟುಗಳು ಮತ್ತು ಆರೋಗ್ಯಕರ ಕೊಬ್ಬುಗಳು ದೇಹದಲ್ಲಿರುವ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ದೇಹದಲ್ಲಿ ಉತ್ಪತ್ತಿಯಾದ ಟ್ಪ್ರಿಪ್ಟೋಫ್ಯಾನ್ ರಸದೂತವನ್ನು ಮೆದುಳಿನ ಸಹಿತ ದೇಹದ ಇತರ ಭಾಗಗಳಿಗೂ ಪರಿಚಲಿಸುವಂತೆ ಮಾಡುತ್ತದೆ ಹಾಗೂ ಈ ಮೂಲಕವೂ ಗಾಢನಿದ್ದೆ ಪಡೆಯಲು ನೆರವಾಗುತ್ತದೆ ಎನ್ನಲಾಗಿದೆ.


  ಯಾವಾಗ, ಯಾವ ರೀತಿ ಹಾಲು ಕುಡಿಯಬೇಕು(When and where to drink milk)
  ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲು ಕುಡಿಯುವುದರಿಂದ ಗಾಢ ನಿದ್ದೆ ಆವರಿಸುತ್ತದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಯೂ ಇದೆ. ಆದರೆ ವಯಸ್ಸಿಗನುಗುಣವಾಗಿ ಇದರ ಪರಿಣಾಮದಲ್ಲಿ ಕೊಂಚ ವ್ಯತ್ಯಾಸವೂ ಇದೆ. ಮಕ್ಕಳಲ್ಲಿ ಬೆಳವಣಿಗೆಗೆ ಹಾಲು ಹೆಚ್ಚಿನ ನೆರವು ನೀಡುತ್ತದೆ. ಇದಕ್ಕಾಗಿ ಪರಿಪೂರ್ಣ ಹಾಲು ಅಥವಾ ಕೊಬ್ಬುಯುಕ್ತ ಹಾಲು ಸೂಕ್ತ. ವಯಸ್ಸಾದವರು ಕೊಬ್ಬಿನಾಂಶ ಯಾವ ಬೇಕು ಎಂದು ನಿರ್ಧರಿಸಿ ಸೇವಿಸುವುದು ಉತ್ತಮ.


  ಇದನ್ನು ಓದಿ:ಹಾಲಿನಲ್ಲಿ ತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು?


  ಇನ್ನಷ್ಟು ಅಧ್ಯಯನಗಳು ಅಗತ್ಯ


  ಟ್ಪ್ರಿಪ್ಟೋಫ್ಯಾನ್ ಅಮೈನೋ ಆಮ್ಲವಾಗಿದ್ದು, ಇದು ವಿವಿಧ ಪ್ರೋಟೀನ್-ಒಳಗೊಂಡಿರುವ ಆಹಾರಗಳಲ್ಲಿ ಕಂಡುಬರುತ್ತದೆ. ಸಿರೊಟೋನಿನ್  ಎಂದು ಕರೆಯಲ್ಪಡುವ ನರಪ್ರೇಕ್ಷಕ ಉತ್ಪಾದನೆಯಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಒಂದು ಲೋಟ ಹಾಲು ಸಾಕಷ್ಟು ಟ್ರಿಪ್ಟೊಫಾನ್ ಅಥವಾ ಮೆಲಟೋನಿನ್ ಅನ್ನು ಹೊಂದಿರುತ್ತದೆ ಎಂದು ಸೂಚಿಸಲು ಪ್ರಸ್ತುತ ಯಾವುದೇ ಪುರಾವೆಗಳಿಲ್ಲ. ಇನ್ನು ಹಾಲು ಸೇವನೆಯಿಂದ ಕೆಲ ಮಾನಸಿಕ ಪರಿಣಾಮಗಳು ಬೀರಬಹುದು ಎಂದು ಮತ್ತೊಂದು ವರ್ಗದ ತಜ್ಞರು ಹೇಳುತ್ತಾರೆ.  ಒಟ್ಟಿನಲ್ಲಿ ಮಲಗುವ ವೇಳೆಗೆ ಹಾಲನ್ನು ಸೇರಿಸುವುದರಿಂದ ನಿದ್ದೆ ಬರುತ್ತದೆ ಎಂದು ಹೇಳಲು ಸಾಕಷ್ಟು ಪುರಾವೆಗಳಿಲ್ಲ. ಇದರ ಸತ್ಯತಿತ್ಯತೆಗಳನ್ನು ಪತ್ತೆ ಹಚ್ಚಲು ಇನ್ನಷ್ಟು ಅಧ್ಯಯನಗಳು ಅಗತ್ಯವಿದೆ.

  Published by:vanithasanjevani vanithasanjevani
  First published: