ಫಜೀತಿ ತಂದ ಆನ್‍ಲೈನ್ ಶಾಪಿಂಗ್‍! ಈ ಮಹಿಳೆಗೆ ಯಾಕೆ ಹೀಗೆ?

ಆ ಮಹಿಳೆಯ ಕುಟುಂಬದವರ ಪ್ರಕಾರ, ಆ ಮಹಿಳೆಗೆ ಆನ್‍ಲೈನ್‍ನಲ್ಲಿ ತಪ್ಪು ವಸ್ತುಗಳನ್ನು ಆರ್ಡರ್ ಮಾಡುವುದು ಒಂದು ಚಟ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಬಹಳಷ್ಟು ಜನರಿಗೆ ಆನ್‍ಲೈನ್ ಶಾಪಿಂಗ್ ಎಂದರೆ ಅಚ್ಚುಮೆಚ್ಚು. ಕೆಲವರಿಗಂತೂ ಆನ್‍ಲೈನ್‍ನಲ್ಲಿ ಶಾಪಿಂಗ್ ಮಾಡುವುದು ಎಷ್ಟು ಇಷ್ಟವೆಂದರೆ , ಸಣ್ಣಪುಟ್ಟ ವಸ್ತುಗಳನ್ನು ಕೂಡ ಆನ್‍ಲೈನ್‍ನಲ್ಲಿ ಖರೀದಿಸುತ್ತಾರೆ. ಅದರಲ್ಲೂ ಕೋವಿಡ್ ಸಾಂಕ್ರಾಮಿಕ ಹಾವಳಿ ಎಲ್ಲೆಡೆ ಇರುವಾಗ, ಹೊರಗೆ ಅಂಗಡಿಗೆ ಹೋಗಿ ಸಾಮಾನುಗಳನ್ನು ಖರೀದಿಸುವದಕ್ಕಿಂತ ಆನ್‍ಲೈನ್‍ನಲ್ಲಿ ಖರೀದಿಸುವುದೇ ಜಾಣತನ ಎಂದು ಭಾವಿಸಿರುವವರ ಸಂಖ್ಯೆಯೂ ಕಡಿಮೆ ಇಲ್ಲ. ಆನ್‍ಲೈನ್ ಈ ದಿನಗಳಲ್ಲಿ ಸಿಗದ ವಸ್ತುವೇ ಇಲ್ಲ, ಎಲೆಕ್ಟ್ರಾನಿಕ್ ವಸುಗಳು, ಬಟ್ಟೆಬರೆ, ತರಕಾರಿ , ಆಟಿಕೆಗಳು, ಪುಸ್ತಕಗಳು. . . .ಹೀಗೆ ಆನ್‍ಲೈನ್ ದೊರಕುವ ವಸ್ತುಗಳ ಪಟ್ಟಿ ಮುಗಿಯುವುದೇ ಇಲ್ಲ. ಅದು ಇದು ಬಿಡಿ, ಈಗ ಆನ್‍ಲೈನ್ ಚಿನ್ನದ ಖರೀದಿಯೂ ಸಾಧ್ಯ. ಆದರೆ ಎಷ್ಟೋ ಬಾರಿ ಆನ್‍ಲೈನ್ ಶಾಪಿಂಗ್‍ನಲ್ಲಿ ನಾವು ಖರೀದಿಸಿದ ವಸ್ತು ನಮ್ಮ ನಿರೀಕ್ಷೆಗೆ ತಕ್ಕಂತೆ ಇರುವುದಿಲ್ಲ. ಸಾಕಷ್ಟು ಮಂದಿಗೆ ಈ ಅನುಭವ ಆಗಿರುತ್ತದೆ. ಎಷ್ಟೋ ಮಂದಿ ಆನ್‍ಲೈನ್ ಶಾಪಿಂಗ್ ನಂಬಿ ಮೋಸ ಹೋಗುತ್ತಾರೆ ಕೂಡ. ಸ್ಕಾಟ್‍ಲ್ಯಾಂಡ್‍ನ ಅಬರ್ಡಿನ್‍ಶೆರ್‍ನ ಮಹಿಳೆಯೊಬ್ಬರಿಗೂ ಬಹಳ ಸಮಯದಿಂದ ಹೀಗೆ ಆಗುತ್ತಿದೆ.


ಆ ಮಹಿಳೆಯ ಕುಟುಂಬದವರ ಪ್ರಕಾರ, ಆ ಮಹಿಳೆಗೆ ಆನ್‍ಲೈನ್‍ನಲ್ಲಿ ತಪ್ಪು ವಸ್ತುಗಳನ್ನು ಆರ್ಡರ್ ಮಾಡುವುದು ಒಂದು ಚಟ.
ಅಬರ್ಡಿನ್‍ಶೆರ್‍ನ ಮ್ಯಾಕ್‍ಡಫ್‍ನ ನಿವಾಸಿಯಾಗಿರುವ ಕ್ಲಾರೆ ಮೆಕ್ ಡೊನಾಲ್ಡ್, ಒಂದು ಆನ್‍ಲೈನ್ ಶಾಪಿಂಗ್ ಆ್ಯಪ್‍ನಿಂದ ತನ್ನ 11 ವರ್ಷದ ಮಗಳಿಗೆ ಪೆಡ್ಲಿಂಗ್ ಪೂಲ್ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಆ ಆನ್‍ಲೈನ್ ಶಾಪಿಂಗ್ ಆ್ಯಪ್‍ನಿಂದ ಬಂದ ಸ್ವಿಮ್ಮಿಂಗ್ ಪೂಲ್ ಎಷ್ಟು ಚಿಕ್ಕದಾಗಿತ್ತೆಂದರೆ, ಅದರಲ್ಲಿ ಕೇವಲ ಸಾಕು ಬೆಕ್ಕು ಮಾತ್ರ ಕೂರುವಷ್ಟು ಜಾಗವಿತ್ತು. ಬಹುಶಃ ಅದರಲ್ಲಿ ಅವರು ಪೆಡಿಕ್ಯೂರ್ ಕೂಡ ಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ.


ಮೂಲಗಳ ಪ್ರಕಾರ, ಕ್ಲಾರೆ ಮೆಕ್ ಡೊನಾಲ್ಡ್ ಒಂದು ಸಣ್ಣ ಪೂಲ್ ಅನ್ನು ಆರ್ಡರ್ ಮಾಡಲು ನಿರ್ಧರಿಸಿದ್ದಳು, ಏಕೆಂದರೆ ಕಳೆದ ಬಾರಿ ಅವಳು ಆನ್‍ಲೈನ್‍ನಲ್ಲಿ ವಸ್ತುವೊಂದನ್ನು ಆರ್ಡರ್ ಮಾಡಿದಾಗ, ಅವಳಿಗೆ ಸುಮಾರು ಅವಳ ಮಗಳಷ್ಟೇ ದೊಡ್ಡ ಗಾತ್ರದ ಲ್ಯಾಂಪ್‍ ಶೇಡ್ ತಲುಪಿತ್ತು. ಅದಕ್ಕಿಂತಲೂ ಮೊದಲು ಆಕೆ ಒಂದು ಫ್ರೈಯಿಂಗ್ ಪ್ಯಾನ್ ಆರ್ಡರ್ ಮಾಡಿದ್ದಳು, ಆದರೆ ಆಗಲೂ ಅವಳಿಗೆ ಯಾವ ಗಾತ್ರದ ಪ್ರೈಯಿಂಗ್ ಪ್ಯಾನ್ ಆರ್ಡರ್ ಮಾಡಬೇಕು ಎಂಬುವುದನ್ನು ನಿರ್ಧರಿಸಲು ಆಗಿರಲಿಲ್ಲ. ಅಂದಾಜು ಗಾತ್ರದ ಫ್ರೈಯಿಂಗ್ ಪ್ಯಾನ್ ಆರ್ಡರ್ ಮಾಡಿದ್ದಳು. ಆಗ ಅವಳಿಗೆ ಆನ್‍ಲೈನ್ ಶಾಪಿಂಗ್ ಸ್ಟೋರ್‍ನಿಂದ ತಲುಪಿದ ಫ್ರೈಯಿಂಗ್ ಪ್ಯಾನ್ ಎಷ್ಟು ಚಿಕ್ಕದಾಗಿತ್ತೆಂದರೆ ಅದರಲ್ಲಿ ಒಂದು ಆಲೂಗಡ್ಡೆಯನ್ನು ಕೂಡ ಕರಿಯುವುದು ಕೂಡ ಸಾಧ್ಯವಿರಲಿಲ್ಲ. ಆಕೆಯ ಬದುಕಿನಲ್ಲಿ ಇಂತಹ ಆನ್‍ಲೈನ್ ಶಾಪಿಂಗ್ ಫಜೀತಿಗಳು ಮಾಮುಲಿಯಾಗಿ, ಆಕೆ ತನ್ನ ಕುಟುಂಬ ಮತ್ತು ಸ್ನೇಹಿತರ ಪಾಲಿಗೆ ಹಾಸ್ಯದ ವಸ್ತುವಾಗಿ ಬಿಟ್ಟಿದ್ದಾಳೆ. ಕ್ಲಾರೆ ಮೆಕ್ ಡೊನಾಲ್ಡ್ ಪ್ರಕಾರ, ಆನ್‍ಲೈನ್ ಶಾಪಿಂಗ್ ಮಟ್ಟಿಗೆ ಅವಳ ಅದೃಷ್ಟವು ಅಪಹಾಸ್ಯಕ್ಕೆ ಒಳಗಾಗುವಂತದ್ದು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
First published: