ನಾಳೆಯಿಂದ SBI ಗ್ರಾಹಕರಿಗೆ ಹೊಸ ನಿಯಮಗಳು.. ATM ಡ್ರಾ, ಚೆಕ್​​ಬುಕ್​​ಗೆ ಎಷ್ಟು ಹಣ ಕಡಿತ?

ಮೊದಲ 10 ಉಚಿತ ಚೆಕ್‌ ಸೀಟ್‌ಗಳ ನಂತರ 10 ಚೆಕ್‌ ಸೀಟ್‌ಗಳಿಗೆ 40 ರೂ. ಜೊತೆಗೆ ಜಿಎಸ್‌ಟಿ ಹಾಗೂ 25 ಚೆಕ್‌ ಸೀಟ್‌ಗಳಿಗೆ ರೂ.75 ಜೊತೆಗೆ ಜಿಎಸ್‌ಟಿ ಮತ್ತು ತುರ್ತು ಚೆಕ್ ಬುಕ್‌ಗೆ  50 ರೂ. ಜೊತೆಗೆ ಜಿಎಸ್‌ಟಿ ಅದರಲ್ಲಿ ನೀವು 10 ಚೆಕ್‌ ಶೀಟ್‌ಗಳನ್ನು ಪಡೆಯಬಹುದಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಜುಲೈ 1 ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹೊಸ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಸ್ವಯಂಚಾಲಿತ ಟೆಲ್ಲರ್ ಯಂತ್ರಗಳು (ಎಟಿಎಂಗಳು) ಮೂಲಕ ನಾಲ್ಕು ಬಾರಿ ಹಣವನ್ನು ತೆಗೆದುಕೊಂಡ ನಂತರ ಅದರ ಶಾಖೆಗಳಿಂದ ನೀವು ಹಣವನ್ನು ಡ್ರಾ(ತೆಗೆದರೆ) ಮಾಡಿದರೆ ನಿಮ್ಮ ಹಣಕ್ಕೆ ಬ್ಯಾಂಕ್‌ ಶುಲ್ಕವನ್ನು ವಿಧಿಸುತ್ತದೆ.ಈ ಹೊಸ ಬದಲಾವಣೆಗಳು ಪ್ರಾಥಮಿಕವಾಗಿ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (ಬಿಎಸ್‌ಬಿಡಿ) ಖಾತೆಯನ್ನು ಹೊಂದಿರುವವರ ಮೇಲೆ ಪರಿಣಾಮವನ್ನು ಬೀರುತ್ತದೆ. ವ್ಯಾಪಕ ಶ್ರೇಣಿಯಲ್ಲಿ ಇತರೆ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ. ಮುಂಬರುವ ಬದಲಾವಣೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.


  ಬಿಎಸ್‌ಬಿಡಿ ಖಾತೆದಾರರು ಹಣ ತೆಗೆದುಕೊಳ್ಳುವ ಸಮಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು:


  ಬಿಎಸ್‌ಬಿಡಿ ಖಾತೆಗಳನ್ನು ಹೊಂದಿರುವ ಗ್ರಾಹಕರು ಈ ಹೊಸ ಬದಲಾವಣೆಗಳ ಕೇಂದ್ರಬಿಂದುಗಳಾಗಿರುತ್ತಾರೆ. ಅವುಗಳಲ್ಲಿ ಒಂದು ಎಟಿಎಂ ಮತ್ತು ಬ್ಯಾಂಕ್ ಶಾಖೆಗಳಿಂದ ಹಣವನ್ನು ತೆಗೆದುಕೊಳ್ಳಲು ಎಸ್‌ಬಿಐ ವಿಧಿಸುವ ಶುಲ್ಕಗಳು. ಬಿಎಸ್‌ಬಿಡಿ ಖಾತೆಯು ಮೂಲಭೂತವಾಗಿ ಶೂನ್ಯ-ಬ್ಯಾಲೆನ್ಸ್ ಅಥವಾ ಕನಿಷ್ಠ ಬ್ಯಾಲೆನ್ಸ್ ಖಾತೆಯಾಗಿದ್ದು, ಅದನ್ನು ಉಳಿತಾಯ ಖಾತೆಯಾಗಿ ಒದಗಿಸಲಾಗುತ್ತದೆ, ಇದು ಕೆಲವು ಕನಿಷ್ಠ ಸೌಲಭ್ಯಗಳನ್ನು ಉಚಿತವಾಗಿ ಪಡೆಯುತ್ತದೆ. ಬಿಎಸ್‌ಬಿಡಿ ಖಾತೆಗಳಿಗೆ ಸೇವಾ ಶುಲ್ಕಗಳ ಪರಿಷ್ಕರಣೆಯ ಪ್ರಕಾರ,ಮೊದಲ ನಾಲ್ಕು ಉಚಿತ ಹಣ ತೆಗೆದುಕೊಳ್ಳುವಿಕೆ ನಂತರ ಹೆಚ್ಚುವರಿ ಹಣವನ್ನು ಹತ್ತಿರದ ಎಟಿಎಂಗಳಿಂದ ಡ್ರಾ ಮಾಡಿದರೆ ನಿಮ್ಮ ಸೇವೆಗಳಿಗೆ ಎಸ್‌ಬಿಐ 15 ರಿಂದ 75 ರೂ ಶುಲ್ಕವನ್ನು ವಿಧಿಸುತ್ತದೆ. ಆದರೆ, ಶಾಖೆಗಳಲ್ಲಿ, ಎಟಿಎಂ ಯಂತ್ರಗಳಲ್ಲಿ ಅಥವಾ ನಗದು ವಿತರಕಗಳಲ್ಲಿ (ಸಿಡಿಎಂ) ಹಣಕಾಸೇತರ ವಹಿವಾಟುಗಳು ಮತ್ತು ವರ್ಗಾವಣೆ ವ್ಯವಹಾರಗಳು ಮುಕ್ತವಾಗಿರುತ್ತವೆ ಅವುಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಬ್ಯಾಂಕ್‌ ತಿಳಿಸಿದೆ.


  ಮುಂಬರುವ ಚೆಕ್‌ ಬುಕ್ ಶುಲ್ಕಗಳ ಬದಲಾವಣೆಗಳು:


  ಚೆಕ್ ಬುಕ್ ಬಳಕೆ ಮತ್ತು ಅದರ ಜೊತೆಗಿನ ಸೇವೆಗಳಿಗೆ ಸಂಬಂಧಿಸಿದಂತೆ, ನೀವು ಮೊದಲ 10 ಚೆಕ್ ಸೀಟ್‌ಗಳನ್ನು ಉಚಿತವಾಗಿ ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಪಡೆಯಲು ಅರ್ಹರಾಗಿರುತ್ತಿರಿ ನಿಮಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಹೊಸ ಬದಲಾವಣೆಯ ಪ್ರಕಾರ ಮೊದಲ 10 ಉಚಿತ ಚೆಕ್‌ ಸೀಟ್‌ಗಳ ನಂತರ ನಿಮಗೆ ಶುಲ್ಕವನ್ನು ವಿಧಿಸಲಾಗುವುದು. ಮೊದಲ 10 ಉಚಿತ ಚೆಕ್‌ ಸೀಟ್‌ಗಳ ನಂತರ 10 ಚೆಕ್‌ ಸೀಟ್‌ಗಳಿಗೆ 40 ರೂ. ಜೊತೆಗೆ ಜಿಎಸ್‌ಟಿ ಹಾಗೂ 25 ಚೆಕ್‌ ಸೀಟ್‌ಗಳಿಗೆ ರೂ.75 ಜೊತೆಗೆ ಜಿಎಸ್‌ಟಿ ಮತ್ತು ತುರ್ತು ಚೆಕ್ ಬುಕ್‌ಗೆ  50 ರೂ. ಜೊತೆಗೆ ಜಿಎಸ್‌ಟಿ ಅದರಲ್ಲಿ ನೀವು 10 ಚೆಕ್‌ ಶೀಟ್‌ಗಳನ್ನು ಪಡೆಯಬಹುದಾಗಿದೆ. ಹಿರಿಯ ನಾಗರೀಕರಿಗೆ ಈ ನಿಯಮ ಅನ್ವಯವಾಗುವುದಿಲ್ಲ ಮತ್ತು ಚೆಕ್ ಪುಸ್ತಕಗಳು ಮತ್ತು ಹೆಚ್ಚುವರಿ ಸೇವೆಗಳ ಸಂದರ್ಭದಲ್ಲಿ ಅವರಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.


  ಎಸ್‌ಬಿಐನಿಂದ ಈ ಬದಲಾವಣೆಗಳ ಪರಿಣಾಮ
  ಈ ಬದಲಾವಣೆಗಳು ಮತ್ತು ಹೆಚ್ಚುವರಿ ಶುಲ್ಕಗಳು ಬಿಎಸ್‌ಬಿಡಿ ಖಾತೆದಾರರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ, ಈ ರೀತಿಯ ಖಾತೆಗಳನ್ನು ಸಾಮಾಜಿಕವಾಗಿ ಬಡ ವರ್ಗದ ಗುಂಪುಗಳಿಗೆ ಒದಗಿಸಲಾಗುತ್ತದೆ, ಅದು ಅವರ ಬ್ಯಾಂಕಿಂಗ್ ವ್ಯವಹಾರದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಶೂನ್ಯ ಸಮತೋಲನ ಅಥವಾ ಕನಿಷ್ಠ ಬ್ಯಾಲೆನ್ಸ್ ಖಾತೆಗಳನ್ನು ಬಡ ವರ್ಗದವರು ಮತ್ತು ಆರ್ಥಿಕವಾಗಿ ಬಡ ಭಾಗಗಳಲ್ಲಿ ಸ್ಥಾಪಿಸುವ ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಮಾಡಲಾಗಿದೆ ಅವರೆಗೆ ಹಣವನ್ನು ಹೊಡಿಕೆ ಮಾಡಲು ಹಾಗೂ ಉಳಿಸಲು ಸಹಕಾರಿಯಾಗಲೆಂದು ಈ ರೀತಿಯ ಬದಲಾವಣೆಗಳನ್ನು ಮಾಡಲಾಗಿದೆ.


  ಇದನ್ನೂ ಓದಿ: Weight Loss Tips: ಬೂದು ಕುಂಬಳಕಾಯಿನ ಈ ರೀತಿ ಸೇವಿಸಿ.. ಸುಲಭವಾಗಿ ತೂಕ ಇಳಿಸಿಕೊಳ್ಳಿ..

  ಹೊಸ ನಿಯಮಗಳು ಮತ್ತು ನಿಬಂಧನೆಗಳು ಖಾತೆದಾರರಿಗೆ ತಮ್ಮ ಉಳಿತಾಯವನ್ನು ಸುಲಭವಾಗಿ ಮಾಡಲು ಮತ್ತು ಹಣಕಾಸಿನ ವಹಿವಾಟುಗಳನ್ನು ನಡೆಸಲು ಅಡ್ಡಿ ಮಾಡುತ್ತವೆ. ಎಸ್‌ಬಿಐ ಇತ್ತೀಚೆಗೆ ತನ್ನ ಗ್ರಾಹಕರು ಇತರೆ ಶಾಖೆಗಳಲ್ಲಿ ಹಣವನ್ನು ತೆಗೆದುಕೊಳ್ಳಲು ಹಣದ ಮೀತಿಯನ್ನು ಹೆಚ್ಚಿಸಿದೆ. ಚೆಕ್ ಬುಕ್‌, ಉಳಿತಾಯ ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಮೂರನೆಯ ವ್ಯಕ್ತಿಯಿಂದ ಹಣ ತೆಗೆಯುವಿಕೆಯ ಮೀತಿಯನ್ನು ಹೆಚ್ಚಿಸಿದೆ.

  Published by:Kavya V
  First published: