• Home
  • »
  • News
  • »
  • lifestyle
  • »
  • Hair Care: ನೆತ್ತಿಯನ್ನು ಅಲರ್ಜಿ ಮತ್ತು ಸೋಂಕಿನಿಂದ ಕಾಪಾಡಲು ರೋಸ್ಮರಿ ಎಣ್ಣೆಯನ್ನು ಹೀಗೆ ಬಳಸಿ!

Hair Care: ನೆತ್ತಿಯನ್ನು ಅಲರ್ಜಿ ಮತ್ತು ಸೋಂಕಿನಿಂದ ಕಾಪಾಡಲು ರೋಸ್ಮರಿ ಎಣ್ಣೆಯನ್ನು ಹೀಗೆ ಬಳಸಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಸಾಯನಿಕ ಪದಾರ್ಥಗಳು ಕೂದಲಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ನೀವು ಈ ಸರಳ ಮನೆಮದ್ದು ಮಾಡಿದರೆ ಬೆಸ್ಟ್ ರಿಸಲ್ಟ್ ಸಿಗುತ್ತದೆ. ರೋಸ್ಮರಿ ಆಯಿಲ್ ನಿಮ್ಮ ಕೂದಲ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ಎಲ್ಲಾ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ಸರಳ ಮತ್ತು ಪರಿಣಾಮಕಾರಿ ಪರಿಹಾರ ಆಗಿದೆ.

ಮುಂದೆ ಓದಿ ...
  • Share this:

    ಪರಿಸರದ ಬದಲಾವಣೆಗಳು (Weather Changes) ಮತ್ತು ಅಗತ್ಯ ಪೋಷಕಾಂಶಗಳ ಕೊರತೆ ಕೂದಲಿಗೆ (Hair) ಹಲವು ತರಹದಲ್ಲಿ ಹಾನಿ (Affects) ಉಂಟು ಮಾಡುತ್ತದೆ. ಕೂದಲು ಒಡೆಯುವುದು, ಹಾನಿ ಆಗುವುದು ಮತ್ತು ಅಕಾಲಿಕವಾಗಿ ಕೂದಲು ಬಿಳಿಯಾಗುವುದು (Hair Whitening) ಸಾಮಾನ್ಯ ಸಮಸ್ಯೆ ಆಗಿವೆ. ಅಲ್ಲದೆ ಕಚೇರಿ ಮತ್ತು ಮನೆಯ ಜವಾಬ್ದಾರಿ ಮಧ್ಯೆ ಕೂದಲ ಆರೋಗ್ಯ ಮತ್ತು ಕಾಳಜಿ ಮಾಡಲು ಗಮನ ಹರಿಸಲು ಸಮಯ ಸಿಗುವುದಿಲ್ಲ. ನಿಮ್ಮ ಸಮಸ್ಯೆಯಿಂದಾಗಿ ನೀವು ಪಾರ್ಲರ್‌ ಗೆ ಹೋಗುತ್ತೀರಿ. ಆದರೆ ಇದು ಖರ್ಚು ಹೆಚ್ಚಿಸುತ್ತದೆ. ಜೊತೆಗೆ ಪಾರ್ಲರ್ ನಲ್ಲಿ ಬಳಸುವ ರಸಾಯನಿಕ ಪದಾರ್ಥಗಳಿಂದಾಗಿ ನಿಮ್ಮ ಕೂದಲಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.


    ಹಾಗಾಗಿ ನೀವು ಈ ಸರಳ ಮನೆಮದ್ದು ಮಾಡಿದರೆ ಬೆಸ್ಟ್ ರಿಸಲ್ಟ್ ಸಿಗುತ್ತದೆ. ರೋಸ್ಮರಿ ಆಯಿಲ್ ನಿಮ್ಮ ಕೂದಲ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ಎಲ್ಲಾ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇದು ಸರಳ ಮತ್ತು ಪರಿಣಾಮಕಾರಿ ಪರಿಹಾರ ಆಗಿದೆ. ರೋಸ್ಮರಿ ತೈಲ ಬಳಸುವ ಸರಿಯಾದ ವಿಧಾನ ಯಾವುದು ಎಂದು ತಿಳಿಯೋಣ.


    ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ರೋಸ್ಮರಿ ತೈಲ ನಿಮ್ಮ ಕೂದಲಿನ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಹಾಗಾದ್ರೆ ರೋಸ್ಮರಿ ತೈಲ ಬಳಸುವುರಿಂದ ಸಿಗುವ ಕೆಲವು ಪ್ರಮುಖ ಪ್ರಯೋಜನಗಳನ್ನು ತಿಳಿಯೋಣ. ಹಾಗೆಯೇ ಕೂದಲಿಗೆ ಹಚ್ಚುವ ಸರಿಯಾದ ವಿಧಾನ ತಿಳಿಯೋಣ.


    ಇದನ್ನೂ ಓದಿ: ಅರಿಶಿನ ಫೇಸ್​ಪ್ಯಾಕ್​ ಹಾಕಿದ್ರೆ ಸಾಕು ತ್ವಚೆ ಒಣಗುವ ಸಮಸ್ಯೆಗೆ ಪರಿಹಾರ ಸಿಗುತ್ತೆ


    ರೋಸ್ಮರಿ ಎಣ್ಣೆ ಕೂದಲಿಗೆ ಹೇಗೆ ಪ್ರಯೋಜನಕಾರಿ?


    ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ


    ರೋಸ್ಮರಿಯಿಂದ ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಬೇಕು. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಅಲ್ಲದೆ ಇದು ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ. ಕೂದಲು ಬೇರಿನಿಂದ ಗಟ್ಟಿಯಾಗುತ್ತದೆ ಮತ್ತು ಕೂದಲು ಉದುರುವ ಸಮಸ್ಯೆ ಕಡಿಮೆ ಆಗುತ್ತದೆ.


    ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ರೋಸ್ಮರಿಯಿಂದ ಮಾಡಿದ ಹಲವಾರು ಕೂದಲು ಉದುರುವಿಕೆ ಕಡಿಮೆ ಮಾಡುವ ಔಷಧಿಗಳು ಮತ್ತು ಉತ್ಪನ್ನಗಳಿವೆ. ಇದರೊಂದಿಗೆ ನೆತ್ತಿಯ ರಕ್ತ ಪರಿಚಲನೆ ಆರೋಗ್ಯಕರವಾಗಿದ್ದರೆ, ಕೂದಲಿನ ಬೆಳವಣಿಗೆ ಆಗುತ್ತದೆ.


    ಕೂದಲನ್ನು ಬಲಪಡಿಸುತ್ತದೆ


    ರೋಸ್ಮರಿ ಬಳಕೆ ಹಾನಿಗೊಳಗಾದ ಕೂದಲನ್ನು ಸರಿಪಡಿಸುತ್ತದೆ. ಮತ್ತು ಹೊಸ ಕೂದಲು ಹಾಳಾಗುವುದನ್ನು ತಡೆಯುತ್ತದೆ. ಕೂದಲನ್ನು ಮೂಲದಿಂದ ಬಲಪಡಿಸುತ್ತದೆ. ಮತ್ತು ಕೂದಲು ಉದುರುವಿಕೆ ಸಮಸ್ಯೆ ತಡೆಯುತ್ತದೆ. ಇದು ಕೂದಲಿನ ಸಾಂದ್ರತೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಕೂದಲು ಹೊಳೆಯುತ್ತದೆ ಮತ್ತು ಕೂದಲಿನ ಸ್ಥಿತಿಸ್ಥಾಪಕತ್ವ ಕಾಪಾಡುತ್ತದೆ.


    ನೆತ್ತಿಯನ್ನು ಸೋಂಕು ಮತ್ತು ಅಲರ್ಜಿಗಳಿಂದ ರಕ್ಷಿಸುತ್ತದೆ


    ರೋಸ್ಮರಿ ಎಣ್ಣೆಯಲ್ಲಿರುವ ಉರಿಯೂತದ ಗುಣಲಕ್ಷಣಗಳು ನೆತ್ತಿಯ ಆರೋಗ್ಯ ಕಾಪಾಡುತ್ತದೆ ಮತ್ತು ಅಲರ್ಜಿ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ. ನೆತ್ತಿಯು ಆರೋಗ್ಯವಾಗಿದ್ದಾಗ ಕೂದಲಿನ ಬೆಳವಣಿಗೆ ಆಗುತ್ತದೆ.


    ಡ್ಯಾಂಡ್ರಫ್ ಸಮಸ್ಯೆ ತೆಗೆದು ಹಾಕುತ್ತದೆ


    ರೋಸ್ಮರಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಇವೆ. ಇದು ಪಾರ್ಶ್ವಕ್ಕೆ ಸಂಬಂಧಿಸಿದ ಸಮಸ್ಯೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಡ್ಯಾಂಡ್ರಫ್, ಫಂಗಲ್ ಮತ್ತು ಬ್ಯಾಕ್ಟೀರಿಯ ಸೋಂಕು ತಡೆದು ಕೂದಲು ಉದುರುವುದನ್ನು ತಡೆಯುತ್ತದೆ.


    ಕೂದಲಿಗೆ ರೋಸ್ಮರಿ ಎಣ್ಣೆ ಬಳಸುವ ಸರಿಯಾದ ಮಾರ್ಗ ಯಾವುದು?


    ನೆತ್ತಿಗೆ ಮಸಾಜ್ ಮಾಡುವುದು


    ರೋಸ್ಮರಿ ಎಣ್ಣೆಯ ಅಗತ್ಯ ಪೋಷಕಾಂಶಗಳನ್ನು ನೀಡಲು ನೆತ್ತಿಗೆ ಎಣ್ಣೆಯಿಂದ ಮಸಾಜ್ ಮಾಡಿ. ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ತೆಂಗಿನಕಾಯಿ, ಬಾದಾಮಿ ಅಥವಾ ಇನ್ನಾವುದೇ ಎಣ್ಣೆಯಲ್ಲಿ ನಾಲ್ಕೈದು ಹನಿ ರೋಸ್ಮರಿ ಎಣ್ಣೆ ಬೆರೆಸಿ. ಮತ್ತು ನಿಮ್ಮ ನೆತ್ತಿಗೆ ಉತ್ತಮ ಮಸಾಜ್ ನೀಡಿ. ಇಡೀ ದಿನ ಇರಿಸಬಹುದು ಅಥವಾ ಸ್ವಲ್ಪ ಸಮಯದ ಮಸಾಜ್ ನಂತರ ನಿಮ್ಮ ಕೂದಲನ್ನು ತೊಳೆಯಿರಿ.


    ಶಾಂಪೂ ಜೊತೆ ಬಳಸಿ


    ರೋಸ್ಮರಿ ಎಣ್ಣೆಯನ್ನು ನಿಮ್ಮ ಸಾಮಾನ್ಯ ಶಾಂಪೂ, ಕಂಡಿಷನರ್ ಮತ್ತು ಹೇರ್ ಕ್ರೀಮ್‌ನೊಂದಿಗೆ ಬೆರೆಸಿ ಮತ್ತು ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಹೆಚ್ಚು ರೋಸ್ಮರಿ ಸೇರಿಸಬೇಡಿ. 5 ಹನಿ ಹಾಕಿ.


    ಇದನ್ನೂ ಓದಿ: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ವಿಶೇಷ ಹೇರ್ ಟಾನಿಕ್ ಮನೆಮದ್ದು!


    ಕೂದಲಿನ ಉತ್ಪನ್ನದೊಂದಿಗೆ ತಲೆ ತೊಳೆಯಬಹುದು. ಹೇರ್ ಮಾಸ್ಕ್ ಮತ್ತು ಹೇರ್ ಕಂಡೀಷನರ್‌ ಗಳಂತೆ ಬಳಸಬಹುದು. ಇದು ನಿಮ್ಮ ಪ್ರಿಸ್ಕ್ರಿಪ್ಷನ್‌ಗಳ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ.

    Published by:renukadariyannavar
    First published: