Hair Care: ಕೂದಲು, ನೆತ್ತಿಯ ರಕ್ಷಣೆಗೆ ಎಳ್ಳೆಣ್ಣೆಯ ಮಸಾಜ್! ಎಷ್ಟು ಪರಿಣಾಮಕಾರಿ?

ಎಳ್ಳೆಣ್ಣೆ ಚರ್ಮ ಕೂದಲು ಮತ್ತು ಆರೋಗ್ಯಕ್ಕೆ ಪರಿಹಾರ ನೀಡುತ್ತದೆ. ಇದು ಕೂದಲು ಮತ್ತು ನೆತ್ತಿಯ ಸೋಂಕಿನಿಂದ ನಿಮ್ಮನ್ನು ರಕ್ಷಿಸುವ ಕೆಲಸ ಮಾಡುತ್ತದೆ. ವಿಷಕಾರಿ ಅಂಶಗಳನ್ನು ತೊಡೆದು ಹಾಕಲು ಮತ್ತು ಯುವಿ ಕಿರಣಗಳಿಂದ ರಕ್ಷಣೆ ನೀಡುವ ಜೊತೆ ಅನೇಕ ಪ್ರಯೋಜನ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೂದಲಿಗೆ (Hair) ಬಳಸುವ ಅತ್ಯಂತ ಹಳೆಯ (Old) ಮತ್ತು ಅತ್ಯಂತ ಪರಿಣಾಮಕಾರಿ ಎಣ್ಣೆಗಳಲ್ಲಿ (Effective Oil) ಎಳ್ಳು ಎಣ್ಣೆ ಪ್ರಮುಖ ಆಗಿದೆ. ಎಳ್ಳು ಭಾರತೀಯ ಅಡಿಗೆ (Indian Recipe) ಮತ್ತು ಪಾಕ ಪದ್ಧತಿಯ ಪ್ರಮುಖ ಭಾಗ ಆಗಿದೆ. ಎಳ್ಳು ತಮ್ಮ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧ ಆಗಿವೆ. ಹಾಗಾಗಿ ಆಯುರ್ವೇದದಲ್ಲಿ ಇದು ಔಷಧೀಯ (Medicinal) ಗುಣ ಹೊಂದಿದೆ ಎಂದು ವಿವರಣೆ ನೀಡಲಾಗಿದೆ. ಇದನ್ನು ವಿವಿಧ ರೀತಿಯ ಔಷಧಿಗಳಲ್ಲಿ ನೀವು ಬಳಕೆ ಮಾಡಬಹುದು. ಆದರೆ ಇದು ನಿಮ್ಮ ಕೂದಲಿಗೆ ತುಂಬಾ ಪ್ರಯೋಜನಕಾರಿ ಸಹ ಆಗಿದೆ. ಇದು ಕೂದಲಿಗೆ ಪೋಷಣೆ ನೀಡುತ್ತದೆ. ಜೊತೆಗೆ ಕೂದಲಿನ ಅನೇಕ ಸಮಸ್ಯೆ ನಿವಾರಣೆ ಮಾಡುತ್ತದೆ.

    ಕೂದಲ ಆರೈಕೆಗೆ ಎಳ್ಳೆಣ್ಣೆ ತುಂಬಾ ವಿಶೇಷ

    ಎಳ್ಳಿನ ಎಣ್ಣೆ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಅತ್ಯಂತ ಹಳೆಯ ಪರಿಹಾರ ನೀಡುತ್ತದೆ. ಇದು ಕೂದಲು ಮತ್ತು ನೆತ್ತಿಯ ಸೋಂಕಿನಿಂದ ನಿಮ್ಮನ್ನು ರಕ್ಷಿಸುವ ಕೆಲಸ ಮಾಡುತ್ತದೆ. ವಿಷಕಾರಿ ಅಂಶಗಳನ್ನು ತೊಡೆದು ಹಾಕಲು ಮತ್ತು ಯುವಿ ಕಿರಣಗಳಿಂದ ರಕ್ಷಣೆ ನೀಡುವುದು ಸೇರಿದಂತೆ ಅನೇಕ ಪ್ರಯೋಜನ ನೀಡುತ್ತದೆ.

    ಕೂದಲು ಅಕಾಲಿಕ ಬಿಳಿಯಾಗುವಿಕೆ ತಡೆಯುತ್ತದೆ

    ಎಳ್ಳಿನ ಎಣ್ಣೆಯಲ್ಲಿ ಕೂದಲು ಕಪ್ಪಾಗಿಸುವ ಗುಣ ಇದೆ. ಇದು ಕೂದಲು ಅಕಾಲಿಕವಾಗಿ ಬಿಳಿಯಾಗುವಿಕೆ ತಡೆಯುತ್ತದೆ. ಕೂದಲಿನ ನೈಸರ್ಗಿಕ ಬಣ್ಣ ಕಾಪಾಡಿಕೊಳ್ಳಲು ಸಹಕಾರಿ. ಕೂದಲು ಬಿಳಿಯಾಗುವುದು, ಒತ್ತಡ ಮತ್ತು ಆತಂಕಕ್ಕೆ ಸಂಬಂಧಿಸಿದೆ. ಮಾಲಿನ್ಯ ಅಂಶ ಸೇರಿದಂತೆ ತೊಂದರೆಯನ್ನು ಎಳ್ಳಿನ ಎಣ್ಣೆಯು ಅದರ ಎಲ್ಲಾ ಉತ್ಕರ್ಷಣ ನಿರೋಧಕಗಳೊಂದಿಗೆ ಈ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ.

    ಇದನ್ನೂ ಓದಿ: ಹಿಮಾಲಯ ಅಂಜೂರದಲ್ಲಿದೆ ಹಲವು ಪೋಷಕಾಂಶ! ಆರೋಗ್ಯಕ್ಕೆ ಬೆಸ್ಟ್

    ಕೂದಲು ಬೆಳವಣಿಗೆ

    ಕೂದಲು ತೆಳುವಾಗುವುದು, ಬೋಳು ಸಮಸ್ಯೆಯಿಂದ ಬಳಲುತ್ತಿದ್ದರೆ ನಿಯಮಿತವಾಗಿ ನೆತ್ತಿಗೆ ಎಳ್ಳಿನ ಎಣ್ಣೆ ಹಾಕಿ. ಕೂದಲಿನ ಬೆಳವಣಿಗೆ ವೇಗಗೊಳಿಸುತ್ತದೆ. ದಪ್ಪ ಮತ್ತು ಬಲವಾದ ಕೂದಲು ನೀಡುತ್ತದೆ. ಕೂದಲು ಉದುರುವಿಕೆ ಚಿಕಿತ್ಸೆಗೆ ಎಳ್ಳಿನ ಎಣ್ಣೆ ಮಸಾಜ್ ಮಾಡಿ. ಕೂದಲಿಗೆ ಎಳ್ಳಿನ ಎಣ್ಣೆ ಮಸಾಜ್ ಮಾಡುವುದು ರಕ್ತ ಪರಿಚಲನೆ ಸುಧಾರಿಸುತ್ತದೆ.

    ಒಣ ಕೂದಲಿಗೆ ಪೋಷಣೆ

    ಶಾಖ ಮತ್ತು ಶುಷ್ಕತೆ ನಿಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಮಂದ ಮತ್ತು ದುರ್ಬಲಗೊಳಿಸುತ್ತದೆ. ಆರೈಕೆಗೆ ಎಳ್ಳಿನೆಣ್ಣೆ ಪರಿಣಾಮಕಾರಿ. ಕಂಡೀಷನಿಂಗ್ ಗುಣಲಕ್ಷಣ ಹೊಂದಿದೆ. ಅತಿಯಾದ ಶಾಖದಿಂದ ಪ್ರಭಾವಿತವಾಗದಂತೆ ನೋಡಿಕೊಳ್ಳುತ್ತದೆ. ಎಳ್ಳಿನೆಣ್ಣೆ ರಕ್ಷಣಾತ್ಮಕ ಪದರ ರೂಪಿಸುತ್ತದೆ.

    ಯುವಿ ಕಿರಣಗಳಿಂದ ರಕ್ಷಿಸುತ್ತದೆ

    ಎಳ್ಳಿನ ಎಣ್ಣೆಯು ಸೂರ್ಯನಿಂದ ಕೂದಲನ್ನು ರಕ್ಷಿಸಲು ಸಹ ಪರಿಣಾಮಕಾರಿ. ನೈಸರ್ಗಿಕ ಸೂರ್ಯನ ತಡೆಯುವ ಏಜೆಂಟ್. ಇದು ಕೂದಲಿನ ಸುತ್ತಲೂ ರಕ್ಷಣಾತ್ಮಕ ಪದರ ರೂಪಿಸುತ್ತದೆ. ಮಾಲಿನ್ಯದಿಂದ ಕೂದಲನ್ನು ರಕ್ಷಿಸುತ್ತದೆ. ತಲೆಹೊಟ್ಟು ತಡೆಯುತ್ತದೆ. ಎಳ್ಳಿನ ಎಣ್ಣೆಯು ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ನೆತ್ತಿಯ ಸೋಂಕುಗಳ ವಿರುದ್ಧವೂ ಪರಿಣಾಮಕಾರಿ. ತುರಿಕೆ ನಿಯಂತ್ರಿಸುತ್ತದೆ.

    ಕೂದಲು ಉದುರುವುದನ್ನು ತಡೆಯುತ್ತದೆ

    ಕೂದಲು ಉದುರುವುದನ್ನು ತಡೆಯಲು ಎಳ್ಳೆಣ್ಣೆ ಪ್ರಯೋಜನಕಾರಿ. ಎಳ್ಳಿನ ಎಣ್ಣೆ ಮಸಾಜ್ ನರಗಳನ್ನು ಶಾಂತಗೊಳಿಸುತ್ತದೆ. ಒತ್ತಡ ಕಡಿಮೆ ಮಾಡುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಎಳ್ಳಿನ ಎಣ್ಣೆಯನ್ನು ನೀಲಗಿರಿ ಎಣ್ಣೆಯೊಂದಿಗೆ ಬೆರೆಸಿದರೆ ಮೈಗ್ರೇನ್ ಮತ್ತು ನಿದ್ರಾಹೀನತೆ ತಡೆಯುತ್ತದೆ.

    ಇದನ್ನೂ ಓದಿ: ಕೂದಲು ಉದುರುವ ಸಮಸ್ಯೆ ಏಕೆ ಉಂಟಾಗುತ್ತದೆ? ಪರಿಹಾರವೇನು?

    ಎಳ್ಳಿನ ಎಣ್ಣೆ ಮಸಾಜ್

    ಸ್ವಲ್ಪ ಎಳ್ಳಿನ ಎಣ್ಣೆಯನ್ನು ಬಿಸಿ ಮಾಡಿ ಮತ್ತು ನಿಮ್ಮ ಕೂದಲು ಮತ್ತು ನೆತ್ತಿಗೆ ಮಸಾಜ್ ಮಾಡಿ. ಸುಮಾರು 15-20 ನಿಮಿಷಗಳ ಕಾಲ ಬಿಡಿ ಮತ್ತು ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ನೀವು ಇದನ್ನು ವಾರಕ್ಕೆ ಎರಡು ಬಾರಿ ಮಾಡಬಹುದು. ತೆಂಗಿನೆಣ್ಣೆಯಲ್ಲಿ ಎಳ್ಳೆಣ್ಣೆ ಬೆರೆಸಿ ಹಚ್ಚಿ ಸುಮಾರು 40 ನಿಮಿಷಗಳ ನಂತರ ತೊಳೆಯಿರಿ.
    Published by:renukadariyannavar
    First published: