ಊದುಬತ್ತಿ ಹೊಗೆಯೂ ಆರೋಗ್ಯಕ್ಕೆ ಹಾನಿಕರ ಎಂದರೆ ನಂಬಲೇಬೇಕು!

ಊದುಬತ್ತಿಯ ಹೊಗೆಯನ್ನು ಉಸಿರಾಡುವುದರಿಂದ ಶಾಶ್ವಕೋಶದ ಕ್ಯಾನ್ಸರ್ ಸಂಭವಿಸುತ್ತದೆ. ಅದರಲ್ಲೂ ಧೂಮಪಾನಿಗಳಿಗೆ ಗಂಧದಕಡ್ಡಿಯ ಹೊಗೆಯಿಂದ ಕ್ಯಾನ್ಸರ್​ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

news18-kannada
Updated:March 24, 2020, 9:40 AM IST
ಊದುಬತ್ತಿ ಹೊಗೆಯೂ ಆರೋಗ್ಯಕ್ಕೆ ಹಾನಿಕರ ಎಂದರೆ ನಂಬಲೇಬೇಕು!
ಸಾಂದರ್ಭಿಕ ಚಿತ್ರ
  • Share this:
ಪ್ರತಿಯೊಂದು ಮನೆಯಲ್ಲೂ ಒಂದಲ್ಲಾ ಒಂದು ಸಂದರ್ಭದಲ್ಲಿ ಊದುಬತ್ತಿ (ಅಗರಬತ್ತಿ) ಹಚ್ಚುತ್ತೇವೆ. ಪೂಜೆಯಾಗಲಿ ಅಥವಾ ಇನ್ನಿತರ ಶುಭ ಕಾರ್ಯವಿರಲಿ ಅಲ್ಲಿ ಗಂಧದಕಡ್ಡಿ ಇದ್ದೇ ಇರುತ್ತದೆ. ಅದರ ಪರಿಮಳ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವುದರಿಂದ ಯಾರು ಕೂಡ ಅದರ ಹೊಗೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಅದೇ ಅಗರಬತ್ತಿಯ ಹೊಗೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದರೆ ನಂಬುತ್ತೀರಾ?

ಹೌದು, ಸಿಗರೇಟ್​ ಹೊಗೆಯಿಂದ ಹೇಗೆ ಕ್ಯಾನ್ಸರ್ ಬರುತ್ತದೆಯೋ, ಹಾಗೆಯೇ ಊದುಬತ್ತಿಯ ಹೊಗೆಯಿಂದಲೂ ಕ್ಯಾನ್ಸರ್ ಉಂಟಾಗುತ್ತದೆ. ಅಗರಬತ್ತಿಗಳಲ್ಲಿರುವ ಪಾಲಿ ಆರೊಮ್ಯಾಟಿಕ್ ಹೈಡ್ರೋಕಾರ್ಬನ್​ಗಳು (Poly-Aromatic Hydrocarbons) ಕ್ಯಾನ್ಸರ್​​ಗೆ ಕಾರಣವಾಗಬಲ್ಲದು. ಇದರಿಂದ ಅಸ್ತಮಾದಂತಹ ಉಸಿರಾಟಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳು ಕೂಡ ಕಾಣಿಸಿಕೊಳ್ಳಬಹುದು. ಊದುಬತ್ತಿ ಹೊಗೆಯಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಪ್ಲಾಸ್ಟಿಕ್ ಬಾಟಲ್‍ಗಳಲ್ಲಿ ಸಿಗುವ ನೀರು ಸುರಕ್ಷಿತವಲ್ಲ; ಸಂಶೋಧನೆಯಿಂದ ಅಚ್ಚರಿಯ ಮಾಹಿತಿ ಬಹಿರಂಗ

ಹೃದಯಾಘಾತದ ಅಪಾಯ : ಊದುಬತ್ತಿಯ ಹೊಗೆ ನಿರಂತರ ಉಸಿರಾಟದ ಕ್ರಿಯೆಗೆ ತೊಂದರೆ ಮಾಡುವುದಲ್ಲದೆ, ಹೃದಯದ ಜೀವಕೋಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಜೀವಕೋಶದ ಶಕ್ತಿ ಕುಗ್ಗುವುದರಿಂದ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಕಣ್ಣುಗಳಿಗೆ ಹಾನಿಕಾರಕ : ಇದರ ಹೊಗೆಯಲ್ಲಿ ಕಂಡು ಬರುವ ರಾಸಾಯನಿಕಗಳು ಕಣ್ಣಿನ ತುರಿಕೆ ಹಾಗೂ ಚರ್ಮದ ಅಲರ್ಜಿಗೆ ಕಾರಣವಾಗಬಹುದು.

ಶ್ವಾಸಕೋಶ ತೊಂದರೆ ಮತ್ತು ಕ್ಯಾನ್ಸರ್ : ಇದರಿಂದ ಹೊರಸೂಸುವ ಹೊಗೆಯು ಕಾರ್ಬನ್​ ಮೋನೊ ಆಕ್ಸೈಡ್​​ ಅನ್ನು ಹೊಂದಿರುತ್ತದೆ. ಇದು ಶ್ವಾಸಕೋಶದ ಮೇಲೆ ಹಾನಿ ಉಂಟು ಮಾಡುತ್ತದೆ. ಇದರಿಂದಾಗಿ ಶೀತ ಮತ್ತು ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಊದುಬತ್ತಿಯ ಹೊಗೆಯನ್ನು ಉಸಿರಾಡುವುದರಿಂದ ಶಾಶ್ವಕೋಶದ ಕ್ಯಾನ್ಸರ್ ಸಂಭವಿಸುತ್ತದೆ. ಅದರಲ್ಲೂ ಧೂಮಪಾನಿಗಳಿಗೆ ಗಂಧದಕಡ್ಡಿಯ ಹೊಗೆಯಿಂದ ಕ್ಯಾನ್ಸರ್​ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.ಗರ್ಭಿಣಿಯರು ದಾಳಿಂಬೆ ಸೇವಿಸಬಹುದೇ?: ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವಿದೆ!

ಅಸ್ತಮಾದ ತೊಂದರೆ : ಅಗರಬತ್ತಿಯಲ್ಲಿ ನೈಟ್ರೊಜನ್ ಮತ್ತು ಸಲ್ಫರ್ ಡೈ ಆಕ್ಸೈಡ್​ಗಳು ಕಂಡು ಬರುತ್ತದೆ. ಇದು ಆರೋಗ್ಯಕ್ಕೆ ತುಂಬ ಹಾನಿಕಾರಕ. ಇದರ ಹೊಗೆಯಿಂದ ಅಸ್ತಮಾದ ಸಮಸ್ಯೆಗಳು ಕೂಡ ಕಾಣಿಸುವ ಸಾಧ್ಯತೆಯಿದೆ.
First published: March 24, 2020, 9:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading