ಚಿಯಾ ಬೀಜ ಸೇವನೆಯಿಂದ ಏನೆಲ್ಲಾ ಲಾಭವಿದೆ ಅಂತ ನಟಿ Shilpa Shetty ಹೇಳ್ತಾರೆ ಕೇಳಿ..!

ಚಿಯಾ ಬೀಜಗಳನ್ನು ಯಾವ ರೀತಿ ಸೇವಿಸಬೇಕು ಎಂಬುವುದರ ಬಗ್ಗೆ ಕೂಡ ಶಿಲ್ಪಾ ಮಾಹಿತಿ ಹಂಚಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ

  • Share this:
ನೀಳಕಾಯದ ಸುಂದರಿ, ಬಾಲಿವುಡ್ ನಟಿ (Bollywood actress) ಶಿಲ್ಪಾ ಶೆಟ್ಟಿ (Shilpa Shetty) ಹಲವು ವರ್ಷಗಳಿಂದ ಫಿಟ್‍ನೆಸ್ ಪ್ರಿಯರಿಗೆ ಸ್ಪೂರ್ತಿ ನೀಡುತ್ತಾ ಬಂದಿದ್ದಾರೆ ಎಂಬುವುದನ್ನು ಅಲ್ಲಗಳೆಯುವಂತಿಲ್ಲ. ಅವರ ಪವರ್ ಯೋಗ ಮತ್ತು ಸಮತೋಲಿತ ಆಹಾರ ಕ್ರಮದ ಸಲಹೆಗಳ ಮೂಲಕ ಶಿಲ್ಪಾ ಬಹಳಷ್ಟು ಮಂದಿಗೆ ಫಿಟ್‍ನೆಟ್ ಮತ್ತು ಆರೋಗ್ಯದ ಕುರಿತ ಗುರಿಗಳನ್ನು ಇಟ್ಟುಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ಖಂಡಿತಾ ಹೇಳಬಹುದು. ಶಿಲ್ಪಾ ಶೆಟ್ಟಿಯವರ ಸಾಮಾಜಿಕ ಜಾಲತಾಣ(Social Media) ಖಾತೆಗಳನ್ನು ನೋಡಿದರೆ, ಅವರು ಆಗಾಗ ಆರೋಗ್ಯಕ್ಕೆ ಸಲಹೆಗಳನ್ನು(Tips for Health) ಹಂಚಿಕೊಳ್ಳುತ್ತಾ ಇರುತ್ತಾರೆ ಎಂಬುವುದು ನಿಮ್ಮ ಗಮನಕ್ಕೆ ಬರುತ್ತದೆ. ಅಷ್ಟೇ ಅಲ್ಲ, ಅವರು ತಮ್ಮ ಮುಂಜಾನೆಯ ಚಟುವಟಿಕೆಗಳು , ನಿತ್ಯದ ಆಹಾರ ಕ್ರಮ ಮತ್ತು ತಮ್ಮ ಫಿಟ್‍ನೆಟ್ ಕುರಿತ ಇನ್ನೂ ಅನೇಕ ಸಂಗತಿಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಜೊತೆಗೆ ನಾವು ಅವರ ಆರೋಗ್ಯಕರ ಮತ್ತು ರುಚಿ ರುಚಿಯಾದ ಅಡುಗೆಗಳ ಕುರಿತು ಕೂಡ ತಿಳಿದುಕೊಳ್ಳಬಹುದು. ಹೇಗಂತೀರಾ..?

ಯೂಟ್ಯೂಬ್ ಚಾನೆಲ್ ನಲ್ಲಿ ಶೇರ್
ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ , ರುಚಿಕರ ಅಡುಗೆಗಳನ್ನು ಮಾಡುವ ವಿಧಾನ ಮತ್ತು ಅವುಗಳ ರೆಸಿಪಿಗಳನ್ನು ಆರೋಗ್ಯಕ್ಕೆ ಪೂರಕವಾಗಿ ಹೇಗೆ ಬದಲಾಯಿಸಿಕೊಳ್ಳಬಹುದು ಎಂಬುದನ್ನು ಕೂಡ ತಿಳಿಸಿಕೊಡುತ್ತಾರೆ. ಅವೆಲ್ಲದರ ಮಧ್ಯೆ, ತಾನು ಅಡುಗೆಯಲ್ಲಿ ಬಳಸುವ ಸಾಮಗ್ರಿಗಳಿಂದ ಆರೋಗ್ಯಕ್ಕೆ ಯಾವ ರೀತಿಯ ಲಾಭಗಳಿವೆ ಎಂಬ ಬಗ್ಗೆ ಕೂಡ ವಿಸ್ತಾರವಾದ ಮಾಹಿತಿ ನೀಡುತ್ತಾರೆ ಶಿಲ್ಪಾ. ಅವರು ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಡುವ ಪೋಸ್ಟ್‌ಗಳಲ್ಲಿ, ಇತ್ತೀಚಿನ ಪೋಸ್ಟ್ ಚಿಯಾ ಬೀಜಗಳ ಕುರಿತದ್ದಾಗಿದೆ.

ಇದನ್ನೂ ಓದಿ: Anar Kulfi: ಎಂಥಾ ಟೇಸ್ಟ್​ ಮಾರಾಯ್ರೆ ಈ 'ಅನಾರ್ ಕುಲ್ಫಿ'.. ಹೊಸ ರುಚಿಗೆ ನೆಟಿಜನ್‌ ಫಿದಾ..!

ಶಿಲ್ಪಾ ಶೆಟ್ಟಿ ಇತ್ತೀಚೆಗೆ, ತಮ್ಮ ‘ಸಿಂಪಲ್‍ಸೋಲ್‍ಫುಲ್‍ಆ್ಯಪ್’ ಇನ್ಸ್ಟಾ ಪೇಜ್‍ನಲ್ಲಿ ಚಿಯಾ ಬೀಜಗಳ ಸೇವನೆಯಿಂದ ಆಗುವ ಲಾಭಗಳು ಮತ್ತು ಅವುಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಹೇಗೆ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಚಿಯಾ ಬೀಜಗಳ ಆರೋಗ್ಯಕರ ಲಾಭಗಳು:
ಸೂಪರ್‌ ಫುಡ್‌ ಎಂದೇ ಪರಿಗಣಿಸಲ್ಪಡುವ ಚಿಯಾ ಬೀಜಗಳು, ಸೂಕ್ತ ಪ್ರಮಾಣದ ಪೌಷ್ಟಿಕಾಂಶಗಳನ್ನು ಹೊಂದಿವೆ. ಅವು ಗ್ಲುಟೆನ್ ಮುಕ್ತವಾಗಿವೆ ಎಂಬುವುದು ಮತ್ತೊಂದು ಲಾಭದಾಯಕ ಸಂಗತಿ. ಪೌಷ್ಟಿಕಾಂಶ ತಜ್ಞೆ ಮೆಹರ್ ರಜ್‍ಪೂತ್ ಪ್ರಕಾರ, “ಈ ಕಪ್ಪು ಬೀಜಗಳು ಫೈಬರ್, ಪ್ರೋಟೀನ್, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಇನ್ನೂ ಹಲವಾರು ಸೂಕ್ಷ್ಮ ಪೋಷಕಾಂಶಗಳಿಂದ ತುಂಬಿಕೊಂಡಿದೆ.


ಅವು ನಮ್ಮ ದೇಹದಲ್ಲಿ ಅನಪೇಕ್ಷಿತ ಕೊಬ್ಬು ಸಂಗ್ರಹ ಆಗುವುದನ್ನು ತಡೆಯುತ್ತದೆ. ಈ ಅಂಶಗಳು ಕೇವಲ ತೂಕ ಇಳಿಕೆಗೆ ಸಹಾಯ ಮಾಡುತ್ತವೆ ಮಾತ್ರವಲ್ಲ, ಹೃದಯದ ಆರೋಗ್ಯವನ್ನು ಕೂಡ ಉತ್ತೇಜಿಸಲು ಸಹಾಯ ಮಾಡುತ್ತವೆ. ಅದಲ್ಲದೆ, ಚಿಯಾ ಬೀಜಗಳು ದೀರ್ಘಕಾಲ ಹಸಿವನ್ನು ನಿಗ್ರಹಿಸುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.”

ಚರ್ಮದ ಆರೋಗ್ಯಕ್ಕೂ ಕೂಡ ಒಳ್ಳೆಯದು
ಶಿಲ್ಪಾ ಶೆಟ್ಟಿ ಇನ್‍ಸ್ಟಾ ಪೋಸ್ಟ್ ಮೂಲಕ, ಚಿಯಾ ಬೀಜಗಳನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ಮತ್ತಷ್ಟು ಮಾತನಾಡಿದ್ದಾರೆ. ಚಿಯಾ ಬೀಜಗಳು ಚರ್ಮದ ಆರೋಗ್ಯಕ್ಕೂ ಕೂಡ ಒಳ್ಳೆಯದು ಎನ್ನುತ್ತಾರೆ ಅವರು. ಅವರು ಚಿಯಾ ಬೀಜಗಳನ್ನು ಸೇವಿಸುವುದರ ನಾಲ್ಕು ಲಾಭಗಳ ಕುರಿತು ಅವರು ಮಾಹಿತಿ ಪೂರ್ಣ ಪೋಸ್ಟ್ ಒಂದನ್ನು ಅಪ್‍ಲೋಡ್ ಮಾಡಿದ್ದಾರೆ. ಚಿಯಾ ಬೀಜಗಳು ಗಾತ್ರದಲ್ಲಿ ಚಿಕ್ಕದಾಗಿರಬಹುದು. ಆದರೆ ನಂಬಲಾಗದಷ್ಟು ಅತ್ಯಧಿಕ ಪೋಷಕಾಂಶಗಳನ್ನು ಹೊಂದಿವೆ. ಚಿಯಾ ಬೀಜಗಳಲ್ಲಿ ಇರುವ ಆ್ಯಂಟಿಆ್ಯಕ್ಸಿಡೆಂಟ್‍ಗಳು, ಮಿನರಲ್‍ಗಳು, ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು, ಹೃದಯದ ಆರೋಗ್ಯವನ್ನು ಉತ್ತೇಜಿಸಬಹುದು, ಸದೃಢ ಮೂಳೆಗಳನ್ನು ಬೆಂಬಲಿಸುತ್ತವೆ ಮತ್ತು ರಕ್ತ ಸಕ್ಕರೆ ಮಟ್ಟದ ನಿರ್ವಹಣೆಯನ್ನು ಸುಧಾರಿಸುತ್ತವೆ” ಎನ್ನುತ್ತಾರೆ ಶಿಲ್ಪಾ ಶೆಟ್ಟಿ.

ಇದನ್ನೂ ಓದಿ: Health Tips: ನಿಮ್ಮ ಹಲ್ಲು, ವಸಡಿನ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳ ಸೇವಿಸಿ ನೋಡಿ

ಚಿಯಾ ಬೀಜಗಳನ್ನು ಯಾವ ರೀತಿ ಸೇವಿಸಬೇಕು ಎಂಬುವುದರ ಬಗ್ಗೆ ಕೂಡ ಶಿಲ್ಪಾ ಮಾಹಿತಿ ಹಂಚಿಕೊಂಡಿದ್ದಾರೆ. “ನಿವು ಚಿಯಾ ಬೀಜಗಳ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದು ಬಯಸಿದರೆ, ಅವುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರ ಬಗ್ಗೆ ಪರಿಗಣಿಸಿ. ಅವುಗಳನ್ನು ಸ್ಮೂದಿಗಳು ಓಟ್‍ಮೀಲ್, ಮೊಸರು, ಬೇಕ್ ಮಾಡಿದ ಪದಾರ್ಥಗಳು ಮತ್ತಿತರ ಆಹಾರಗಳ ಜೊತೆ ಸೇರಿಸಿಕೊಳ್ಳಬಹುದು” ಎಂದು ಶಿಲ್ಪಾ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
Published by:vanithasanjevani vanithasanjevani
First published: