ಎಚ್ಚರ..ಹಸ್ತ ಮೈಥುನ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ..!

ಶೀಘ್ರ ಸ್ಖಲನದಂತಹ ಸಮಸ್ಯೆಗಳು ಕಂಡು ಬಂದರೆ ಅದು ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಂಗಾತಿಯು ಲೈಂಗಿಕ ಸಂತೃಪ್ತಿಯಿಂದ ವಂಚಿತಳಾಗಲು ಇದು ಮುಖ್ಯ ಕಾರಣವಾಗುತ್ತದೆ. ಮಿಲನ ಸುಖವನ್ನು ಅನುಭವಿಸುವ ಮುನ್ನವೇ ಸ್ಖಲನವಾದರೆ ದಾಂಪತ್ಯ ಜೀವನಕ್ಕೂ ಹೊಡೆತ ಬೀಳುತ್ತದೆ.

Sex-Relation

Sex-Relation

 • News18
 • Last Updated :
 • Share this:
  ಹಸ್ತ ಮೈಥುನ ಎಂಬುದು ವಯೋಸಹಜ ಪ್ರಕ್ರಿಯೆ. ಸಂಗಾತಿಯಿಲ್ಲದೆ ತಮ್ಮ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳುವ ಕ್ರಿಯೆಯಾಗಿದೆ. ಇದರಿಂದ ದೇಹಕ್ಕೆ ಅನೇಕ ಲಾಭಗಳಿವೆ. ಆದರೆ ಅತಿಯಾದರೆ ಅಮೃತವು ವಿಷ ಎನ್ನುವಂತೆ ಪ್ರತಿ ದಿನ ಹಸ್ತ ಮೈಥುನ ಮಾಡಿಕೊಂಡರೆ ಅನೇಕ ದುಷ್ಪರಿಣಾಮಗಳು ಕಾಣಿಸಿಕೊಳ್ಳುತ್ತದೆ. ಒಂದು ವರದಿಯ ಪ್ರಕಾರ ಪುರುಷರು ವಾರದಲ್ಲಿ ಮೂರು ಅಥವಾ ನಾಲ್ಕು ಬಾರಿ ಮಾತ್ರ ಹಸ್ತ ಮೈಥುನ ಮಾಡಿಕೊಳ್ಳಬಹುದು. ಇದಕ್ಕಿಂತ ಹೆಚ್ಚು ಬಾರಿ ಮೈಥುನ ಮಾಡಿಕೊಂಡರೆ ಹಲವಾರು ಸಮಸ್ಯೆಗಳಿಗೆ ಈಡಾಗುತ್ತಾರೆ. ಅತಿಯಾದ ಹಸ್ತ ಮೈಥುನದಿಂದ ದೇಹದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಕೂಡ ಇಲ್ಲಿ ವಿವರಿಸಲಾಗಿದೆ.

  ಹಾರ್ಮೋನುಗಳ ಬದಲಾವಣೆ
  ಪ್ರತಿನಿತ್ಯ ಅಥವಾ ವಾರದಲ್ಲಿ ನಾಲ್ಕಕ್ಕಿಂತ ಹೆಚ್ಚು ಬಾರಿ ಹಸ್ತ ಮೈಥುನ ಮಾಡಿದರೆ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಗೆ ಕಾರಣವಾಗುತ್ತದೆ. ಇದರಿಂದ ದೇಹದಲ್ಲಿ ಆಯಾಸ, ನಿರುತ್ಸಾಹ ಸೇರಿದಂತೆ ಹಲವಾರು ಸಮಸ್ಯೆಗಳು ಕಂಡು ಬರುತ್ತದೆ.

  ದೇಹ ಸಾಮರ್ಥ್ಯ ಅಪವ್ಯಯ
  ಹಸ್ತ ಮೈಥುನದಿಂದ ಪರಾಕಾಷ್ಠೆಯನ್ನು ತಲುಪುದರಿಂದ ದೇಹವು ಹೆಚ್ಚು ಬಳಲುತ್ತದೆ. ಏಕೆಂದರೆ ನಿರಂತರ ಹಸ್ತ ಮೈಥುನ ಮಾಡಿಕೊಳ್ಳುವಾಗ ಹೆಚ್ಚು ಶಕ್ತಿಯನ್ನು ವ್ಯಯಿಸುತ್ತಾರೆ. ಇದರಿಂದ ದೇಹ ಸಾಮರ್ಥ್ಯ ಕುಂಠಿತವಾಗುತ್ತಾ ಹೋಗುತ್ತದೆ. ಸಣ್ಣ ವಯಸ್ಸಿನಲ್ಲೇ ದೇಹ ಸಾಮರ್ಥ್ಯವನ್ನು ಕಳೆದುಕೊಂಡರೆ, ಮುಂಬರುವ ಲೈಂಗಿಕ ಜೀವನದಲ್ಲಿ ಅದರ ಪರಿಣಾಮ ಕಾಣಿಸುತ್ತದೆ.

  ಮೈಥುನ ಸಮಸ್ಯೆ
  ಅತಿಯಾದ ಹಸ್ತ ಮೈಥುನದಿಂದ ಪುರುಷರ ಲಿಂಗ ಹಲವು ಸಮಸ್ಯೆಗಳಿಗೆ ಒಳಗಾಗುತ್ತದೆ. ಮುಖ್ಯವಾಗಿ ನಿಮಿರುವಿಕೆಯ ಸಮಸ್ಯೆಗೆ ಹಸ್ತ ಮೈಥುನ ಕಾರಣ ಎನ್ನಲಾಗಿದೆ. ದಿನನಿತ್ಯ ಇಂತಹ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಮುಂದೆ ನಿಮಿರುವಿಕೆ ಅಪಾಯ ಎದುರಿಸಬೇಕಾಗುತ್ತದೆ.

  ಕೆಟ್ಟ ಅಭ್ಯಾಸ
  ನಿತ್ಯ ಹಸ್ತ ಹಸ್ತ ಮೈಥುನ ಮಾಡಿದರೆ ಮುಂದೆ ಅದೊಂದು ಚಟವಾಗಿ ಬಿಡುತ್ತದೆ. ಇದನ್ನು ಮುಂದಿನ ದಿನಗಳಲ್ಲಿ ನಿಯಂತ್ರಿಸುವುದು ಕಷ್ಟಸಾಧ್ಯ ಎನ್ನುತ್ತಾರೆ ವೈದ್ಯಕೀಯ ತಜ್ಞರು.  ಹಸ್ತ ಮೈಥುನ ಕೂಡ ಮಾದಕ ವ್ಯಸನದಂತೆ ಆವರಿಸಿ ಪ್ರತಿನಿತ್ಯ ಆ ಕ್ರಿಯೆಗಾಗಿ ಮನಸ್ಸು ಚಡಪಡಿಸುತ್ತಿರುತ್ತದೆ. ಇದು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

  ಇದನ್ನೂ ಓದಿ: ವರ್ಷಾಂತ್ಯದಲ್ಲಿ ಫ್ಲಿಪ್​ಕಾರ್ಟ್​ ಭರ್ಜರಿ ಆಫರ್: 30 ಸಾವಿರದ ಟಿವಿಗೆ ಕೇವಲ 19 ಸಾವಿರ ರೂ.

  ಶೀಘ್ರ ಸ್ಖಲನ
  ಇದನ್ನ ಚಟವಾಗಿಸಿಕೊಂಡರೆ ಶ್ರೀಘ್ರ ವೀರ್ಯ ಸ್ಖಲನದ ಸಮಸ್ಯೆಗಳು ತಲೆದೂರುತ್ತದೆ. ಅತಿಯಾದ ಹಸ್ತ ಮೈಥುನದಿಂದ ಲೈಂಗಿಕ ಕ್ರಿಯೆಯ ವೇಳೆ ವೀರ್ಯವನ್ನು ನಿಯಂತ್ರಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ.

  ಇದನ್ನೂ ಓದಿ: ನಿದ್ರೆ ಬರ್ತಿಲ್ವಾ? ಹಾಗಿದ್ದರೆ ಪ್ರತಿ ನಿತ್ಯ ಹೀಗೆ ಮಾಡ್ಬೇಕಂತೆ..!

  ಲೈಂಗಿಕ ಸಮಸ್ಯೆ
  ಶೀಘ್ರ ಸ್ಖಲನದಂತಹ ಸಮಸ್ಯೆಗಳು ಕಂಡು ಬಂದರೆ ಅದು ಲೈಂಗಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಂಗಾತಿಯು ಲೈಂಗಿಕ ಸಂತೃಪ್ತಿಯಿಂದ ವಂಚಿತಳಾಗಲು ಇದು ಮುಖ್ಯ ಕಾರಣವಾಗುತ್ತದೆ. ಮಿಲನ ಸುಖವನ್ನು ಅನುಭವಿಸುವ ಮುನ್ನವೇ ಸ್ಖಲನವಾದರೆ ದಾಂಪತ್ಯ ಜೀವನಕ್ಕೂ ಹೊಡೆತ ಬೀಳುತ್ತದೆ.

  ಇದನ್ನೂ ಓದಿ: ರೈಲ್ವೆಯ 14033 ಹುದ್ದೆಗಳ ನೇಮಕಾತಿ: ತಿಂಗಳ ವೇತನ 35 ಸಾವಿರ ರೂ.

  ಕೂದಲು ಉದುರುವಿಕೆ
  ಇರದಲ್ಲಿ 4 ಬಾರಿಗಿಂತ ಹೆಚ್ಚು ಹಸ್ತ ಮೈಥುನ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ ಇಂತಹ ಸಮಸ್ಯೆಗಳಿಗೆ ಒಳಗಾಗುತ್ತೀರಿ. ಹಾಗಾಗಿ ಹಸ್ತ ಮೈಥುನದಂತಹ ಕ್ರಿಯೆ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ. ಇದೊಂದು ಚಟವಾಗಿದ್ದರೆ ಲೈಂಗಿಕ ತಜ್ಞರನ್ನು ಅಥವಾ ಮನೋಶಾಸ್ತ್ರಜ್ಞರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಬಹುದು.
  Published by:zahir
  First published: