Hair Growth: ಕೂದಲು ವೇಗವಾಗಿ ಬೆಳೆಯಲು ನೀವು ಇಷ್ಟು ಮಾಡಿದ್ರೆ ಸಾಕಂತೆ

ಕಪ್ಪನೆಯ, ನೀಳವಾದ, ಸಮೃದ್ಧವಾದ ಕೂದಲು ಪಡೆಯುವ ಆಸೆ ಯಾರಿಗಿರಲ್ಲ ಹೇಳಿ. ಅಯ್ಯೋ ನನ್ ಕೂದಲು ಹೀಗಿದ್ರೆ ಚೆನ್ನಾಗಿರ್ತಿತ್ತು, ಹಾಗಿದ್ರೆ ನಾನು ಈ ಎಲ್ಲಾ ಹೇರ್ ಸ್ಟೈಲ್ ಮಾಡಬಹುದಿತ್ತು, ಹೀಗೆ ಕೂದಲಿನ ಮೇಲೆ ಒಂದಲ್ಲ ಒಂದು ಆಸೆ ಪ್ರತಿಯೊಬ್ಬರಿಗೂ ಇರುವಂತದ್ದು. ಈ ಎಲ್ಲಾ ಕನಸನ್ನು ನನಸು ಮಾಡಿಕೊಳ್ಳಲು ಕೂದಲಿಗೆ ಸೂಕ್ತವಾದ ಆರೈಕೆ ಮಾಡಬೇಕು. ಅದು ಹೇಗೆ ಇಲ್ಲಿದೆ ಓದಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಪ್ಪನೆಯ, ನೀಳವಾದ, ಸಮೃದ್ಧವಾದ ಕೂದಲು (Hair)  ಪಡೆಯುವ ಆಸೆ ಯಾರಿಗಿರಲ್ಲ ಹೇಳಿ. ಅಯ್ಯೋ ನನ್ ಕೂದಲು ಹೀಗಿದ್ರೆ ಚೆನ್ನಾಗಿರ್ತಿತ್ತು, ಹಾಗಿದ್ರೆ ನಾನು ಈ ಎಲ್ಲಾ ಹೇರ್ ಸ್ಟೈಲ್ (Hair Style) ಮಾಡಬಹುದಿತ್ತು, ಹೀಗೆ ಕೂದಲಿನ ಮೇಲೆ ಒಂದಲ್ಲ ಒಂದು ಆಸೆ ಪ್ರತಿಯೊಬ್ಬರಿಗೂ ಇರುವಂತದ್ದು. ಈ ಎಲ್ಲಾ ಕನಸನ್ನು ನನಸು ಮಾಡಿಕೊಳ್ಳಲು ಕೂದಲಿಗೆ ಸೂಕ್ತವಾದ ಆರೈಕೆ (Care) ಮಾಡಬೇಕು. ಉತ್ತಮ ಆಹಾರ (Good Food), ಅಭ್ಯಾಸ ಕ್ರಮ, ಪೂರಕಗಳು ಹೀಗೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಅಂಶಗಳಾಗಿವೆ. ಕೂದಲು ತಜ್ಞರು ಹೇಳುವ ಪ್ರಕಾರ ಕೂದಲಿಗೆ ಏನೆಲ್ಲಾ ಆರೈಕೆ ಮಾಡಬೇಕು ಎಂಬುದರ ಜೊತೆಗೆ ಯಾವುದನ್ನೆಲ್ಲಾ ಮಾಡಬಾರದು ಎಂಬ ವಿಷಯ ಸಹ ನಮಗೆ ಚೆನ್ನಾಗಿ ತಿಳಿಸಿರಬೇಕು.

ಕೂದಲು ವೇಗವಾಗಿ ಮತ್ತು ಬಲವಾಗಿ ಬೆಳೆಯದೇ ಇರಲು ಕಾರಣಗಳು

  •  ಜೆನೆಟಿಕ್ಸ್

  • ಹಾರ್ಮೋನ್ ಅಸಮತೋಲನ

  • ಪ್ರೋಟೀನ್, ವಿಟಮಿನ್ ಸಿ, ವಿಟಮಿನ್ ಬಿ, ಕೊಬ್ಬಿನಾಮ್ಲಗಳು ಮತ್ತು ಆಂಟಿ-ಆಕ್ಸಿಡೆಂಟ್‌ಗಳಂತಹ ಸರಿಯಾದ ಪೋಷಣೆಯ ಕೊರತೆ

  • ಕೆಲವು ಔಷಧಿಗಳು (ಹಾಗೆಯೇ ಕಿಮೊಥೆರಪಿ ಅಥವಾ ವಿಕಿರಣಶೀಲತೆಯ ಕಾರ್ಯವಿಧಾನಗಳಿಗೆ ಒಡ್ಡಿಕೊಳ್ಳುವುದು)

  • ಖಿನ್ನತೆ, ಒತ್ತಡ, ಮತ್ತು ಆತಂಕ, ತೂಕ ನಷ್ಟ

  • ಕೆಲವು ರೋಗಗಳು ಅಥವಾ ನಿರ್ಣಾಯಕ ಪರಿಸ್ಥಿತಿಗಳು


ಆರೋಗ್ಯಕರ ಕೂದಲಿಗೆ 16 ಸಲಹೆಗಳು
ನಿಮ್ಮ ಕೂದಲಿನ ಬೆಳವಣಿಗೆ, ಆರೋಗ್ಯ ಮತ್ತು ಹೊಳಪನ್ನು ಹೆಚ್ಚಿಸಲು ನೀವು ಈ ಅಂಶಗಳ ಬಗ್ಗೆ ತಿಳಿದುಕೊಂಡರೆ ಸಾಕು. ಕೂದಲು ತಜ್ಞರು ಶಿಫಾರಸು ಮಾಡಿರುವ ಈ 16 ಮಾಡುವ ಮತ್ತು ಮಾಡಬಾರದ ಅಂಶಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.

1) ನೈಸರ್ಗಿಕವಾಗಿ ಕೂದಲು ಒಣಗಲು ಬಿಡಿ
ಅತಿಯಾದ ಶಾಖ ಕೂದಲನ್ನು ಹಾನಿಗೊಳಿಸುತ್ತದೆ ಮತ್ತು ಕವಲೊಡೆಯುವಿಕೆಗೆ ಕಾರಣವಾಗುತ್ತದೆ. ನೀವು ನಿಯಮಿತವಾಗಿ ಹೀಟ್ ಮೂಲಕ ಸ್ಟ್ರೈಟ್ ಮಾಡುವುದು ಅಥವಾ ಕರ್ಲಿಂಗ್ ಮಾಡುವುದು, ಹೇರ್ ಡ್ರೈ ಮಾಡುವುದರಿಂದ ನಿಮ್ಮ ಕೂದಲಿಗೆ ಹಾನಿಯುಂಟಾಗುತ್ತದೆ. ಹೀಗಾಗಿ ನಿಮ್ಮ ಕೂದಲು ನೈಸರ್ಗಿಕವಾಗಿ ಒಣಗಲು ಬಿಡುವುದು ಉತ್ತಮ. ಆದರೆ ಅನಿವಾರ್ಯ ಕಾರಣದಿಂದ ಹೇರ್ ಡ್ರೈ ಮಾಡಲೇಬೇಕಾಗಿದ್ದಾಗ ಉತ್ತಮ ಸೀರಮ್ ಬಳಸಿ.

ಇದನ್ನೂ ಓದಿ: Good Morning: ಬೆಳಗ್ಗೆ ಎದ್ದೇಳೋಕೆ ಬೇಜಾರಾಗುತ್ತಿದೆಯಾ? ನಿಮ್ಮ ದಿನ ಚೆನ್ನಾಗಿರಬೇಕು ಅಂದ್ರೆ ಈ ರೀತಿ ಮಾಡಿ

2) ಒದ್ದೆ ಕೂದಲನ್ನು ಬಾಚಬೇಡಿ
ತಲೆ ಸ್ನಾನದ ಬಳಿಕ ಕೂದಲನ್ನು ಟವೆಲ್ ಅಲ್ಲಿ ಹಾಗೆಯೇ ಕಟ್ಟಿ ಬಿಡಬೇಡಿ, ಅದನ್ನು ನೈಸರ್ಗಿಕವಾಗಿ ಒಣಗಲು ಬಿಡಿ ಮತ್ತು ಒದ್ದೆ ಕೂದಲನ್ನು ಬಾಚಬೇಡಿ. ನೀವು ನೀಳ ಕೂದಲು ಹೊಂದಿದ್ದರೆ, ಕೂದಲು ಒಣಗಿದ ಮೇಲೆ ಮರದ ಅಗಲವಾದ ಹಲ್ಲಿನ ಬಾಚಣಿಗೆಯಿಂದ ನಿಧಾನವಾಗಿ ಬಾಚಿಕೊಳ್ಳಿ. ನೀವು ಸುರುಳಿಯಾಕಾರದ ಕೂದಲನ್ನು ಹೊಂದಿದ್ದರೆ ಮಾತ್ರ ಭಾಗಶಃ ಒದ್ದೆಯಾಗಿರುವಾಗ ಮರದ ಅಗಲ-ಹಲ್ಲಿನ ಬಾಚಣಿಗೆಯಿಂದ ನಿಧಾನವಾಗಿ ಬಿಡಿಸಿ.

3) ಕಂಡೀಷನರ್ ಬಳಸಿ
ಪ್ರತಿ ಬಾರಿ ನಿಮ್ಮ ಶಾಂಪೂ ನಂತರ ಕಂಡಿಷನರ್ ಬಳಸಿ. ಹಲವರು ಶ್ಯಾಂಪೂಗೆ ಮಾತ್ರ ಆದ್ಯತೆ ನೀಡುತ್ತಾರೆ. ಆದರೆ ಇದು ತಪ್ಪು. ಕಂಡೀಷನರ್ ನಿಮ್ಮ ಕೂದಲಿನ ಎಳೆಗಳನ್ನು ಬಲಪಡಿಸುತ್ತದೆ ಮತ್ತು ಸೂರ್ಯನ ಶಾಖ, ಆರ್ದ್ರತೆ ಮತ್ತು ಹಾನಿಕಾರಕ ನೇರಳಾತೀತ ವಿಕಿರಣ ಕಿರಣಗಳಿಂದ ರಕ್ಷಿಸುತ್ತದೆ.

4) ಬಣ್ಣಗಳನ್ನು ತಪ್ಪಿಸಿ
ಬ್ಲೀಚ್ ಮತ್ತು ಇತರ ರೀತಿಯ ರಾಸಾಯನಿಕ ಕೂದಲು ಚಿಕಿತ್ಸೆಗಳು ( ನಿಮ್ಮ ಕೂದಲನ್ನು ದುರ್ಬಲಗೊಳಿಸುತ್ತವೆ. ಕೂದಲು ವೇಗವಾಗಿ ಮತ್ತು ಬಲವಾಗಿ ಬೆಳೆಯಲು ನೈಸರ್ಗಿಕ ಕೂದಲಿನ ಬಣ್ಣವನ್ನೇ ಆರಿಸಿಕೊಳ್ಳಿ. ಬೇರುಗಳಿಗೆ ನೇರವಾಗಿ ಬಣ್ಣಗಳನ್ನು ಅನ್ವಯಿಸುವುದನ್ನು ತಪ್ಪಿಸಿ.

5) ಕೂದಲು ಬೆಳವಣಿಗೆಯ ಔಷಧಿಗಳು
ಮಿನೊಕ್ಸಿಡಿಲ್ ಒಂದು ಕೂದಲ ಔಷಧವಾಗಿದ್ದು ಅದು ಉಳಿದಿರುವ ಕೂದಲನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅಂತಿಮವಾಗಿ ನಿಮ್ಮ ಕೂದಲನ್ನು ವೇಗವಾಗಿ ಮತ್ತು ಬಲವಾಗಿ ಬೆಳೆಯುವಂತೆ ಮಾಡುತ್ತದೆ. ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಲು ಸೂಚಿಸಲಾದ ಔಷಧಿಗಳಲ್ಲಿ ಫಿನಾಸ್ಟರೈಡ್ (ಪ್ರೊಪೆಸಿಯಾ) ಮತ್ತು ಕಾರ್ಟಿಕೊಸ್ಟೆರಾಯ್ಡ್ (ಆಲ್ಡಾಕ್ಟೋನ್) ಸೇರಿವೆ. ಕೂದಲಿನ ಬೆಳವಣಿಗೆಗೆ ಯಾವುದೇ ಔಷಧಿಯನ್ನು ಬಳಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.

6) ಕೂದಲ ಚಿಕಿತ್ಸೆ ಬಗ್ಗೆ ಯೋಚಿಸಿ
ಮೈಕ್ರೊ-ನೀಡ್ಲಿಂಗ್ ಎಂದರೆ ನಿಮ್ಮ ಕೂದಲು ಅಥವಾ ನೆತ್ತಿಯಲ್ಲಿ ನಿಮಿಷದ ಪಂಕ್ಚರ್‌ಗಳನ್ನು ರೂಪಿಸಲು ಅದರ ಮೇಲೆ ಹಲವಾರು ಸೂಕ್ಷ್ಮ ಸೂಜಿಗಳನ್ನು ಹೊಂದಿರುವ ರೋಲರ್ ಅಥವಾ ರಾಡ್ ಅನ್ನು ಬಳಸುವುದು. ಇದು ವಿಶೇಷವಾಗಿ ಮಿನೊಕ್ಸಿಡಿಲ್‌ನಂತಹ ಪರ್ಯಾಯ ಚಿಕಿತ್ಸೆಗಳೊಂದಿಗೆ ಬಳಸಿದರೆ ಕೂದಲು ಉದುರುವಿಕೆ ನಿಲ್ಲಬಹುದು.

7) ಕೂದಲು ಕಿರುಚೀಲಗಳನ್ನು ಕೆಫೀನ್ ಮಾಡಿ
ಕೆಫೀನ್ ಕೂದಲಿನ ಬೆಳವಣಿಗೆಗೆ ಸಹಕಾರಿ. ಕೆಫೀನ್‌ನಿಂದ ತುಂಬಿದ ಕೂದಲ ರಕ್ಷಣೆಯ ಉತ್ಪನ್ನಗಳನ್ನು ಬಳಸುವುದರಿಂದ ನಿಮ್ಮ ಕೂದಲು ವೇಗವಾಗಿ ಮತ್ತು ಬಲವಾಗಿ ಬೆಳೆಯಲು ಸಹಕಾರಿಯಾಗುತ್ತದೆ.

8) ಆಗಾಗ ನಿಮ್ಮ ಕೂದಲನ್ನು ಸ್ವಲ್ಪ ಕತ್ತರಿಸಿ
ಆಗಾಗ ಕೂದಲನ್ನು ಟ್ರಿಮ್ ಮಾಡುವುದರಿಂದ ಕೂದಲು ವೇಗವಾಗಿ ಬೆಳೆಯುತ್ತದೆ. ದುರ್ಬಲ ಕೂದಲು ಎಳೆಗಳನ್ನು ಹಾಗೆಯೇ ಬಿಡುವುದರಿಂದ ಆ ತುದಿಗಳು ಒಡೆಯಬಹುದು. ಒಡೆದ ತುದಿಗಳು ನಿಮ್ಮ ಕೂದಲಿನ ಶಾಫ್ಟ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಆಗಾಗ ಕೂದಲನ್ನು ಕತ್ತರಿಸುವುದು ಉತ್ತಮ.

9 ಒತ್ತಡ ಕಡಿಮೆ ಮಾಡಿ
ದೀರ್ಘಕಾಲದ ಒತ್ತಡವು ನಿಮ್ಮ ಕೂದಲ ಮೇಲೆ ನೇರ ಪರಿಣಾಮ ಬೀರುತ್ತದೆ. ಒತ್ತಡವು ಕೂದಲಿನ ಅಲೋಪೆಸಿಯಾ, ಟ್ರೈಕೊಟಿಲೊಮೇನಿಯಾಕ್ಕೆ ಕಾರಣವಾಗಬಹುದು. ಹೀಗಾಗಿ ನಿಮ್ಮ ಒತ್ತಡವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.

ಇದನ್ನೂ ಓದಿ:  Hair Care: ಕೂದಲ ಆರೈಕೆ ಮಾಡುವಾಗ ಈ ತಪ್ಪು ಮಾಡಿದ್ರೆ ಸಮಸ್ಯೆ ತಪ್ಪಿದ್ದಲ್ಲ

10) ಕೂದಲ ಆರೈಕೆ ಮಾಡಿ
ಕೂದಲು ಆರೋಗ್ಯವಾಗಿರಬೇಕೆಂದರೆ ಸರಿಯಾದ ಆರೈಕೆ ಕೂಡ ಮುಖ್ಯ. ಹಾಗಾಗಿ ವಾರಕ್ಕೊಮ್ಮೆ ಎಣ್ಣೆ ಮಸಾಜ್, ಹೇರ್ ಪ್ಯಾಕ್, ಶ್ಯಾಂಪೂ, ಕಂಡೀಷನರ್ ಇವುಗಳನ್ನೆಲ್ಲಾ ಬಳಸಿ.

11) ಕೂದಲನ್ನು ಬಿಗಿಯಾಗಿ ಕಟ್ಟಿಕೊಳ್ಳಬೇಡಿ
ಕೂದಲನ್ನು ಬಿಗಿಯಾಗಿ ಜಡೆ ಹಣೆದುಕೊಳ್ಳುವುದನ್ನು ತಪ್ಪಿಸಿ. ಇದು ನಿಮ್ಮ ಕೂದಲ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಮತ್ತು ನಿಮ್ಮ ನೆತ್ತಿಗೂ ಹಾನಿ ಮಾಡುತ್ತದೆ. ಹಾಗಾಗಿ ಸ್ವಲ್ಪ ಸಡಿಲವಾಗಿ ಕೂದಲನ್ನು ಕಟ್ಟಿಕೊಳ್ಳಿ. ಕೂದಲು ಕಟ್ಟುವಾಗ ಮೃದುವಾದ ಬೆಂಡ್ ಗಳನ್ನು ಬಳಸಿ.

12) ಬೇಗನೆ ತೂಕವನ್ನು ಕಳೆದುಕೊಳ್ಳಬೇಡಿ
ತೂಕ ಇಳಿಕೆ ಪ್ರಕ್ರಿಯೆ ಕೂಡ ಒತ್ತಡದಂತೆ ಕೂದಲಿಗೆ ಹಾನಿ ಮಾಡುತ್ತದೆ. ತೀವ್ರ ಹಠಾತ್ ತೂಕ ನಷ್ಟವು ನಿಮ್ಮ ಕೂದಲಿನ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ತೂಕ ಇಳಿಕೆ ಪ್ರಯಾಣದಲ್ಲಿ ನಿಮ್ಮ ಕೂದಲಿನ ಮೇಲೆ ನಕಾರಾತ್ಮಕ ಪರಿಣಾಮ ಬೀರದ ಆರೋಗ್ಯಕರ, ನಿಧಾನ ಗತಿಯ ಊಟದ ಯೋಜನೆಯನ್ನು ಅನುಸರಿಸುವುದು ಯಾವಾಗಲೂ ಉತ್ತಮ.

13) ಪೂರಕಗಳನ್ನು ಸಕಾಲಿಕವಾಗಿ ತೆಗೆದುಕೊಳ್ಳಿ
ಕೂದಲ ಬೆಳವಣಿಗೆಗೆ ಪೂರಕಗಳನ್ನು ತೆಗೆದುಕೊಳ್ಳುತ್ತಿದ್ದರೆ ಅವುಗಳನ್ನು ಸಕಾಲಿಕವಾಗಿ ತೆಗೆದುಕೊಳ್ಳುತ್ತಿರಿ. ಕೆಲವು ಪೋಷಕಾಂಶಗಳ ಕೊರತೆಯನ್ನು ನೀವು ಹೊಂದಿದ್ದರೆ ಈ ಪೂರಕಗಳು ಅವುಗಳನ್ನು ಸರಿದೂಗಿಸಿ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತವೆ.
ಅಂತೆಯೇ, ವಿಟಮಿನ್ ಡಿ ಮತ್ತು ಬಿ ಆರೋಗ್ಯಕರ ಕೂದಲಿನಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಜೊತೆಗೆ ಒಮೆಗಾ-3 ಕೊಬ್ಬಿನಾಮ್ಲಗಳು, ಸತು, ಮತ್ತು ಬಿ ಕಾಂಪ್ಲೆಕ್ಸ್ ಅಥವಾ ಬಯೋಟಿನ್ ಗಳನ್ನು ಸೇರಿಸಿಕೊಳ್ಳುವುದು ಸಹ ಉತ್ತಮ.

14) ಪ್ರೋಟೀನ್ ಅತ್ಯಗತ್ಯ
ನಿಮ್ಮ ಕೂದಲು ವೇಗವಾಗಿ ಮತ್ತು ಬಲವಾಗಿ ಬೆಳೆಯಲು ಸಾಕಷ್ಟು ಪ್ರೋಟೀನ್ ಅತ್ಯವಶ್ಯ. ಹೀಗಾಗಿ ಸಮತೋಲಿತ ಊಟವನ್ನು ತಿನ್ನಲು ಪ್ರಯತ್ನಿಸಿ. ಕೂದಲ ತಜ್ಷರು ಪ್ರತಿದಿನ ಕನಿಷ್ಠ ಐವತ್ತು ಗ್ರಾಂ ಪ್ರೋಟೀನ್ ಅನ್ನು ಸೇವಿಸಲು ಸಲಹೆ ನೀಡುತ್ತಾರೆ.

ಇದನ್ನೂ ಓದಿ:  Beauty Tips: ಮಳೆಗಾಲದಲ್ಲಿ ಅಕ್ಕಿ ನೀರನ್ನು ಹೀಗೆ ಬಳಸಿದ್ರೆ ತ್ವಚೆಯ ಅಂದ ಹೆಚ್ಚಾಗುತ್ತೆ

15) ರೇಷ್ಮೆ ದಿಂಬಿನ ಕವರ್‌ಗಳನ್ನು ಬಳಸಿ
ದುರ್ಬಲವಾದ ಕೂದಲು ಹೊಂದಿರುವವರು ಕೆಲವು ಜನರು ತಮ್ಮ ಕೂದಲನ್ನು ರಕ್ಷಿಸಲು ರೇಷ್ಮೆ (ಅಥವಾ ಸ್ಯಾಟಿನ್) ಸ್ಕಾರ್ಫ್ ಅನ್ನು ಮಲಗುವಾಗ ದಿಂಬುಗಳ ಮೇಲೆ ಹಾಕಿಕೊಳ್ಳುತ್ತಾರೆ. ಇದು ಒಣಗಿದ, ಒರಟಾದ ಕೂದಲ ವಿರುದ್ಧ ಸಹಾಯ ಮಾಡುತ್ತದೆ.

16) ಮಸಾಜ್ ಮಾಡಿ
ನಿಯಮಿತ ತಲೆ ಮಸಾಜ್ ನಿಮ್ಮ ಕೂದಲನ್ನು ವೇಗವಾಗಿ ಮತ್ತು ಬಲವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಜೊತೆಗೆ ನೆತ್ತಿಯ ಮಸಾಜ್‌ಗಳು ಒತ್ತಡ ನಿವಾರಿಸಲು ಸಹ ಸಹಾಯ ಮಾಡುತ್ತದೆ. ಪ್ರತಿದಿನ ಕೆಲವು ನಿಮಿಷಗಳ ಕಾಲ ನಿಮ್ಮ ನೆತ್ತಿಯನ್ನು ನಿಧಾನವಾಗಿ
ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಆರೋಗ್ಯಕರ ಕೂದಲು ನಿಮ್ಮದಾಗುತ್ತದೆ.
Published by:Ashwini Prabhu
First published: