Muscles to Hormones: ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಚಳಿ ಆಗೋದಂತೆ! ಅದಕ್ಕೆ ಈ ಅಂಶಗಳೇ ಕಾರಣ

ಅಧ್ಯಯನದ ಪ್ರಕಾರ, ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಚಳಿಯನ್ನು ಅನುಭವಿಸುತ್ತಾರೆ ಅಥವಾ ತಣ್ಣನೆಯ ಅನುಭವ ಪಡೆಯುತ್ತಾರೆ ಎಂದು ಸಂಶೋಧನೆಯು ಹೇಳಿದೆ. ಮಹಿಳೆಯರ ದೇಹದಲ್ಲಿರುವ ಹಾರ್ಮೋನ್, ಸ್ನಾಯುಗಳು ಮತ್ತು ಚಯಾಪಚಯ ದರ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಸ್ಪಷ್ಟವಾಗಿ ಹೇಳಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಗಂಡು ಮತ್ತು ಹೆಣ್ಣಿನ ಆರೋಗ್ಯ (Health), ಗುಣಲಕ್ಷಣ, ಹೊಂದಾಣಿಕೆ ಸೇರಿ ಜೈವಿಕವಾಗಿ ಹಲವಾರು ವ್ಯತ್ಯಾಸಗಳಿವೆ. ಇತ್ತೀಚಿನ ಒಂದು ವರದಿಯು ಮಹಿಳೆಯರು (Women) ಪುರುಷರಿಗಿಂತ (Men) ವೇಗವಾಗಿ ಹವಮಾನ ಬದಲಾವಣೆಯ (Weather Change) ಪರಿಣಾಮವನ್ನು ಎದುರಿಸುತ್ತಾರೆ ಎಂದು ಹೇಳಿತ್ತು. ಸದ್ಯ ಹೊರಬಿದ್ದಿರುವ ಅಧ್ಯಯನದ ಪ್ರಕಾರ, ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಚಳಿಯನ್ನು (Cold) ಅನುಭವಿಸುತ್ತಾರೆ ಅಥವಾ ತಣ್ಣನೆಯ ಅನುಭವ ಪಡೆಯುತ್ತಾರೆ ಎಂದು ಸಂಶೋಧನೆಯು ಹೇಳಿದೆ. ಮಹಿಳೆಯರ ದೇಹದಲ್ಲಿರುವ (Body) ಹಾರ್ಮೋನ್ (Hormone), ಸ್ನಾಯುಗಳು (Muscles) ಮತ್ತು ಚಯಾಪಚಯ ದರ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಸ್ಪಷ್ಟವಾಗಿ ಹೇಳಿದ್ದಾರೆ.

ಸ್ನಾಯುಗಳು ಮತ್ತು ಚಯಾಪಚಯ ದರ
ಪುರುಷರು ಮತ್ತು ಮಹಿಳೆಯರ ನಡುವಿನ ಜೈವಿಕ ವ್ಯತ್ಯಾಸಗಳಿಂದಾಗಿ ಮಹಿಳೆಯರು ದೇಹದಲ್ಲಿ ಶಾಖವನ್ನು ಉತ್ಪಾದಿಸುವಂತಹ ಕಡಿಮೆ ಸ್ನಾಯುಗಳನ್ನು ಹೊಂದಿರುತ್ತಾರೆ. ಮಹಿಳೆಯರು ತಮ್ಮ ಚರ್ಮ ಮತ್ತು ಸ್ನಾಯುಗಳ ನಡುವೆ ಹೆಚ್ಚು ಕೊಬ್ಬನ್ನು ಹೊಂದಿರುವುದರಿಂದ ಚರ್ಮವು ತಣ್ಣಗಾಗುತ್ತದೆ. ಏಕೆಂದರೆ ಇದು ರಕ್ತನಾಳಗಳಿಂದ ಸ್ವಲ್ಪ ದೂರದಲ್ಲಿದೆ. ಹೀಗಾಗಿ ಮಹಿಳೆಯರು ಶೀತವನ್ನು ವೇಗವಾಗಿ ಅನುಭವಿಸುತ್ತಾರೆ ಎಂದು ವಿಜ್ಞಾನ ಹೇಳುತ್ತದೆ.

ಅಲ್ಲದೇ “ಮಹಿಳೆಯರು ಪುರುಷರಿಗಿಂತ ಕಡಿಮೆ ಚಯಾಪಚಯ ದರವನ್ನು ಹೊಂದಿರುತ್ತಾರೆ, ಇದು ಶೀತದ ಸಮಯದಲ್ಲಿ ಶಾಖ ಉತ್ಪಾದನೆಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ತಾಪಮಾನವು ಕಡಿಮೆಯಾದಾಗ ಮಹಿಳೆಯರು ಚಳಿಗೆ ಬೇಗ ಒಳಗಾಗುತ್ತಾರೆ” ಎಂದು ಫಿಲಡೆಲ್ಫಿಯಾದ ಆಸ್ಟಿಯೋಪಥಿಕ್ ವೈದ್ಯ ರಾಬ್ ಡ್ಯಾನೋಫ್, ಡಿಒ ವಿವರಿಸುತ್ತಾರೆ.

ಇದನ್ನೂ ಓದಿ: Weight Loss: ತೂಕ ಇಳಿಸೋಕೆ ಅಂತ ಜಿಮ್, ಡಯೆಟ್‌ಗಾಗಿ ಹಣ ಖರ್ಚು ಮಾಡುವವರು ಮನೆಯಲ್ಲೇ ಈ ಸರಳ ವಿಧಾನ ಫಾಲೋ ಮಾಡಿ

ಅದೇ ಪುರುಷರು ತಮ್ಮ ಹೆಚ್ಚಿನ ಸ್ನಾಯುವಿನ ದ್ರವ್ಯರಾಶಿಯ ಕಾರಣದಿಂದಾಗಿ ಹೆಚ್ಚಿನ ಚಯಾಪಚಯ ಕ್ರಿಯೆಯನ್ನು ಹೊಂದಿರುತ್ತಾರೆ. ಇದರರ್ಥ ಪುರುಷರು ನೈಸರ್ಗಿಕವಾಗಿ ಬೆಚ್ಚಗಾಗಲು ಹೆಚ್ಚಿನ ಪ್ರಮಾಣದ ಶಾಖವನ್ನು ಉತ್ಪಾದಿಸುತ್ತಾರೆ. ಅಂತೆಯೇ, ದೇಹವನ್ನು ಬೆಚ್ಚಗಾಗಿಸಲು ಮತ್ತು ಚಳಿ ನಿರೋಧಿಸಲು ವಿನ್ಯಾಸಗೊಳಿಸಲಾದ ಕೊಬ್ಬಿನ ಪದರಗಳು ಪುರುಷರು ಮತ್ತು ಮಹಿಳೆಯರಲ್ಲಿ ವಿಭಿನ್ನವಾಗಿವೆ ಎನ್ನುತ್ತದೆ ವಿಜ್ಞಾನ. ಜರ್ನಲ್ ಆಫ್ ಅಪ್ಲೈಡ್ ಫಿಸಿಯಾಲಜಿಯಲ್ಲಿನ ಅಧ್ಯಯನವು ಚಯಾಪಚಯ ಕ್ರಿಯೆಯಲ್ಲಿ ಬಿಡುಗಡೆಯಾಗುವ ಶಕ್ತಿಯ ಪ್ರಮಾಣವು ಮಹಿಳೆಯರಿಗಿಂತ ಪುರುಷರಲ್ಲಿ 23% ಹೆಚ್ಚಾಗಿದೆ ಎಂದು ತೋರಿಸಿದೆ.

ಹಾರ್ಮೋನುಗಳ ವ್ಯತ್ಯಾಸಗಳು
ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳು ದೇಹದ ಮತ್ತು ಚರ್ಮದ ಉಷ್ಣತೆಗೆ ಸಹಕಾರಿಯಾಗಿವೆ. ಈಸ್ಟ್ರೊಜೆನ್ ರಕ್ತನಾಳಗಳನ್ನು ಹಿಗ್ಗಿಸುವುದರಿಂದ ಸುತ್ತಮುತ್ತಲಿನ ಗಾಳಿಗೆ ದೇಹ ತಣ್ಣಗಾಗುತ್ತದೆ. ಮತ್ತು ಪ್ರೊಜೆಸ್ಟರಾನ್ ಚರ್ಮದಲ್ಲಿನ ನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದಲೂ ಸಹ ಮಹಿಳೆಯರು ತಂಪನೆಯ ಅನುಭವ ಪಡೆದುಕೊಳ್ಳುತ್ತಾರೆ. ಈ ಹಾರ್ಮೋನ್ ಗಳ ಸಮತೋಲನವು ಋತುಚಕ್ರದ ಜೊತೆಗೆ ನಿರಂತರವಾಗಿ ಬದಲಾಗುತ್ತದೆ. ಅಲ್ಲದೇ ಈ ಹಾರ್ಮೋನುಗಳು ಮಹಿಳೆಯರ ಕೈ, ಪಾದಗಳು ಮತ್ತು ಕಿವಿಗಳನ್ನು ಪುರುಷರಿಗಿಂತ ಮೂರು ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ತಂಪಾಗುವಂತೆ ಮಾಡುತ್ತದೆ.

ಅಂಡೋತ್ಪತ್ತಿ ನಂತರ ದೇಹದ ಉಷ್ಣತೆಯು ಅತ್ಯಧಿಕವಾಗಿರುತ್ತದೆ, ಏಕೆಂದರೆ ಪ್ರೊಜೆಸ್ಟರಾನ್ ಮಟ್ಟವು ಹೆಚ್ಚಾಗುತ್ತದೆ. ಈ ಸಮಯದಲ್ಲಿ, ಮಹಿಳೆಯರು ತಂಪಾದ ಹೊರಗಿನ ತಾಪಮಾನಗಳಿಗೆ ತುಂಬಾ ಬೇಗ ಜರ್ಜರಿತರಾಗುತ್ತಾರೆ. ಕೈಗಳು ಮತ್ತು ಪಾದಗಳು ತಂಪಾಗಿದ್ದರೂ, ಪುರುಷರಿಗಿಂತ ಮಹಿಳೆಯರು ದೇಹದ ಒಳಭಾಗದಲ್ಲಿ ಹೆಚ್ಚು ಬಿಸಿಯಾದ ತಾಪಮಾನ ಹೊಂದಿರುತ್ತಾರೆ. ತಜ್ಞರು ಇದನ್ನು ಮಹಿಳೆಯರು ಶೀತ ಕೈಗಳು ಮತ್ತು ಬೆಚ್ಚಗಿನ ಹೃದಯ ಹೊಂದಿರುತ್ತಾರೆ ಎಂದು ವ್ಯಾಖ್ಯಾನಿಸುತ್ತಾರೆ.

ಇದು ಕೇವಲ ಮನುಷ್ಯಲ್ಲಿ ಮಾತ್ರವೇ?
ದೇಹದ ಈ ಪ್ರಕ್ರಿಯೆ ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿಗಳಲ್ಲೂ ಕಂಡುಬರುತ್ತದೆ. ಮಾನವ ಮಹಿಳೆಯರಂತೆ, ಮಹಿಳಾ ಪ್ರಾಣಿ ಸಂತಂತಿಯಲ್ಲೂ ಇದೇ ರೀತಿಯ ಪ್ರಕ್ರಿಯೆ ವರದಿಯಾಗಿದೆ. ಅನೇಕ ಪುರುಷ ಜಾತಿಯ ಪಕ್ಷಿಗಳು ಮತ್ತು ಸಸ್ತನಿಗಳ ಮೇಲಿನ ಅಧ್ಯಯನಗಳು ಪುರುಷ ಪ್ರಾಣಿಗಳು ನೆರಳು ಇರುವ ಕಡೆ ತಂಪಾದ ಪ್ರದೇಶಗಳಲ್ಲಿ ಇರುತ್ತವೆ ಎಂದು ವರದಿ ಮಾಡಿದರೆ, ಅದೇ ಹೆಣ್ಣು ಪ್ರಾಣಿ, ಪಕ್ಷಿಗಳು ಸೂರ್ಯನ ಬೆಳಕು ಇರುವ ಬೆಚ್ಚಗಿನ ಪರಿಸರದಲ್ಲಿ ಉಳಿಯುತ್ತದೆ ಎನ್ನುತ್ತವೆ.

ಇದನ್ನೂ ಓದಿ: Yoga For Brain: ಅತಿಯಾದ ಒತ್ತಡ ಭಾರೀ ಡೇಂಜರ್! ಆತಂಕ ನಿವಾರಿಸಲು 5 ಯೋಗಾಸನ!

ಉದಾಹರಣೆಗೆ ಗಂಡು ಬಾವಲಿಗಳು ತಂಪಾದ, ಎತ್ತರದ ಪರ್ವತಗಳ ಶಿಖರಗಳಲ್ಲಿ ಇರಲು ಬಯಸಿದರೆ, ಹೆಣ್ಣು ಬಾವಲಿಗಳು ಬೆಚ್ಚಗಿನ ಕಣಿವೆಗಳಲ್ಲಿ ನೆಲೆಸಲು ಇಷ್ಟ ಪಡುತ್ತವೆ.
Published by:Ashwini Prabhu
First published: