• Home
  • »
  • News
  • »
  • lifestyle
  • »
  • Serotonin: ನಮ್ಮ ವರ್ತನೆಯನ್ನು ನಿಯಂತ್ರಿಸುವ ಹಾರ್ಮೋನ್‌ ಇದು!

Serotonin: ನಮ್ಮ ವರ್ತನೆಯನ್ನು ನಿಯಂತ್ರಿಸುವ ಹಾರ್ಮೋನ್‌ ಇದು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇತ್ತೀಚಿನ ಸಂಶೋಧನೆಯ ಸಂಶೋಧಕರಾದ ಫ್ರಾಂಕ್ ಶ್ರೋಡರ್ ಅವರು ಕೋವಿಡ್‌ ನಂತರ ಜನರಲ್ಲಿ ಆತಂಕ ಮತ್ತು ಖಿನ್ನತೆ ಹೆಚ್ಚಾಗುತ್ತಿದೆ ಎಂಬುದರ ಕುರಿತು ಅಧ್ಯಯನವನ್ನು ಕೈಗೊಂಡಿದ್ದಾರೆ. ಈ ಅಧ್ಯಯನದಲ್ಲಿ ತಿಳಿಸಲಾಗಿರುವ ಪರಿಹಾರ ಪ್ರಪಂಚದಾದ್ಯಂತ ಕೋವಿಡ್‌ ರೋಗಕ್ಕೆ ತುತ್ತಾದ ಜನರಲ್ಲಿ ಮಾನಸಿಕ ಅಸ್ವಸ್ಥತೆಯ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಅದೇನು ಎಂದು ಮುಂದೆ ತಿಳಿಯೋಣ ಬನ್ನಿ.

ಮುಂದೆ ಓದಿ ...
  • Share this:

ನ್ಯೂಯಾರ್ಕ್: ಕೋವಿಡ್ -19 (COVID-19) ಸಾಂಕ್ರಾಮಿಕ ರೋಗವು ಜಗತ್ತನ್ನು ಆಕ್ರಮಿಸಿದ ನಂತರ ಜನರಲ್ಲಿ ಒಂದು ರೀತಿಯ ಆತಂಕ ಯಾವಾಗಲೂ ಕಾಡುತ್ತಲೇ ಇರುತ್ತದೆ. ಕೋವಿಡ್‌ -19 ರೋಗವು ಜನರಲ್ಲಿ ಆತಂಕವನ್ನು ಹೆಚ್ಚು ಮಾಡಿದೆ ಎಂದು ಅನೇಕ ಅಧ್ಯಯನಗಳಿಂದ (Study) ತಿಳಿದು ಬಂದಿದೆ. ಇದರಿಂದ ಕೆಲವು ವರ್ಷಗಳಿಂದ ಆತಂಕ ಮತ್ತು ಖಿನ್ನತೆಯ (Depression) ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಬಾಯ್ಸ್ ಥಾಂಪ್ಸನ್ ಇನ್ಸ್ಟಿಟ್ಯೂಟ್‌ನ ಇತ್ತೀಚಿನ ಸಂಶೋಧನೆಯ ಸಂಶೋಧಕರಾದ ಫ್ರಾಂಕ್ ಶ್ರೋಡರ್ ಅವರು ಕೋವಿಡ್‌ ನಂತರ ಜನರಲ್ಲಿ ಆತಂಕ (Anxiety) ಮತ್ತು ಖಿನ್ನತೆ ಹೆಚ್ಚಾಗುತ್ತಿದೆ ಎಂಬುದರ ಕುರಿತು ಅಧ್ಯಯನವನ್ನು ಕೈಗೊಂಡಿದ್ದಾರೆ.


ಈ ಅಧ್ಯಯನದಲ್ಲಿ ತಿಳಿಸಲಾಗಿರುವ ಪರಿಹಾರ ಪ್ರಪಂಚದಾದ್ಯಂತ ಕೋವಿಡ್‌ ರೋಗಕ್ಕೆ ತುತ್ತಾದ ಜನರಲ್ಲಿ ಮಾನಸಿಕ ಅಸ್ವಸ್ಥತೆಯ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಅದೇನು ಎಂದು ಮುಂದೆ ತಿಳಿಯೋಣ ಬನ್ನಿ.


ಸಿರೋಟಿನ್‌ ಎಂಬ ಹಾರ್ಮೋನ್‌
1930ರ ದಶಕದಲ್ಲಿ ಮೊದಲ ಬಾರಿಗೆ ಗುರುತಿಸಲ್ಪಟ್ಟ ನ್ಯೂರೊಟ್ರಾನ್ಸ್ಮೀಟರ್‌ ಸಿರೊಟೋನಿನ್ ಎಂಬ ಹಾರ್ಮೋನ್‌, ಅನೇಕ ಪ್ರಾಣಿಗಳಿಂದ ಉತ್ಪತ್ತಿಯಾಗುವ ವಿಶೇಷ ಹಾರ್ಮೋನ್‌ ಆಗಿದೆ. ಈ ಹಾರ್ಮೋನ್‌ ಆಹಾರ, ನಿದ್ರೆ, ಮಾನವನ ಮನಸ್ಥಿತಿ, ಬುದ್ದಿ ಮತ್ತು ನಡವಳಿಕೆಯನ್ನು ಸಹ ನಿಯಂತ್ರಿಸುತ್ತದೆ ಎಂದು ತಿಳಿದುಬಂದಿದೆ.


ಆತಂಕಕ್ಕೆ ಇದೇ ಬೆಸ್ಟ್‌ ಔಷಧಿ
ಈ ಆತಂಕ, ಖಿನ್ನತೆ ಮತ್ತು ರೋಗಗಳು ಸೇರಿದಂತೆ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಪ್ರಾಥಮಿಕ ಸಾಧನವೆಂದರೆ ಸಿರೊಟೋನಿನ್‌ ಹಾರ್ಮೋನ್‌ ಆಗಿದೆ ಎಂದು ಹೇಳಬಹುದು. ಈ ಎಲ್ಲ ರೋಗಗಳಿಗೆ ಸಿರೋಟಿನ್‌ ಮಟ್ಟವನ್ನು ಸುಧಾರಿಸುವುದೇ ಬೆಸ್ಟ್‌ ಔಷಧಿ.


ಇದನ್ನೂ ಓದಿ: Health Tips: ಹಾಲುಣಿಸುವ ತಾಯಂದಿರು ಈ ಆಹಾರಗಳಿಂದ ದೂರವಿರಬೇಕಂತೆ


ಮಾನವ ಮತ್ತು ಪ್ರಾಣಿಗಳಲ್ಲಿನ ವರ್ತನೆ ಮತ್ತು ಆಹಾರ ಸೇವನೆಯನ್ನು ನಿಯಂತ್ರಿಸುವಲ್ಲಿ ಸಿರೊಟೋನಿನ್‌ ಹಾರ್ಮೋನ್‌ನ ಕಾರ್ಯವನ್ನು ಪರೀಕ್ಷಿಸಲು ನ್ಯೂರೋಬಯಾಲಜಿ ಸಂಶೋಧನೆಗೆ ಸಣ್ಣ ರೌಂಡ್‌ವರ್ಮ್ (ದುಂಡುಹುಳು) ಕೈನೊರ್ಹಬ್ಬೈಟಿಸ್ ಎಲೆಗನ್ಸ್(ರಾಸಾಯನಿಕ) ಅನ್ನು ಸಂಶೋಧನೆಯ ನೇರ ಮಾದರಿಯನ್ನಾಗಿ ಹೆಚ್ಚಾಗಿ ಬಳಸಲಾಗುತ್ತದೆ.


ಸಿರೊಟೋನಿನ್ ಅನ್ನು ಉತ್ಪಾದಿಸಲು ಸಿ ಎಲೆಗನ್ಸ್ ಎಂಬ ರಾಸಾಯನಿಕವನ್ನು ಬಳಸಲ್ಪಡುತ್ತದೆ ಎಂದು ದೀರ್ಘಕಾಲದಿಂದಲೂ ವಿಜ್ಞಾನಿಗಳು ಹೇಳುತ್ತಿದ್ದರು. ಆದರೆ ಕ್ರಮೇಣ ಆ ಅಧ್ಯಯನವು ಮೂಲೆಗುಂಪಾಗಿತ್ತು. ಈಗ ಮತ್ತೆ ಇಂತಹ ಅಧ್ಯಯನವು ಮುನ್ನೆಲೆಗೆ ಬಂದಿದೆ. ಕೊಲಂಬಿಯಾ ವಿಶ್ವವಿದ್ಯಾಲಯದ ಶ್ರೋಡರ್ ಗ್ರೂಪ್ ಮತ್ತು ಅಸೋಸಿಯೇಟ್ಸ್ ಅವರು ಇದನ್ನು ಪುನರ್‌ ಆರಂಭಿಸಿದ್ದಾರೆ.


ಸಂಶೋಧಕರು ಏನ್‌ ಹೇಳ್ತಾರೆ?
“ನಮ್ಮ ಮಾದರಿ ವ್ಯವಸ್ಥೆಯಲ್ಲಿ, ಸಿರೊಟೋನಿನ್‌ನ ಅರ್ಧದಷ್ಟು ಭಾಗವನ್ನು ಜೈವಿಕ ಸಂಶ್ಲೇಷಿತ ಮಾರ್ಗದಿಂದ ರಚಿಸಲಾಗಿದೆ” ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಕಲಾ ಮತ್ತು ವಿಜ್ಞಾನ ವಿಭಾಗದ ರಸಾಯನಶಾಸ್ತ್ರ ಮತ್ತು ರಾಸಾಯನಿಕ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಶ್ರೋಡರ್ ಅವರು ಹೇಳಿದ್ದಾರೆ.


‘ನೇಚರ್ ಕೆಮಿಕಲ್ ಬಯಾಲಜಿ’ ನಲ್ಲಿ ಪ್ರಕಟವಾದ ಲೇಖನವು ಈ ಸಂಶೋಧನೆಗಳನ್ನು ವಿವರಿಸುತ್ತದೆ. ವಿಜ್ಞಾನಿಗಳು ಸಿರೊಟೋನಿನ್ ಅನ್ನು ಅದರ ಉತ್ಪನ್ನಗಳಾಗಿ ಒಡೆಯುವ ಕಿಣ್ವವನ್ನು ಕಂಡುಹಿಡಿದಿದ್ದರು. ಈ ಸಂಶೋಧನೆಯು ಮೂರು ವರ್ಷಗಳಿಂದಲೂ ನಡೆಯುತ್ತಿದೆ. "ಆದ್ದರಿಂದ, ನಾವು ಆರಂಭದಲ್ಲಿ ಸಿರೋಟಿನ್‌ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ಗಮನಿಸುತ್ತೇವೆ. ತದನಂತರ ಅದನ್ನು ಇತರ ಅಣುಗಳಾಗಿ ಹೇಗೆ ಬದಲಾಯಿಸಲಾಗುತ್ತದೆ ಎಂಬುದನ್ನು ಸಂಶೋಧನೆ ಮಾಡಲಾಗುತ್ತದೆ” ಎಂದು ಸಂಶೋಧಕರು ಹೇಳಿದರು.


ಇದನ್ನೂ ಓದಿ:  Early Puberty: ಹೆಣ್ಣು ಮಕ್ಕಳಲ್ಲಿ ಅಕಾಲಿಕ ಪ್ರೌಢಾವಸ್ಥೆಗೆ ಕಾರಣವಾಗ್ತಿದೆ ಕೊರೋನಾ, ಸಂಶೋಧನೆಯಲ್ಲಿ ಬಹಿರಂಗ


ಶ್ರೋಡರ್ ಲ್ಯಾಬ್‌ನ ಪದವೀಧರ ವಿದ್ಯಾರ್ಥಿ ಮತ್ತು ಸಂಶೋಧನೆಯ ಮೊದಲ ಲೇಖಕ ಜಿಂಗ್‌ಫಾಂಗ್ ಯು ಅವರ ಹೆಚ್ಚಿನ ಸಂಶೋಧನೆಯು ಸಿರೊಟೋನಿನ್ ಉತ್ಪನ್ನಗಳು ಆಹಾರದ ನಡವಳಿಕೆಯನ್ನು ಹೇಗೆ ಪ್ರಭಾವಿಸುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಜಿಂಗ್‌ಪಾಂಗ್‌ ಯು ಅವರ ಪ್ರಕಾರ, “ಸಿರೊಟೋನಿನ್ ಉತ್ಪನ್ನಗಳೊಂದಿಗೆ ರಿಂಗ್‌ವಾರ್ಮ್‌ಗಳನ್ನು ಡೋಸಿಂಗ್ ಮಾಡುವುದರಿಂದ ಹೆಚ್ಚು ತಿನ್ನುವ ನಡವಳಿಕೆಯನ್ನು ನಿಲ್ಲಿಸಬಹುದು” ಎಂದು ತಿಳಿಸಿದ್ದಾರೆ. ಸಂಶೋಧಕ ಶ್ರೋಡರ್ ಅವರು “ಈ ಸಂಶೋಧನೆಯು ಮಾನವರ ಆಹಾರ, ನಿದ್ದೆ ಮತ್ತು ವರ್ತನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತದೆ” ಎಂದು ಹೇಳಿದರು.

Published by:Ashwini Prabhu
First published: