ಪುರುಷರ ಕಣ್ಣೀರಿಗೆ ಕಾರಣವಾಗುತ್ತಿರುವ ಲೈಂಗಿಕ ಜೀವನ: ಅಧ್ಯಯನ

news18
Updated:July 30, 2018, 3:46 PM IST
ಪುರುಷರ ಕಣ್ಣೀರಿಗೆ ಕಾರಣವಾಗುತ್ತಿರುವ ಲೈಂಗಿಕ ಜೀವನ: ಅಧ್ಯಯನ
news18
Updated: July 30, 2018, 3:46 PM IST
-ನ್ಯೂಸ್ 18 ಕನ್ನಡ

ವೈಯುಕ್ತಿಕ ಜೀವನ ಚೆನ್ನಾಗಿ ಇರಬೇಕಾದರೆ ಲೈಂಗಿಕ ಬಂಧವು ಉತ್ತಮವಾಗಿರಬೇಕು. ಇಲ್ಲದಿದ್ದರೆ ದಂಪತಿಗಳ ನಡುವೆ ವಿರಸ ಉಂಟಾಗಿ ಜೀವನವು ನಿರಾಸಕ್ತಿಯಿಂದ ಕೂಡಿರುತ್ತದೆ. ಆದರೆ ಇತ್ತೀಚಿನ ಜೀವನ ಶೈಲಿಯಿಂದ ದಾಂಪತ್ಯ ಜೀವನಕ್ಕೆ ಹಲವು ಹೊಡೆತಗಳು ಬೀಳುತ್ತಿದೆ. ಅದರಲ್ಲೊಂದು 'ಪೋಸ್ಟ್​ಕೊಯ್ಟಲ್​ ಡೊಸ್ಪೊರಿಯಾ' (PCD) ಸಮಸ್ಯೆ. ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆಸಲಾದ ಸಂಶೋಧನೆಯಲ್ಲಿ ಮಹಿಳೆಯರು ಮತ್ತು ಪುರುಷರು ಪೋಸ್ಟ್​ಕೊಯ್ಟಲ್​ ಡೊಸ್ಪೊರಿಯಾದಿಂದ ಬಳಲುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಇದು ಲೈಂಗಿಕ ಕ್ರಿಯೆ ಬಳಿಕ ನಿಮಲ್ಲಿ ದುಖಃ ಅಥವಾ ಕಿರಿಕಿರಿಗೆ ಕಾರಣವಾಗಬಹುದು.

ಆಸ್ಟ್ರೇಲಿಯಾ, ಯುಕೆ, ರಷ್ಯಾ, ನ್ಯೂಜಿಲ್ಯಾಂಡ್ ಮತ್ತು ಜರ್ಮನಿ ಸೇರಿದಂತೆ ವಿವಿಧ ದೇಶಗಳ 1208 ಜನರನ್ನು ಈ ಅಧ್ಯಯನಕ್ಕಾಗಿ ಬಳಸಿಕೊಳ್ಳಲಾಗಿದೆ. ಕ್ವೀನ್ಸ್​ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಸಂಸ್ಥೆ ನಡೆಸಿರುವ ಸಂಶೋಧನೆಯಲ್ಲಿ ಶೇ.41ರಷ್ಟು ಮಂದಿ PCD ಸಮಸ್ಯೆಯಿಂದ ಬಳಲುತ್ತಿರುವುದು ತಿಳಿದು ಬಂದಿದೆ. ಹಾಗೆಯೇ ಶೇ.20ರಷ್ಟು ಜನರು ಕಳೆದ ನಾಲ್ಕು ವಾರಗಳಲ್ಲಿ ಈ ಸಮಸ್ಯೆಗೆ ಇಡಾಗಿರುವುದು ಪತ್ತೆಯಾಗಿದೆ. ಮೂರರಿಂದ ನಾಲ್ಕು ಪ್ರತಿಶತದಷ್ಟು ಮಂದಿ ನಿರಂತರ ಈ ಸಮಸ್ಯೆಗೆ ಗುರಿಯಾಗುತ್ತಿರುವುದು ಈ ಅಧ್ಯಯನದಿಂದ ಸಾಬೀತಾಗಿದೆ.

ಲೈಂಗಿಕ ಕ್ರಿಯೆಯ ಬಳಿಕ ನನಗೆ ಮತ್ತೊಮ್ಮೆ ಸಂಗಾತಿಯನ್ನು ಸ್ಪರ್ಶಿಸಬೇಕೆಂದು ಅನಿಸುವುದಿಲ್ಲ. ಆ ಸಮಯದಲ್ಲಿ ಏಕಾಂಗಿಯಾಗಿ ಇರಬೇಕೆಂಬ ಭಾವನೆ ಮೂಡುತ್ತದೆ. ಚಡಪಡಿಕೆಯಿಂದ ಕಿರಿಕಿರಿ ಸಮಸ್ಯೆ ಉಂಟಾಗುತ್ತದೆ. ಆದರೆ ಲೈಂಗಿಕ ಬಂಧವು ತೃಪ್ತಿದಾಯಕವಾಗಿರುವುದಿಲ್ಲ. ಈ ಸಮಸ್ಯೆ ಪುರುಷರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಅಧ್ಯಯನದಿಂದ ತಿಳಿದಿರುವುದಾಗಿ ಸಂಶೋಧಕ ಜೋಯಲ್ ಮ್ಯಾಕ್ಸೊವಿಯಕ್ ತಿಳಿಸಿದ್ದಾರೆ.

ಇತ್ತೀಚಿನ ಜೀವನ ಶೈಲಿಯಿಂದ PCD ಸಮಸ್ಯೆ ದಾಂಪತ್ಯ ಜೀವನದಲ್ಲಿ ನಕರಾತ್ಮವಾಗಿ ಪರಿಣಮಿಸಿದ್ದು, ಇದು ಸಂಗಾಂತಿಗಳ ನಡುವಿನ ವೈಮನಸ್ಯಕ್ಕೆ ಕಾರಣವಾಗುತ್ತಿದೆ. ಪೋಸ್ಟ್​ಕೊಯ್ಟಲ್​ ಡೊಸ್ಪೊರಿಯಾ ಸಮಸ್ಯೆ ಲೈಂಗಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ ಎಂದು ಅಧ್ಯಯನ ತಂಡ ತಿಳಿಸಿದೆ.
First published:July 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ