• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Brain Tumor: ಮೂತ್ರ ಪರೀಕ್ಷೆಯಿಂದ ಬ್ರೈನ್ ಟ್ಯೂಮರ್ ಪತ್ತೆ ಹಚ್ಚಬಹುದು, ಅಧ್ಯಯನ ಬಹಿರಂಗಪಡಿಸಿರುವ ಮಾಹಿತಿಗಳೇನು?

Brain Tumor: ಮೂತ್ರ ಪರೀಕ್ಷೆಯಿಂದ ಬ್ರೈನ್ ಟ್ಯೂಮರ್ ಪತ್ತೆ ಹಚ್ಚಬಹುದು, ಅಧ್ಯಯನ ಬಹಿರಂಗಪಡಿಸಿರುವ ಮಾಹಿತಿಗಳೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬ್ರೈನ್ ಟ್ಯೂಮರ್ ಪತ್ತೆಹಚ್ಚಲು ಬಳಸಲಾಗುವ ಮೂತ್ರದ ಪ್ರೋಟೀನ್ ಹೆಚ್ಚಿನ ಪರೀಕ್ಷೆಗಳ ಅಗತ್ಯವನ್ನು ತಪ್ಪಿಸುತ್ತದೆ ಮತ್ತು ಶಸ್ತ್ರಚಿಕಿತ್ಸೆಗೆ ಸಾಕಷ್ಟು ಮುಂಚಿತವಾಗಿ ಗೆಡ್ಡೆಗಳನ್ನು ಪತ್ತೆಹಚ್ಚುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.

  • Trending Desk
  • 2-MIN READ
  • Last Updated :
  • Share this:

ಮೂತ್ರದಲ್ಲಿರುವ ಪ್ರೋಟೀನ್‌ನಿಂದ ಬ್ರೈನ್ ಟ್ಯೂಮರ್ ಅನ್ನು ಪತ್ತೆಹಚ್ಚಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಬ್ರೈನ್ ಟ್ಯೂಮರ್ ಪತ್ತೆಹಚ್ಚಲು ಬಳಸಲಾಗುವ ಮೂತ್ರದ ಪ್ರೋಟೀನ್ (Protein) ಹೆಚ್ಚಿನ ಪರೀಕ್ಷೆಗಳ ಅಗತ್ಯವನ್ನು ತಪ್ಪಿಸುತ್ತದೆ ಮತ್ತು ಶಸ್ತ್ರಚಿಕಿತ್ಸೆಗೆ ಸಾಕಷ್ಟು ಮುಂಚಿತವಾಗಿ ಗೆಡ್ಡೆಗಳನ್ನು ಪತ್ತೆಹಚ್ಚುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ. ಜಪಾನ್‌ನ ನಗೋಯಾ ವಿಶ್ವವಿದ್ಯಾನಿಲಯದ ಈ ಸಂಶೋಧನೆಯು ಇತರ ರೀತಿಯ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಸಹಕಾರಿಯಾಗಿರಬಹುದು ಎಂದು ಅಧ್ಯಯನವು ತಿಳಿಸಿದೆ. ACS ನ್ಯಾನೋ ಜರ್ನಲ್‌ನಲ್ಲಿ ಸಂಶೋಧನೆ ಪ್ರಕಟವಾಗಿದೆ. ಕ್ಯಾನ್ಸರ್ ಆರಂಭವಾಗುವುದಕ್ಕಿಂತ ಮುಂಚೆಯೇ ರೋಗವನ್ನು ಪತ್ತೆಹಚ್ಚುವುದು ಅದೆಷ್ಟೋ ರೋಗಿಗಳನ್ನು ಪ್ರಾಣಾಪಾಯದಿಂದ ಕಾಪಾಡಲು ನೆರವಾಗಿದ್ದರೂ ಬ್ರೈನ್ ಟ್ಯೂಮರ್‌ನಿಂದ (Brain Tumor) ಬದುಕುಳಿಯುವ ರೋಗಿಗಳ ಪ್ರಮಾಣವು ಬಹುತೇಕ ಇಪ್ಪತ್ತು ವರ್ಷಗಳಿಂದ ಬದಲಾಗದೇ ಹಾಗೆಯೇ ಉಳಿದಿದೆ ಎಂಬುದು ವಿಜ್ಞಾನಿಗಳ ಮಾತಾಗಿದೆ. ಟ್ಯೂಮರ್‌ಗಳು ತಡವಾಗಿ ಬೆಳಕಿಗೆ ಬರುವುದರಿಂದ ರೋಗಿಗಳ ಸಾಯುವ ಪ್ರಮಾಣವು ಹೆಚ್ಚಾಗಿದೆ ಎಂಬುದು ವಿಜ್ಞಾನಿಗಳ (Scientists) ಅಭಿಪ್ರಾಯವಾಗಿದೆ.


ಬ್ರೈನ್ ಟ್ಯೂಮರ್ ಹೇಗೆ ಪತ್ತೆಹಚ್ಚಬಹುದು


ಚಲನೆ ಅಥವಾ ಮಾತಿನ ನಷ್ಟದಂತಹ ನರವೈಜ್ಞಾನಿಕ ರೋಗಲಕ್ಷಣಗಳ ಪ್ರಾರಂಭದ ನಂತರವೇ ವೈದ್ಯರು ಸಾಮಾನ್ಯವಾಗಿ ಮೆದುಳಿನ ಗೆಡ್ಡೆಗಳನ್ನು ಕಂಡುಹಿಡಿಯುತ್ತಾರೆ, ಆ ಸಮಯದಲ್ಲಿ ಗಡ್ಡೆ ಗಣನೀಯ ಪ್ರಮಾಣದಲ್ಲಿ ಬೆಳವಣಿಗೆಯಾಗಿರುತ್ತದೆ.


ಗಡ್ಡೆ ಚಿಕ್ಕದಿರುವಾಗಲೇ ಪತ್ತೆ ಹಚ್ಚಿ, ಆದಷ್ಟು ಬೇಗ ಚಿಕಿತ್ಸೆ ಆರಂಭಿಸಿದರೆ ಜೀವ ಉಳಿಸಲು ನೆರವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ. ಬ್ರೈನ್ ಟ್ಯೂಮರ್ ಇರುವ ರೋಗಿಯ ಮೂತ್ರದಲ್ಲಿ ಟ್ಯೂಮರ್-ಸಂಬಂಧಿತ ಎಕ್ಸ್‌ಟ್ರಾಸೆಲ್ಯುಲರ್ ವೆಸಿಕಲ್ಸ್ (ಇವಿ) ಕಂಡುಬರುವುದರಿಂದ ಟ್ಯೂಮರ್ ಅನ್ನು ಶೀಘ್ರದಲ್ಲಿ ಪತ್ತೆಹಚ್ಚಬಹುದು ಎಂಬುದು ಅಧ್ಯಯನವನ್ನು ಮಾಡಿರುವ ವಿಜ್ಞಾನಿಗಳ ಮಾತಾಗಿದೆ.


EVಗಳು ನ್ಯಾನೊ-ಗಾತ್ರದ ಕೋಶಕಗಳಾಗಿದ್ದು, ಜೀವಕೋಶದಿಂದ ಜೀವಕೋಶದ ಸಂವಹನವನ್ನು ಒಳಗೊಂಡಂತೆ ವಿವಿಧ ಕಾರ್ಯಗಳಲ್ಲಿ ತೊಡಗಿಕೊಂಡಿವೆ.


ಇದನ್ನೂ ಓದಿ: 2 ನಿಮಿಷದಲ್ಲಿ ರೆಡಿಯಾಗೋ ನೂಡಲ್ಸ್​, ಜೀರ್ಣವಾಗಲು ಎಷ್ಟು ಸಮಯ ಬೇಕು?


ಮೆದುಳಿನ ಕ್ಯಾನ್ಸರ್ ರೋಗಿಗಳಲ್ಲಿ ಕಂಡುಬರುವ ನಿರ್ದಿಷ್ಟ ರೀತಿಯ ಆರ್‌ಎನ್‌ಎ ಮತ್ತು ಮೆಂಬ್ರೇನ್ ಪ್ರೋಟೀನ್‌ಗಳನ್ನು ಹೊಂದಿರುವ ಕಾರಣ, ಇವುಗಳನ್ನು ಬಳಸಿಕೊಂಡು ಕ್ಯಾನ್ಸರ್ ಉಪಸ್ಥಿತಿ ಮತ್ತು ಅದರ ಪ್ರಗತಿಯನ್ನು ಪತ್ತೆಹಚ್ಚಲು ಬಳಸಬಹುದು ಎಂದು ಅಧ್ಯಯನವು ತಿಳಿಸಿದೆ.


ಮೂತ್ರದ ಮೂಲಕ ವಿಸರ್ಜನೆಯಾಗುವ ಇವಿಗಳು


ಮೆದುಳಿಗೆ ಈ ಪ್ರೋಟೀನ್‌ಗಳು ಯಾವುದೇ ಸಂಬಂಧವನ್ನು ಹೊಂದದೇ ಇದ್ದರೂ ಕ್ಯಾನ್ಸರ್ ಕೋಶಗಳಲ್ಲಿರುವ ಇವಿಗಳು ಹಾಗೆಯೇ ಇರುತ್ತವೆ ಮತ್ತು ಒಡೆಯದೇ ಮೂತ್ರದ ಮೂಲಕ ವಿಸರ್ಜಿಸಲ್ಪಡುತ್ತವೆ ಎಂದು ಅಧ್ಯಯನ ತಿಳಿಸಿದೆ.


ಈ ಸಮಯದಲ್ಲಿ ಮೂತ್ರ ಪರೀಕ್ಷೆ ಮಾಡಿದರೆ ಅದರಿಂದ ಸಾಕಷ್ಟು ಪ್ರಯೋಜಗಳಿವೆ ಎಂದು ನಗೋಯಾ ವಿಶ್ವವಿದ್ಯಾಲಯದ ಗ್ರಾಜುಯೇಟ್ ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ಅಸೋಸಿಯೇಟ್ ಪ್ರೊಫೆಸರ್ ಟಕಾವೊ ಯಾಸುಯಿ ತಿಳಿಸಿದ್ದಾರೆ.


ಮೂತ್ರ ಪರೀಕ್ಷೆ ಹೆಚ್ಚು ಪರಿಣಾಮಕಾರಿ


ರಕ್ತಪರೀಕ್ಷೆಗಿಂತಲೂ ಮೂತ್ರಪರೀಕ್ಷೆಯನ್ನು ಮಾಡುವುದು ಸರಳವಾಗಿದೆ ಹಾಗೂ ಇವು ರೋಗಿಗೆ ನೋವುಂಟು ಮಾಡುವುದಿಲ್ಲ ಜೊತೆಗೆ ಮೂತ್ರವು ರೋಗವನ್ನು ಗುರುತಿಸಲು ಪತ್ತೆಹಚ್ಚಲು ಅನೇಕ ಜೈವಿಕ ಅಣುಗಳನ್ನು ಹೊಂದಿರುತ್ತವೆ ಎಂದು ಯಾಸುಯಿ ತಿಳಿಸಿದ್ದಾರೆ.


ನಗೋಯಾ ವಿಶ್ವವಿದ್ಯಾನಿಲಯ ಹಾಗೂ ಜಪಾನ್‌ನ ಟೋಕಿಯೊ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅಧ್ಯಯನವನ್ನು ನಡೆಸಲಾಗಿದ್ದು, ಬ್ರೈನ್ ಟ್ಯೂಮರ್ ಪತ್ತೆಹಚ್ಚಲು ಮೂತ್ರ ಪರೀಕ್ಷೆಗಳನ್ನು ಹೇಗೆ ನಡೆಸಬಹುದು ಎಂಬುದನ್ನು ಪರೀಕ್ಷೆ ನಡೆಸಿವೆ.


ಮೆದುಳಿನ ಗಡ್ಡೆಗಳನ್ನು ಪತ್ತೆಹಚ್ಚುವುದಕ್ಕಾಗಿಯೇ ಜಪಾನ್‌ನ ಹೊಸ ಪರಿಕರವೊಂದನ್ನು ಅಭಿವೃದ್ಧಿಪಡಿಸಿದ್ದು ಈ ಸಾಧನದ ಸಹಾಯದಿಂದ ವಿಜ್ಞಾನಿಗಳು ಟ್ಯೂಮರ್ ಇರುವ ರೋಗಿಗಳ ಮೂತ್ರದ ಮಾದರಿಗಳಿಂದ CD31/CD63 ಎಂದು ಕರೆಯಲ್ಪಡುವ ಎರಡು ನಿರ್ದಿಷ್ಟ ರೀತಿಯ EV ಮೆಂಬ್ರೇನ್ ಪ್ರೋಟೀನ್‌ಗಳನ್ನು ಗುರುತಿಸಿದ್ದಾರೆ.


ವಿವಿಧ ರೀತಿಯ ಕ್ಯಾನ್ಸರ್ ಪತ್ತೆಗೆ ಸಹಕಾರಿ


ಈ ಪ್ರೋಟೀನ್‌ಗಳನ್ನು ಪತ್ತೆಹಚ್ಚುವುದು ರೋಗಿಯಲ್ಲಿ ಗಡ್ಡೆ ಹಾಗೂ ರೋಗಲಕ್ಷಣಗಳು ಆರಂಭವಾಗುವುದಕ್ಕಿಂತ ಮೊದಲೇ ರೋಗಿಗೆ ಚಿಕಿತ್ಸೆಯನ್ನು ನೀಡಲು ನೆರವನ್ನು ನೀಡುತ್ತದೆ ಎಂಬುದು ಅಧ್ಯಯನಕಾರರ ಮಾತಾಗಿದೆ.




ಈ ಪರಿಕರವು ರೋಗಿಗಳ ಮೂತ್ರದ ಇವಿಗಳಲ್ಲಿ ನಿರ್ದಿಷ್ಟ ಮೆಂಬ್ರೇನ್ ಪ್ರೊಟೀನ್‌ಗಳ ಉಪಸ್ಥಿತಿ ಹಾಗೂ ವಿಶ್ಲೇಷಣೆಯನ್ನು ಕಂಡುಹಿಡಿಯಲು ನೆರವಾಗಿವೆ. ಜೊತೆಗೆ ಇದು ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ಮೊದಲೇ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ ಎಂಬುದು ಯಾಸುಯಿ ಅಭಿಪ್ರಾಯವಾಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು