ಕಷ್ಟದ ಸಮಯಗಳಲ್ಲಿ ಹಿಂತಿರುಗಲು ತುರ್ತು ನಿಧಿಯನ್ನು ಹೊಂದಿರದ ಜನರು, ತಾತ್ಕಾಲಿಕ ನಗದು ಬಿಕ್ಕಟ್ಟನ್ನು ತಪ್ಪಿಸಲು ಸಾಮಾನ್ಯವಾಗಿ ವೈಯಕ್ತಿಕ ಸಾಲಗಳು ಅಥವಾ ಗೋಲ್ಡ್ ಲೋನ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಗೋಲ್ಡ್ ಲೋನ್ನಲ್ಲಿ ವೈಯಕ್ತಿಕ ಸಾಲಕ್ಕಿಂತ ಬಡ್ಡಿ ದರವು ಕಡಿಮೆಯಾಗಿರುವುದರಿಂದ ಯಾವಾಗಲೂ ಉತ್ತಮ ಆಯ್ಕೆಯಾಗಿದೆ. ಆದರೆ ನೀವು ಸುಲಭವಾಗಿ ಮರುಪಾವತಿ ಮಾಡುವ ಆಯ್ಕೆಯನ್ನು ಸಹ ಪಡೆಯುತ್ತೀರಿ.
ದೇಶದ ಅತಿದೊಡ್ಡ ಸಾಲಗಾರರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೈಯಕ್ತಿಕ ಚಿನ್ನದ ಸಾಲವನ್ನು ನೀಡುತ್ತದೆ. ಅಲ್ಲಿ ಗ್ರಾಹಕರು 20 ಲಕ್ಷ ರೂ. ವರೆಗೆ ಚಿನ್ನದ ಸಾಲ ಪಡೆಯಬಹುದು. ಈ ಸಾಲವನ್ನು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವ್ಯಕ್ತಿಗಳು ಪಡೆಯಬಹುದು. ಈ ಚಿನ್ನದ ಸಾಲವನ್ನು ಪಡೆಯಲು ನೀವು ಯಾವುದೇ ಆದಾಯದ ಪುರಾವೆಗಳನ್ನು ನೀಡುವ ಅಗತ್ಯವಿಲ್ಲ. ಸಾಮಾನ್ಯವಾಗಿ ಬ್ಯಾಂಕುಗಳು ಚಿನ್ನದ ಶುದ್ಧತೆಯ ಆಧಾರದ ಮೇಲೆ ಚಿನ್ನದ ಮೌಲ್ಯದ 75%ವರೆಗೆ ಸಾಲವಾಗಿ ನೀಡುತ್ತವೆ.
ಇನ್ನು, ಈ ಸಂಬಂಧ ಟ್ವೀಟ್ ಮಾಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ''ಎಸ್ಬಿಐನೊಂದಿಗೆ #GoldLoan (ಗೋಲ್ಡ್ ಲೋನ್)ಗೆ ಅರ್ಜಿ ಸಲ್ಲಿಸಿ ಮತ್ತು ಶೇ. 7.50 ಬಡ್ಡಿದರ, ಝೀರೋ ಪ್ರೊಸೆಸ್ಸಿಂಗ್ ಶುಲ್ಕ ಮತ್ತು ಇನ್ನಿತರ ಅತ್ಯಾಕರ್ಷಕ ವ್ಯವಹಾರಗಳನ್ನು ಆನಂದಿಸಿ" ''ಕಾಲ್ ಬ್ಯಾಕ್ ಪಡೆಯಲು, 7208933143ಗೆ ಮಿಸ್ಡ್ ಕಾಲ್ ನೀಡಿ ಅಥವಾ 7208933145ಗೆ SMS GOLD ನೀಡಿ'' ಎಂದು ಟ್ವೀಟ್ ಮಾಡಿದೆ. ಕನಿಷ್ಟ ಕಾಗದ ಪತ್ರಗಳು ಮತ್ತು ಕಡಿಮೆ ಬಡ್ಡಿದರದೊಂದಿಗೆ ಬ್ಯಾಂಕುಗಳು ಮಾರಾಟ ಮಾಡುವ ಚಿನ್ನದ ನಾಣ್ಯಗಳು ಸೇರಿದಂತೆ ಚಿನ್ನದ ಆಭರಣಗಳನ್ನು ಪ್ಲೆಡ್ಜ್ ಅಥವಾ ಅಡ ಇಡುವುದರಿಂದ ಎಸ್ಬಿಐ ಚಿನ್ನದ ಸಾಲವನ್ನು ಪಡೆಯಬಹುದು.
ಇದನ್ನೂ ಓದಿ: EPF ಬಡ್ಡಿ ದರಕ್ಕೆ ತೆರಿಗೆ! ಹೆಚ್ಚಿನ ಆದಾಯ ಗಳಿಸುವವರು ನಿವೃತ್ತಿಗಾಗಿ ಎಲ್ಲಿ ಹೂಡಿಕೆ ಮಾಡಬೇಕು?
ಎಸ್ಬಿಐ ಚಿನ್ನದ ಮೇಲಿನ ಸಾಲದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿಗಳು ಇಲ್ಲಿವೆ:
ಅರ್ಹತಾ ಮಾನದಂಡಗಳು:
ವಯಸ್ಸು: 18 ವರ್ಷ ಮತ್ತು ಮೇಲ್ಪಟ್ಟವರುವೃತ್ತಿ: ಬ್ಯಾಂಕಿನ ನೌಕರರು, ಪಿಂಚಣಿದಾರರು ಸೇರಿದಂತೆ ಸ್ಥಿರ ಆದಾಯದ ಮೂಲವನ್ನು ಹೊಂದಿರುವ ಯಾವುದೇ ವ್ಯಕ್ತಿ (ಏಕ ಅಥವಾ ಜಂಟಿಯಾಗಿ). (ಆದಾಯದ ಪುರಾವೆ ಅಗತ್ಯವಿಲ್ಲ)
ಎಸ್ಬಿಐ ಚಿನ್ನದ ಮೇಲಿನ ಸಾಲದ ವೈಶಿಷ್ಟ್ಯಗಳು:
ಗರಿಷ್ಠ ಸಾಲ ಮೊತ್ತ: 50 ಲಕ್ಷ ರೂ
ಕನಿಷ್ಠ ಸಾಲ ಮೊತ್ತ: 20,000 ರೂ
ಮಾರ್ಜಿನ್:
ಗೋಲ್ಡ್ ಲೋನ್: 25%
ಲಿಕ್ವಿಡ್ ಗೋಲ್ಡ್ ಲೋನ್: 25%
ಬುಲೆಟ್ ಮರುಪಾವತಿ ಚಿನ್ನದ ಸಾಲ: 35%
ಭದ್ರತೆ: ಗುಣಮಟ್ಟ ಮತ್ತು ಪ್ರಮಾಣಕ್ಕಾಗಿ ಸರಿಯಾಗಿ ಪರಿಶೀಲಿಸಿದ ಚಿನ್ನದ ಆಭರಣಗಳನ್ನು ಅಡ ಇಡುವುದು
ಸಂಸ್ಕರಣಾ ಶುಲ್ಕಗಳು: ಸಾಲದ ಮೊತ್ತದ 0.25% + ಅನ್ವಯವಾಗುವ ಜಿಎಸ್ಟಿ ಕನಿಷ್ಠ 250 + ಅನ್ವಯವಾಗುವ ಜಿಎಸ್ಟಿ ಮತ್ತು ಯೋನೋ ಮೂಲಕ ಅರ್ಜಿ ಸಲ್ಲಿಸಿದರೆ ಝೀರೋ.
ಬಡ್ಡಿ ದರ:
ಯಾವುದೇ ಸಾಲದ ಮೊತ್ತಕ್ಕೆ MCLR-1 ವರ್ಷಕ್ಕಿಂತ 0.50% ಅಧಿಕ
ಇತರರು: ಚಿನ್ನದ ಮೌಲ್ಯಮಾಪಕ ಶುಲ್ಕವನ್ನು ಅರ್ಜಿದಾರರು ಪಾವತಿಸಬೇಕು
ಯೋಜನೆ 1 ವರ್ಷ ಎಂಸಿಎಲ್ಆರ್ ಸ್ಪ್ರೆಡ್ ಓವರ್ 1 ವರ್ಷ ಬಡ್ಡಿದರ
ಎಂಸಿಎಲ್ಆರ್
ಗೋಲ್ಡ್ ಲೋನ್ (ಎಲ್ಲ ವೇರಿಯೆಂಟ್ಗಳು) 7.00 % 0.50% 7.50%
ರಿಯಾಲ್ಟಿ ಗೋಲ್ಡ್ ಲೋನ್ - ಎಸ್ಬಿಐ ಹೌಸಿಂಗ್ ಲೋನ್ ಯೋಜನೆಯ ಗ್ರಾಹಕರಿಗೆ ಮಾತ್ರ ಎಕ್ಸ್ಕ್ಲೂಸಿವ್ ಆಗಿ ಲಭ್ಯ 7.00 % 0.30% 7.30%
ಮರುಪಾವತಿ
ಚಿನ್ನದ ಸಾಲ: ವಿತರಣೆಯ ತಿಂಗಳ ನಂತರದ ತಿಂಗಳಿನಿಂದ ಪ್ರಿನ್ಸಿಪಾಲ್ ಮತ್ತು ಬಡ್ಡಿಯ ಮರುಪಾವತಿಯನ್ನು ಪ್ರಾರಂಭಿಸಲಾಗುತ್ತದೆ.
ಲಿಕ್ವಿಡ್ ಗೋಲ್ಡ್ ಲೋನ್: ವಹಿವಾಟು ಸೌಲಭ್ಯ ಮತ್ತು ಮಾಸಿಕ ಬಡ್ಡಿಯೊಂದಿಗೆ ಓವರ್ಡ್ರಾಫ್ಟ್ ಖಾತೆಯನ್ನು ನೀಡಬೇಕಾಗಿದೆ.
ಬುಲೆಟ್ ಮರುಪಾವತಿ ಚಿನ್ನದ ಸಾಲ: ಸಾಲದ ಅವಧಿಗೆ ಅಥವಾ ಮೊದಲು / ಖಾತೆಯನ್ನು ಮುಚ್ಚುವಾಗ.
ಮರುಪಾವತಿ ಅವಧಿ:
ಚಿನ್ನದ ಸಾಲ: 36 ತಿಂಗಳು
ಲಿಕ್ವಿಡ್ ಗೋಲ್ಡ್ ಲೋನ್ (ದ್ರವ ಚಿನ್ನದ ಸಾಲ): 36 ತಿಂಗಳು
ಬುಲೆಟ್ ಮರುಪಾವತಿ ಚಿನ್ನದ ಸಾಲ: 12 ತಿಂಗಳು
ಅವಶ್ಯಕ ದಾಖಲೆಗಳು:
ಲೋನ್ಗೆ ಅರ್ಜಿ ಸಲ್ಲಿಸಲು:
ಎರಡು ಫೋಟೋಗಳೊಂದಿಗೆ ಚಿನ್ನದ ಸಾಲಕ್ಕಾಗಿ ಅರ್ಜಿ.
ವಿಳಾಸದ ಪುರಾವೆಗಳೊಂದಿಗೆ ಗುರುತಿನ ಪುರಾವೆ
ಅನಕ್ಷರಸ್ಥ ಸಾಲಗಾರರ ಸಂದರ್ಭದಲ್ಲಿ ಸಾಕ್ಷಿ ಪತ್ರ.
ವಿತರಣೆಯ ಸಮಯ:
ಡಿಪಿ ನೋಟ್ ಮತ್ತು ಡಿಪಿ ನೋಟ್ ಡೆಲಿವರಿ ಲೆಟರ್ ತೆಗೆದುಕೊಳ್ಳಿ.
ಚಿನ್ನದ ಆಭರಣಗಳು ವಿತರಣಾ ಪತ್ರವನ್ನು ತೆಗೆದುಕೊಳ್ಳಿ
ಅರೇಂಜ್ಮೆಂಟ್ ಪತ್ರ