• Home
 • »
 • News
 • »
 • lifestyle
 • »
 • Sharad Purnima: ಎಲ್ಲ ಹುಣ್ಣಿಮೆಗಳಲ್ಲಿ ಅತ್ಯಂತ ಮಂಗಳಕರ ಶರದ್ ಪೂರ್ಣಿಮೆ, ಈ ದಿನದ ಖೀರ್ ಕಾಯಿಲೆಗೆ ಪರಿಹಾರ ನೀಡುತ್ತದೆ!

Sharad Purnima: ಎಲ್ಲ ಹುಣ್ಣಿಮೆಗಳಲ್ಲಿ ಅತ್ಯಂತ ಮಂಗಳಕರ ಶರದ್ ಪೂರ್ಣಿಮೆ, ಈ ದಿನದ ಖೀರ್ ಕಾಯಿಲೆಗೆ ಪರಿಹಾರ ನೀಡುತ್ತದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶರದ್ ಪೂರ್ಣಿಮೆಯ ಖೀರ್ ನಲ್ಲಿ ಚಂದ್ರನು ಅಮೃತವನ್ನು ಕರಗಿಸುತ್ತಾನೆ. ಹಾಗೂ ಅನೇಕ ರೋಗಗಳನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಪುರಾತನವಾಗಿದೆ. ಈಗ ಈ ವಿಷಯ ಆಯುರ್ವೇದದಲ್ಲೂ ಸಾಬೀತಾಗಿದೆ. ಅನೇಕ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

 • Share this:

  ವರ್ಷವಿಡೀ ಬರುವ ಹುಣ್ಣಿಮೆಗಳಲ್ಲಿ ಶರದ್ ಪೂರ್ಣಿಮೆ (Sharad Purnima) ಬಹಳ ವಿಶೇಷ ಮಹತ್ವ (Importance) ಪಡೆದಿದೆ. ಈ ದಿನವೇ ಖೀರ್ (Kheer) ಮಾಡಲಾಗುತ್ತದೆ. ಅಲ್ಲದೇ ಈ ಹುಣ್ಣಿಮೆಯನ್ನು ಅತ್ಯಂತ ಸಮೃದ್ಧ (Prosperous) ಮತ್ತು ಮಂಗಳಕರ ಎಂದು ನಂಬಲಾಗಿದೆ. ಈ ದಿನ ಮಾಡಿದ ಖೀರ್ ಅನ್ನು ಮನೆಯ (Home) ಹೊರಗೆ, ಟೆರೇಸ್ ಅಥವಾ ಗ್ಯಾಲರಿಯಲ್ಲಿ ಇಡೀ ರಾತ್ರಿ ಇಡಲಾಗುತ್ತದೆ. ಇದರ ಪ್ರಕಾರ ಖೀರ್ ಪಾತ್ರೆಯಲ್ಲಿ ನೇರವಾಗಿ ಚಂದ್ರನ ಕಿರಣಗಳು ಬೀಳುತ್ತವೆ. ಈ ಪಾತ್ರೆಯನ್ನು ತಟ್ಟೆಯ ಬದಲಿಗೆ ತೆಳುವಾದ ಬಟ್ಟೆಯಿಂದ ಮುಚ್ಚಲಾಗುತ್ತದೆ. ಹಾಗಾಗಿ ಚಂದ್ರನ ಕಿರಣಗಳ ಪ್ರಭಾವವು ಹಾಲು ಮತ್ತು ಅನ್ನದಲ್ಲಿರುತ್ತದೆ.


  ಶರದ್ ಪೂರ್ಣಿಮೆಯಂದು ಮಾಡುವ ಖೀರ್


  ಹೀಗೆ ಮಾಡುವಾಗ ಶರದ್ ಪೂರ್ಣಿಮೆಯ ಖೀರ್ ನಲ್ಲಿ ಚಂದ್ರನು ಅಮೃತವನ್ನು ಕರಗಿಸುತ್ತಾನೆ. ಹಾಗೂ ಅನೇಕ ರೋಗಗಳನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಪುರಾತನವಾಗಿದೆ. ಈಗ ಈ ವಿಷಯ ಆಯುರ್ವೇದದಲ್ಲೂ ಸಾಬೀತಾಗಿದೆ. ಆಯುರ್ವೇದ ತಜ್ಞ ವೈದ್ಯ ಮಿಹಿರ್ ಖಾತ್ರಿ ಅವರು ಹೇಳುವ ಪ್ರಕಾರ, ಖೀರ್‌ನಿಂದ ಅನೇಕ ಕಾಯಿಲೆಗಳಿಗೆ ಪರಿಹಾರ ಪಡೆಯುವ ವಿಷಯದಲ್ಲಿ ಸತ್ಯವಿದೆ ಎಂದು ಹೇಳ್ತಾರೆ.


  ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗೆ ಪರಿಹಾರ


  ಶರದ್ ಪೂರ್ಣಿಮೆಯ ಖೀರ್‌ನಲ್ಲಿ ಚಂದ್ರನ ಬೆಳಕು ನಿಜವಾಗಿಯೂ ಅಂತಹ ಅಂಶಗಳನ್ನು ಕರಗಿಸುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ ಎಂದು ತಜ್ಞರು ಹೇಳ್ತಾರೆ. ಇಷ್ಟೇ ಅಲ್ಲದೇ ಚಂದ್ರನ ಬೆಳಕಿಗೆ ಸಂಬಂಧಿಸಿದ ಇತರ ಕೆಲವು ಪರಿಹಾರಗಳಿವೆ. ಅದನ್ನು ಪ್ರಯತ್ನಿಸುವ ಮೂಲಕ ನೀವು ವಿವಿಧ ರೀತಿಯ ರೋಗಗಳನ್ನು ತೊಡೆದು ಹಾಕಬಹುದು ಅಂತಾರೆ.


  ಇದನ್ನೂ ಓದಿ: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ


  ವೈದ್ಯ ಮಿಹಿರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ ನಲ್ಲಿ ಇದೇ ರೀತಿಯ ಮಾಹಿತಿ ಶೇರ್ ಮಾಡಿದ್ದಾರೆ. ಇದರಲ್ಲಿ ಶರದ್ ಪೂರ್ಣಿಮೆಯ ಖೀರ್ ಜೊತೆಗೆ ಬೇರೆ ಯಾವ ಪ್ರಯೋಜನ ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.


  ಶರದ್ ಪೂರ್ಣಿಮಾ ಖೀರ್ ನ ಪ್ರಯೋಜನಗಳು


  ಶರದ್ ಪೂರ್ಣಿಮೆಯನ್ನು ಅತ್ಯಂತ ವಿಶೇಷ ಮತ್ತು ಲಕ್ಷ್ಮೀ ದೇವಿಯನ್ನು ಮೆಚ್ಚಿಸಲಾಗುತ್ತದೆ ಎಂದು ನಂಬಲಾಗಿದೆ. ಲಕ್ಷ್ಮೀ ದೇವಿಯ ಪೂಜಿಸಿ ಆಶೀರ್ವಾದ ಪಡೆಯಲಾಗುತ್ತದೆ. ಹಾಲು, ಅಕ್ಕಿ ಮತ್ತು ಸಕ್ಕರೆ ಬೆರೆಸಿ ಖೀರ್ ತಯಾರಿಸಲಾಗುತ್ತದೆ. ಈ ಖೀರ್ ಅನ್ನು ರಾತ್ರಿಯಿಡೀ ಹೊರಗೆ ಚಂದ್ರನ ಬೆಳಕಿನಲ್ಲಿ ಇಡಲಾಗುತ್ತದೆ. ಚಂದ್ರನ ಕಿರಣಗಳು ಈ ದಿನ ಎಷ್ಟು ತಂಪಾಗಿರುತ್ತವೆ ಎಂದರೆ ಅದರ ಪರಿಣಾಮವು ಖೀರ್ ಪರಿಣಾಮವನ್ನು ಸಹ ತಂಪಾಗಿಸುತ್ತದೆ. ಈ ಖೀರ್ ಸೇವನೆ ಮಾಡಿದಾಗ ಪಿತ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ.


  ಈ ಖೀರ್ ಆಮ್ಲೀಯತೆ, ಚರ್ಮದ ದದ್ದುಗಳು, ಹೊಟ್ಟೆಯಲ್ಲಿ ಉರಿ, ಉರ್ಟೇರಿಯಾದಂತಹ ಕಾಯಿಲೆಗಳಿಂದ ಪರಿಹಾರ ನೀಡುತ್ತದೆ.


  ಚರ್ಮ ರೋಗ ಹೊಂದಿರುವ


  ಯಾವುದೇ ರೀತಿಯ ಚರ್ಮದ ಕಾಯಿಲೆಯಿಂದ ಬಳಲುತ್ತಿರುವ ಜನರು ಶರದ್ ಪೂರ್ಣಿಮೆಯ ರಾತ್ರಿ ಚಂದ್ರನ ಬೆಳಕಿನಲ್ಲಿ ಕುಳಿತುಕೊಳ್ಳಬೇಕು. ವೈದ್ಯ ಮಿಹಿರ್ ಖಾತ್ರಿ ಅವರ ಪೋಸ್ಟ್ ಪ್ರಕಾರ, ಶರದ್ ಪೂರ್ಣಿಮೆಯ ಚಂದ್ರನ ಕಿರಣಗಳು ಚರ್ಮ ರೋಗಗಳನ್ನು ಗುಣಪಡಿಸುವ ಮೂಲಕ ತ್ವರಿತ ಪರಿಹಾರ ನೀಡುತ್ತದೆ ಎಂದಿದ್ದಾರೆ.


  ಕಣ್ಣಿನ ಸೋಂಕು


  ನಿಮ್ಮ ಕಣ್ಣಿನಲ್ಲಿ ಆಗಾಗ್ಗೆ, ಆಗಾಗ್ಗೆ ಸೋಂಕು ಇದ್ದರೆ, ಶರದ್ ಪೂರ್ಣಿಮಾದಂದು ಸಹ ಚಿಕಿತ್ಸೆ ಮಾಡಬಹುದು. ಕಣ್ಣಿನ ಸೋಂಕು ಇದ್ದರೆ ಶರದ್ ಪೂರ್ಣಿಮೆಯ ಚಂದ್ರನನ್ನು ನೋಡಿ ಎಂದು ವೈದ್ಯ ಮಿಹಿರ್ ಖಾತ್ರಿ ಸಲಹೆ ನೀಡುತ್ತಾರೆ.


  ನೀವು ಚಂದ್ರನನ್ನು ಐದರಿಂದ ಹತ್ತು ನಿಮಿಷಗಳ ಕಾಲ ನಿರಂತರವಾಗಿ ನೋಡಬೇಕು. ಶರದ್ ಪೂರ್ಣಿಮೆಯ ಚಂದ್ರನನ್ನು ನಿರಂತರವಾಗಿ ಐದು ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ನೋಡುತ್ತಿರಿ. ಚಂದ್ರನ ಕಿರಣಗಳು ಕಣ್ಣಿಗೆ ತಂಪು ನೀಡುತ್ತಿದ್ದು ರೋಗ ಬಾಧೆ ಕಡಿಮೆ ಆಗುತ್ತವೆ ಎನ್ನುತ್ತಾರೆ.


  ಶರದ್ ಪೂರ್ಣಿಮೆಯ ಚಂದ್ರನ ಬೆಳಕಿನಲ್ಲಿ ಸಕ್ಕರೆ ಮಿಠಾಯಿ ಇಟ್ಟು ಸೇವಿಸುವುದು ಪಿತ್ತ ಕಡಿಮೆ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ. ಶರದ್ ಪೂರ್ಣಿಮೆಯಲ್ಲಿ ಚಂದ್ರನ ಬೆಳಕನ್ನು ಹೀರಿಕೊಳ್ಳುವ ಮಿಶ್ರಿ ಪಿತ್ತಕ್ಕೆ ಸಂಬಂಧಿಸಿದ ರೋಗಗಳಿಗೆ ಔಷಧವಾಗಿ ಕಾರ್ಯ ನಿರ್ವಹಿಸುತ್ತದೆ.


  ಇದನ್ನೂ ಓದಿ: ಇದ್ಯಾವುದು ಬಬಲ್ ಚಹಾ? ಟ್ರೆಂಡಿಂಗ್‌ನಲ್ಲಿರುವ ಈ ಪಾನೀಯ ಆರೋಗ್ಯಕ್ಕೆ ಎಷ್ಟು ಉತ್ತಮ?


  ಯುಟಿಐನಿಂದ ಪರಿಹಾರ


  ಯುಟಿಐ ಅಂದರೆ ಮೂತ್ರನಾಳದ ಸೋಂಕಿನಲ್ಲಿ ಔಷಧೀಯ ಮಿಶ್ರಿ ಮತ್ತು ಕೊತ್ತಂಬರಿ ಸೊಪ್ಪನ್ನು ಬೆರೆಸಿ ಸೇವಿಸಿದರೆ ಪರಿಹಾರ ಸಿಗುತ್ತದೆ. ಇದು ಎದೆಯಲ್ಲಿ ಉರಿ, ಹೆದರಿಕೆ, ವಾಂತಿ ಪರಿಹಾರ ಸಿಗುತ್ತದೆ.

  Published by:renukadariyannavar
  First published: