ಪ್ರಿನ್ಸ್ ಹ್ಯಾರಿ ವೆಡ್ಸ್ ಮೇಘನ್ : ಒಂದು ಬಾಟಲಿ ವಿಸ್ಕಿಯ ಬೆಲೆ ಬರೋಬ್ಬರಿ 6.7 ಲಕ್ಷ ರೂ. !

news18
Updated:May 19, 2018, 4:40 PM IST
ಪ್ರಿನ್ಸ್ ಹ್ಯಾರಿ ವೆಡ್ಸ್ ಮೇಘನ್ : ಒಂದು ಬಾಟಲಿ ವಿಸ್ಕಿಯ ಬೆಲೆ ಬರೋಬ್ಬರಿ 6.7 ಲಕ್ಷ ರೂ. !
news18
Updated: May 19, 2018, 4:40 PM IST
ನ್ಯೂಸ್ 18 ಕನ್ನಡ

ಎಲ್ಲೆಲ್ಲೂ ಪ್ರಿನ್ಸ್ ಹ್ಯಾರಿ ಮತ್ತು ನಟಿ ಮೇಘನ್ ಮಾರ್ಕೆಲ್ ಮದುವೆ ಸುದ್ದಿ. ಮೇ 19 ( ಶನಿವಾರ ) ರಂದು ಹಸೆಮಣೆ ಏರಲಿರುವ ಬ್ರಿಟನ್ ರಾಜಕುಮಾರನ ಮದುವೆ ಸಂಭ್ರಮವನ್ನು ಸ್ಮರಣೀಯವಾಗಿಸಲು ಅನೇಕ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ವೈಶಿಷ್ಟ್ಯತೆ ನೀಡಿದೆ.

ಇಂಗ್ಲೆಂಡ್​ನ ಸುಶಿ ರೆಸ್ಟೊರೆಂಟ್ ವಿಶೇಷ ಖಾದ್ಯಗಳ ಬಾಕ್ಸ್ ತಯಾರಿಸಿ ಸುದ್ದಿಯಾಗಿದ್ದರೆ, ಆರ್ಟಿಸನ್ ಕಾಂಡೋಮ್ ಕಂಪನಿ ರಾಜ ಕುಮಾರನಿಗೆ ವಿಶೇಷವಾದ ಕಾಂಡೋಮ್​ಗಳನ್ನು ತಯಾರಿಸಿದೆ. ಇಂತಹ ಪಟ್ಟಿಗೆ ಮತ್ತೊಂದು ಸೇರ್ಪಡೆ ರಾಯಲ್ ಸಲ್ಯೂಟ್ ಸ್ಕಾಚ್ ವಿಸ್ಕಿ ಕಂಪನಿ.

ಈ ಕಂಪನಿಯು ಬ್ರಿಟನ್ ರಾಜಕುಮಾರನ ವಿವಾಹವನ್ನು ಮತ್ತಷ್ಟು ಸ್ಮರಣೀಯವಾಗಿಸಲು 'ರಾಯಲ್ ಸಲ್ಯೂಟ್' ಎಂಬ ಹೊಸ ಬಾಟಲ್ ವಿಸ್ಕಿಯನ್ನು ಬಿಡುಗಡೆಗೊಳಿಸಿದೆ. ಶನಿವಾರ ನಡೆಯಲಿರುವ ಈ ವಿವಾಹ ಸಮಾರಂಭಕ್ಕಾಗಿ 'ವೆಡ್ಡಿಂಗ್ ಎಡಿಷನ್' ಎಂಬ 70 ಬಾಟಲಿಗಳನ್ನು ರಾಯಲ್ ಸಲ್ಯೂಟ್ ಮದ್ಯದ ಕಂಪನಿ ತಯಾರಿಸಿದೆ.

ರಾಯಲ್ ಲುಕ್​ನಲ್ಲಿರುವ ಈ ಮದ್ಯದ ಬಾಟಲ್ ಒಂದರ ಬೆಲೆ ಬರೋಬ್ಬರಿ 10,000 ಡಾಲರ್ (ರೂ 6,79,785). ಇದು ಅತ್ಯಂತ ಹಳೆಯ ಮತ್ತು ಅಪರೂಪದ  ವಿಸ್ಕಿಯಾಗಿದೆ ಎಂದು ಕಂಪನಿ ತಿಳಿಸಿದೆ. ಈ ಮದ್ಯದ ಮಿಶ್ರಣವನ್ನು ಮಾಸ್ಟರ್ ಬ್ಲೆಂಡರ್ ಸ್ಯಾಂಡಿ ಹಿಸ್ಲೋಪ್ ತಯಾರಿಸಿರುವುದು ಮತ್ತೊಂದು ವಿಶೇಷ.

ಪ್ರಿನ್ಸ್ ಹ್ಯಾರಿ ಆಫ್ ವೇಲ್ಸ್ ಮತ್ತು ನಟಿ ಮೇಘನ್ ಮಾರ್ಕೆಲ್ ಹೆಸರನ್ನು ನಮೂದಿಸಲಾಗಿರುವ ಈ ವಿಶೇಷ ಬಾಟಲನ್ನು ಅಮೇರಿಕನ್ ಓಕ್​ ಮರದ ಬಾಕ್ಸ್​ನಲ್ಲಿ ನೀಡಲಾಗುತ್ತದೆ.

ರಾಯಲ್ ಸಲ್ಯೂಟ್ ಮದ್ಯದ ಕಂಪನಿಯನ್ನು ಬ್ರಿಟಿಷ್ ಗೌರವಕ್ಕಾಗಿ ಸ್ಕಾಟಿಷ್ ಹೈಲ್ಯಾಂಡ್ಸ್​ನಲ್ಲಿ 1953ರಲ್ಲಿ ಸ್ಥಾಪಿಸಲಾಯಿತು. ರಾಣಿ ಎಲಿಜಬೆತ್ II ಅವರ ಪಟ್ಟಾಭಿಷೇಕದ ಸಂದರ್ಭದಲ್ಲಿ ರಾಯಲ್ ಸಲ್ಯೂಟ್ ತನ್ನ ಮೊದಲ ಮದ್ಯದ ಬಾಟಲಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಪ್ರಿನ್ಸ್ ಹ್ಯಾರಿ ಮದುವೆಗೆಂದು ವಿಶೇಷ ಮದ್ಯ ತಯಾರಿಸಿ ಸುದ್ದಿಯಾಗಿದೆ.
First published:May 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...