Muskmelon Benefits: ಕರಬೂಜ ಹಣ್ಣಿನ ಲಾಭಗಳು ಗೊತ್ತಾದ್ರೆ ನೀವು ಮಿಸ್ ಮಾಡ್ದೆ ತಿಂದೇ ತಿಂತೀರಿ

ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಕರಬೂಜ ಕೂಡ ಇದೆ. ನೀರಿನಂಶ ಮತ್ತು ವಿವಿಧ ಪೋಷಕಾಂಶಗಳು ಹೆಚ್ಚಿದ್ದರೂ ಕ್ಯಾಲೋರಿಗಳು ಕಡಿಮೆ ಇದೆ. ಕಾರಣ ಕೊಬ್ಬು ಹೆಚ್ಚಿಸುವುದಿಲ್ಲ. ಕಿಡ್ನಿ ಸಮಸ್ಯೆ ಇರುವವರಿಗೂ ಒಳ್ಳೆಯದು. ಅಲ್ಲದೇ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರಬೂಜು (Muskmelon) ಹಣ್ಣು ತಿಂದರೆ ದೇಹಕ್ಕೆ ತುಂಬಾ ಒಳ್ಳೆಯದು. ಇದನ್ನು ತಿನ್ನುವುದರಿಂದ ಅನೇಕ ಕಾಯಿಲೆಗಳನ್ನು ನಮ್ಮ ದೇಹದಿಂದ ಓಡಿಸಬಹುದು. ಇದು ಬೇಸಿಗೆಯ ಬೆಳೆಯಾಗಿದ್ದು, ತುಂಬಾ ಸಿಹಿಯಾಗಿ ಮತ್ತು ರುಚಿಯಾಗಿರುತ್ತೆ. ಕಲ್ಲಂಗಡಿ (Watermelon) ಹಣ್ಣಿನಂತೆ ಹೆಚ್ಚಿನ ನೀರಿನ ಅಂಶವನ್ನು ಹೊಂದಿದ್ದು, ಬೇಸಿಗೆಯಲ್ಲಿ ತಿಂದ್ರೆ ತುಂಬಾ ಆರೋಗ್ಯಕ್ಕೆ ಉತ್ತಮ. ಇದು ಎಲ್ಲರಿಗೂ ಇಷ್ಟವಾಗುವ ಹಣ್ಣು (Fruit). ತೂಕ ಇಳಿಸಿಕೊಳ್ಳಲು ಬಯಸುವವರು ಈ ಹಣ್ಣನ್ನು ತಪ್ಪದೇ ತಿನ್ನಿ. ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಕರಬೂಜ ಕೂಡ ಇದೆ. ನೀರಿನಂಶ ಮತ್ತು ವಿವಿಧ ಪೋಷಕಾಂಶಗಳು (Proteins) ಹೆಚ್ಚಿದ್ದರೂ ಕ್ಯಾಲೋರಿಗಳು (Calories) ಕಡಿಮೆ ಇದೆ. ಕಾರಣ ಕೊಬ್ಬು ಹೆಚ್ಚಿಸುವುದಿಲ್ಲ. ಕಿಡ್ನಿ ಸಮಸ್ಯೆ ಇರುವವರಿಗೂ ಒಳ್ಳೆಯದು. ಅಲ್ಲದೇ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ಕರಬೂಜ ಹಣ್ಣಿನ ಲಾಭಗಳೇನು ಗೊತ್ತಾ?

ಜೀರ್ಣಶಕ್ತಿಗೆ ಸಹಾಯ ಮಾಡುತ್ತೆ
ಕರಬೂಜ ಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಚೆನ್ನಾಗಿ ಆಗುತ್ತೆ. ಇದರಲ್ಲಿರುವ ನೀರಿನ ಅಂಶವು ಪಚನ ಕ್ರಿಯೆಗೆ ಸಹಾಯ ಮಾಡುತ್ತೆ. ನಿಮಗೇನಾದ್ರೂ ಅಸಿಡಿಟಿ ಆಗಿದ್ರೆ, ಈ ಹಣ್ಣನ್ನು ತಪ್ಪದೇ ತಿನ್ನಿ, ಸಮಸ್ಯೆಲ್ಲಾ ಪರಿಹಾರ ಆಗುತ್ತೆ. ಇದರಲ್ಲಿರುವ ಖನಿಜಾಂಶವು ಜಠರದಲ್ಲಿ ಜೀರ್ಣಕ್ರಿಯೆಗೆ ತಡೆಯೊಡ್ಡುವ ಅಸಿಡಿಟಿಯನ್ನು ನಿವಾರಿಸುತ್ತದೆ.

ತೂಕ ಇಳಿಸಲು ಸಹಕಾರಿ ಈ ಕರಬೂಜ
ಕರಬೂಜದಲ್ಲಿ ಸೋಡಿಯಂ ಅಂಶ ಕಡಿಮೆ ಇರುತ್ತೆ. ಇದು ಕೊಲೆಸ್ಟ್ರಾಲ್ ರಹಿತ ಹಣ್ಣು. ಕ್ಯಾಲೋರಿಗಳು ಸಹ ಕಡಿಮೆ ಇರುವುದರಿಂದ, ಇದನ್ನು ತಿಂದರೆ ಹೊಟ್ಟೆಯೂ ತುಂಬುತ್ತದೆ. ತೂಕವೂ ಹೆಚ್ಚಾಗುವುದಿಲ್ಲ.

ಹೃದಯ ಸಂಬಂಧಿ ಕಾಯಿಲೆಗೆ ಒಳ್ಳೆಯದು
ಈ ಹಣ್ಣಿನಲ್ಲಿ ಪೊಟ್ಯಾಶಿಯಂ ಇರುವದರಿಂದ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಒಳ್ಳೆಯದು. ಇದು ರಕ್ತ ಹೆಪ್ಪುಗಟ್ಟದಂತೆ ನೋಡಿಕೊಂಡ. ರಕ್ತ ಸಂಚಾರ ಸರಾಗವಾಗಿರುತ್ತೆ. ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತೆ.

ಇದನ್ನೂ ಓದಿ: Healthy Food: 50ನೇ ವಯಸ್ಸಿನಲ್ಲಿ ಹೃದಯದ ಆರೋಗ್ಯವನ್ನು ಕಾಪಾಡುವ 10 ಸೂಪರ್ ಫುಡ್‍ಗಳಿವು

ಕಿಡ್ನಿ ಸಮಸ್ಯೆ ಇದ್ಯಾ ಈ ಹಣ್ಣು ತಿನ್ನಿ
ಕರಬೂಜವು ಮೂತ್ರಕೋಶದ ಸಂಬಂಧಿ ಕಾಯಿಲೆ ಬರದಂತೆ ತಡೆಯುತ್ತವೆ. ಆದ ಕಾರಣ ಯಾವುದೇ ಕಿಡ್ನಿ ಸಮಸ್ಯೆ ಬರುವುದಿಲ್ಲ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಈ ಹಣ್ಣು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಅಲ್ಲದೇ ಬಿಳಿ ರಕ್ತಕಣಗಳು ಹೆಚ್ಚಾಗುತ್ತವೆ. ಆಗ ಯಾವುದೇ ಕಾಯಿಲೆ ನಮ್ಮ ಬಳಿ ಸುಳಿಯಲ್ಲ.

ಕರಬೂಜವು ಮಲಬದ್ಧತೆಯಿಂದ ರಕ್ಷಿಸುತ್ತದೆ
ಈ ಹಣ್ಣು ಮಲಬದ್ಧತೆಯಿಂದ ರಕ್ಷಿಸುತ್ತದೆ. ನೀರಿನಾಂಶ ಇರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗಿ ಮಲಬದ್ಧತೆಯಿಂದ ನಮ್ಮನ್ನು ಕಾಪಾಡುತ್ತೆ.

ಇದನ್ನೂ ಓದಿ: Healthy Food: ಈ ಐದು ಆಹಾರ ಸೇವನೆ ಮಾಡಿದ್ರೆ ಸಾಕು; ಕೊಬ್ಬು, ಹೃದ್ರೋಗಗಳನ್ನು ನಿಮ್ಮ ಬಳಿ ಬರೋಕೆ ಬಿಡಲ್ಲ

ಗರ್ಭಿಣಿಯರಿಗೆ ತುಂಬಾ ಒಳ್ಳೆಯದು
ಈ ಹಣ್ಣಿನಲ್ಲಿ ಫೋಲಿಕ್ ಆಮ್ಲ ಹೆಚ್ಚಿನ ಪ್ರಮಾಣದಲ್ಲಿರುತ್ತೆ. ಇದು ಗರ್ಭಿಣಿಯ ದೇಹಕ್ಕೆ ಅಗತ್ಯ ಪೋಷಣೆ ಒದಗಿಸುತ್ತದೆ. ಗರ್ಭಿಣಿಯಾಗಲು ಬಯಸುವ ಹೆಣ್ಣುಮಕ್ಕಳಿಗೆ ಗರ್ಭನಾಳದ ತೊಂದರೆ ಇದ್ದರೆ, ಗರ್ಭ ನಿಲ್ಲದೇ ಇದ್ದರೆ ಈ ಹಣ್ಣಿನ ಸೇವನೆಯಿಂದ ಗರ್ಭ ನಿಲ್ಲುವ ಸಾಧ್ಯತೆ ಇದೆ.

ಹಲ್ಲು ನೋವಿನಿಂದ ಬಳಲುತ್ತಿರುವವರಿಗೂ ಒಳ್ಳೆಯದು
ಕರಬೂಜವು ಹಲ್ಲು ನೋವಿನಿಂದ ಬಳಲುತ್ತಿರುವವರಿಗೂ ಒಳ್ಳೆಯದು. ಈ ಹಣ್ಣಿನ ಸಿಪ್ಪೆಯಲ್ಲೂ ಹೆಚ್ಚು ಪೋಷಕಾಂಶಗಳಿದ್ದು, ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ, ತಣ್ಣಗೆ ಮಾಡಿ ಬಾಯಿ ಮುಕ್ಕಳಿಸಿದ್ರೆ ಹಲ್ಲು ನೋವು ಕಡಿಮೆಯಾಗುತ್ತೆ.

ಧೂಮಪಾನ ಬಿಡಬೇಕು ಅಂದುಕೊಂಡವರಿಗೂ ಒಳ್ಳೆಯದು
ಈ ಹಣ್ಣಿನಲ್ಲಿ ಹೆಚ್ಚಿನ ಪೋಷಕಾಂಶ ಗುಣಗಳಿದ್ದು, ಇದು ಧೂಮಪಾನ ಬಿಡಬೇಕು ಅಂದು ಕೊಂಡವರಿಗೆ ಒಳ್ಳೆಯದು. ಇದು ಮಾನಸಿಕ ಬಲ ತುಂಬುತ್ತೆ. ಅನಾರೋಗ್ಯಕರ ಅಭ್ಯಾಸಗಳನ್ನು ಓಡಿಸಲು ಸಹಾಯ ಮಾಡುತ್ತೆ.

ಒತ್ತಡ ನಿವಾರಿಸುವ ಗುಣ ಹೊಂದಿದೆ
ಈ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಇರುವದರಿಂದ ಒತ್ತಡವನ್ನು ನಿವಾರಿಸುತ್ತದೆ. ಹೃದಯ ಬಡಿತ ನಾರ್ಮಲ್ ಆಗಿರಲು ಸಹಾಯ ಮಾಡುತ್ತೆ. ಮೆದುಲೂ ಸರಾಗವಾಗಿ ತನ್ನ ಕೆಲಸ ಮಾಡುತ್ತದೆ. ಆದ ಕಾರಣ ಒತ್ತಡ ನಿವಾರಣೆಗೆ ಈ ಹಣ್ಣು ಉಪಯೋಗಕಾರಿಯಾಗಿದೆ.
Published by:Savitha Savitha
First published: