ಮಹಿಳೆಯರು ಮಾದಕ ಭಂಗಿಯಲ್ಲಿ ಸೆಲ್ಫಿ ಕ್ಲಿಕ್ಕಿಸಲು ಕೂಡ ಕಾರಣವಿದೆಯಂತೆ!

news18
Updated:August 28, 2018, 12:28 PM IST
ಮಹಿಳೆಯರು ಮಾದಕ ಭಂಗಿಯಲ್ಲಿ ಸೆಲ್ಫಿ ಕ್ಲಿಕ್ಕಿಸಲು ಕೂಡ ಕಾರಣವಿದೆಯಂತೆ!
(Photo: Image for representation/ Reuters)
news18
Updated: August 28, 2018, 12:28 PM IST
-ನ್ಯೂಸ್ 18 ಕನ್ನಡ

ಇದು ಸೆಲ್ಫಿ ಯುಗ. ವಿವಿಧ ಭಂಗಿಗಳಲ್ಲಿ ಯುವಕ-ಯುವತಿಯರಲ್ಲದೆ, ಪುಟ್ಟ ಮಕ್ಕಳಿಂದ- ಹಿರಿಯರ ತನಕ ಎಲ್ಲರಿಗೂ ಸೆಲ್ಫಿ ಕ್ರೇಜ್​ ಇದೆ. ವಿಶ್ವದಾದ್ಯಂತ ವ್ಯಾಪಕವಾಗಿ ಆವರಿಸಿರುವ ಸೆಲ್ಫಿ​​ ಬಗ್ಗೆ UNSW ಸಂಶೋಧಕರು ಅಧ್ಯಯನವೊಂದು ನಡೆಸಿದೆ. ಈ ವೇಳೆ ಮಹಿಳೆಯರು ಸೆಕ್ಸಿ ಸೆಲ್ಫಿ ಯಾಕೆ ತೆಗೆಯುತ್ತಾರೆಂಬ ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ. ಲಿಂಗ ತಾರತಮ್ಯದ ದಬ್ಬಾಳಿಕೆ, ಆರ್ಥಿಕ ಅಸಾಮಾನತೆಯ ಸಮಾಜದಲ್ಲಿ ತಮ್ಮನ್ನು ಇತರರು ಗುರುತಿಸಿಕೊಳ್ಳುವಂತೆ ಮಾಡಲು ಹೆಚ್ಚಿನ ಮಹಿಳೆಯರು ಸೆಕ್ಸಿ ಸೆಲ್ಫಿ ಕ್ಲಿಕ್​ನ ಮೊರೆ ಹೋಗುತ್ತಾರೆ ಎಂದು ಅಧ್ಯಯನ ತಂಡ ಕಂಡು ಕೊಂಡಿದ್ದಾರೆ.

ಸಮಾಜದಲ್ಲಿನ ತಾರಮತ್ಯದ ನೋವನ್ನು ಹೋಗಲಾಡಿಸಲು ಸುರ ಸುಂದರಾಂಗಿಯರಾಗಿ ಕ್ಯಾಮೆರಾ ಕಣ್ಣಿಗೆ ಕಣ್ಣಿಟ್ಟು ಕ್ಲಿಕ್​ ಮಾಡುವುದರಿಂದ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುತ್ತಾರೆ. ಈ ಅಧ್ಯಯನಕ್ಕಾಗಿ 113 ದೇಶಗಳ ಇನ್​ಸ್ಟಾಗ್ರಾಂ ಮತ್ತು ಟ್ವಿಟ್ಟರ್​ನಲ್ಲಿ ಅಪ್​ಲೋಡ್​ ಮಾಡಲಾಗಿರುವ 68 ಸಾವಿರ ಮಾದಕ ಭಂಗಿಗಳ ಸೆಲ್ಫಿ ಫೋಟೋಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಫೋಟೊಗಳನ್ನು ಅಪ್​ಲೋಡ್​ ಮಾಡಿರುವವರ ಅಭಿಪ್ರಾಯಗಳನ್ನು ಆಧರಿಸಿ ಈ ಅಧ್ಯಯನವನ್ನು ನಡೆಸಲಾಗಿದೆ.

ಸೆಕ್ಸಿ ಸೆಲ್ಫಿ ಕ್ಲಿಕ್​ಗೆ ಮತ್ತು ಜನರ ಆದಾಯ ಅಸಮಾನತೆಗೆ ನೇರ ಸಂಬಂಧವಿದ್ದು, ಸಾಮಾಜಿಕ ತಾಣಗಳ ಮೂಲಕ ತಮ್ಮನ್ನು ಆರ್ಥಿಕ ಬಲಿಷ್ಠರಂತೆ ತೋರ್ಪಡಿಸಲು ಸೆಲ್ಫಿ ಕ್ಲಿಕ್​ನ ಮೊರೆ ಹೋಗುತ್ತಿದ್ದಾರೆ. ಅಲ್ಲದೆ ಈ ಸೆಲ್ಫಿ ಕ್ರೇಜ್​ಗೆ ಲಿಂಗ ತಾರತಮ್ಯ ದೌರ್ಜನ್ಯ ಕಾರಣವಾಗುವುದಿಲ್ಲ ಎಂದು ಅಧ್ಯಯನ ತಂಡ ತಿಳಿಸಿದೆ. ಮಹಿಳೆಯರು ಸ್ಪರ್ಧಾತ್ಮಕ ಯುಗದಲ್ಲಿ ಹೇಗೆ ಮತ್ತು ಏಕೆ ಇತರರೊಂದಿಗೆ ಸ್ಪರ್ಧಿಸುತ್ತಿದ್ದಾರೆ ಎನ್ನುವುದರ ಬಗ್ಗೆ UNSWನ ಪರಿಸರ ವಿಜ್ಞಾನ ಅಧ್ಯಯನದ ಪ್ರಮುಖ ಲೇಖಕ ಖಂಡಿಸ್ ಬ್ಲೇಕ್ ಈ ಅಧ್ಯಯನವನ್ನು ಕೈಗೊಂಡಿದ್ದರು.

ಮಹಿಳೆಯರು ಆರ್ಥಿಕ ಅಸಮಾನತೆ ಹೊಂದಿರುವ ಸ್ಥಳಗಳಲ್ಲಿ ಸೆಕ್ಸಿ ಪೋಸ್​ಗಳನ್ನು ಕೊಟ್ಟು ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಹಾಗೆಯೇ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸೆಲ್ಫಿ ತೆಗೆಯುತ್ತಾರೆ ಎಂದು ಈ ಅಧ್ಯಯನ ತಂಡ ತಿಳಿಸಿದೆ. ಆದಾಯದ ಅಸಮಾನತೆಯಿಂದ ಜನರಲ್ಲಿ ಮೂಡುತ್ತಿರುವ ಸ್ಪರ್ಧಾತ್ಮಕ ಮನಸ್ಥಿತಿಯು ಆತಂಕ ಮೂಡಿಸುತ್ತಿದೆ. ಹಾಗೆಯೇ ತಮ್ಮನ್ನು ಇತರೆರೊಂದಿಗೆ ಗುರುತಿಸಿಕೊಳ್ಳಬೇಕೆಂಬ ಸೂಕ್ಷತೆಯು ಸಾಮಾಜಿಕ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

'ಇಂದಿನ ಸಮಾಜದಲ್ಲಿ ಮಾದಕತೆ ಕೂಡ ಸಮಾಜಿಕ ಮತ್ತು ವೈಯ್ಯುಕ್ತಿಕ ವರ್ಚಸ್ಸನ್ನು ಹೆಚ್ಚಿಸುವ ಮೂಲವಾಗಿದೆ. ಕ್ಯಾಮೆರಾ ಮುಂದೆ ಸೆಕ್ಸಿಯಾಗಿ ಪೋಸ್ ನೀಡುವ ಮಹಿಳೆಯರನ್ನು ಬೇರೆ ದೃಷ್ಟಿಯಲ್ಲಿ ನೋಡಬಾರದು. ಇದು ಅಸಮಾನತೆಯ ಸಮಾಜದಲ್ಲಿ ತಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಮಾಡುವ ಪ್ರಯತ್ನ ಎಂಬುದು ಅರಿತುಕೊಳ್ಳಬೇಕೆಂದು' ಸಂಶೋಧಕ ಬ್ಲೇಕ್ ತಿಳಿಸಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...