ಪುರುಷರ ಕಣ್ಣೀರಿಗೆ ಕಾರಣವಾಗುತ್ತಿದೆ ಲೈಂಗಿಕ ಜೀವನ!

ಲೈಂಗಿಕ ಕ್ರಿಯೆಯ ಬಳಿಕ ನನಗೆ ಮತ್ತೊಮ್ಮೆ ಸಂಗಾತಿಯನ್ನು ಸ್ಪರ್ಶಿಸಬೇಕೆಂದು ಅನಿಸುವುದಿಲ್ಲ. ಆ ಸಮಯದಲ್ಲಿ ಏಕಾಂಗಿಯಾಗಿ ಇರಬೇಕೆಂಬ ಭಾವನೆ ಮೂಡುತ್ತದೆ. ಚಡಪಡಿಕೆಯಿಂದ ಕಿರಿಕಿರಿ ಸಮಸ್ಯೆ ಉಂಟಾಗುತ್ತದೆ.

zahir | news18
Updated:January 20, 2019, 10:00 PM IST
ಪುರುಷರ ಕಣ್ಣೀರಿಗೆ ಕಾರಣವಾಗುತ್ತಿದೆ ಲೈಂಗಿಕ ಜೀವನ!
ಸಾಂದರ್ಭಿಕ ಚಿತ್ರ
  • News18
  • Last Updated: January 20, 2019, 10:00 PM IST
  • Share this:
ವೈವಾಹಿಕ ಜೀವನ ಸಮತೋಲನದಲ್ಲಿ ಇರಬೇಕಿದ್ದರೆ ಲೈಂಗಿಕ ಬಂಧವು ಉತ್ತಮವಾಗಿರಬೇಕು. ಇಲ್ಲದಿದ್ದರೆ ದಂಪತಿಗಳ ನಡುವೆ ವಿರಸ ಉಂಟಾಗಿ ಜೀವನವು ನಿರುತ್ಸಾಹದಿಂದ ಕೂಡಿರುತ್ತದೆ. ಆದರೆ ಇತ್ತೀಚಿನ ಆಧುನಿಕ ಜೀವನ ಶೈಲಿಯಿಂದ ದಾಂಪತ್ಯ ಜೀವನ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಅದರಲ್ಲೊಂದು 'ಪೋಸ್ಟ್​ಕೊಯ್ಟಲ್​ ಡೊಸ್ಪೊರಿಯಾ' (PCD) ಸಮಸ್ಯೆ. ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆಸಲಾದ ಸಂಶೋಧನೆಯಲ್ಲಿ ಮಹಿಳೆಯರು ಮತ್ತು ಪುರುಷರು ಪೋಸ್ಟ್​ಕೊಯ್ಟಲ್​ ಡೊಸ್ಪೊರಿಯಾದಿಂದ ಬಳಲುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ಈ ಸಮಸ್ಯೆಯ ಪ್ರಮುಖ ಲಕ್ಷಣವೆಂದರೆ ಲೈಂಗಿಕ ಕ್ರಿಯೆ ಬಳಿಕ ನಿಮಲ್ಲಿ ದುಖಃ ಅಥವಾ ಕಿರಿಕಿರಿಗೆ ಭಾವನೆ ಮೂಡುವುದು. ಲೈಂಗಿಕ ಬಂಧದ ನಂತರ ಸೆಕ್ಸ್​ ಬೇಡವಾಗಿತ್ತು ಎಂದು ಅನಿಸುವುದು ಕೂಡ ಇದರ ಲಕ್ಷಣಗಳಲ್ಲಿ ಒಂದು ಹೇಳಲಾಗಿದೆ. ಕ್ವೀನ್ಸ್​ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಸಂಸ್ಥೆಇಂತಹದೊಂದು ಸಮಸ್ಯೆಯ ಕುರಿತು ಆಸ್ಟ್ರೇಲಿಯಾ, ಯುಕೆ, ರಷ್ಯಾ, ನ್ಯೂಜಿಲ್ಯಾಂಡ್ ಮತ್ತು ಜರ್ಮನಿ ಸೇರಿದಂತೆ ವಿವಿಧ ದೇಶಗಳ 1208 ಜನರ ಮೇಲೆ ಸಂಶೋಧನೆ ನಡೆಸಿದೆ. ಈ ವೇಳೆ ಶೇ.41ರಷ್ಟು ಮಂದಿ PCD ಸಮಸ್ಯೆಯಿಂದ ಬಳಲುತ್ತಿರುವುದು ತಿಳಿದು ಬಂದಿದೆ. ಹಾಗೆಯೇ ಶೇ.20ರಷ್ಟು ಜನರು ಕಳೆದ ನಾಲ್ಕು ವಾರಗಳಲ್ಲಿ ಈ ಸಮಸ್ಯೆಗೆ ಇಡಾಗಿರುವುದು ಪತ್ತೆಯಾಗಿದೆ. ಮೂರರಿಂದ ನಾಲ್ಕು ಪ್ರತಿಶತದಷ್ಟು ಮಂದಿ ನಿರಂತರ ಈ ಸಮಸ್ಯೆಗೆ ಗುರಿಯಾಗುತ್ತಿರುವುದು ಈ ಅಧ್ಯಯನದಿಂದ ಸಾಬೀತಾಗಿದೆ.

ಇದನ್ನೂ ಓದಿ: ಲೈಂಗಿಕ ಸಂಬಂಧದ ಕುರಿತು ನೀವು ತಿಳಿದಿರಲೇಬೇಕಾದ ಕೆಲ ಸಂಗತಿಗಳು

ಲೈಂಗಿಕ ಕ್ರಿಯೆಯ ಬಳಿಕ ನನಗೆ ಮತ್ತೊಮ್ಮೆ ಸಂಗಾತಿಯನ್ನು ಸ್ಪರ್ಶಿಸಬೇಕೆಂದು ಅನಿಸುವುದಿಲ್ಲ. ಆ ಸಮಯದಲ್ಲಿ ಏಕಾಂಗಿಯಾಗಿ ಇರಬೇಕೆಂಬ ಭಾವನೆ ಮೂಡುತ್ತದೆ. ಚಡಪಡಿಕೆಯಿಂದ ಕಿರಿಕಿರಿ ಸಮಸ್ಯೆ ಉಂಟಾಗುತ್ತದೆ. ಅದೇ ರೀತಿ ಲೈಂಗಿಕ ಬಂಧವು ತೃಪ್ತಿದಾಯಕವಾಗಿರುವುದಿಲ್ಲ ಎಂಬ ಅಭಿಪ್ರಾಯಗಳನ್ನು ಅಧ್ಯಯನದ ವೇಳೆ ಜನರು ಹಂಚಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಸಮಸ್ಯೆ ಪುರುಷರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಸಂಶೋಧಕ ಜೋಯಲ್ ಮ್ಯಾಕ್ಸೊವಿಯಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಆಧಾರ್ ಕಾರ್ಡ್​ ಇದ್ರೆ ಈ ದೇಶಗಳಿಗೆ ಭೇಟಿ ನೀಡಬಹುದು..!

ಆಧುನಿಕ ಜೀವನ ಶೈಲಿಯಿಂದ PCD ಸಮಸ್ಯೆ ದಾಂಪತ್ಯ ಜೀವನದಲ್ಲಿ ನಕರಾತ್ಮವಾಗಿ ಪರಿಣಮಿಸಿದೆ. ಇದು ಸಂಗಾಂತಿಗಳ ನಡುವಿನ ವೈಮನಸ್ಯಕ್ಕೆ ಕಾರಣವಾಗುತ್ತಿದೆ. ಪೋಸ್ಟ್​ಕೊಯ್ಟಲ್​ ಡೊಸ್ಪೊರಿಯಾ ಸಮಸ್ಯೆಯಿಂದ ಲೈಂಗಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರುವುದಲ್ಲದೆ, ದಾಂಪತ್ಯ ವಿರಸಕ್ಕೆ ಕಾರಣವಾಗುತ್ತಿದೆ ಎಂದು ಅಧ್ಯಯನ ತಂಡ ತಿಳಿಸಿದೆ.

ಇದನ್ನೂ ಓದಿ: VIDEO: ಚೀನಾದ ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಹೀಗೂ ಶಿಕ್ಷೆ ನೀಡುತ್ತೆ..!
First published: January 20, 2019, 10:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading