HOME » NEWS » Lifestyle » SEXUAL WELLNESS HOW TO FIND GIRLS ARE INTERESTED IN SEX HERE IS AN ANSWER SWPB RMD

Sexual Wellness: ಹುಡುಗಿಯರು ಅದರಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಯೋದು ಹೇಗೆ?

ಈ ಎಲ್ಲ ಕಾರಣಕ್ಕೆ ಸೆಕ್ಸ್​ ವಿಚಾರದಲ್ಲಿ ಹೆಣ್ಣುಮಕ್ಕಳು ಜಡ್ಜ್​ ಮಾಡುವುದು ತುಂಬಾನೇ ಕಷ್ಟ. ಹೆಚ್ಚು ಆಪ್ತರಾಗಿರುತ್ತಾರೆ ಎಂದ ಮಾತ್ರಕ್ಕೆ ಅವರು ಸೆಕ್ಸ್​ಗೆ ಸಿದ್ಧರಾಗಿದ್ದರೆಂದಲ್ಲ.

news18-kannada
Updated:December 3, 2020, 2:38 PM IST
Sexual Wellness: ಹುಡುಗಿಯರು ಅದರಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಯೋದು ಹೇಗೆ?
ಪ್ರಾತಿನಿಧಿಕ ಚಿತ್ರ
  • Share this:
ಪ್ರಶ್ನೆ: ನನ್ನ ವಯಸ್ಸು 35. ಇತ್ತೀಚಿನ ದಿನಗಳಲ್ಲಿ ಹುಡುಗಿಯ ಜೊತೆ ಒಂದು ರಾತ್ರಿ ಕಳೆಯೋದು ದೊಡ್ಡ ವಿಚಾರ ಅಲ್ಲವೇ ಅಲ್ಲ. ಆದರೆ, ನಮಗೆ ಇದ್ದಂತೆ ಅವರಿಗೂ ಈ ರೀತಿ ಆಸೆಗಳಿವೆ ಎಂದು ಪತ್ತೆ ಹಚ್ಚೋದು ಹೇಗೆ?  ಒಂದೊಮ್ಮೆ ನಾನು ಅವರಿಗೆ ಇದರ ಬಗ್ಗೆ ಆಸಕ್ತಿ ಇದೆಯೋ ಅಥವಾ ಇಲ್ಲವೋ ಎನ್ನುವುದು ಗೊತ್ತಿಲ್ಲದೆ ಮುಂದುವರಿದರೆ ನನ್ನ ಬಗ್ಗೆ ಮುನಿಸಿಕೊಳ್ಳಬಹುದು. ನನ್ನ ವಿರುದ್ಧ ದೂರು ಕೂಡ ದಾಖಲಾಗಬಹುದು.

ಇತ್ತೀಚಿನ ದಿನಗಳಲ್ಲಿ ಒನ್​ ನೈಟ್​ ಸ್ಟ್ಯಾಂಡ್​, ಸೆಕ್ಸ್​ಗಾಗಿ ಲವ್​ ಮಾಡುವುದೆಲ್ಲವೂ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಕಾರಣಗಳು ಸಾಕಷ್ಟಿವೆ. ಇತ್ತೀಚೆಗೆ ಹೆಚ್ಚುತ್ತಿರುವ ಮಾಧ್ಯಮಗಳ ಪ್ರಭಾವ, ಸುಲಭವಾಗಿ ಸಿಗುತ್ತಿರುವ ಪಾರ್ನ್​ ವಿಡಿಯೋಗಳು, ಸೆಕ್ಸ್​ ಅನ್ನೋದು ಅಪರಾಧವಲ್ಲ ಎನ್ನುವ ಭಾವನೆ ಮೂಡುತ್ತಿರುವುದು ಇದಕ್ಕೆಲ್ಲವೂ ಕಾರಣ. ಹಾಗಾದರೆ ಈ ರೀತಿ ಮಾಡೋದಕ್ಕೆ ನಾನಾ ಕಾರಣಗಳಿವೆ. ಅವೆಲ್ಲವಕ್ಕೂ ಇಲ್ಲಿದೆ ಉತ್ತರ.

ಭಾವನೆ ರಹಿತ ಸೆಕ್ಸ್​: ಯಾವುದೇ ರೀತಿ ಭಾವನೆಗೆ ಒಳಗಾಗದೆ, ಸೆಕ್ಸ್​ ಮಾಡಬೇಕು ಎನ್ನುವ ಒಂದೇ ಉದ್ದೇಶದಿಂದ ಸೆಕ್ಸ್​ ಮಾಡುವವರು ಅನೇಕರಿದ್ದಾರೆ. ಇವರಿಗೆ ಕೇಲವ ದೈಹಿಕ ಸಂಬಂಧದ ಅವಶ್ಯಕತೆ ಮಾತ್ರ ಇರುತ್ತದೆ. ಹೀಗಾಗಿ ಇವರು ಸಂಬಂಧಗಳಿಗೆ ಬೆಲೆ ಕೊಡುವುದಿಲ್ಲ. ಈ ಕಾರಣಕ್ಕೆ ಇವರು ಗೆಳೆಯರ ಜೊತೆ ಅಥವಾ ಹೊಸ ಹೊಸ ವ್ಯಕ್ತಿಗಳ ಜೊತೆ ಸೆಕ್ಸ್​ ಮಾಡುವುದಕ್ಕೆ ಬಯಸುತ್ತಾರೆ.

ಖುಷಿಗೆ: ಬ್ರೇಕಪ್​ ಆಗಿರುತ್ತದೆ. ಈ ನೋವನ್ನು ಮರೆಯಲು ಆಪ್ತರೆನಿಸಿದವರ ಜೊತೆ ಸಮಯ ಕಳೆಯಲು ಬಯಸುತ್ತಾರೆ. ಪ್ರೀತಿಸಿದವನು ಮೋಸ ಮಾಡಿದ ಎನ್ನುವ ಕಾರಣಕ್ಕೆ ಆತನ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎನ್ನುವ ಮನಸ್ಥಿತಿಯಿಂದಲೂ ಗೆಳೆಯರ ಜೊತೆ ಸೆಕ್ಸ್​ ಮಾಡುವವರಿದ್ದಾರೆ.

ನೋ ಡೀಲ್​: ಕೆಲವೊಮ್ಮೆ ಕುಡಿದ ಮತ್ತಿನಲ್ಲೂ ಹೆಣ್ಣುಮಕ್ಕಳು ಸೆಕ್ಸ್​ ಮಾಡುವಂತೆ ಪ್ರೇರೆಪಣೆಗೆ ಒಳಗಾಗಬಹುದು. ಈ ವೇಳೆ ಯಾವುದೇ ಒಪ್ಪಂದವಾಗಲೂ ಕಟ್ಟುಪಾಡಾಡಗಲೀ ಇರುವುದಿಲ್ಲ.

ಪ್ರೇಮದಲ್ಲಿ ಸೆಕ್ಸ್​: ಕೆಲವೊಮ್ಮೆ ಪ್ರೀತಿ ಮಾಡುತ್ತಿರುವಾಗಲೂ ಸೆಕ್ಸ್​ ಮಾಡೋಕೆ ಹೆಣ್ಣುಮಕ್ಕಳು ಹೆಚ್ಚು ಆದ್ಯತೆ ನೀಡುತ್ತಾರೆ.

ಈ ಎಲ್ಲ ಕಾರಣಕ್ಕೆ ಸೆಕ್ಸ್​ ವಿಚಾರದಲ್ಲಿ ಹೆಣ್ಣುಮಕ್ಕಳು ಜಡ್ಜ್​ ಮಾಡುವುದು ತುಂಬಾನೇ ಕಷ್ಟ. ಹೆಚ್ಚು ಆಪ್ತರಾಗಿರುತ್ತಾರೆ ಎಂದ ಮಾತ್ರಕ್ಕೆ ಅವರು ಸೆಕ್ಸ್​ಗೆ ಸಿದ್ಧರಾಗಿದ್ದರೆಂದಲ್ಲ ಅಥವಾ ಅವರು ತುಂಬಾ ಗಂಭೀರವಾಗಿದ್ದ ಮಾತ್ರಕ್ಕೆ ಅವರಿಗೆ ಸಂಭೋಗದಲ್ಲಿ ಇಚ್ಛೆ ಇಲ್ಲಂದರ್ಥವಲ್ಲ. ಹೀಗಾಗಿ, ಪುರಷ ಪರೋಕ್ಷವಾಗಿ ಆ ಬಗ್ಗೆ ಅವರ ಜೊತೆ ಮಾತನಾಡಬೇಕು.ಈ ಕೆಳಗಿನವು ಅವರಿಗೆ ಇಷ್ಟವಿದೆ ಎಂದರ್ಥವಾಗಿರಬಹುದು!:

ನೀವು  ಏಕಾಂಗಿಯಾಗಿದ್ದಾಗ ಮನೆಗೆ ಬರುವುದು, ನೀವು ಸುಮ್ಮನೆ ಕುಳಿತಿರುವಾಗ ನಿಮ್ಮನ್ನು ಮುಟ್ಟುವುದು, ನಿಮ್ಮ ಖಾಸಗಿ ಭಾಗವನ್ನು ಮುಟ್ಟಲು ಪ್ರಯತ್ನಿಸಬಹುದು, ನಿಮ್ಮ ಜೊತೆ ಫ್ಲರ್ಟ್​ ಮಾಡಬಹುದು. ಈ ಎಲ್ಲ ಲಕ್ಷಣಗಳು ಅವಳಿಗೆ ನಿಮ್ಮ ಬಗ್ಗೆ ಲೈಂಗಿಕವಾಗಿ ಆಸಕ್ತಿ ಇದೆ ಎನ್ನುವುದನ್ನು ತೋರಿಸಬಹುದು.

(Pallavi Barnwal)
First published: November 26, 2020, 10:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories