Sexual Wellness: ಹುಡುಗಿಯರು ಅದರಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಯೋದು ಹೇಗೆ?
ನೀವು ಏಕಾಂಗಿಯಾಗಿದ್ದಾಗ ಮನೆಗೆ ಬರುವುದು, ನೀವು ಸುಮ್ಮನೆ ಕುಳಿತಿರುವಾಗ ನಿಮ್ಮನ್ನು ಮುಟ್ಟುವುದು, ನಿಮ್ಮ ಖಾಸಗಿ ಭಾಗವನ್ನು ಮುಟ್ಟಲು ಪ್ರಯತ್ನಿಸಬಹುದು, ನಿಮ್ಮ ಜೊತೆ ಫ್ಲರ್ಟ್ ಮಾಡಬಹುದು. ಈ ಎಲ್ಲ ಲಕ್ಷಣಗಳು ಅವಳಿಗೆ ನಿಮ್ಮ ಬಗ್ಗೆ ಲೈಂಗಿಕವಾಗಿ ಆಸಕ್ತಿ ಇದೆ ಎನ್ನುವುದನ್ನು ತೋರಿಸಬಹುದು.
ಪ್ರಶ್ನೆ: ನನ್ನ ವಯಸ್ಸು 35. ಇತ್ತೀಚಿನ ದಿನಗಳಲ್ಲಿ ಹುಡುಗಿಯ ಜೊತೆ ಒಂದು ರಾತ್ರಿ ಕಳೆಯೋದು ದೊಡ್ಡ ವಿಚಾರ ಅಲ್ಲವೇ ಅಲ್ಲ. ಆದರೆ, ನಮಗೆ ಇದ್ದಂತೆ ಅವರಿಗೂ ಈ ರೀತಿ ಆಸೆಗಳಿವೆ ಎಂದು ಪತ್ತೆ ಹಚ್ಚೋದು ಹೇಗೆ? ಒಂದೊಮ್ಮೆ ನಾನು ಅವರಿಗೆ ಇದರ ಬಗ್ಗೆ ಆಸಕ್ತಿ ಇದೆಯೋ ಅಥವಾ ಇಲ್ಲವೋ ಎನ್ನುವುದು ಗೊತ್ತಿಲ್ಲದೆ ಮುಂದುವರಿದರೆ ನನ್ನ ಬಗ್ಗೆ ಮುನಿಸಿಕೊಳ್ಳಬಹುದು. ನನ್ನ ವಿರುದ್ಧ ದೂರು ಕೂಡ ದಾಖಲಾಗಬಹುದು.
ಇತ್ತೀಚಿನ ದಿನಗಳಲ್ಲಿ ಒನ್ ನೈಟ್ ಸ್ಟ್ಯಾಂಡ್, ಸೆಕ್ಸ್ಗಾಗಿ ಲವ್ ಮಾಡುವುದೆಲ್ಲವೂ ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಕಾರಣಗಳು ಸಾಕಷ್ಟಿವೆ. ಇತ್ತೀಚೆಗೆ ಹೆಚ್ಚುತ್ತಿರುವ ಮಾಧ್ಯಮಗಳ ಪ್ರಭಾವ, ಸುಲಭವಾಗಿ ಸಿಗುತ್ತಿರುವ ಪಾರ್ನ್ ವಿಡಿಯೋಗಳು, ಸೆಕ್ಸ್ ಅನ್ನೋದು ಅಪರಾಧವಲ್ಲ ಎನ್ನುವ ಭಾವನೆ ಮೂಡುತ್ತಿರುವುದು ಇದಕ್ಕೆಲ್ಲವೂ ಕಾರಣ. ಹಾಗಾದರೆ ಈ ರೀತಿ ಮಾಡೋದಕ್ಕೆ ನಾನಾ ಕಾರಣಗಳಿವೆ. ಅವೆಲ್ಲವಕ್ಕೂ ಇಲ್ಲಿದೆ ಉತ್ತರ.
ಭಾವನೆ ರಹಿತ ಸೆಕ್ಸ್: ಯಾವುದೇ ರೀತಿ ಭಾವನೆಗೆ ಒಳಗಾಗದೆ, ಸೆಕ್ಸ್ ಮಾಡಬೇಕು ಎನ್ನುವ ಒಂದೇ ಉದ್ದೇಶದಿಂದ ಸೆಕ್ಸ್ ಮಾಡುವವರು ಅನೇಕರಿದ್ದಾರೆ. ಇವರಿಗೆ ಕೇಲವ ದೈಹಿಕ ಸಂಬಂಧದ ಅವಶ್ಯಕತೆ ಮಾತ್ರ ಇರುತ್ತದೆ. ಹೀಗಾಗಿ ಇವರು ಸಂಬಂಧಗಳಿಗೆ ಬೆಲೆ ಕೊಡುವುದಿಲ್ಲ. ಈ ಕಾರಣಕ್ಕೆ ಇವರು ಗೆಳೆಯರ ಜೊತೆ ಅಥವಾ ಹೊಸ ಹೊಸ ವ್ಯಕ್ತಿಗಳ ಜೊತೆ ಸೆಕ್ಸ್ ಮಾಡುವುದಕ್ಕೆ ಬಯಸುತ್ತಾರೆ.
ಖುಷಿಗೆ: ಬ್ರೇಕಪ್ ಆಗಿರುತ್ತದೆ. ಈ ನೋವನ್ನು ಮರೆಯಲು ಆಪ್ತರೆನಿಸಿದವರ ಜೊತೆ ಸಮಯ ಕಳೆಯಲು ಬಯಸುತ್ತಾರೆ. ಪ್ರೀತಿಸಿದವನು ಮೋಸ ಮಾಡಿದ ಎನ್ನುವ ಕಾರಣಕ್ಕೆ ಆತನ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎನ್ನುವ ಮನಸ್ಥಿತಿಯಿಂದಲೂ ಗೆಳೆಯರ ಜೊತೆ ಸೆಕ್ಸ್ ಮಾಡುವವರಿದ್ದಾರೆ.
ನೋ ಡೀಲ್: ಕೆಲವೊಮ್ಮೆ ಕುಡಿದ ಮತ್ತಿನಲ್ಲೂ ಹೆಣ್ಣುಮಕ್ಕಳು ಸೆಕ್ಸ್ ಮಾಡುವಂತೆ ಪ್ರೇರೆಪಣೆಗೆ ಒಳಗಾಗಬಹುದು. ಈ ವೇಳೆ ಯಾವುದೇ ಒಪ್ಪಂದವಾಗಲೂ ಕಟ್ಟುಪಾಡಾಡಗಲೀ ಇರುವುದಿಲ್ಲ.
ಪ್ರೇಮದಲ್ಲಿ ಸೆಕ್ಸ್: ಕೆಲವೊಮ್ಮೆ ಪ್ರೀತಿ ಮಾಡುತ್ತಿರುವಾಗಲೂ ಸೆಕ್ಸ್ ಮಾಡೋಕೆ ಹೆಣ್ಣುಮಕ್ಕಳು ಹೆಚ್ಚು ಆದ್ಯತೆ ನೀಡುತ್ತಾರೆ.
ಈ ಎಲ್ಲ ಕಾರಣಕ್ಕೆ ಸೆಕ್ಸ್ ವಿಚಾರದಲ್ಲಿ ಹೆಣ್ಣುಮಕ್ಕಳು ಜಡ್ಜ್ ಮಾಡುವುದು ತುಂಬಾನೇ ಕಷ್ಟ. ಹೆಚ್ಚು ಆಪ್ತರಾಗಿರುತ್ತಾರೆ ಎಂದ ಮಾತ್ರಕ್ಕೆ ಅವರು ಸೆಕ್ಸ್ಗೆ ಸಿದ್ಧರಾಗಿದ್ದರೆಂದಲ್ಲ ಅಥವಾ ಅವರು ತುಂಬಾ ಗಂಭೀರವಾಗಿದ್ದ ಮಾತ್ರಕ್ಕೆ ಅವರಿಗೆ ಸಂಭೋಗದಲ್ಲಿ ಇಚ್ಛೆ ಇಲ್ಲಂದರ್ಥವಲ್ಲ. ಹೀಗಾಗಿ, ಪುರಷ ಪರೋಕ್ಷವಾಗಿ ಆ ಬಗ್ಗೆ ಅವರ ಜೊತೆ ಮಾತನಾಡಬೇಕು.
ಈ ಕೆಳಗಿನವು ಅವರಿಗೆ ಇಷ್ಟವಿದೆ ಎಂದರ್ಥವಾಗಿರಬಹುದು!:
ನೀವು ಏಕಾಂಗಿಯಾಗಿದ್ದಾಗ ಮನೆಗೆ ಬರುವುದು, ನೀವು ಸುಮ್ಮನೆ ಕುಳಿತಿರುವಾಗ ನಿಮ್ಮನ್ನು ಮುಟ್ಟುವುದು, ನಿಮ್ಮ ಖಾಸಗಿ ಭಾಗವನ್ನು ಮುಟ್ಟಲು ಪ್ರಯತ್ನಿಸಬಹುದು, ನಿಮ್ಮ ಜೊತೆ ಫ್ಲರ್ಟ್ ಮಾಡಬಹುದು. ಈ ಎಲ್ಲ ಲಕ್ಷಣಗಳು ಅವಳಿಗೆ ನಿಮ್ಮ ಬಗ್ಗೆ ಲೈಂಗಿಕವಾಗಿ ಆಸಕ್ತಿ ಇದೆ ಎನ್ನುವುದನ್ನು ತೋರಿಸಬಹುದು.
(Pallavi Barnwal)
Published by:HR Ramesh
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ