• Home
  • »
  • News
  • »
  • lifestyle
  • »
  • Super Food: ಕಡಲ ಕಳೆಗೂ ಈಗ ಸಖತ್ ಡಿಮ್ಯಾಂಡ್! ಸಲಾಡ್, ಸೂಪ್, ಕಾಕ್‌ಟೇಲ್‌ ರುಚಿ ಹೆಚ್ಚಳಕ್ಕೆ ಈ ಸಮುದ್ರ ಸಸ್ಯವೇ ಬೇಕಂತೆ!

Super Food: ಕಡಲ ಕಳೆಗೂ ಈಗ ಸಖತ್ ಡಿಮ್ಯಾಂಡ್! ಸಲಾಡ್, ಸೂಪ್, ಕಾಕ್‌ಟೇಲ್‌ ರುಚಿ ಹೆಚ್ಚಳಕ್ಕೆ ಈ ಸಮುದ್ರ ಸಸ್ಯವೇ ಬೇಕಂತೆ!

ಸೂಪರ್​ ಫುಡ್​

ಸೂಪರ್​ ಫುಡ್​

ಇದೀಗ ಕಡಲ ಕಳೆ ಅಥವಾ ಸಮುದ್ರ ಲಿಟಿಸ್‌ಗೂ ಬಹುಬೇಡಿಕೆ ಇದ್ದು 800 ಕ್ಕೂ ಹೆಚ್ಚು ಜಾತಿಯ ಕಡಲ ಕಳೆಗಳಲ್ಲಿ ಖ್ಯಾತಿಗೊಳಿಸಿವೆ ಹಾಗೂ ಕರಾವಳಿಯುದ್ದಕ್ಕೂ ಅಗಾಧವಾಗಿ ಕಂಡುಬರುತ್ತವೆ.

  • Trending Desk
  • 4-MIN READ
  • Last Updated :
  • Share this:

ಆಹಾರ (Food) ವೈವಿಧ್ಯತೆಗಳಲ್ಲಿ ಸೀಫುಡ್‌ಗಳು ಪ್ರತ್ಯೇಕ ಸ್ಥಾನವನ್ನು ಕಾಯ್ದಿರಿಸಿಕೊಂಡಿವೆ. ರೆಸ್ಟಾರೆಂಟ್‌ಗಳು ಸೀ ಫುಡ್‌ಗಳನ್ನು ವಿತರಿಸುವ ಪ್ರತ್ಯೇಕ ಮೆನುಗಳನ್ನೇ ಹೊಂದಿದ್ದು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೀಫುಡ್‌ಗಳನ್ನು ಬಾಣಸಿಗರು ತಯಾರಿಸಿಕೊಡುತ್ತಾರೆ. ಒಟ್ಟಿನಲ್ಲಿ ಕಡಲಾಳದ ರುಚಿಗಳಿಗೂ ಬೇಡಿಕೆ ಬಂದಿದೆ ಎಂದೆನ್ನಬಹುದು. ಇದೀಗ ಕಡಲ ಕಳೆ ಅಥವಾ ಸಮುದ್ರ ಲಿಟಿಸ್‌ಗೂ ಬಹುಬೇಡಿಕೆ ಇದ್ದು 800 ಕ್ಕೂ ಹೆಚ್ಚು ಜಾತಿಯ ಕಡಲ ಕಳೆಗಳಲ್ಲಿ ಖ್ಯಾತಿಗೊಳಿಸಿವೆ ಹಾಗೂ ಕರಾವಳಿಯುದ್ದಕ್ಕೂ ಅಗಾಧವಾಗಿ ಕಂಡುಬರುತ್ತವೆ. ಕಡಲ ಕಳೆಗಳನ್ನು ಭಾರತೀಯ (Indian) ರೆಸ್ಟಾರೆಂಟ್‌ಗಳು ವಿಧ ವಿಧವಾದ ಸೂಪ್‌ಗಳು, ಸಲಾಡ್‌ಗಳಲ್ಲಿ ಕಾಕ್‌ಟೇಲ್‌ಗಳಲ್ಲಿ ಬಳಸುತ್ತಿವೆ.


ಸಮುದ್ರ ಜೀವಿಗಳ ಬೆಳವಣಿಗೆಗೆ ಸಹಕಾರಿಯಾಗಿರುವ ಕಡಲ ಕಳೆ


ಕಡಲ ಕಳೆಗಳು ಮುಖ್ಯವಾಗಿ ಸಮುದ್ರ ಜೀವಿಗಳ ಬೆಳವಣಿಗೆಗೆ ಸಹಕಾರಿ ಜೊತೆಗೆ ಕಡಲನ್ನು ನೀರನ್ನು ಸ್ವಚ್ಛಗೊಳಿಸುವ ಜವಬ್ದಾರಿ ಹೊಂದಿವೆ. ಭಾರತದಲ್ಲಿ ಕಡಲಕಳೆ ಕೃಷಿಯು ಉದಯೋನ್ಮುಖ ಕ್ಷೇತ್ರವಾಗಿದೆ ಹಾಗೂ ಹೆಚ್ಚುವರಿ ಆದಾಯವನ್ನು ಒದಗಿಸುವ ಕರಾವಳಿಯ ಜನರಿಗೆ ಜೀವರಕ್ಷಕನಾಗಿದೆ.


ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರಕಾರ ಭಾರತ ವರ್ಷಕ್ಕೆ 9.7 ಮಿಲಿಯನ್ ಟನ್‌ಗಳಷ್ಟು ಕಡಲ ಕಳೆ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದೆ. ತಮಿಳುನಾಡಿನ ನಂತರ ಗೋವಾ ಹೆಚ್ಚಿನ ಕಡಲ ಕಳೆ ಉತ್ಪಾದಿಸುವ ತಾಣಗಳಾಗಿವೆ.


ಬಜೆಟ್‌ನಲ್ಲಿ ಕಡಲ ಕಳೆ ಕೃಷಿ ಉತ್ತೇಜನಕ್ಕೆ ಪ್ರಸ್ತಾವನೆ


ಗುಜರಾತ್, ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಕೂಡ ಕಡಲ ಕಳೆಯ ಸಂಪತ್ತು ಹೇರಳವಾಗಿದೆ. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 2021-22ರ ಬಜೆಟ್‌ನಲ್ಲಿ ಕಡಲ ಕಳೆ ಕೃಷಿ ಉತ್ತೇಜನಕ್ಕಾಗಿ ತಮಿಳುನಾಡಿನಲ್ಲಿ ವಿವಿಧೋದ್ದೇಶ ಕಡಲಕಳೆ ಉದ್ಯಾನವನವನ ಸ್ಥಾಪಿಸಲು ಪ್ರಸ್ತಾಪಿಸಿದ್ದರು.


ಇಂದಿನ ಲೇಖನದಲ್ಲಿ ಮುಂಬೈ ಮೂಲದ ಬರಹಗಾರ ಹಾಗೂ ರೆಸ್ಟಾರೆಂಟ್ ವಿಮರ್ಶಕರಾದ ರಾಹುಲ್ ದಯಾಸ್ ಕಡಲ ಕಳೆಯ ಇನ್ನಷ್ಟು ರುಚಿಕರ ಖಾದ್ಯಗಳ ಬಗೆಗೆ ಈ ಲೇಖನದಲ್ಲಿ ತಿಳಿಸಿದ್ದಾರೆ.


ರೆಸ್ಟಾರೆಂಟ್‌ನ ಖಾದ್ಯಗಳಲ್ಲಿ ಕಡಲ ಕಳೆಯ ರುಚಿ


ಮುಂಬೈನ ಮಾಸ್ಕ್ ಲ್ಯಾಬ್‌ನಲ್ಲಿನ ಔತಣಕೂಟದಲ್ಲಿ ಪಾಲ್ಗೊಂಡಾಗ ಅಲ್ಲಿನ ಮುಖ್ಯ ಬಾಣಸಿಗ ವರುಣ್ ಟೋಟ್ಲಾನಿ ವೈವಿಧ್ಯಮಯ ಖಾದ್ಯವೊಂದನ್ನು ಉಣಬಡಿಸಿದರು ಎಂಬುದನ್ನು ರಾಹುಲ್ ನೆನಪಿಸಿಕೊಂಡಿದ್ದಾರೆ. ಸ್ವಾರ್ಟ್ಜಿ ಸಲಾಡ್ ಮತ್ತು ತರಕಾರಿ ಸೂಪ್‌ಗಳ ಸವಿಯನ್ನು ರಾಹುಲ್ ಸವಿದರು.


ಇದನ್ನೂ ಓದಿ: ಬೆಳಗಿನ ತಿಂಡಿಗೆ ಆರೋಗ್ಯಕರ ಮೊಟ್ಟೆ ಪರಾಠಾ ಸುಲಭವಾಗಿ ಹೀಗೆ ಮಾಡಿ!


ಈ ಸೂಪ್‌ನಲ್ಲಿ ಮೂರು ವಿಧದ ಕಡಲ ಕಳೆಗಳನ್ನು ವರುಣ್ ಬಳಸಿದ್ದರು ಹಾಗೂ ತುಂಬಾ ರುಚಿಯಾದ ಅನುಭವವನ್ನು ನೀಡಿತು ಎಂಬುದು ರಾಹುಲ್ ಮಾತಾಗಿದೆ. ಇತ್ತೀಚೆಗೆ ಗೋವಾಗೆ ಪ್ರವಾಸ ಮಾಡಿದ್ದ ವರುಣ್ ಅಲ್ಲಿನ ಕಡಲ ಕಳೆಯ ಖಾದ್ಯಗಳಿಗೆ ಮನಸೋತರು ಹಾಗಾಗಿ ತಮ್ಮ ಕೈರುಚಿಯಲ್ಲೂ ಕಡಲ ಕಳೆಯ ರುಚಿಯನ್ನು ಬೆರೆಸಿದ್ದಾರೆ ಎಂದು ರಾಹುಲ್ ಹೇಳುತ್ತಾರೆ.


ಒಣಗಿದ ಕಡಲ ಕಳೆ ನೋರಿ


ಕೇರಳದ ಕೋವಲಮ್‌ನಲ್ಲಿರುವ ನಿರಾಮಯ ಸೂರ್ಯ ಸಮುದ್ರ ರೆಸ್ಟಾರೆಂಟ್‌ನ ಬಾಣಸಿಗ ಪ್ರಕಾಶ್ ನಾಯಕ್ ಕೂಡ ಹಸಿರು ಪಪಾಯ ಸಲಾಡ್‌ನಲ್ಲಿ ನೋರಿ ಎಂಬ ಒಣಗಿದ ಖಾದ್ಯ ಕಡಲೆ ಕಳೆಯ ಖಾದ್ಯವನ್ನು ಉಣಬಡಿಸಿದರು ಎಂಬುದಾಗಿ ರಾಹುಲ್ ಇಲ್ಲಿ ತಿಳಿಸಿದ್ದಾರೆ.


ಸಾಗರದ ಸಂಪತ್ತನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಮುದ್ರಕಳೆಗಳನ್ನು ಹೆಚ್ಚು ಹೆಚ್ಚು ಖಾದ್ಯಗಳಲ್ಲಿ ಬಳಸುವುದು ನಮ್ಮ ಇರಾದೆಯಾಗಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ.


ಕಡಲ ಕಳೆಗಳ ಸಂಗ್ರಹ ಹಾಗೂ ವ್ಯಾಪಾರ


ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಜೈವಿಕ ವೈವಿಧ್ಯ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ ಕ್ರೂಜ್ ಕಡಲ ಕಳೆಗಳ ಸಂಸ್ಕರಣೆ ಹಾಗೂ ಪೂರೈಕೆಗಾಗಿ ದಿ ಗುಡ್ ಓಷನ್ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ. ಇಲ್ಲಿರುವ ಸಿಬ್ಬಂದಿಗಳು ಭಾರತದ ಮೂಲೆ ಮೂಲೆಗಳಲ್ಲಿರುವ ರೆಸ್ಟಾರೆಂಟ್ ಹಾಗೂ ಬಾಣಸಿಗರಿಗೆ ಕಡಲ ಕಳೆಗಳನ್ನು ವಿತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಲ್ಯಾಟೊ ಕಡಲ ಕಳೆಯ ಖಾದ್ಯ


ಲ್ಯಾಟೊ, ಮತ್ತೊಂದು ರೀತಿಯ ಕಡಲಕಳೆ, ಇದನ್ನು ಸಮುದ್ರ ದ್ರಾಕ್ಷಿ ಅಥವಾ ಸಮುದ್ರ ಕ್ಯಾವಿಯರ್ ಎಂದೂ ಕರೆಯಲಾಗುತ್ತದೆ. ಬಾಣಸಿಗರಾದ ರಾಧಿಕಾ ಖಂಡೇಲ್ವಾಲ್ ತಮ್ಮ ಮೆನುವಿನಲ್ಲಿ ಲ್ಯಾಟೊವನ್ನು ಹೆಚ್ಚು ಪ್ರಮಾಣದಲ್ಲಿ ಬಳಸುತ್ತಾರೆ ಎಂದು ತಿಳಿಸಿದ್ದಾರೆ. ವೈವಿಧ್ಯಮಯ ಖಾದ್ಯಗಳನ್ನು ಉಣಬಡಿಸಲು ಕಡಲ ಕಳೆ ನೆರವಾಗಿದೆ ಎಂಬುದು ರಾಧಿಕಾ ಮಾತಾಗಿದೆ.

First published: