ಭೂಮಿಯ (Earth) ಮೇಲೆ ಸಾಕಷ್ಟು ಔಷಧೀಯ (Medicinal) ಗಿಡಗಳಿವೆ (Trees). ದೈಹಿಕ ಮತ್ತು ಮಾನಸಿಕ ಸೇರಿದಂತೆ ಲೈಂಗಿಕ ಸಮಸ್ಯೆಗಳಿಗೂ (Sexual Problems) ಗಿಡಮಲಿಕೆಗಳಿಂದ ತಯಾರಿಸಿದ ಔಷಧ ನೀಡುವ ರೂಢಿ ಇದೆ. ಅಂತಹ ಸಾವಿರಾರು ಸಸ್ಯಗಳು ಮತ್ತು ಗಿಡಮೂಲಿಕೆಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ. ಮತ್ತು ಅವುಗಳಲ್ಲಿನ ಔಷಧೀಯ ಗುಣಗಳಿಂದಾಗಿಯೇ ಅವುಗಳನ್ನು ವಿವಿಧ ಔಷಧಿಗಳು ಮತ್ತು ಪರಿಹಾರ ಕ್ರಮಗಳಲ್ಲಿ ಬಳಕೆ ಮಾಡುತ್ತಾರೆ. ಆಯುರ್ವೇದದ ಪ್ರಕಾರ, ಕೆಲವು ಗಿಡಮೂಲಿಕೆಗಳು ದೇಹದ ಪ್ರಮುಖ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿವೆ. ಗಿಡಮೂಲಿಕೆಗಳ ವಿಷಯಕ್ಕೆ ಬಂದರೆ, ಹೆಚ್ಚಿನ ಜನರು ತಾವು ದಿನವೂ ಬಳಸುವ ಪದಾರ್ಥಗಳ ಬಗ್ಗೆ ಹೇಳುತ್ತಾರೆ.
ಶತಾವರಿ ಶಕ್ತಿಶಾಲಿ ಗಿಡಮೂಲಿಕೆ
ಮತ್ತು ತಮಗೆ ಗೊತ್ತಿರುವ ಬೇವು, ತುಳಸಿ, ಪುದೀನ ಮತ್ತು ಅರಿಶಿನದ ಬಗ್ಗೆ ಹೇಳುತ್ತಾರೆ. ಆದರೆ ಔಷಧೀಯ ಗುಣಗಳ ನಿಧಿ ಮತ್ತು ಅನೇಕ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿರುವ 'ಶತಾವರಿ' ಎಂಬ ಹೆಸರಿನ ಶಕ್ತಿಶಾಲಿ ಗಿಡಮೂಲಿಕೆ ಇದೆ.
ಆಯುರ್ವೇದ ವೈದ್ಯೆ ದೀಕ್ಷಾ ಭಾವಸರ್ ಪ್ರಕಾರ, ಶತಾವರಿ ಎಂದರೆ ಇದು 100 ಬೇರುಗಳನ್ನು ಹೊಂದಿರುವ ಗಿಡಮೂಲಿಕೆ ಎಂದರ್ಥ. ಶತಾವರಿಯ ಅತ್ಯಂತ ಶಕ್ತಿಶಾಲಿ ಭಾಗವೆಂದರೆ ಅದರ ಬೇರುಗಳು. ಶತಾವರಿಯ ಇನ್ನೊಂದು ಅರ್ಥ 'ನೂರು ಗಂಡಂದಿರನ್ನು ಹೊಂದಿರುವವಳು' ಎಂದರ್ಥ. ಇದು ವಿಶೇಷವಾಗಿ ಫಲವತ್ತತೆಯಲ್ಲಿ ಪರಿಣಾಮಕಾರಿ ಆಗಿದೆ.
ಇದನ್ನೂ ಓದಿ: ಮಳೆಗಾಲದಲ್ಲಿ ವೇಟ್ ಲಾಸ್ ಹಾಗೂ ಡಯಟ್ ಮುಂದುವರೆಸಲು ಏನು ಮಾಡಬೇಕು ಗೊತ್ತಾ?
ವೀರ್ಯದ ಗುಣಮಟ್ಟ ಹೆಚ್ಚಿಸಲು ಶತಾವರಿ ಮೂಲಿಕೆ
ಋತುಬಂಧ, ಹಾರ್ಮೋನುಗಳು, ಫಲವತ್ತತೆ ಮುಂತಾದ ಮಹಿಳೆಯರ ಸಮಸ್ಯೆಗಳಿಗೆ ಈ ಮೂಲಿಕೆ ಖಚಿತ ಚಿಕಿತ್ಸೆಯಾಗಿದೆ ಎಂದು ನಂಬಲಾಗಿದೆ. ಶತಾವರಿ ಗಿಡಮೂಲಿಕೆಯು ಪುರುಷರು ಮತ್ತು ಮಹಿಳೆಯರಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಮೂಲಿಕೆಯು ವೀರ್ಯದ ಗುಣಮಟ್ಟದಿಂದ ಫಲವತ್ತತೆ ಹೆಚ್ಚಿಸುವವರೆಗೆ ಪುರುಷರಲ್ಲಿ ಅನೇಕ ಲೈಂಗಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ.
ಪುರುಷರ ಅನೇಕ ಲೈಂಗಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ ಶತಾವರಿ
ವೈದ್ಯರ ಪ್ರಕಾರ, ಶತಾವರಿ ಅದ್ಭುತ ಗಿಡಮೂಲಿಕೆಗಳಲ್ಲಿ ಒಂದಾಗಿದೆ. ಇದು ಪುರುಷರಲ್ಲಿ ವೀರ್ಯದ ಗುಣಮಟ್ಟ ಸುಧಾರಿಸುತ್ತದೆ. ಮತ್ತು ವೀರ್ಯದ ಸಂಖ್ಯೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಇದು ಪುರುಷರು ಮತ್ತು ಮಹಿಳೆಯರಲ್ಲಿ ಫಲವತ್ತತೆ ಸುಧಾರಿಸುತ್ತದೆ.
PMS ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಶತಾವರಿ
ಶತಾವರಿ ಗಿಡ ಮೂಲಿಕೆ PMS ರೋಗ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ರಕ್ತದ ಹರಿವು ನಿಯಂತ್ರಿಸುತ್ತದೆ. ಫಲವತ್ತತೆ ಸುಧಾರಿಸುತ್ತದೆ ಮತ್ತು ಎದೆ ಹಾಲು ಚೆನ್ನಾಗಿರಲು ಉತ್ತೇಜಿಸುತ್ತದೆ.
ಮನಸ್ಸನ್ನು ಶಾಂತವಾಗಿರಿಸಲು ಶತಾವರಿ ಮೂಲಿಕೆ
ಶತಾವರಿ ರುಚಿಯಲ್ಲಿ ಸಿಹಿ ಮತ್ತು ಕಹಿಯಾಗಿ ಇರುತ್ತದೆ. ಇದಲ್ಲದೆ ಇದು ಪ್ರಕೃತಿಯಲ್ಲಿ ತಂಪಾಗಿರುತ್ತದೆ ಮತ್ತು ದೇಹ ಮತ್ತು ಮನಸ್ಸಿನಲ್ಲಿ ವಾತ ಮತ್ತು ಪಿತ್ತ ಸಮತೋಲನಗೊಳಿಸುತ್ತದೆ. ಇದು ದೇಹ ಮತ್ತು ಮನಸ್ಸಿನ ಮೇಲೆ ತಂಪಾದ ಪರಿಣಾಮ ಬೀರುತ್ತದೆ.
ಆಯುರ್ವೇದದಲ್ಲಿ ಶತಾವರಿ ಮೂಲಿಕೆಯ ಪ್ರಯೋಜನಗಳು
ಸ್ನಾಯುಗಳನ್ನು ಬಲಿಷ್ಠಗೊಳಿಸುತ್ತದೆ ಶತಾವರಿ ಮೂಲಿಕೆ
ಈ ಮೂಲಿಕೆಯು ಸ್ನಾಯುವಿನ ದ್ರವ್ಯರಾಶಿ ಸುಧಾರಿಸಲು ಸಹಾಯ ಮಾಡುತ್ತದೆ. ಮತ್ತು ಇದು ಪ್ರಕೃತಿಯಲ್ಲಿ ತಂಪಾಗಿರುವ ಕಾರಣ, ಇದು ವ್ಯಾಯಾಮ ಮಾಡುವವರಿಗೆ ಹೆಚ್ಚು ಪ್ರಯೋಜನಕಾರಿ. ಇದು ಆಯಾಸ ತೆಗೆದು ಹಾಕಲು ಮತ್ತು ಶಕ್ತಿ ಹೆಚ್ಚಿಸುತ್ತದೆ.
ಮನಸ್ಸನ್ನು ಚುರುಕಾಗಿಸುತ್ತದೆ
ಇದು ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಪ್ರಯೋಜನ ನೀಡುತ್ತದೆ. ಕೋಪ ಮತ್ತು ಕಿರಿಕಿರಿ ಶಾಂತಗೊಳಿಸುತ್ತದೆ. ಒತ್ತಡ ಕಡಿಮೆ ಮಾಡುತ್ತದೆ. ಮತ್ತು ಪುರುಷರು ಮತ್ತು ಮಹಿಳೆಯರಿಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಎಣ್ಣೆಯುಕ್ತ ಮುಖದಲ್ಲಿ ಕಾಣಿಸುವ ಬಿಳಿ ಮೊಡವೆ ತೆಗೆಯಲು ಸುಲಭ ಟಿಪ್ಸ್, ಟ್ರೈ ಮಾಡಿ
ಶತಾವರಿ ಬಳಸುವುದು ಹೇಗೆ?
ಶತಾವರಿಯು ಉಬ್ಬುವುದು, ಅಧಿಕ ರಕ್ತಸ್ರಾವ ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಒತ್ತಡ ಮತ್ತು ಆತಂಕ ನಿವಾರಿಸುತ್ತದೆ. ಶತಾವರಿ ಹಾಲಿನೊಂದಿಗೆ ಸೇವಿಸುವುದು ಉತ್ತಮ ಮಾರ್ಗ. ಮಲಗುವ ಮೊದಲು ಬೆಚ್ಚಗಿನ ಹಾಲಿನೊಂದಿಗೆ ಅರ್ಧ ಟೀ ಚಮಚ ಸೇವನೆ ಮಾಡುವುದು ಪ್ರಯೋಜನಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ