ಡಯಾಬಿಟೀಸ್ ಸಂಬಂಧಿ ದೃಷ್ಟಿ ನಷ್ಟಕ್ಕೆ ತಪಾಸಣೆಯೇ? ಕಾಪಾಡಲು ಇದೆ ಕೃತಕ ಬುದ್ಧಿಮತ್ತೆ

ಡಯಾಬಿಟೀಸ್‌ನ ಕಾಯಿಲೆ ಸಮಸ್ಯೆಯು ಡಯಾಬಿಟೀಸ್‌ನಿಂದ ಮಾತ್ರ ಬಂದಿಲ್ಲ, ಆದರೆ ಅದರೊಂದಿಗೆ ಜತೆಯಾಗಿ ಹೆಣೆದುಕೊಂಡಿರುವ ಹಲವಾರು ಸಮಸ್ಯೆಗಳೂ ಇವೆ.

ನೇತ್ರಾ ಸುರಕ್ಷಾ

ನೇತ್ರಾ ಸುರಕ್ಷಾ

 • Share this:
  ಭಾರತವು ವಿಶ್ವದ ಡಯಾಬಿಟೀಸ್ ರಾಜಧಾನಿ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ ಎಂಬುದು ನಿಮಗೆ ತಿಳಿದಿದೆಯೇ? 1. ಭಾರತದ ಡಯಾಬಿಟೀಸ್ ಸಮಸ್ಯೆಯು ಹೆಚ್ಚುತ್ತಿದೆ ಎಂದು ಅಂದಾಜಿಸಲಾಗಿದೆ ಮತ್ತು ಆ ಹೆಚ್ಚಳವು ತೀವ್ರಗತಿಯಲ್ಲಿ ಆಗುತ್ತಿದೆ. 2019 ರ ಸಮಯದಲ್ಲಿ ಭಾರತದ ವಯಸ್ಕ ಜನಸಂಖ್ಯೆಯಲ್ಲಿ ಡಯಾಬಿಟೀಸ್‌ನ ಸುಮಾರು 77 ಮಿಲಿಯನ್ ಪ್ರಕರಣಗಳು ಇದ್ದವು ಎಂದು ದಿ ಇಂಟರ್‌ನ್ಯಾಷನಲ್ ಡಯಾಬಿಟೀಸ್ ಫೆಡರೇಷನ್ ಅಟ್ಲಾಸ್ 2019 ಅಂದಾಜಿಸಿದೆ. ಈ ಸಂಖ್ಯೆಯು 2030 ರಲ್ಲಿ 101 ಮಿಲಿಯನ್‌ಗೆ ಹಾಗೂ 2045 ರಲ್ಲಿ 134 ಮಿಲಿಯನ್‌ಗೆ ಏರಿಕೆಯಾಗಲಿದೆ ಎಂದು ಸಹ ಇದು ಅಂದಾಜಿಸಿದೆ. 

  ಡಯಾಬಿಟೀಸ್‌ನ ಕಾಯಿಲೆ ಸಮಸ್ಯೆಯು ಡಯಾಬಿಟೀಸ್‌ನಿಂದ ಮಾತ್ರ ಬಂದಿಲ್ಲ, ಆದರೆ ಅದರೊಂದಿಗೆ ಜತೆಯಾಗಿ ಹೆಣೆದುಕೊಂಡಿರುವ ಹಲವಾರು ಸಮಸ್ಯೆಗಳೂ ಇವೆ. ಡಯಾಬಿಟೀಸ್ ಎಂಬುದು ವಿಶ್ವದಾದ್ಯಂತ ಕುರುಡುತನ ಉಂಟುಮಾಡುವ ಐದನೇ ಪ್ರಮುಖ ಕಾರಣವಾಗಿದೆ. ಜಾಗತಿಕವಾಗಿ, ಡಯಾಬಿಟೀಸ್ ಇರುವವರಲ್ಲಿ ದೃಷ್ಟಿ ದುರ್ಬಲತೆ ಮತ್ತು ಕುರುಡುತನಕ್ಕೆ ಕಾರಣವಾಗುವ ಪ್ರಮುಖ ಕಾರಣಗಳಲ್ಲಿ ಡಯಾಬಿಟಿಕ್ ರೆಟಿನೋಪಥಿಯೂ ಒಂದು1. ಡಯಾಬಿಟಿಕ್ ರೆಟಿನೋಪಥಿ ಎಂಬುದು ಕಣ್ಣಿಗೆ ಸಂಬಂಧಿಸಿದ ಡಯಾಬಿಟಿಸ್‌ನ ಸಮಸ್ಯೆಯಾಗಿದ್ದು ಅದು ರೆಟಿನಾದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಆರಂಭಿಕ ಹಂತಗಳಲ್ಲಿ ಲಕ್ಷಣರಹಿತವಾಗಿದ್ದು, ಚಿಕಿತ್ಸೆ ನೀಡದೇ ಹೋದರೆ ಅದು ಶಾಶ್ವತ ದೃಷ್ಟಿ ನಷ್ಟವಾಗುವ ಮಟ್ಟಿಗೆ ಹೆಚ್ಚಾಗಬಹುದು. 

  ಸಂತಸದ ಸಂಗತಿ ಎಂದರೆ, DR ಅನ್ನು ಆರಂಭದಲ್ಲೇ ಪತ್ತೆ ಹಚ್ಚಿದರೆ ಮತ್ತು ವೈದ್ಯರ ಸಲಹೆಯನ್ನು ಚಾಚೂತಪ್ಪದೇ ಪಾಲಿಸಿದರೆ  DR ನಿಂದ ಆಗುವ ದೃಷ್ಟಿ ನಷ್ಟವನ್ನು ಸಂಪೂರ್ಣವಾಗಿ ತಡೆಯಬಹುದು3. ಮೊದಲ ಹಂತ ಎಂದರೆ, ಅದು ರೋಗನಿರ್ಣಯಕ್ಕೆ ಒಳಗಾಗುವುದು. ನೇತ್ರತಜ್ಞರಿಂದ DR ತಪಾಸಣೆ ಮತ್ತು ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ DR ರೋಗನಿರ್ಣಯ ಮಾಡಬಹುದು.

  ಹಾಗಿದ್ದರೂ, ಭಾರತದಲ್ಲಿ ರೋಗನಿರ್ಣಯಕ್ಕೆ ಒಳಗಾಗುವುದು ಒಂದು ಸವಾಲೇ ಸರಿ. DR ರೋಗನಿರ್ಣಯಕ್ಕೆ ಒಳಗಾಗುವುದು ಏಕೆ ಕಷ್ಟದಾಯಕವಾದದ್ದು ಎಂಬುದಕ್ಕೆ ಹಲವಾರು ಕಾರಣಗಳಿವೆ:

  ಸ್ಥಳ: ಒಂದು ವೇಳೆ ನೀವು ಸಣ್ಣ ಪಟ್ಟಣ ಅಥವಾ ಗ್ರಾಮೀಣ ಪ್ರದೇಶದಲ್ಲಿದ್ದರೆ, ಅಲ್ಲಿ ನೇತ್ರ ತಜ್ಞರು ಕಡಿಮೆ ಸಂಖ್ಯೆಯಲ್ಲಿ ಇರುತ್ತಾರೆ ಮತ್ತು ದೂರದಲ್ಲಿಯೂ ಇರುವ ಸಾಧ್ಯತೆಯಿದೆ. ವೈದ್ಯರ ಕೇಸ್ ಲೋಡ್‌ನಿಂದಾಗಿ ಅವರ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುವುದು ಅಲ್ಲಿ ಸಾಕಷ್ಟು ಸಮಯ ಕಾಯುವುದನ್ನು ಒಳಗೊಂಡಿರುತ್ತದೆ.

  ಸಮಯ: ಕಾರ್ಯ ನಿರ್ವಹಣೆ ವಯಸ್ಸಿನ ಗುಂಪಿನವರಲ್ಲಿ DR ಇದ್ದರೆ ಅವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೀವು ಹೊಂದಿಸಿಕೊಳ್ಳಬಹುದಾದ ಕಾರ್ಯಾವಧಿ ಹೊಂದಿದ್ದರೆ ಅಥವಾ ಕೆಲಸದ ದಿನದ ನಡುವೆ ವೈದ್ಯರ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ನಿಮ್ಮ ಕೆಲಸವು ಅನುಕೂಲ ಮಾಡಿಕೊಟ್ಟರೆ, ಒಳ್ಳೆಯದೇ! ಇಲ್ಲದಿದ್ದರೆ, ನೀವು ವೈದ್ಯರ ಭೇಟಿಯನ್ನು ರದ್ದುಗೊಳಿಸುತ್ತೀರಿ…ಪ್ರಾಮಾಣಿಕವಾಗಿ ಹೇಳುವುದಾದರೆ, ವೈದ್ಯರ ನಿರೀಕ್ಷಣಾ ಕೊಠಡಿಯಲ್ಲಿ ಸಮಯ ವ್ಯಯಿಸಲು ಅರ್ಧ ದಿನದಷ್ಟು ಸಮಯ ಯಾರ ಬಳಿ ಇದೆ? ವಿಶೇಷವಾಗಿ, ನೀವು ರಜೆ ತೆಗೆದುಕೊಳ್ಳಲು ಆಗದಿದ್ದರೆ ಮತ್ತು ಹಾಗೆ ತೆಗೆದುಕೊಂಡರೂ ಅದರೊಂದಿಗೆ ವೇತನ ಕಡಿತವೂ ಸೇರಿರುತ್ತದೆ5

  ಒಂದು ವೇಳೆ ನೀವು ಹೊಂದಿಕೆಯಾಗುವ ಸಮಯ ಹೊಂದಿದ್ದು, ಮೆಟ್ರೋಪಾಲಿಟನ್ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಹಾಗೂ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ನಿಭಾಯಿಸಲು ಸಾಧ್ಯವಿದ್ದರೂ, ಡಯಾಬಿಟೀಸ್ ಇರುವವರು ಹಾಗೂ ನೇತ್ರತಜ್ಞರ ಅನುಪಾತವು ನಿರಾಶಾದಾಯಕವಾಗಿದೆ. DR ಉಲ್ಬಣಿಸುವ ಕಾಯಿಲೆಯಾಗಿದೆ ಮತ್ತು ನೀವು ಅದಕ್ಕೆ ಸುದೀರ್ಘಾವಧಿಗೆ ಚಿಕಿತ್ಸೆ ಪಡೆಯದಿದ್ದರೆ ಅತ್ಯಂತ ಅಪಾಯಕಾರಿಯಾದದ್ದು, ಹಾಗಾಗಿ ನೀವು ಪ್ರತಿ ವರ್ಷ DR ಗೆ ತಪಾಸಣೆ ಮಾಡಿಸಿಕೊಳ್ಳಬೇಕು.

  ಭಾರತವು ಸುಮಾರು 12,000 ನೇತ್ರತಜ್ಞರನ್ನು ಹೊಂದಿದೆ (ತರಬೇತಿ ಪಡೆದ ಅಂದಾಜು 3500 ರೆಟಿನಾ ತಜ್ಞರು) 1. ಈ ಮೊದಲೇ ಹೇಳಿದಂತೆ, 2030 ರ ವೇಳೆಗೆ ಭಾರತದಲ್ಲಿ ಡಯಾಬಿಟೀಸ್ ಇರುವವರ ಸಂಖ್ಯೆ 100 ಮಿಲಿಯನ್‌ಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ2. ಅಂದರೆ ಡಯಾಬಿಟೀಸ್ ಇರುವ ಪ್ರತಿ 8,333 ಜನರಿಗೆ ಒಬ್ಬ ನೇತ್ರತಜ್ಞ ಮಾತ್ರ ಲಭ್ಯ. ಒಂದು ವೇಳೆ ಇವರೆಲ್ಲರೂ ಅವರ ನೇತ್ರತಜ್ಞರ ಸಮೀಪದಲ್ಲೇ ಇದ್ದರೂ ಎಲ್ಲರಿಗೂ ಅವರವರ ವಾರ್ಷಿಕ DR ತಪಾಸಣೆ ಮಾಡುವುದು ವೈದ್ಯರಿಗೆ ಅಸಾಧ್ಯವೇ ಸರಿ.

  ರೆಟಿನಾ ಸೊಸೈಟಿ ಆಫ್ ಇಂಡಿಯಾದ ಜಂಟಿ ಕಾರ್ಯದರ್ಶಿ ಡಾ. ಮನೀಶಾ ಅಗರ್‌ವಾಲ್ ಅವರ ಪ್ರಕಾರ, ವೈದ್ಯಕೀಯ ಕ್ಷೇತ್ರದ ವೃತ್ತಿಪರರಿಗೆ ಈ ಸಮಸ್ಯೆಯ ಅರಿವಿದ್ದು, ಹೆಚ್ಚು ಜನರನ್ನು ತಪಾಸಣೆ ಮಾಡುವುದು ಸಾಧ್ಯವಾಗಲು ಅವರು AI ಚಾಲಿತ ಪರಿಹಾರಗಳನ್ನು ಬಳಸುತ್ತಿದ್ದಾರೆ, ಅಲ್ಲದೆ ಯಾವ ಪ್ರಕರಣಗಳಿಗೆ ನಿಜವಾಗಿಯೂ ತಜ್ಞರ ಅವಶ್ಯಕತೆ ಇದೆಯೋ ಅವರಿಗೆ ಮಾತ್ರ ತಮ್ಮ ಸಮಯ ನೀಡುತ್ತಿದ್ದಾರೆ. ಇವುಗಳು ವಿರೋಧಾಭಾಸದ ಗುರಿಗಳು ಎನಿಸಬಹುದು, ಆದರೆ ಇದನ್ನು ಗಮನಿಸಿ: DR ತಪಾಸಣೆಗೆ ಒಬ್ಬ ತರಬೇತಿ ಪಡೆದ ನೇತ್ರತಜ್ಞರು ಬೇಕು, ಅದೇ ರೀತಿ ನೈಜ ರೋಗನಿರ್ಣಯ ಮತ್ತು ಚಿಕಿತ್ಸೆ ಯೋಜನೆ ರೂಪಿಸುವುದಕ್ಕೂ ಬೇಕು! 

  DR ಇಲ್ಲದ ಪ್ರಕರಣಗಳನ್ನು ಫಿಲ್ಟರ್ ಮಾಡಿದರೆ ಹೇಗಿರುತ್ತದೆ ಅಲ್ಲವೇ, ಅದರಿಂದಾಗಿ ವೈದ್ಯರು ನಿಜವಾಗಿಯೂ ಯಾರಿಗೆ ತಮ್ಮ ಅಗತ್ಯವಿದೆಯೋ ಅವರಿಗೆ ಸಹಾಯ ಮಾಡಬಹುದಲ್ಲವೇ? ಇದಕ್ಕೆಲ್ಲ ಇರುವ ಪರಿಹಾರ AI

  ಭಾರತದಲ್ಲಿರುವ ವಿಶೇಷ ಆರೈಕೆ ಡಯಾಬಿಟೀಸ್ ಕೇಂದ್ರದಲ್ಲಿ ರೆಮಿಡಿಯೊ ‘ಫಂಡಸ್ ಆನ್ ಫೋನ್’ (FOP) ಎಂಬ ಸ್ಮಾರ್ಟ್‌ಫೋನ್-ಡಿವೈಸ್ ಮೂಲಕ ಟೈಪ್ 2 ಡಯಾಬಿಟೀಸ್ ಇರುವ 301 ರೋಗಿಗಳು ರೆಟಿನಲ್ ಫೋಟೋಗ್ರಫಿಗೆ ಒಳಗಾಗಿದ್ದಾರೆ. 296 ರೋಗಿಗಳ ರೆಟಿನಲ್ ಇಮೇಜ್‌ಗಳನ್ನು ವರ್ಗೀಕರಿಸಲಾಯಿತು. ನೇತ್ರತಜ್ಞರು 191 (64.5%) ಮತ್ತು AI ಸಾಫ್ಟ್‌ವೇರ್ 203 (68.6%) ರೋಗಿಗಳಲ್ಲಿ DR ಪತ್ತೆಹಚ್ಚಿದ್ದರೆ, ಕ್ರಮವಾಗಿ 112 (37.8%) ಮತ್ತು 146 (49.3%) ರೋಗಿಗಳಲ್ಲಿ ದೃಷ್ಟಿಗೆ ಅಪಾಯ ಉಂಟು ಮಾಡುವ DR ಅನ್ನು ಪತ್ತೆಹಚ್ಚಲಾಗಿದೆ.

  AI ಅನ್ನು ಯಾವ ರೀತಿ ಪ್ರೋಗ್ರಾಮ್ ಮಾಡಲಾಗಿತ್ತು ಎಂದರೆ DR ಇರಬಹುದು ಎಂಬ ಸಂದೇಹ ಬಂದರೂ ಸಹ ಅಂತಹ ಪ್ರಕರಣಗಳನ್ನು ಅದು ಪತ್ತೆಹಚ್ಚುತ್ತಿತ್ತು. ಹಾಗಾಗಿಯೇ ನೇತ್ರತಜ್ಞರ ಸಂಖ್ಯೆಗಿಂತ AI ಸಂಖ್ಯೆಯು ಹೆಚ್ಚು ಇದೆ. ಇದು ಯಾಕೆಂದರೆ ಬಹುತೇಕ ಖಚಿತ ಪ್ರಕರಣಗಳನ್ನು ಮಾತ್ರವೇ ಫಿಲ್ಟರ್ ಮಾಡುವ ಗುರಿಯನ್ನು AI ಹೊಂದಿರುತ್ತದೆ. ಒಂದು ವೇಳೆ ಅನುಮಾನ ಬಂದರೆ, ಆ ಪ್ರಕರಣವನ್ನು ನೇತ್ರತಜ್ಞರಿಗೆ ವರ್ಗಾಯಿಸುತ್ತದೆ.

  ರ‍್ಯಾಡಿಕಲ್ ಹೆಲ್ತ್‌ನ ಸಹ ಸಂಸ್ಥಾಪಕರಾದ ರೀಟೊ ಮೈತ್ರಾ ಅವರ ಪ್ರಕಾರ, “ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಇಮೇಜ್ ಅನ್ನು ಓದುವ ಸಾಮರ್ಥ್ಯವನ್ನು ನಿರ್ಮಿಸುವುದು ಹಾಗೂ ವ್ಯಾಪಕಗೊಳಿಸುವುದು ರ‍್ಯಾಡಿಕಲ್ ಹೆಲ್ತ್‌ನ ಗುರಿಯಾಗಿದ್ದು, ಅದರಿಂದ ಓದಿದ ಪ್ರತಿಯೊಂದು ಇಮೇಜ್‌ನ ಫಲಿತಾಂಶವನ್ನು ಯಾವುದೇ ರೆಟಿನಾ ತಜ್ಞರ ಅಗತ್ಯವಿಲ್ಲದೆ ಕ್ಷಣಮಾತ್ರದಲ್ಲೇ ನೀಡುತ್ತದೆ. ಡಯಾಬಿಟಲಾಜಿಸ್ಟ್‌ಗಳು, ಫ್ಯಾಮಿಲಿ ಫಿಸಿಶಿಯನ್‌ಗಳು, ಪ್ರೈಮರಿ ಕೇರ್ ಕ್ಲಿನಿಕ್‌ಗಳು, ಸರ್ಕಾರಿ ಕೇಂದ್ರಗಳು, ಜಿಲ್ಲ ಆಸ್ಪತ್ರೆಗಳಿವೆ….ಇದು ಎಲ್ಲೆಡೆಯೂ ಯಾವಾಗ ಬೇಕಾದರೂ ಮಾಡಬಹುದಾದ್ದು ಆಗಿದೆ”. ರ‍್ಯಾಡಿಕಲ್ ಹೆಲ್ತ್‌ನ ಮಹತ್ವದ AI ಪರಿಹಾರವು ಈಗಾಗಲೇ ಹಲವಾರು ಆಸ್ಪತ್ರೆಗಳಲ್ಲಿ ಬಳಕೆಯಲ್ಲಿದೆ. 

  AI ಪರಿಹಾರಗಳು ಹಲವಾರು ಪ್ರಯೋಜನಗಳನ್ನು ಹೊಂದಿವೆ8. ಈಗ AI ನಿಮ್ಮ ಪ್ರಾಥಮಿಕ ಫಲಿತಾಂಶವನ್ನು ನೀಡುತ್ತದೆಯಾದ್ದರಿಂದ ನಿಮಗೆ ನಿಜವಾಗಿಯೂ ಅಗತ್ಯವಿದ್ದರೆ ಮಾತ್ರವೇ ವೈದ್ಯರನ್ನು ಕಾಣಬೇಕಾಗಬಹುದು, ಹಾಗಾಗಿ ಇನ್ನು ಮುಂದೆ ಹೆಚ್ಚು ಸಮಯ ಕಾಯುವ ಅಗತ್ಯವಿರುವುದಿಲ್ಲ. ಅದೂ ಅಲ್ಲದೆ, ನೇತ್ರವೈದ್ಯರಿಗೆ ಬಹು ದೂರ ಎನಿಸಬಹುದಾದ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಈ ತಪಾಸಣೆಯನ್ನು ನಡೆಸಬಹುದಾಗಿದೆ. ತರಬೇತಿ ಪಡೆದ ತಂತ್ರಜ್ಞರು ಪರೀಕ್ಷೆ ಮಾಡುತ್ತಾರೆ ಮತ್ತು ಫಲಿತಾಂಶವನ್ನು ಆಧರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಪಟ್ಟಣ ಅಥವಾ ನಗರದ ನೀತ್ರವೈದ್ಯರನ್ನು ಕಾಣಲು ಶಿಫಾರಸು ಮಾಡುತ್ತಾರೆ.  

  ಸಾರಾಂಶ
  DR ಅನ್ನು ದೃಷ್ಟಿಯ ನಿಶ್ಯಬ್ದ ಕೊಲೆಗಾರ ಎನ್ನಲಾಗುತ್ತದೆ, ಆದರೆ ಹಾಗೆಂದು ಭಾವಿಸುವ ಅಗತ್ಯವಿಲ್ಲ. ಸಮಸ್ಯೆ ಏನೆಂದರೆ ಸಾಮಾನ್ಯ ಜನರಲ್ಲಿ ಇರುವ ಅರಿವಿನ ಕೊರತೆ. ಅದೂ ಅಲ್ಲದೆ, ಒಂದು ವೇಳೆ ಡಯಾಬಿಟೀಸ್ ಇರುವ ಪ್ರತಿ ವ್ಯಕ್ತಿಯೂ ಪ್ರತಿ ವರ್ಷ DR ಗಾಗಿ ತಪಾಸಣೆ ಮಾಡಿಸಿಕೊಂಡರೆ, ಈ ಹಿಂದೆಯೇ ಅದನ್ನು ಏಕೆ ತೀರ್ಮಾನಿಸಲಿಲ್ಲ ಎಂಬುದಕ್ಕೆ ಕಾರಣವೇ ಇರುವುದಿಲ್ಲ, ನಾವು ಹೆಚ್ಚು ಕಾಲ ನೆನಪಿಟ್ಟುಕೊಳ್ಳದ ಇತರ ಹಲವಾರು ರೋಗಗಳಿಗೆ ಸಂಬಂಧಿಸಿದಂತೆಯೇ ಇದೂ ಆಗುತ್ತದೆ.   

  ಈ ಮಹತ್ವದ ಗುರಿಯನ್ನು ಇಟ್ಟುಕೊಂಡು ಮತ್ತು ಡಯಾಬಿಟಿಕ್ ರೆಟಿನೋಪಥಿ ತಪಾಸಣೆಯ ಪ್ರಾಮುಖ್ಯತೆಯ ಕುರಿತು ಅರಿವಿನ ಕೊರತೆಯನ್ನು ನಿವಾರಿಸಲು, Novartis ಸಹಯೋಗದೊಂದಿಗೆ Network18, Netra Suraksha ಉಪಕ್ರಮವನ್ನು ಆರಂಭಿಸಿದೆ. ಇದು ಈ ಉಪಕ್ರಮದ ಎರಡನೇ ಸೀಸನ್ ಆಗಿದೆ ಮತ್ತು DR ಕುರಿತು ಇನ್ನಷ್ಟು ಅರಿವು ಮೂಡಿಸುವುದು, ತಪ್ಪುಕಲ್ಪನೆಗಳನ್ನು ಹೋಗಲಾಡಿಸುವುದು ಮತ್ತು ತಡೆಗಟ್ಟುವ ಕಣ್ಣಿನ ತಪಾಸಣೆಯನ್ನು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ.

  ಡಯಾಬಿಟಿಕ್ ರೆಟಿನೋಪಥಿ ಕುರಿತು ಇನ್ನಷ್ಟು ತಿಳಿಯಲು ಮತ್ತು ಅದರಿಂದ ಉಂಟಾಗುವ ದೃಷ್ಟಿ ನಷ್ಟವನ್ನು ತಡೆಯುವುದು ಹೇಗೆ ಎಂಬುದನ್ನು ತಿಳಿಯಲು Netra Suraksha ಉಪಕ್ರಮದ ವೆಬ್‌ಸೈಟ್‌ಗೆ ಭೇಟಿ ಕೊಡಿ.

  ಉಲ್ಲೇಖ: 

  1. Pandey SK, Sharma V. World diabetes day 2018: Battling the Emerging Epidemic of Diabetic Retinopathy. Indian J Ophthalmol. 2018 Nov;66(11):1652-1653. Available at:  https://www.ncbi.nlm.nih.gov/pmc/articles/PMC6213704/ [Accessed 4 Aug 2022] 

  2. IDF Atlas, International Diabetes Federation, 9th edition, 2019. Available at: https://diabetesatlas.org/atlas/ninth-edition/ [Accessed 4 Aug 2022] 

  3. Abràmoff MD, Reinhardt JM, Russell SR, Folk JC, Mahajan VB, Niemeijer M, Quellec G. Automated early detection of diabetic retinopathy. Ophthalmology. 2010 Jun;117(6):1147-54. Available at: https://www.ncbi.nlm.nih.gov/pmc/articles/PMC2881172/ [Accessed 4 Aug 2022]

  4. Complications of Diabetes. Available at: https://www.diabetes.org.uk/guide-to-diabetes/complications [Accessed 25 Aug 2022]

  5. Kumar S, Kumar G, Velu S, et al, Patient and provider perspectives on barriers to screening for diabetic retinopathy: an exploratory study from southern India. BMJ Open 2020;10:e037277. doi: 10.1136/bmjopen-2020-037277. Available at https://bmjopen.bmj.com/content/10/12/e037277 [Accessed on 6 Sep 2022]

  6. Ramachandran Rajalakshmi, Umesh C Behera, Harsha Bhattacharjee, Taraprasad Das, Clare Gilbert, G V S Murthy, Hira B Pant, Rajan Shukla, SPEED Study group. Spectrum of eye disorders in diabetes (SPEED) in India. Report # 2. Diabetic retinopathy and risk factors for sight threatening diabetic retinopathy in people with type 2 diabetes in India. Indian J Ophthalmol. 2020 Feb;68(Suppl 1):S21-S26.. Available at https://pubmed.ncbi.nlm.nih.gov/31937724/ [Accessed on 25 Aug 2022]

  7. Rajalakshmi R, Subashini R, Anjana RM, Mohan V. Automated diabetic retinopathy detection in smartphone-based fundus photography using artificial intelligence. Eye (Lond). 2018 Jun;32(6):1138-1144. Available at: https://www.ncbi.nlm.nih.gov/pmc/articles/PMC5997766/ [Accessed 4 Aug 2022]

  8. Revelo AI Homepage. Available at https://revelo.care/ [Accessed 6 Sep 2022]

  Published by:Rahul TS
  First published: