• Home
  • »
  • News
  • »
  • lifestyle
  • »
  • Schizophrenia In Females: ಮಹಿಳೆಯರಲ್ಲಿ ಕಾಣುವ ಈ ಲಕ್ಷಣ ಸ್ಕಿಜೋಫ್ರೆನಿಯಾದ ಸೂಚನೆಯಂತೆ

Schizophrenia In Females: ಮಹಿಳೆಯರಲ್ಲಿ ಕಾಣುವ ಈ ಲಕ್ಷಣ ಸ್ಕಿಜೋಫ್ರೆನಿಯಾದ ಸೂಚನೆಯಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Schizophrenia In Females: ಮಾನಸಿಕ ಅಸ್ವಸ್ಥತೆ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿ ತಮ್ಮ ಮಾನಸಿಕ ಅಸ್ವಸ್ಥತೆಯ ಸವಾಲುಗಳನ್ನು ಒಬ್ಬ ವ್ಯಕ್ತಿಯಾಗಿಯೇ ಅನುಭವಿಸುತ್ತಾನೆ. ಸ್ಕಿಜೋಫ್ರೇನಿಯಾ ಹೊಂದಿರುವ ಮಹಿಳೆಯರು ಇದಕ್ಕೇನೂ ಹೊರತಾಗಿಲ್ಲ.

  • Share this:

ಸರಳ ಶಬ್ದಗಳಲ್ಲಿ ವ್ಯಾಖ್ಯಾನಿಸುವುದಾದರೆ ಇದೊಂದು ಗಂಭೀರ ಸ್ವರೂಪದ ಮಾನಸಿಕ ಅಸ್ವಸ್ಥತೆಯಾಗಿದೆ (Mental Health). ಮಹಿಳೆಯರಾಗಲಿ ಪುರುಷರಾಗಲಿ (Men or Women)  ಇಬ್ಬರಿಗೂ ಈ ವ್ಯಾಧಿ ಬರಬಹುದಾಗಿದೆ. ಆದರೆ, ಸಾಮಾನ್ಯವಾಗಿ ಗಮನಿಸಿದಂತೆ ಪುರುಷರಂತೆ ಮಹಿಳೆಯರಲ್ಲಿ ಇದು ಅಷ್ಟೊಂದು ಬೇಗನೆ ಬರುವುದಿಲ್ಲ ಎಂದೇ ಹೇಳಬಹುದಾಗಿದೆ, ಕಾರಣ ಕೆಲ ವೈದ್ಯರ ಪ್ರಕಾರ, ಮಹಿಳೆಯರು ಪುರುಷರಿಗಿಂತ ತುಸು ಹೆಚ್ಚಾಗಿ ಸಾಮಾಜಿಕ ಜೀವನ ಕಳೆಯುವುದೆನ್ನಲಾಗಿದೆ. ಹಾಗಾಗಿ ಮಹಿಳೆಯರಲ್ಲಿ ಈ ಮನೋವ್ಯಾಧಿಯು ಸಾಮಾನ್ಯವಾಗಿ 20ರ ನಂತರ 30ರ ಪ್ರಾಯದ ಆಸು ಪಾಸಿನಲ್ಲಿ ಕಾಣಿಸಬಹುದೆನ್ನಲಾಗಿದೆ. ಈ ಮಾನಸಿಕ ಅಸ್ವಸ್ಥತೆಯು ದೀರ್ಘಕಾಲದ ಅಥವಾ ಮರುಕಳಿಸುವ ಸೈಕೋಸಿಸ್ ಎಪಿಸೋಡ್ ಗಳನ್ನು ಒಳಗೊಂಡಿರುತ್ತದೆ. ಅಂದರೆ ಈ ಮನೋಸ್ಥಿತಿಯು ಆವಾಗಾವಾಗ ಅದರಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಒಂದು ಸಂಚಿಕೆಯಂತೆ ಬಂದು ಹೋಗುತ್ತಿರುತ್ತದೆ. ಹಾಗಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಈ ಅವಸ್ಥೆ ವ್ಯಕ್ತಿಯಲ್ಲಿ ಒಂದು ಸಲ ಉಂಟಾಗಿ ಹೋದರೆ ಅದನ್ನು ಒಂದು ಸೈಕಾಸಿಸ್ ಎಪಿಸೋಡ್ (schizophrenia) ಎಂದು ಕರೆಯುತ್ತಾರೆ. ಈ ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ಜೀವನಪೂರ್ತಿ ಅದೆಷ್ಟೋ ಎಪಿಸೋಡುಗಳನ್ನು ಅನುಭವಿಸಬೇಕಾಗುತ್ತದೆ. 


ಇದು ಸಾಮಾನ್ಯವಾಗಿ ಸಾಮಾಜಿಕ ಮತ್ತು ಔದ್ಯೋಗಿಕ ಕಾರ್ಯನಿರ್ವಹಣೆಯಲ್ಲಿನ ದುರ್ಬಲತೆಗಳೊಂದಿಗೆ ಸಂಬಂಧಿಸಿದೆ. ಈ ಮನೋವ್ಯಾಧಿಯ ಪ್ರಭಾವ ಹೇಗಿದೆ ಎಂದರೆ ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚು ಆಘಾತಕಾರಿ ಎನ್ನಬಹುದಾದ ಮೊದಲ ಹತ್ತು ರೋಗಗಳಲ್ಲಿ ಇದನ್ನು ಒಂದನ್ನಾಗಿ ಪರಿಗಣಿಸಿದೆ. ಹಾಗೆ ನೋಡಿದರೆ ಮಾನಸಿಕ ಕಾಯಿಲೆ ಅಂದಾಗ ಅದರಲ್ಲಿ ಹಲವು ಬಗೆಗಳಿವೆ.


ಇಂದಿನ ಒತ್ತಡದ ಜೀವನಶೈಲಿ ಖಂಡಿತವಾಗಿಯೂ ಸಾಕಷ್ಟು ಜನರು ಕೆಲವು ಮಾನಸಿಕ ಅಸ್ವಸ್ಥೆಗಳಿಂದ ಬಳಲುವಂತೆ ಮಾಡಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ, ಸ್ಕಿಜೋಫ್ರೆನಿಯಾ ಎಂಬುದು ಮಾತ್ರ ಸಾಮಾನ್ಯ ಎಂದು ಹೇಳಲಾಗದ ಮಾನಸಿಕ ಕಾಯಿಲೆ, ಕಾರಣ ಇದರಿಂದಾಗುವ ವಿಪರೀತ ಪರಿಣಾಮಗಳು. ಸ್ಕಿಜೋಫ್ರೇನಿಯಾದಿಂದ ಬಳಲುವ ಜನರು ಸಾಮಾನ್ಯವಾಗಿ ಸಮಾಜದಲ್ಲಿ ಅಷ್ಟೊಂದು ಉತ್ತಮ ಅಥವಾ ಇತರರಂತೆ ಸಾಮಾನ್ಯ ಮಟ್ಟದಲ್ಲಿ ಬದುಕಲು ಬಹಳಷ್ಟು ಕಷ್ಟಪಡುವುದನ್ನು ನೋಡಲಾಗಿದೆ. 


ಸ್ಕಿಜೋಫ್ರೆನಿಯಾ ಎಲ್ಲರಲ್ಲೂ ಒಂದೆ ರೀತಿಯಲ್ಲಿರುತ್ತದೆಯೆ?


ಈ ಮನೋವ್ಯಾಧಿಯು ಅದರಿಂದ ಬಳಲುತ್ತಿರುವವರೆಲ್ಲರಲ್ಲೂ ಒಂದೇ ರೀತಿಯಲ್ಲಿ ಇರುವುದಿಲ್ಲ, ಬದಲಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಇದರ ಪ್ರಭಾವದಲ್ಲಿ ಬದಲಾವಣೆಗಳಿರುತ್ತವೆ. ಅಂತೆಯೇ ಮಹಿಳೆಯರಲ್ಲಿ ಇದರ ಲಕ್ಷಣಗಳು ಪುರುಷರಿಗಿಂತ ಸ್ವಲ್ಪ ಭಿನ್ನವಾಗಿರಬಹುದು.  ಪುರುಷರು ಮತ್ತು ಮಹಿಳೆಯರ ನಡುವೆ ಸ್ಕಿಜೋಫ್ರೇನಿಯಾದ ಸಂಭವ ಮತ್ತು ಹರಡುವಿಕೆಯಲ್ಲಿ ಯಾವುದೇ ಅಸಮಾನತೆ ಇಲ್ಲ, ಆದರೆ, ಸ್ಕಿಜೋಫ್ರೇನಿಯಾವು ಹದಿಹರೆಯದ ಪುರುಷರೊಂದಿಗೆ ಹೆಚ್ಚು ನಿಕಟ ಸಂಬಂಧ ಹೊಂದಿದ್ದು ಮಹಿಳೆಯರು ಸ್ಕಿಜೋಫ್ರೇನಿಯಾದ ಆಕ್ರಮಣವನ್ನು 20 ರ ನಂತರದ ಪ್ರಾಯದಲ್ಲೇ ಹೆಚ್ಚು ಅನುಭವಿಸುವುದು ಕಂಡುಬಂದಿದೆ.


ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಸ್ಕಿಜೋಫ್ರೇನಿಯಾ ಹೊಂದಿರುವ ಮಹಿಳೆಯರು ಹೆಚ್ಚು ಸಾಮಾಜಿಕವಾಗಿ ಸಕ್ರಿಯರಾಗಿರುವುದರಿಂದ, ಅವರಲ್ಲಿರಬಹುದಾದ ಸ್ಕಿಜೋಫ್ರೇನಿಯಾ ಕಾಯಿಲೆಯನ್ನು ಬೇಗನೆ ಡಯಗ್ನಾಸ್ ಮಾಡಲು ಕಷ್ಟವಾಗಬಹುದು. 


ಸ್ಕಿಜೋಫ್ರೇನಿಯಾ ಹೊಂದಿರುವ ಮಹಿಳೆಯರ ಲಕ್ಷಣಗಳು
ಸ್ಕಿಜೋಫ್ರೇನಿಯಾ ಮನೋವ್ಯಾಧಿಯ ಇರುವಿಕೆಯ ಖಚಿತಪಡಿಸುವ ಮಾನದಂಡವು ಪುರುಷ ಮತ್ತು ಮಹಿಳೆಯರಿಗೆ ಒಂದೇ ರೀತಿ ಆಗಿದ್ದರೂ ಸಹ ಈ ಮನೋವ್ಯಾಧಿಯ ಲಕ್ಷಣಗಳು ಲಿಂಗಗಳ ನಡುವೆ ಭಿನ್ನವಾಗಿರುತ್ತವೆ. ಉದಾಹರಣೆಗೆ, ಮಹಿಳೆಯರು ಖಿನ್ನತೆ ಅಥವಾ ಆತಂಕವನ್ನು ಹೆಚ್ಚಾಗಿ ಪ್ರದರ್ಶಿಸಬಹುದು, ಇದು ಆತ್ಮಹತ್ಯೆಯಂತಹ ಗಂಭೀರ ಕ್ರಮ ತೆಗೆದುಕೊಳ್ಳುವಂತಹ ಹೆಚ್ಚಿನ ಅಪಾಯ ಉಂಟು ಮಾಡುತ್ತದೆ. ಎರಡನೇಯದಾಗಿ ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುವಂತೆ 


ರೋಗ ಲಕ್ಷಣಗಳನ್ನು ಸ್ಕಿಜೋಫ್ರೇನಿಯಾ ಹೊಂದಿರುವ ಮಹಿಳೆಯರು ಹೊಂದಿರುವುದು ಬಹಳ ಕಡಿಮೆ ಎನ್ನಲಾಗಿದೆ. ಉದಾಹರಣೆಗೆ ಒಬ್ಬೊಬ್ಬರೇ ಮಾತನಾಡುವುದು, ವಿಚಿತ್ರ ರೀತಿಯ ಧ್ವನಿ, ಮಂದ ಅಭಿವ್ಯಕ್ತಿತ್ವ ತೋರಿಸುವಿಕೆ ಹಾಗೂ 


ಮೊಂಡಾದ ಭಾವನಾತ್ಮಕ ಪ್ರತಿಕ್ರಿಯೆಗಳು (ಒಳ್ಳೆಯ ಅಥವಾ ಕೆಟ್ಟ ಸುದ್ದಿಗಳಿಗೆ ಭಾವನಾತ್ಮಕವಾಗಿ ಬಲವಾಗಿ ಪ್ರತಿಕ್ರಿಯಿಸುವುದಿಲ್ಲ)


ಸ್ಕಿಜೋಫ್ರೇನಿಯಾ ಹೊಂದಿರುವ ಮಹಿಳೆಯರು ಪುರುಷರಿಗೆ ಅಪವಾದವೆಂಬಂತೆ ದೈಹಿಕವಾಗಿ ಹೆಚ್ಚು ಸಕ್ರಿಯವಾಗಿರಬಹುದು. ಅವರು ಸಹ ಹೆಚ್ಚು ಧ್ವನಿ ಭ್ರಮೆಗಳು ಮತ್ತು ಇತರೆ ರೀತಿಯ ಕಾಲ್ಪನಿಕ ದೃಶ್ಯಾವಳಿಗಳನ್ನು ಅನುಭವಿಸಬಹುದು. ಅವು ಪ್ಯಾರನಾಯ್ಡ್ ಭ್ರಮೆಗಳಾಗಿರಬಹುದು ಅಂದರೆ "ನನ್ನ ಸಂಗಾತಿಯು ನನಗೆ ಮೋಸ ಮಾಡುತ್ತಿದ್ದಾನೆ" ಎಂಬಂತಹ ಆಲೋಚನೆಗಳನ್ನು ಒಳಗೊಂಡಿರು ಭಾವನೆಗಳು ಅವರಲ್ಲಿ ದಟ್ಟವಾಗಿರಬಹುದು.


ಕಿರುಕುಳ ನೀಡಲಾಗುತ್ತಿದೆ ಎಂಬ ಭ್ರಮೆಗಳು ಅಂದರೆ "ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ" ಎಂಬಂತಹ ಆಲೋಚನೆಗಳು ಅವರಲ್ಲಿ ಬರಬಹುದು, ಆದರೆ ವಾಸ್ತವದಲ್ಲಿ ಅದು ಹಾಗಿರುವುದಿಲ್ಲ.  ಸ್ಕಿಜೋಫ್ರೇನಿಯಾ ಹೊಂದಿರುವ ಪ್ರತಿಯೊಬ್ಬ ಮಹಿಳೆಯು ಈ ರೀತಿಯ ಲಕ್ಷಣಗಳನ್ನು ತೋರುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲವಾದರೂ ಈ ರೀತಿಯ ಪ್ರವೃತ್ತಿಗಳನ್ನು ಕೆಲವು ದೊಡ್ಡ-ಪ್ರಮಾಣದಲ್ಲಿ ನಡೆಸಲಾದ ಅಧ್ಯಯನಗಳಲ್ಲಿ ಗುರುತಿಸಲಾಗಿದೆ.


ಸ್ಕಿಜೋಫ್ರೇನಿಯಾ ಹೊಂದಿರುವ ಮಹಿಳೆಯರು ಎದುರಿಸುವ ಸವಾಲುಗಳು 


ಜೋಫ್ರೇನಿಯಾ ಹೊಂದಿರುವ ಮಹಿಳೆಯರು ಪುರುಷರಿಗಿಂತ ಸಾಮಾಜಿಕವಾಗಿ ಉತ್ತಮವಾಗಿ ಜೀವನ ನಿರ್ವಹಣೆ ಮಾಡುತ್ತಾರೆ ಎಂದೇ ಹೇಳಬಹುದು, ಇದಕ್ಕೆ ಒಂದು ಬಲವಾದ ಕಾರಣವೆಂದರೆ ಈ ಮನೋವ್ಯಾಧಿಯು ಮಹಿಳೆಯರಲ್ಲಿ 20 ರಂತರದ ವಯಸ್ಸಿನಲ್ಲಿ ಕಾಣುವುದು. ಈ ಸಂದರ್ಭದಲ್ಲಿ ಅವರಲ್ಲಿ ಮಾನಸಿಕ ಸ್ಥಿರತೆ ಬಹಳಷ್ಟು ಪಕ್ವಗೊಂಡಿರುವುದರಿಂದ ಈ ಮಾನಸಿಕ ಅಸ್ವಸ್ಥತೆಯ ಸ್ವರೂಪ ಕಡಿಮೆ ಮಟ್ಟದಲ್ಲಿರುವ ಸಾಧ್ಯತೆಯಿದೆ. ಸ್ಕಿಜೋಫ್ರೇನಿಯಾ ಹೊಂದಿರುವ ಮಹಿಳೆಯರು ಪುರುಷರಿಗೆ ಹೋಲಿಸಿದರೆ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರಸಂಗಗಳೂ ಸಹ ಕಡಿಮೆಯೇ ಎನ್ನಲಾಗಿದೆ.


ಮಹಿಳೆಯರಲ್ಲಿ ಈಸ್ಟ್ರೊಜೆನ್‌ನಂತಹ ಹಾರ್ಮೋನ್‌ಗಳ ಉತ್ಪತ್ತಿ ಈ ಕಾಯಿಲೆಯು ಮಹಿಳೆಯರಲ್ಲಿ ವಿಳಂಬತ್ವಕ್ಕೆ ಕಾರಣವಾಗಿರಬಹುದೆಂದು ಹಲವು ಸಂಶೋಧಕರ ಅಭಿಪ್ರಾಯವಾಗಿದೆ. ಆದಾಗ್ಯೂ, ಇದೇ ರೀತಿಯಲ್ಲಿ ಅಂಶಗಳು ಎಲ್ಲೆಡೆ ಇವೆ ಎಂದು ಹೇಳುವುದು ಕಷ್ಟವಾಗಿದೆ. ಉದಾಹರಣೆಗೆ, ಭಾರತ ದೇಶದಲ್ಲಿ ನಡೆಸಲಾದ ಅನೇಕ ಅಧ್ಯಯನಗಳ ಪ್ರಕಾರ, ಪುರುಷರು ಮತ್ತು ಮಹಿಳೆಯರ ನಡುವಿನ ಸರಾಸರಿ ವಯಸ್ಸಿನಲ್ಲಿ ಈ ರೋಗ ಉಂಟಾಗುವಿಕೆಗೆ ಸಂಬಂಧಿಸಿದಂತೆ ಯಾವುದೇ ವ್ಯತ್ಯಾಸವನ್ನು ಕಂಡುಕೊಳ್ಳಲಾಗಿಲ್ಲ ಎನ್ನಲಾಗಿದೆ. 


ಸ್ಕಿಜೋಫ್ರೇನಿಯಾ ಹೊಂದಿರುವ ಮಹಿಳೆಯರು ಮದುವೆಯಾಗಿ ಮಕ್ಕಳನ್ನು ಹೊಂದುವ ಸಾಧ್ಯತೆ ಹೆಚ್ಚು. ಇಂಥ ಮಹಿಳೆಯರು ಪ್ಲ್ಯಾನ್ ಡಾದೆ ಇರುವಂತಹ ಗರ್ಭಧಾರಣೆಯನ್ನು ಹೊಂದುವ ಸಾಧ್ಯತೆಗಳೂ ಸಹ ಹೆಚ್ಚು ಎನ್ನಲಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಸ್ಕಿಜೋಫ್ರೇನಿಯಾ ಹೊಂದಿರುವ ಮಹಿಳೆಯರು ಹೆಚ್ಚಿನ ನಿರಾಶ್ರಿತತೆಯನ್ನು ಅನುಭವಿಸುತ್ತಾರೆಂದು ಹೇಳಲಾಗಿದೆ. ಆದರೆ ಅವರು ಪುರುಷರಂತೆ ಮಾದಕ ವಸ್ತುವಿನ ಬಳಕೆಯ ಅಸ್ವಸ್ಥತೆ ಅಥವಾ ಧೂಮಪಾನದ ಸಮಸ್ಯೆಯನ್ನು ಹೊಂದಿರುವುದು ಬಲು ಕಡಿಮೆ ಎನ್ನಲಾಗಿದೆ.


ಇದನ್ನೂ ಓದಿ: ನಾವ್ ಹೇಳೋ ರೀತಿ ನೀವ್ ಅಡುಗೆ ಮಾಡಿದ್ರೆ ಟೇಸ್ಟ್​ ಸೂಪರ್ ಆಗಿ ಇರುತ್ತೆ


ವಯಸ್ಸಾದ ಮಹಿಳೆಯರು ತೀವ್ರವಾದ ಟಾರ್ಡೈವ್ ಡಿಸ್ಕಿನೇಶಿಯಾವನ್ನು (TD) ಅನುಭವಿಸುತ್ತಾರೆ, ಇದು ಸಾಮಾನ್ಯವಾಗಿ ದವಡೆ, ತುಟಿಗಳು ಮತ್ತು ನಾಲಿಗೆಯಲ್ಲಿ ಕಂಡುಬರುವ ಅನೈಚ್ಛಿಕ ಚಲನೆಯ ಅಸ್ವಸ್ಥತೆ. ಇದು ಆಂಟಿ ಸೈಕೋಟಿಕ್ ಔಷಧಿಗಳಿಂದ ಉಂಟಾಗುತ್ತದೆ, ಇದು ಹೆಚ್ಚಾಗಿ ವಯಸ್ಸಾದ ಪುರುಷರಿಗಿಂತ ವಯಸ್ಸಾದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಸ್ಕಿಜೋಫ್ರೇನಿಯಾ ಹೊಂದಿರುವ ಮಹಿಳೆಯರು ಮೈಗ್ರೇನ್ ಮತ್ತು ಥೈರಾಯ್ಡ್ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. 


ಸ್ಕಿಜೋಫ್ರೇನಿಯಾ ಹೊಂದಿರುವ ಮಹಿಳೆಯರಿಗೆ ಚಿಕಿತ್ಸೆ


ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಗಂಡು-ಹೆಣ್ಣು ಎಂಬ ವ್ಯತ್ಯಾಸದ ಚಿಕಿತ್ಸೆ ಮಾಡಲಾಗುವುದಿಲ್ಲವಾದರೂ, ವೈದ್ಯರು, ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ ಮಹಿಳೆಯರಿಗೆ ಉತ್ತಮವಾದ ಚಿಕಿತ್ಸೆ ನೀಡಲು ಸಮರ್ಥರಾಗಬಹುದು ಏಕೆಂದರೆ ಮಹಿಳೆಯರು ತೋರುವ ಅನನ್ಯ ಅನುಭವ ಮತ್ತು ಅವರು ಎದುರಿಸುವ ಅನನ್ಯ ಸವಾಲುಗಳು ಚಿಕಿತ್ಸಕರಿಗೆ ಚಿಕಿತ್ಸೆ ನೀಡುವಲ್ಲಿ ಪೂರಕವಾದ ಅಂಶಗಳನ್ನು ಒದಗಿಸುತ್ತವೆ. ಮಹಿಳೆಯರು ವಿಳಂಬವಾಗಿ ಈ ಮನೋವ್ಯಾಧಿಯನ್ನು ಪಡೆಯುವುದರಿಂದ ಇದರ ಪರಿಣಾಮಕಾರಿ ರೋಗಲಕ್ಷಣಗಳನ್ನು ತಕ್ಷಣಕ್ಕೆ ತೋರಿಸುವ ಸಾಧ್ಯತೆ ಕಡಿಮೆ. ಹಾಗಾಗಿ, ಸ್ಕಿಜೋಫ್ರೇನಿಯಾದ ಡಯಾಗ್ನೋಸ್ ಮಾಡುವಾಗ ವೈದ್ಯರು ಸ್ಕಿಜೋಆಫೆಕ್ಟಿವ್ ಡಿಸಾರ್ಡರ್ ಅಥವಾ ಬೈಪೋಲಾರ್ ಡಿಸಾರ್ಡರ್‌ನಂತಹ ಇತರ ಮಾನಸಿಕ ಕಾಯಿಲೆಗಳ ಕುರಿತು ಕುಲಂಕುಶವಾಗಿ ಪರಿಶೀಲಿಸಬೇಕಾಗುತ್ತದೆ. 


ಸ್ಕಿಜೋಫ್ರೇನಿಯಾದೊಂದಿಗಿನ ಮಹಿಳೆಯರಿಗೆ ಚಿಕಿತ್ಸೆಯು ಮಕ್ಕಳೊಂದಿಗೆ ತಾಯಂದಿರ ಅಗತ್ಯತೆಗಳಿಗನುಸಾರವಾಗಿ ಮನೋಶಿಕ್ಷಣ ಮತ್ತು ಬೆಂಬಲವನ್ನು ಒಳಗೊಂಡಿರಬೇಕು. ಆಂಟಿ ಸೈಕೋಟಿಕ್ ಔಷಧಿಯು ಸ್ತನ್ಯಪಾನ ಮಾಡುವ ಸಾಮರ್ಥ್ಯ ಮತ್ತು ತಾಯಿಯು ತನ್ನ ಮಕ್ಕಳನ್ನು ಪೋಷಿಸುವ ಶಕ್ತಿಯ ಪ್ರಮಾಣದ ಮೇಲೆ ಪರಿಣಾಮ ಬೀರಬಹುದು. ಮಹಿಳೆಯರ ಸ್ಥಿತಿಗನುಗುಣವಾಗಿ ಚಿಕಿತ್ಸಾ ಪದ್ಧತಿಗಳು ದೈಹಿಕ ಆರೋಗ್ಯದ ಬಗ್ಗೆ ಶಿಕ್ಷಣವನ್ನು ಒಳಗೊಂಡಿರಬೇಕು.


ಸ್ಕಿಜೋಫ್ರೇನಿಯಾ ಹೊಂದಿರುವ ಮಹಿಳೆಯರು ತಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಸಾಧ್ಯತೆ ಕಡಿಮೆ ಇರುವುದರಿಂದ ಆ ಬಗ್ಗೆ ಹೆಚ್ಚು ಮುತುವರ್ಜಿವಹಿಸಬೇಕಾಗುತ್ತದೆ. ಮಾನಸಿಕ ಆರೋಗ್ಯ ವೃತ್ತಿಪರರು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯವನ್ನು ಹೊಂದಿರುವ ಸ್ಕಿಜೋಫ್ರೇನಿಯಾದ ಮಹಿಳೆಯರು ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಇರುವುದರಿಂದ ಮನೋವೈದ್ಯರು ಅವರು ಸುರಕ್ಷಿತವಾಗಿರುವಂತೆ ಯೋಜನೆಗಳನ್ನು ರಚಿಸುವುದಕ್ಕೆ ಮಹತ್ವ ನೀಡಬೇಕು.


ಇದನ್ನೂ ಓದಿ: ಇಂಟ್ರೋವರ್ಟ್​ಗಳನ್ನು ಡೇಟ್​ ಮಾಡ್ತಿದ್ರೆ ಅವರ ಜೊತೆ ಹೀಗಿರಬೇಕಂತೆ


ಮಾನಸಿಕ ಅಸ್ವಸ್ಥತೆ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿ ತಮ್ಮ ಮಾನಸಿಕ ಅಸ್ವಸ್ಥತೆಯ ಸವಾಲುಗಳನ್ನು ಒಬ್ಬ ವ್ಯಕ್ತಿಯಾಗಿಯೇ ಅನುಭವಿಸುತ್ತಾನೆ. ಸ್ಕಿಜೋಫ್ರೇನಿಯಾ ಹೊಂದಿರುವ ಮಹಿಳೆಯರು ಇದಕ್ಕೇನೂ ಹೊರತಾಗಿಲ್ಲ. ಆದಾಗ್ಯೂ, ಮಾನಸಿಕ ತಜ್ಞರು ಮತ್ತು ಕುಟುಂಬದ ಸದಸ್ಯರು ಈ ಮಾನಸಿಕ ಅಸ್ವಸ್ಥತೆಯೊಂದಿಗೆ ಹೋರಾಡುತ್ತಿರುವ ಮಹಿಳೆಯರು ಎದುರಿಸಬಹುದಾದ ಸಾಮಾನ್ಯ ರೋಗಲಕ್ಷಣಗಳು ಮತ್ತು ಸವಾಲುಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ ಅವರ ಸೇವೆಯನ್ನು ಉತ್ತಮವಾಗಿ ಮಾಡಬಲ್ಲರು. ಸ್ಕಿಜೋಫ್ರೇನಿಯಾವು ಕೇವಲ ಯುವಕರ ಅಸ್ವಸ್ಥತೆಯಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಅತ್ಯಗತ್ಯ.

Published by:Sandhya M
First published: