ಬಾಲಿವುಡ್(Bollywood) ತಾರೆ ಶಿಲ್ಪಾ ಶೆಟ್ಟಿ(Shilpa Shetty) ಸುಂದರಿ ಮಾತ್ರವಲ್ಲ, ತಮ್ಮ ಫಿಟ್ನೆಸ್ನಿಂದಲೂ(Fitness) ಹೆಸರುವಾಸಿ. ದಶಕಗಳಿಂದಲೂ ಒಂದೇ ರೀತಿಯ ಸುಂದರ ಮೈಕಟ್ಟನ್ನು ಕಾಪಾಡಿಕೊಂಡು ಬಂದಿರುವ ಅವರು, ಅದಕ್ಕಾಗಿ ಕ್ರಮಬದ್ಧವಾದ ವ್ಯಾಯಾಮ ಮತ್ತು ಆಹಾರಕ್ರಮವನ್ನು(Food Style) ಅನುಸರಿಸುತ್ತಾರೆ ಕೂಡ. ಇನ್ಸ್ಟಾಗ್ರಾಂನಲ್ಲಿ(Instagram) ಫಿಟ್ನೆಸ್ ಕುರಿತು ಅತೀ ಹೆಚ್ಚು ಪ್ರಭಾವ ಬೀರುವ ಸೆಲೆಬ್ರಿಟಿ ಎಂದರೆ ಅದು ಶಿಲ್ಪಾ ಶೆಟ್ಟಿ. ಯೋಗ, ವ್ಯಾಯಾಮ ಮತ್ತು ಕಾರ್ಡಿಯೋಗಳ ಮೂಲಕ ತಮ್ಮ ದೇಹವನ್ನು ಫಿಟ್ ಆಗಿಡಲು ಕಠಿಣ ಶ್ರಮ ಪಡುತ್ತಾರೆ ಈ ನಟಿ. ಕಠಿಣ ವ್ಯಾಯಾಮ ಮಾತ್ರವಲ್ಲ, ಫಿಟ್ ಮತ್ತು ಆರೋಗ್ಯವಂತೆಯಾಗಿ ಇರಲು ಶಿಲ್ಪಾ ಆಪೇಕ್ಷಣೀಯ ಆಹಾರಕ್ರಮವನ್ನು ಕೂಡ ಅನುಸರಿಸುತ್ತಾರೆ. ತಾನು ನಿತ್ಯದ ಆಹಾರಕ್ರಮದಲ್ಲಿ ಅಳವಡಿಸಿಕೊಂಡಿರುವ ಗ್ಲುಟೆನ್ ಮುಕ್ತ, ವೀಗನ್(Vegan) ಮತ್ತು ಸಕ್ಕರೆ ರಹಿತ ತಿನಿಸುಗಳ ಮಾಹಿತಿ ಹಾಗೂ ಫೋಟೋಗಳನ್ನು ಯಾವಾಗಲೂ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಶಿಲ್ಪಾ ಅವರು, ತಾನು ಪ್ರತೀ ಊಟದಲ್ಲಿ – ಆಹಾರವನ್ನು ಚೆನ್ನಾಗಿ ಅಗಿಯುವ ಮೂಲಕ ಹೇಗೆ ಕಡಿಮೆ ಕ್ಯಾಲೋರಿಗಳನ್ನು ಸೇವಿಸುತ್ತೇನೆ ಎಂಬ ಕುರಿತು ಒಂದು ಪೋಸ್ಟ್ ಹಾಕಿದ್ದರು.
ಆರೋಗ್ಯಕರ ಆಹಾರವನ್ನು ಸೇವಿಸುವುದು ಎಂದರೆ, ಕೇವಲ ಏನ್ನನ್ನು ಮತ್ತು ಯಾವಾಗ ತಿನ್ನುತ್ತೇವೆ ಎಂಬುದಷ್ಟೇ ಅಲ್ಲ, ನೀವು ಆಹಾರವನ್ನು ಹೇಗೆ ಅಗಿಯುತ್ತೀರಿ ಮತ್ತು ಸರಿಯಾಗಿ ಅಗಿಯುತ್ತಿದ್ದೀರಾ ಎಂಬುವುದು ಕೂಡ ಎಂದು ಆ ಪೋಸ್ಟ್ಗೆ ಅಡಿಬರಹವನ್ನು ನೀಡಿದ್ದರು. ಆಹಾರವನ್ನು ಸರಿಯಾಗಿ ಅಗಿಯುವುದರಿಂದ ವ್ಯಕ್ತಿ ಶೇಕಡಾ 12 ರಷ್ಟು ಕಡಿಮೆ ಕ್ಯಾಲೋರಿ ತಿನ್ನಲು ಸಹಾಯ ಆಗುತ್ತದೆ ಎಂದು ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್ ಹೇಳಿದೆ ಎಂದು ಶಿಲ್ಪಾ ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದರು.
“ಸರಿಯಾಗಿ ತಿನ್ನುವುದು ಎಂದರೆ, ಆರೋಗ್ಯಕರ ಆಹಾರವನ್ನು ತಿನ್ನುವುದು ಅಥವಾ ಆಹಾರವನ್ನು ಮಿತವಾಗಿ ತಿನ್ನುವುದು ಅಲ್ಲ. ಅದು ಎಲ್ಲಿ, ಯಾವಾಗ ಮತ್ತು ಹೇಗೆ ತಿನ್ನುತ್ತೀರಿ ಎಂಬುದನ್ನು ಕೂಡ ಅವಲಂಬಿಸಿದೆ. ನೀವು ಪ್ರತಿ ತುತ್ತನ್ನು ಹೆಚ್ಚು ತಾಳ್ಮೆಯಿಂದ ತಿಂದಲ್ಲಿ, ಜೀರ್ಣ ಮಾಡಿಕೊಳ್ಳುವುದು ಸುಲಭ. ಮೇಲಾಗಿ, ಆಹಾರವನ್ನು ಚೆನ್ನಾಗಿ ಅಗಿಯುವುದರಿಂದ ಹೊಟ್ಟೆ ಮತ್ತು ಕರುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ” ಎಂದು ಆಕೆ ತನ್ನ ಪೋಸ್ಟ್ನಲ್ಲಿ ಬರೆದಿದ್ದಾರೆ.
ಕೃತಜ್ಞತೆಯಿಂದ ಆಹಾರ ತಿನ್ನುವುದರ ಬಗ್ಗೆ ಕೂಡ ತಮ್ಮ ಸುಂದರ ಚಿಂತನೆಯನ್ನು ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ. “ನೀವು ತಿನ್ನುವ ಆಹಾರವನ್ನು ಕೃತಜ್ಞತೆಯಿಂದ ಸವಿಯಿರಿ, ಮತ್ತು ನಿಮ್ಮ ದೇಹ ನಿಮಗೆ ಧನ್ಯವಾದ ಹೇಳುತ್ತದೆ. ಅಷ್ಟಕ್ಕೂ, ನೀವು ನಿಮ್ಮ ದೇಹಕ್ಕೆ ನೀಡುವ ಆಹಾರ ಮತ್ತು ಅದನ್ನು ಮಾಡುವ ವಿಧಾನ ಹೊರಗೆ ಪ್ರತಿಫಲಿಸುತ್ತದೆ. ನೀವು ಏನು (ಮತ್ತು ಹೇಗೆ) ತಿನ್ನುತ್ತೀರಿ” ಎಂದು ಶೀರ್ಷಿಕೆಯಲ್ಲಿ ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ಸೂರ್ಯನ ಬಿಸಿಲಿನಲ್ಲಿದೆ ನೈಸರ್ಗಿಕ ವಿಟಮಿನ್ ಡಿ- ಇದರಲ್ಲಿ ಎಷ್ಟು ಆರೋಗ್ಯ ಪ್ರಯೋಜನವಿದೆ ನೋಡಿ
ಕಡಿಮೆ ಕ್ಯಾಲೋರಿಗಳನ್ನು ಸೇವಿಸುವ ಬಗ್ಗೆ ನಾವೆಲ್ಲರೂ ಖಂಡಿತವಾಗಿಯೂ ಶಿಲ್ಪಾ ಅವರಿಂದ ಟಿಪ್ಪಣಿಗಳನ್ನು ಪಡೆದುಕೊಳ್ಳಬಹುದು..! ಸರಿಯಾಗಿ ಜಗಿಯಿರಿ ಮತ್ತು ಅದರಿಂದಾಗುವ ಜಾದೂವನ್ನು ನೋಡಿರಿ.
2021ರ ಜುಲೈನಲ್ಲಿ ಬಿಡುಗಡೆ ಆದ ಹಂಗಾಮ 2ನಲ್ಲಿ ಶಿಲ್ಪಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅಭಿಮನ್ಯು ದಸ್ಸಾನಿ ಜೊತೆಗಿನ ‘ನಿಕಮ್ಮಾ’ ಮತ್ತು ‘ರಾಮ್ಚಾರಿ 2.0’ ಅವರ ಮುಂದಿನ ಚಿತ್ರಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ