• Home
  • »
  • News
  • »
  • lifestyle
  • »
  • Health Care: ಹೊಟ್ಟೆ ಭಾಗದ ತೂಕ ಹೆಚ್ಚುತ್ತಿದೆ ಎಂದು ತಿಳಿದಿದ್ದ ಮಹಿಳೆಗೆ ಕಾದಿತ್ತು ಶಾಕ್!

Health Care: ಹೊಟ್ಟೆ ಭಾಗದ ತೂಕ ಹೆಚ್ಚುತ್ತಿದೆ ಎಂದು ತಿಳಿದಿದ್ದ ಮಹಿಳೆಗೆ ಕಾದಿತ್ತು ಶಾಕ್!

ಶನೆಲ್ಲೆ ಮೇಸನ್

ಶನೆಲ್ಲೆ ಮೇಸನ್

ದಕ್ಷಿಣ ಇಂಗ್ಲೆಂಡ್‌ನ ಹರ್ಟ್‌ಫೋರ್ಡ್‌ಶೈರ್‌ನ ಹ್ಯಾಂಪ್‌ಸ್ಟೆಡ್‌ನ ನಿವಾಸಿ 32 ವರ್ಷದ ಶನೆಲ್ಲೆ ಮೇಸನ್ ಎಂಬ ಮಹಿಳೆ, ಲಾಕ್‌ಡೌನ್‌ ನಲ್ಲಿ ಹೆಚ್ಚು ತಿಂದಿದ್ದರಿಂದ ಹೊಟ್ಟೆ ಬಂದಂತೆ ತೋರುತ್ತಿತ್ತು.

  • Share this:

    ಕೊರೋನಾ (Corona) ಸಾಂಕ್ರಾಮಿಕ ರೋಗದಿಂದಾಗಿ (Disease), ದೈಹಿಕ ಚಟುವಟಿಕೆ ಕಡಿಮೆಯಾದ ಕಾರಣ, ಮನೆಯಲ್ಲಿಯೇ ಇರುವುದು ಮತ್ತು ಅತಿಯಾಗಿ ತಿನ್ನುವುದರಿಂದ ಅನೇಕ ಜನರಿಗೆ ತೂಕ ಹೆಚ್ಚಿದೆ. ಜೊತೆಗೆ ಹೊಟ್ಟೆ ಭಾಗ (Part) ಹೆಚ್ಚಾಗಿದೆ. ಹೀಗೆ ಅತಿಯಾಗಿ ತಿನ್ನುತ್ತಿದ್ದ ಮಹಿಳೆಯೊಬ್ಬರ (Women) ಹೊಟ್ಟೆ ಭಾಗ ಹೆಚ್ಚಾಗುತ್ತಲೇ ಇತ್ತು. ಅವರ ತೂಕ ಕೂಡ ಹೆಚ್ಚಾಗುತ್ತಲೇ ಇತ್ತು. ಹೀಗಾಗಿ ಮಹಿಳೆ ತೂಕ ತುಂಬಾ ಹೆಚ್ಚಾದಾಗ ವೈದ್ಯರನ್ನು ಸಂಪರ್ಕಿಸಿದರು. ಈ ಬಗ್ಗೆ ವೈದ್ಯರು ಅಲ್ಟ್ರಾಸೌಂಡ್ ಮಾಡಿಸಿ, ಪರೀಕ್ಷಿಸಿದಾಗ ಸತ್ಯ ಹೊರ ಬಂದಿದೆ. ಹೊಟ್ಟೆ ಭಾಗ ಹೆಚ್ಚಳಕ್ಕೆ ತೂಕ ಹೆಚ್ಚುತ್ತಿರುವುದು ಕಾರಣವಾಗಿರಲಿಲ್ಲ. ಕಾರಣ ಬೇರೆಯೇ ಆಗಿತ್ತು. ವೈದ್ಯರ ಪರೀಕ್ಷೆ ನಂತರ ಮಹಿಳೆಗೆ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಆಕೆಗೆ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಈಗ ಸಂಪೂರ್ಣ ಗುಣಮುಖಳಾಗಿದ್ದಾಳೆ.


    ಆಹಾರ ಸೇವಿಸಿದ ನಂತರ ಹೊಟ್ಟೆ ಉಬ್ಬುತ್ತಿತ್ತು. ಮಹಿಳೆಗೆ ತೂಕ ಹೆಚ್ಚಾಗಿದೆ ಎಂದು ಅರ್ಥವಾಗುತ್ತಿತ್ತು. ಆದರೆ ಅದು ಕ್ಯಾನ್ಸರ್ ಆಗಿತ್ತು. ಹೊಟ್ಟೆ ಊದಿಕೊಂಡಿದೆ. ಎಂದು ವೈದ್ಯರ ಬಳಿ ಹೋದಾಗ ಅಲ್ಟ್ರಾಸೌಂಡ್ ಮಾಡಿದಾಗ 8.2 ಕೆಜಿಯಷ್ಟು ವಸ್ತುವನ್ನು ಅವರ ಹೊಟ್ಟೆಯಿಂದ ಹೊರಗೆ ತೆಗೆಯಲಾಗಿದೆ.


    ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಕ್ಯಾನ್ಸರ್ ಆಗಿದ್ದ ಮಹಿಳೆ ಈಗ ತನ್ನ ಸಂಪೂರ್ಣ ಕ್ಯಾನ್ಸರ್ ಪ್ರಯಾಣದ ವೀಡಿಯೊವನ್ನು  ಹಂಚಿಕೊಂಡಿದ್ದಾರೆ.


    ಇದನ್ನೂ ಓದಿ: ಈ ರೀತಿ ವಾಕಿಂಗ್ ಮಾಡಿದ್ರೆ ತುಂಬಾ ಸುಲಭವಾಗಿ ಹೊಟ್ಟೆ ಬೊಜ್ಜನ್ನು ಕರಗಿಸಬಹುದು


    ದಕ್ಷಿಣ ಇಂಗ್ಲೆಂಡ್‌ನ ಹರ್ಟ್‌ಫೋರ್ಡ್‌ಶೈರ್‌ನ ಹ್ಯಾಂಪ್‌ಸ್ಟೆಡ್‌ನ ನಿವಾಸಿ


    ದಕ್ಷಿಣ ಇಂಗ್ಲೆಂಡ್‌ನ ಹರ್ಟ್‌ಫೋರ್ಡ್‌ಶೈರ್‌ನ ಹ್ಯಾಂಪ್‌ಸ್ಟೆಡ್‌ನ ನಿವಾಸಿ 32 ವರ್ಷದ ಶನೆಲ್ಲೆ ಮೇಸನ್ ಎಂಬ ಮಹಿಳೆ, ಲಾಕ್‌ಡೌನ್‌ ನಲ್ಲಿ ಹೆಚ್ಚು ತಿಂದಿದ್ದರಿಂದ ಹೊಟ್ಟೆ ಬಂದಂತೆ ತೋರುತ್ತಿತ್ತು. ಇದರಿಂದಾಗಿ ಆಕೆಯ ಹೊಟ್ಟೆ ಊದಿಕೊಂಡಿತ್ತು ಎಂದು ತಿಳಿದಿದ್ದರು. ದಿನದಿಂದ ದಿನಕ್ಕೆ ಅವರ ಹೊಟ್ಟೆಯ ಗಾತ್ರವು ಹೆಚ್ಚಾಗಲು ಪ್ರಾರಂಭಿಸಿತ್ತು.


    ಹೀಗಾಗಿ ಅವಳು ನವೆಂಬರ್ ನಲ್ಲಿ ವೈದ್ಯರ ಬಳಿಗೆ ಹೋಗಿದ್ದಳು. ಮತ್ತು ವೈದ್ಯರು ಅಲ್ಟ್ರಾಸೌಂಡ್ ಮಾಡಿದರು. ಆಕೆಯ ಅಂಡಾಶಯದಲ್ಲಿ 13-ಇಂಚಿನ (32 cm) ಅಗಲದ ಚೀಲವಿತ್ತು. ಅದು ಫುಟ್‌ಬಾಲ್‌ಗಿಂತ ದೊಡ್ಡದಾಗಿತ್ತು. ಮತ್ತು ಬೌಲಿಂಗ್ ಬಾಲ್‌ಗಿಂತ ಭಾರವಾಗಿತ್ತು ಎಂದು ಹೇಳಲಾಗಿದೆ.


    ಅಂಡಾಶಯದ ಕ್ಯಾನ್ಸರ್


    ಅಂಡಾಶಯದಲ್ಲಿ ಅಂತಹ ದೊಡ್ಡ ಗಡ್ಡೆಯನ್ನು ನೋಡಿದ ವೈದ್ಯರು ಅದನ್ನು ಮತ್ತಷ್ಟು ಪರೀಕ್ಷಿಸಿದರು. ಇದು ಮಹಿಳೆಗೆ ಮ್ಯೂಸಿನಸ್ ಅಂಡಾಶಯದ ಕ್ಯಾನ್ಸರ್ ಇದೆ ಎಂದು ತಿಳಿದು ಬಂದಿದೆ. ಇದು ಅಪರೂಪದ ರೀತಿಯ ಗೆಡ್ಡೆಯನ್ನು ಅಭಿವೃದ್ಧಿ ಪಡಿಸುತ್ತದೆ.


    ಈ ಕ್ಯಾನ್ಸರ್ ಹೆಚ್ಚು ಹರಡಿರಲಿಲ್ಲ. ಆದ್ದರಿಂದ ವೈದ್ಯರ ತಂಡ ಅದನ್ನು ಪ್ರತ್ಯೇಕಿಸಲು ನಿರ್ಧರಿಸಿತು. ಶನೆಲ್ ಮೇಸನ್ ಅವರನ್ನು ವೈದ್ಯರ ತಂಡವು ಪ್ರತ್ಯೇಕಿಸಿ ತೆಗೆದು ಹಾಕಿದೆ. ಮತ್ತು ನೀವು ಮುಂದೆ ಕ್ಯಾನ್ಸರ್ ನಿಂದ ಬಳಲುವುದಿಲ್ಲ ಎಂದು ಹೇಳಿದ್ದಾರೆ.


    ಸೆಪ್ಟೆಂಬರ್‌ನಿಂದ ಪರಿಸ್ಥಿತಿ ಹದಗೆಟ್ಟಿತ್ತು


    ಶನೆಲ್ ಮೇಸನ್ ಪ್ರಕಾರ, ಸೆಪ್ಟೆಂಬರ್‌ನಲ್ಲಿ ತನ್ನ ಆರೋಗ್ಯವು ಹದಗೆಡುತ್ತಿದೆ ಎಂದು ಅವಳು ಭಾವಿಸಲು ಪ್ರಾರಂಭಿಸಿದಳು. ಇದಾದ ನಂತರ ತಪಾಸಣೆ ನಡೆಸಿದಾಗ ಕೆಲವು ಅಸಹಜತೆಗಳಿಂದಾಗಿ ತಂಡವು ಅಲ್ಟ್ರಾಸೌಂಡ್ ಮಾಡುವಂತೆ ಸಲಹೆ ನೀಡಿದ್ದು, ಇದು ಕ್ಯಾನ್ಸರ್ ಗೆಡ್ಡೆಯನ್ನು ಪತ್ತೆ ಮಾಡಿದೆ.


    ಅವರ ಹೊಟ್ಟೆಯಿಂದ ಟ್ಯೂಮರ್ 8.2 ಕೆಜಿ ತೂಕವಿತ್ತು. ಇದು ಅವಳಿ ಅಥವಾ ಬೌಲಿಂಗ್ ಬಾಲ್‌ಗೆ ಸಮನಾಗಿತ್ತು. ಜನವರಿ 18 ರಂದು ಆಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಆ ಹೊತ್ತಿಗೆ ಚೀಲದ ಗಾತ್ರವು 42 ಸೆಂಟಿಮೀಟರ್‌ಗೆ ಏರಿತು.


    ಗೆಡ್ಡೆಯನ್ನು ತೆಗೆದ ನಂತರ, ಅವರ ಹೊಟ್ಟೆಯ ಮೇಲೆ 10 ಇಂಚಿನ ಗುರುತು ಉಳಿದಿದೆ. ಈ ಅಪರೂಪದ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ಈಗ ಮೇಸನ್ ಮುಂದಾಗಿದ್ದಾರೆ. ಅವರು ತಮ್ಮ ಪ್ರಯಾಣವನ್ನು ಟಿಕ್‌ಟಾಕ್ ವೀಡಿಯೊದಲ್ಲಿ ಹಂಚಿಕೊಂಡಿದ್ದಾರೆ.


    ಪ್ರತಿ ವರ್ಷ ಅನೇಕ ಮಹಿಳೆಯರು ಈ ಕ್ಯಾನ್ಸರ್ ಗೆ ಒಳಗಾಗುತ್ತಾರೆ


    ಯುಕೆಯಲ್ಲಿ ಸುಮಾರು 200 ಮಹಿಳೆಯರು ಮತ್ತು ಯುಎಸ್‌ನಲ್ಲಿ 600 ಮಹಿಳೆಯರು ಪ್ರತಿ ವರ್ಷ ಮ್ಯೂಸಿನಸ್ ಅಂಡಾಶಯದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಈ ಕ್ಯಾನ್ಸರ್ ದೊಡ್ಡ ಗಡ್ಡೆಯನ್ನು ಉಂಟು ಮಾಡುತ್ತದೆ.


    ಇದನ್ನೂ ಓದಿ: ಕೆಮ್ಮು, ಕಫ, ಅಸ್ತಮಾ. ಶೀತಕ್ಕೆ ಮದ್ದು: ವೀಳ್ಯದೆಲೆ ಪ್ರಯೋಜನಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ


    ಇದರಲ್ಲಿ 80 ಪ್ರತಿಶತ ಪ್ರಕರಣಗಳಲ್ಲಿ ಕ್ಯಾನ್ಸರ್ ಮತ್ತಷ್ಟು ಹರಡುವ ಮೊದಲು ಕಂಡು ಹಿಡಿಯಬಹುದು. ಇದರರ್ಥ ಕೀಮೋ ಥೆರಪಿಯನ್ನು ಬಳಸದೆ ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆಯಿಂದ ಮಾತ್ರ ಚಿಕಿತ್ಸೆ ನೀಡಬಹುದು.

    Published by:renukadariyannavar
    First published: