ಎಸ್​ಬಿಐನಲ್ಲಿ ಪದವೀಧರರಿಗೆ ಉದ್ಯೋಗಾವಕಾಶ: 50 ಸಾವಿರಕ್ಕಿಂತ ಹೆಚ್ಚಿನ ವೇತನದ ವಿವಿಧ ಹುದ್ದೆಗಳ ನೇಮಕಾತಿ

SBI Recruitment 2019: ಅಭ್ಯರ್ಥಿಗಳನ್ನು ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇನ್ನು ಕೆಲವು ಪೋಸ್ಟ್‌ಗಳನ್ನು ನೇರ ಸಂದರ್ಶನದ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ.

zahir | news18-kannada
Updated:September 29, 2019, 10:19 AM IST
ಎಸ್​ಬಿಐನಲ್ಲಿ ಪದವೀಧರರಿಗೆ ಉದ್ಯೋಗಾವಕಾಶ: 50 ಸಾವಿರಕ್ಕಿಂತ ಹೆಚ್ಚಿನ ವೇತನದ ವಿವಿಧ ಹುದ್ದೆಗಳ ನೇಮಕಾತಿ
ಸಾಂದರ್ಭಿಕ ಚಿತ್ರ
zahir | news18-kannada
Updated: September 29, 2019, 10:19 AM IST
SBI Recruitment 2019: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿಯ 477 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30 ಕ್ಕೆ ವಿಸ್ತರಿಸಲಾಗಿದೆ. ಆಸಕ್ತರು sbi.co.in ಎಂಬ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು.

ಸ್ಪೆಷಲಿಸ್ಟ್ ಕೇಡರ್ ಆಫೀಸರ್‌ ವಿಭಾಗದಲ್ಲಿ ಹಲವು ಹುದ್ದೆಗಳಿದ್ದು, ಅಭ್ಯರ್ಥಿಗಳನ್ನು ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇನ್ನು ಕೆಲವು ಪೋಸ್ಟ್‌ಗಳನ್ನು ನೇರ ಸಂದರ್ಶನದ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಯ ಹೆಸರು:

ಸ್ಪೆಷಲಿಸ್ಟ್ ಕೇಡರ್ ಆಫೀಸರ್

ಒಟ್ಟು ಪೋಸ್ಟ್‌ಗಳ ಸಂಖ್ಯೆ:
477 ಹುದ್ದೆಗಳು

ವಿದ್ಯಾರ್ಹತೆ:
Loading...

ಬಿಇ / ಬಿಟೆಕ್ ಪದವಿ ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹಾಗೆಯೇ ವಿಭಿನ್ನ ಹುದ್ದೆಗಳಿಗೆ ವಿಭಿನ್ನ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಅರ್ಹತೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.

ಇದನ್ನೂ ಓದಿ: ಕೀನ್ಯಾ ಕಾಡಿನಲ್ಲಿ ಕರಿಯ: ಅಭಿಮಾನಿಗಳ ದಾಸನ ಫೋಟೋ ವೈರಲ್..!

ವೇತನ:
ಜೂನಿಯರ್ ಮ್ಯಾನೇಜರ್ - 42,020 ರೂ.
ಮ್ಯಾನೇಜರ್ ಸ್ಕೇಲ್ II - 45,950 ರೂ.
ಮ್ಯಾನೇಜರ್ ಸ್ಕೇಲ್ III - 51,490 ರೂ.
ಸೀನಿಯರ್ ಮ್ಯಾನೇಜರ್ ಗ್ರೇಡ್ IV- 59,170 ರೂ.

ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ - 750 ರೂ.
ಮೀಸಲಾತಿ ಅಭ್ಯರ್ಥಿಗಳಿಗೆ - 125 ರೂ

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಈ ಲಿಂಕ್ ಅನ್ನು SBI Apply Online ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.
First published:September 29, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...