• Home
  • »
  • News
  • »
  • lifestyle
  • »
  • Physical Activities: ಆಲಸ್ಯದಿಂದ ಹೆಚ್ಚಲಿದೆ ಹೃದಯ ರೋಗ ಹಾಗೂ ಇನ್ನಿತರ ಕಾಯಿಲೆಗಳು

Physical Activities: ಆಲಸ್ಯದಿಂದ ಹೆಚ್ಚಲಿದೆ ಹೃದಯ ರೋಗ ಹಾಗೂ ಇನ್ನಿತರ ಕಾಯಿಲೆಗಳು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದೈಹಿಕ ಚಟುವಟಿಕೆಗಳು ವ್ಯಕ್ತಿಯ ಸ್ವಂತ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬೇಕೇ ಬೇಕು. ಜೊತೆಗೆ ಇದು ಸಮಾಜ ಪರಿಸರ ಮತ್ತು ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತದೆ.

  • Share this:

    ಇತ್ತೀಚೆಗೆ ದೈಹಿಕ ಚಟುವಟಿಕೆ 2022 ರ ಜಾಗತಿಕ ಸ್ಥಿತಿಯ ವರದಿಯನ್ನು (Report) ವಿಶ್ವ ಆರೋಗ್ಯ ಸಂಸ್ಥೆಯು (WHO) ಬಿಡುಗಡೆ ಮಾಡಿದೆ. ದೈಹಿಕ ಚಟುವಟಿಕೆ ಮೇಲಿನ ಜಾಗತಿಕ ಕ್ರಿಯಾ ಯೋಜನೆ 2018 ರಿಂದ 2030 . ಇದರಲ್ಲಿ ಸಂಸ್ಥೆಯು ನಿಯಮಿತ ದೈಹಿಕ ಚಟುವಟಿಕೆ (Physical Activities) ಅಗತ್ಯತೆ ಎಷ್ಟಿದೆ ಎಂಬುದನ್ನು ಎತ್ತಿ ತೋರಿಸಿದೆ. ವಾಕಿಂಗ್, ಸೈಕ್ಲಿಂಗ್, ಕ್ರೀಡೆ ಸೇರಿದಂತೆ ಇತರೆ ದೈಹಿಕ ಚಟುವಟಿಕೆಗಳು ವ್ಯಕ್ತಿಯ ಸ್ವಂತ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬೇಕೇ ಬೇಕು. ಜೊತೆಗೆ ಇದು ಸಮಾಜ, ಪರಿಸರ ಮತ್ತು ಆರ್ಥಿಕತೆ ಮೇಲೂ ಪರಿಣಾಮ ಬೀರಲಿದ್ದು, ಪ್ರಯೋಜನಕಾರಿ ಆಗಿದೆ ಎಂದು ಡಬ್ಲ್ಯುಎಚ್ ಒ ಮುಖ್ಯಸ್ಥ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.


    ಜಡ ಜೀವನಶೈಲಿಯಿಂದ ಮಾರಣಾಂತಿಕ ಕಾಯಿಲೆ


    ವ್ಯಕ್ತಿಯ ಜಡ ಜೀವನಶೈಲಿಯಿಂದ ಮಾರಣಾಂತಿಕ ಕಾಯಿಲೆ ಪ್ರಕರಣಗಳು ಹೆಚ್ಚಾಗುತ್ತವೆ. ಡಬ್ಲ್ಯುಎಚ್ ಒ ವರದಿ ಪ್ರಕಾರ, ಜಡ ಜೀವನಶೈಲಿಯು ಸಾಂಕ್ರಾಮಿಕವಲ್ಲದ ರೋಗಗಳ ಪ್ರಕರಣ ಹೆಚ್ಚಲು ಕಾರಣವಾಗಬಹುದು. ಜಾಗತಿಕವಾಗಿ, 2020 ಮತ್ತು 2030 ರ ನಡುವೆ ಸುಮಾರು 500 ಮಿಲಿಯನ್ ಹೊಸ ಎನ್‌ ಸಿಡಿ ಪ್ರಕರಣಗಳು ವರದಿಯಾಗುತ್ತವೆ ಎಂದು ಹೇಳಿದೆ.


    ವರದಿಯ ಪ್ರಕಾರ, ಸುಮಾರು 47 ಪ್ರತಿಶತ ಅಧಿಕ ರಕ್ತದೊತ್ತಡದಿಂದ ಉಂಟಾಗುವ ಕಾಯಿಲೆಗಳಿಂದ ಮತ್ತು 43 ಪ್ರತಿಶತ ಖಿನ್ನತೆಯಿಂದ ಉಂಟಾಗುತ್ತದೆ ಎಂದು ಹೇಳಲಾಗಿದೆ.


    ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಈ ಕಾಳು ಪರಿಹಾರ ಅನ್ನುತ್ತೆ ಆಯುರ್ವೇದ!


    80 ಪ್ರತಿಶತ ಹದಿಹರೆಯದವರು ದೈಹಿಕವಾಗಿ ಸಕ್ರಿಯವಾಗಿಲ್ಲ


    ಡಬ್ಲ್ಯುಎಚ್ ಒ ವರದಿ ಪ್ರಕಾರ, ಪ್ರತಿ ನಾಲ್ಕು ವಯಸ್ಕರಲ್ಲಿ ಒಬ್ಬರು ಅಥವಾ ಹೆಚ್ಚಿನವರು ಮತ್ತು 80 ಪ್ರತಿಶತ ಹದಿಹರೆಯದವರು ಯಾವುದೇ ದೈಹಿಕ ಚಟುವಟಿಕೆ ಹೊಂದಿಲ್ಲ. ಜೊತೆಗೆ ದೈಹಿಕ ನಿಷ್ಕ್ರಿಯತೆ ಮಟ್ಟವು ಹುಡುಗಿಯರಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಡಬ್ಲ್ಯುಎಚ್ ಒ ವರದಿ ಮತ್ತು ಹಲವಾರು ಸಂಶೋಧನಾ ಅಧ್ಯಯನಗಳ ಪ್ರಕಾರ,


    ದೈಹಿಕ ನಿಷ್ಕ್ರಿಯತೆ ಅನೇಕ ರೋಗಗಳ ಹುಟ್ಟು ಹಾಕುವ ಅಪಾಯಕಾರಿ ಅಂಶವಾಗಿದೆ. ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆ ಕಡಿಮೆ ಮಾಡುವಂತೆ ಒಬ್ಬ ವ್ಯಕ್ತಿಯು ಹೆಚ್ಚು ಗಂಟೆಗಳ ಪರಿಣಾಮಕಾರಿ ದೈಹಿಕ ಚಟುವಟಿಕೆ ಜೀವನದಲ್ಲಿ ಅಳವಡಿಸಿಕೊಂಡರೆ ಅನೇಕ ರೋಗಗಳನ್ನು ತಡೆಯಬಹುದು.


    ಆರೋಗ್ಯಕರ ಜೀವನಕ್ಕೆ ದೈಹಿಕ ಚಟುವಟಿಕೆ ಅತ್ಯಗತ್ಯ


    ಡಬ್ಲ್ಯುಎಚ್ ಒ ಪ್ರಕಾರ, ದೈಹಿಕ ಚಟುವಟಿಕೆ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಇದು ಖಿನ್ನತೆ, ಆತಂಕ ಮತ್ತು ಮಕ್ಕಳ ಮೆದುಳಿನ ಬೆಳವಣಿಗೆಗೆ ಸಹಕಾರಿ. ನಿಯಮಿತ ದೈಹಿಕ ಚಟುವಟಿಕೆ ಮಾಡುವ ಜನರು 20 ರಿಂದ 30 ಪ್ರತಿಶತ ಅಕಾಲಿಕ ಮರಣ, ಹೃದ್ರೋಗ,


    ಖಿನ್ನತೆ, ಬುದ್ಧಿಮಾಂದ್ಯತೆ ಅಪಾಯವನ್ನು 7 ರಿಂದ 8 ಪ್ರತಿಶತ ಮತ್ತು ಟೈಪ್ 2 ಮಧುಮೇಹ 5 ಪ್ರತೀಶತ ಕಡಿಮೆ ಹೊಂದಿದ್ದಾರೆ. ಇದು ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ವೃದ್ಧಾಪ್ಯದಲ್ಲಿ ಬೀಳುವ ಅಂಗವೈಕಲ್ಯ ಮತ್ತು ಸಾವಿನ ಪ್ರಕರಣ ಕಡಿಮೆ ಮಾಡುತ್ತದೆ ಎಂದು ಹೇಳಿದೆ.


    ಕೋವಿಡ್-19 ಅಪಾಯ ಹೆಚ್ಚಿದೆ


    ಕೋವಿಡ್ -19 ರ ಸಾಂಕ್ರಾಮಿಕ ರೋಗವು ಹಲವು ದೈಹಿಕ ಚಟುವಟಿಕೆ ಕಡಿಮೆ ಮಾಡಿದೆ. ಇದರಿಂದ ಜನರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸಾಂಕ್ರಾಮಿಕ ರೋಗದಿಂದ ಅನೇಕ ಜನರು ವ್ಯಾಯಾಮ ಮತ್ತು ಉತ್ತಮ ಆಹಾರ ಪದ್ಧತಿಯ ಅಗತ್ಯವನ್ನು ಅರಿತುಕೊಂಡಿದ್ದಾರೆ.


    ಎನ್‌ ಸಿಡಿ ಆರ್ಥಿಕತೆ ಮೇಲೆ ಪರಿಣಾಮ


    ವಿಶ್ವಸಂಸ್ಥೆಯ ಏಜೆನ್ಸಿಯ ಪ್ರಕಾರ, ಪಾರ್ಶ್ವವಾಯು, ಹೃದ್ರೋಗ, ಮಧುಮೇಹ, ಮಾನಸಿಕ ಆರೋಗ್ಯ, ಕ್ಯಾನ್ಸರ್‌ ನಂತಹ ತಡೆಗೆ ಚಿಕಿತ್ಸೆಯ ವೆಚ್ಚ 2030 ರ ವೇಳೆಗೆ ಸುಮಾರು 300 ಬಿಲಿಯನ್ US$ ಅನ್ನು ತಲುಪುತ್ತದೆ. ಇದು ಸುಮಾರು 27 ಶತಕೋಟಿ ಹೆಚ್ಚಾಗುತ್ತದೆ. ಇದರಿಂದ ಎಲ್ಲ ದೇಶಗಳ ಆರ್ಥಿಕ ಹೊರೆ ಹೆಚ್ಚಲಿದೆ.


    ಇದನ್ನೂ ಓದಿ: ಹಣ್ಣುಗಳ ಸೇವನೆ ಎಷ್ಟು ಅನುಕೂಲಕರ? ಇವುಗಳ ಜೊತೆ ಬೇರೆ ಏನನ್ನು ತಿನ್ನಬೇಕು?


    ಈ ಸಮಸ್ಯೆಗೆ ಪರಿಹಾರ


    ಹೆಚ್ಚು ಹೆಚ್ಚು ದೈಹಿಕ ಚಟುವಟಿಕೆ ಉತ್ತೇಜಿಸುವುದು ಮತ್ತು ಭಾಗವಹಿಸುವುದು ಈ ಸಮಸ್ಯೆಗೆ ಪರಿಹಾರವಾಗಿದೆ ಎಂದು ತಜ್ಞರು ಹೇಳುತ್ತಾರೆ.

    Published by:renukadariyannavar
    First published: