ಲೈಂಗಿಕ ಚಟುವಟಿಕೆ ಹೆಚ್ಚಿಸಲು ಸೀ ಫುಡ್ ಸೇವಿಸಿ

news18
Updated:May 26, 2018, 4:17 PM IST
ಲೈಂಗಿಕ ಚಟುವಟಿಕೆ ಹೆಚ್ಚಿಸಲು ಸೀ ಫುಡ್ ಸೇವಿಸಿ
news18
Updated: May 26, 2018, 4:17 PM IST
ನ್ಯೂಸ್ 18 ಕನ್ನಡ

ಸೀ ಫುಡ್ ಅನ್ನು ಸೇವಿಸುವ ದಂಪತಿಗಳು ಹೆಚ್ಚು ಲೈಂಗಿಕತೆಯಲ್ಲಿ  ಸಕ್ರಿಯರಾಗಿರುತ್ತಾರೆ ಅಲ್ಲದೆ ಇತರೆ ದಂಪತಿಗಳಿಗಿಂತ ಮುಂಚಿತವಾಗಿ ಗರ್ಭವತಿಯಾಗುತ್ತಾರೆ ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ.

ಕಡಿಮೆ ಸೀ ಫುಡ್ ಸೇವಿಸಿದ ಶೇ.79ರಷ್ಟು ದಂಪತಿಗಳಿಗಿಂತ, ವಾರಕ್ಕೆ ಎರಡು ಬಾರಿ ಸೀ ಫುಡ್ ಸೇವಿಸಿರುವ ಶೇ.92ರಷ್ಟು ದಂಪತಿಗಳು ಒಂದು ವರ್ಷದೊಳಗೆ ಗರ್ಭವತಿಯಾಗಿದ್ದಾರೆ ಎಂದು ಜರ್ನಲ್ ಆಫ್ ಕ್ಲಿನಿಕಲ್ ಎಂಡ್ರೋಕ್ರೈನಾಲಜಿ ಮತ್ತು ಮೆಟಬಾಲಿಸಂನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಲಾಗಿದೆ.

'ನಮ್ಮ ಅಧ್ಯಯನದಿಂದ ಸೀ ಫುಡ್​ ಸೇವಿಸುವವರು ಕಡಿಮೆ ಅವಧಿಯಲ್ಲೇ ಗರ್ಭಾವತಿಯಾಗುತ್ತಾರೆ ಮತ್ತು ಲೈಂಗಿಕ ಚಟುವಟಿಕೆಯಲ್ಲಿ ಸಕ್ರೀಯರಾಗಿರುತ್ತಾರೆ ಎಂಬುದನ್ನು ಸೂಚಿಸಿದೆ' ಎಂದು ಹಾರ್ವರ್ಡ್ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್​ನ ಲೇಖಕ ಆಡ್ರೆ ಗ್ಯಾಸ್ಕಿನ್ಸ್​ ತಿಳಿಸಿದ್ದಾರೆ.

ಈ ಅಧ್ಯಯನಕ್ಕಾಗಿ ಸೀ ಫುಡ್ ಸೇವಿಸುವ 500 ದಂಪತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹೆಚ್ಚಿನ ಮಹಿಳೆಯರು ಗರ್ಭಧಾರಣೆಯ ಮೇಲೆ ಮೀನಿನ ಆಹಾರ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅಪಾರ್ಥ ಮಾಡಿಕೊಂಡಿದ್ದಾರೆ. ಆದರೆ ಸೀ ಫುಡ್​ನಲ್ಲಿ ಪ್ರೋಟೀನ್ ಮತ್ತು ಇತರೆ ಪೋಷಕಾಂಶಗಳು ಹೆಚ್ಚಾಗಿರುವುದರಿಂದ ಗರ್ಭವತಿಯಾಗಲು ಸಹಾಯಕವಾಗುತ್ತದೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ.

'ನಮ್ಮ ಅಧ್ಯಯನದ ಫಲಿತಾಂಶಗಳು ಕೇವಲ ಸ್ತ್ರೀಯರ ಗರ್ಭಧಾರಣೆಯ ಬಗ್ಗೆ ಮಾತ್ರವಲ್ಲದೆ, ಪುರುಷರೂ ಕೂಡ ಸೀ ಫುಡ್​ ಅನ್ನು ತಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದೆ' ಎಂದು ಗ್ಯಾಸ್ಕಿನ್ಸ್ ಹೇಳಿದ್ದಾರೆ.
First published:May 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...