Seafood Near Me: ಬೆಂಗಳೂರಿನಲ್ಲಿ ಬೆಸ್ಟ್​ ಸೀಫುಡ್​ ಎಲ್ಲಿ ಸಿಗುತ್ತೆ? ಈ ರೆಸ್ಟೊರೆಂಟ್​ಗಳಲ್ಲೊಮ್ಮೆ ಟೇಸ್ಟ್ ಮಾಡಿ ನೋಡಿ

Seafood Restaurants Near Me: ಕರ್ನಾಟಕದಲ್ಲಿ ಕರಾವಳಿ ಹೋಟೆಲ್​ಗಳು ಬಹಳ ಫೇಮಸ್​, ಅದರಂತೆ, ಇನ್ನೂ ಕೆಲ ರೆಸ್ಟೊರೆಂಟ್​ಗಳು ನಿಮಗೆ ಬೆಸ್ಟ್​ ಸೀ ಫುಡ್​ ಒದಗಿಸುತ್ತದೆ. ಬೆಂಗಳೂರಿನ ಟಾಪ್ ಸೀ ಫುಡ್​ ರೆಸ್ಟೊರೆಂಟ್​ಗಳ ಮಾಹಿತಿ ಇಲ್ಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಮುದ್ರದ (Sea) ಸೌಂದರ್ಯವನ್ನು ನೋಡುವುದು, ವರ್ಣಿಸುವುದು ಸುಲಭದ ಮಾತಲ್ಲ. ದೂರದಲ್ಲಿ ಕಾಣುವ ಈ ಸುಂದರ ಜಗ ಬಹಳ ವಿಭಿನ್ನ. ಹಾಗೆಯೇ, ಸಮುದ್ರದ ಆಹಾರ (Sea Food) ಎಂದರೆ, ಬಾಯಲ್ಲಿ ನೀರು ಬರುವುದು ಸಾಮಾನ್ಯ. ಕೆಲವರು ಚಿಕನ್ ಮಟನ್ ತಿನ್ನದಿದ್ದರೂ ಸಹ ಫಿಶ್​ (Fish) ತಿನ್ನುವವರಿರುತ್ತಾರೆ. ಅಷ್ಟರ ಮಟ್ಟಿಗೆ ಅವರಿಗೆ ಸಮುದ್ರದ ಆಹಾರಗಳು ಬಹಳ ಇಷ್ಟವಾಗುತ್ತದೆ. ಬೆಂಗಳೂರಿನಲ್ಲಿ ಸಹ ಹಳೆಯ ಮತ್ತು ಹೊಸ ರೆಸ್ಟೊರೆಂಟ್‌ಗಳು ರುಚಿಕರವಾದ ಸೀ ಫುಡ್​ಗಳನ್ನು ಪೂರೈಸುತ್ತವೆ. ಕರ್ನಾಟಕದಲ್ಲಿ ಕರಾವಳಿ ಹೋಟೆಲ್​ಗಳು (Karavali Hotel)  ಬಹಳ ಫೇಮಸ್​, ಅದರಂತೆ, ಇನ್ನೂ ಕೆಲ ರೆಸ್ಟೊರೆಂಟ್​ಗಳು ನಿಮಗೆ ಬೆಸ್ಟ್​ ಸೀ ಫುಡ್​ ಒದಗಿಸುತ್ತದೆ. ಬೆಂಗಳೂರಿನ (Bengaluru) ಟಾಪ್ ಸೀ ಫುಡ್​ ರೆಸ್ಟೊರೆಂಟ್​ಗಳ ಮಾಹಿತಿ ಇಲ್ಲಿದೆ.  

ಕುಡ್ಲ ಡಿಲೈಟ್ ರೆಸ್ಟೋರೆಂಟ್, ಮೈಲಸಂದ್ರ

ಬ್ಯಾಡಗಿ ಮೆಣಸಿನಕಾಯಿಯಿಂದ ಮಾಡಿದ  ರುಚಿಕರ ಮಂಗಳೂರಿನ ಸಮುದ್ರಾಹಾರವನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರು ಬರುತ್ತದೆ. ನೀವು ಈ ವೀಕೆಂಡ್​ ಫಿಶ್ ತಿನ್ನುವ ಮನಸ್ಸು ಮಾಡಿದ್ರೆ ಮೈಲಸಂದ್ರದ ಕುಡ್ಲ ಡಿಲೈಟ್ ರೆಸ್ಟೋರೆಂಟ್‌ಗೆ ಆಯ್ಕೆ ಮಾಡಬಹುದು. ತಾಜಾ ಸೀಗಡಿಗಳು, ಏಡಿಗಳು, ಪಾಮ್‌ಫ್ರೆಟ್ ಹೀಗೆ ಇಲ್ಲಿ ಮೆನುವಲ್ಲಿ ಎಲ್ಲವೂ ಸಿಗುತ್ತೆ. ನಿಮ್ಮ ಸೀ ಫುಡ್ ಕಡು ಬಯಕೆ ಪೂರೈಸುವ ಭರವಸೆ ನೀಡುತ್ತದೆ. ಒಂದು ವೇಳೆ ಆರ್ಡರ್ ಮಾಡಬೇಕೆಂದು ಅನಿಸಿದರೆ, Zomato ನಲ್ಲಿ ಲಭ್ಯವಿದೆ.

ವಿಳಾಸ: ನೆಲ ಮಹಡಿ, #451/C, ಮೈಲಸಂದ್ರ, ಬೆಂಗಳೂರು, ಕರ್ನಾಟಕ 560059

ಮೊಬೈಲ್ ನಂಬರ್: 063648 35577

ಸಮಯ: 11:30am–3:30pm, 6:30–10:30pm

ಫಿಶ್‌ಲ್ಯಾಂಡ್, ಮೆಜೆಸ್ಟಿಕ್, ಬೆಂಗಳೂರು

ಈ ರೆಸ್ಟೊರೆಂಟ್ ಸಿಂಪಲ್ ಫಿಶ್​  ಥಾಲಿಗೆ ಫೇಮಸ್​ ಆಗಿದೆ. ಪ್ರಾನ್ ಮಸಾಲಾ, ಕ್ರ್ಯಾಬ್ ಚಿಲ್ಲಿ ಹೀಗೆ ನಿಮಗೆ ಬೆಸ್ಟ್​ ಸಮುದ್ರಾಹಾರಗಳು ಸಿಗುತ್ತದೆ. ನೀವು ಒಮ್ಮೆ ವಿಸಿಟ್​ ಮಾಡಿದರೆ ಪದೇ ಪದೇ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಿಳಾಸ: ಸುಜಾತಾ ಕಾಂಪ್ಲೆಕ್ಸ್, 1 ನೇ ಮುಖ್ಯ, ಗಾಂಧಿನಗರ, ಮೆಜೆಸ್ಟಿಕ್, ಬೆಂಗಳೂರು

ಮೊಬೈಲ್ ನಂಬರ್: +918277082007

ಸಮಯ: ಬೆಳಗ್ಗೆ 11 ಗಂಟೆಯಿಂದ ರಾತ್ರಿ 11.30 ವರೆಗೆ

ಸ್ಪೈಸ್ ಬಿ7 ಸ್ಟಾರ್ ನಿಂದ - ಶೆಟ್ಟಿ ಗಾರ್ಡೇನಿಯಾ, ಬನಶಂಕರಿ, ಬೆಂಗಳೂರು

ಬಹಳ ಸಮಯದಿಂದ, ಸೀ ಸ್ಪೈಸ್ ನಗರದ ಸಮುದ್ರಾಹಾರ ಪ್ರಿಯರಿಗೆ ನೆಚ್ಚಿನ ಸ್ಥಳವಾಗಿದೆ. ಅವರ ಮಸಾಲಾ-ಲೇಪಿತ ಸ್ಕ್ವಿಡ್ ರಿಂಗ್ಸ್, ಅಂಜಲ್ (ಸೀರ್ ಫಿಶ್) ಫ್ರೈ ಮತ್ತು ಅವರ ಪ್ರಾನ್ ಸುಕ್ಕಾವನ್ನು ಹಲವಾರು ಜನರು ಇಷ್ಟಪಡುತ್ತಾರೆ. ಅವರು ಬಾರ್ ಮೆನುವನ್ನು ಸಹ ಹೊಂದಿದ್ದು, ಎಂಜಾಯ್ ಮಾಡಲು ಇದು ಸೂಕ್ತವಾದ ಸ್ಥಳವಾಗಿದೆ.

ಇದನ್ನೂ ಓದಿ: ಪಾಲಕ್ ಇಷ್ಟ ಅಂತ ಅತಿಯಾಗಿ ತಿಂದ್ರೆ ಕಿಡ್ನಿ ಸಮಸ್ಯೆ ಬರಬಹುದು

ವಿಳಾಸ: ಶೆಟ್ಟಿ ಗಾರ್ಡೇನಿಯಾ, 1890, 9ನೇ ಮುಖ್ಯ, 2ನೇ ಹಂತ, ಬನಶಂಕರಿ, ಬೆಂಗಳೂರು

ಮೊಬೈಲ್ ನಂಬರ್: +918026715060

ಸಮಯ: ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 11.00 ವರೆಗೆ

ಅನುಪಮ್ ಕರಾವಳಿ 2 ಕರಾವಳಿ, ಕೋರಮಂಗಲ, ಬೆಂಗಳೂರು

ಅವರ ಸೀಗಡಿ, ಪುಲಿಮುಂಚಿ, ಮಾರ್ವಾರಿ ಸುಕ್ಕ ಪದಾರ್ಥಗಳನ್ನು ಮಿಸ್​ ಮಾಡದೇ ಸೇವನೆ ಮಾಡಬೇಕು. ಗೋಡೆಗಳ ಮೇಲಿನ ಭಿತ್ತಿಚಿತ್ರಗಳು ಮತ್ತು ಆರಾಮದಾಯಕ ಆಸನದ ಸ್ಥಳವು ಇಲ್ಲಿನ ಬೋನಸ್ ಆಗಿದೆ.

ವಿಳಾಸ: 113, 6ನೇ ಅಡ್ಡ ರಸ್ತೆ, 6ನೇ ಬ್ಲಾಕ್, ಕೋರಮಂಗಲ, ಬೆಂಗಳೂರು

ಮೊಬೈಲ್ ನಂಬರ್: +918041460555

ಸಮಯ: ಮಧ್ಯಾಹ್ನ 01 ಗಂಟೆಯಿಂದ ರಾತ್ರಿ 10.00 ವರೆಗೆ

ಕರಾವಳಿ – ಗೇಟ್​ ವೇ ಹೋಟೆಲ್, ಅಶೋಕ್ ನಗರ್, ಬೆಂಗಳೂರು

ಪ್ರಶಸ್ತಿ ವಿಜೇತ ರೆಸ್ಟೋರೆಂಟ್, ಕರಾವಳಿ ಭಾರತದ ಪಾಕಪದ್ಧತಿಯನ್ನು ಕೇಂದ್ರೀಕರಿಸುವ ಅದರ ಮೆನುವಿಗಾಗಿ ಹೆಚ್ಚಿನ ಪ್ರಶಂಸೆಗಳಿಸಿದೆ. ಅವರ ಮೀನ್ ಎಲಿಟ್ಟಾಡ್, ಬಾಳೆ ಎಲೆಯಲ್ಲಿ ಬೇಯಿಸಿದ ಕಪ್ಪು ಪಾಮ್‌ಫ್ರೆಟ್ ಅಥವಾ ಅವರ ಏಡಿ ಫ್ರೈ ಬೆಸ್ಟ್​ ಎನ್ನಲಾಗುತ್ತದೆ. ಇಲ್ಲಿ ವೀಕೆಂಡ್​ ಸಮಯದಲ್ಲಿ ಕ್ಯೂ ನೋಡಿದರೆ ಸಾಕು ಅದರ ರುಚಿ ಏನು ಎಂಬುದು ತಿಳಿಯುತ್ತದೆ.

ಇದನ್ನೂ ಓದಿ: ಅನ್ನ ಸೀದು ಹೋಯ್ತೆಂದು ಎಸೆಯಬೇಡಿ, ಅದರಿಂದಲೂ ತಯಾರಿಸ್ಬಹುದು ಈ ಟೇಸ್ಟಿ ಫುಡ್​!

ವಿಳಾಸ: ಗೇಟ್‌ವೇ ಹೋಟೆಲ್, ನೆಲ ಮಹಡಿ, 66, ರೆಸಿಡೆನ್ಸಿ ರಸ್ತೆ, ಅಶೋಕ್ ನಗರ, ಬೆಂಗಳೂರು

ಮೊಬೈಲ್ ನಂಬರ್: +918066604545

ಸಮಯ: ಬೆಳಗ್ಗೆ 10 ಗಂಟೆಯಿಂದ ರಾತ್ರಿ 10.30 ವರೆಗೆ
Published by:Sandhya M
First published: