SBI ಗ್ರಾಹಕರಿಗೆ ಗುಡ್​​ನ್ಯೂಸ್​: ಪ್ಲಾಟಿನಂ ಠೇವಣಿ ಯೋಜನೆ ಘೋಷಣೆ, ಬಡ್ಡಿ ವಿವರ ಇಲ್ಲಿದೆ

platinum deposit scheme: ಹೊಸ ಎಸ್‌ಬಿಐ ಪ್ಲಾಟಿನಂ ಠೇವಣಿ ಯೋಜನೆ ಆಗಸ್ಟ್ 15 ರಿಂದ 2021ರಿಂದ ಸೆಪ್ಟೆಂಬರ್ 14, 2021 ರವರೆಗೆ ಲಭ್ಯವಿರುತ್ತದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಹೊಸ ಪ್ಲಾಟಿನಂ ಠೇವಣಿ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯನ್ನು ಯಾವುದೇ SBI ಶಾಖೆ ಅಥವಾ SBI YONO ಆ್ಯಪ್ ಮೂಲಕ ಪಡೆಯಬಹುದು. ಎಸ್‌ಬಿಐ ಟ್ವೀಟ್ ಮೂಲಕ ತನ್ನ ಹೊಸ ಯೋಜನೆ ಬಗ್ಗೆ ಮಾಹಿತಿ ನೀಡಿದೆ. ಭಾರತದ 75 ನೇ ಸ್ವಾತಂತ್ರ್ಯ ದಿನವನ್ನು ಪ್ಲಾಟಿನಂ ಠೇವಣಿಗಳೊಂದಿಗೆ ಆಚರಿಸಲು ಇದು ಸಕಾಲವಾಗಿದೆ. ಎಸ್‌ಬಿಐನೊಂದಿಗೆ ಅವಧಿ ಠೇವಣಿ ಮತ್ತು ವಿಶೇಷ ಅವಧಿ ಠೇವಣಿಗಳಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತಿದ್ದೇವೆ. ಹೊಸ ಎಸ್‌ಬಿಐ ಪ್ಲಾಟಿನಂ ಠೇವಣಿ ಯೋಜನೆ ಆಗಸ್ಟ್ 15 ರಿಂದ 2021ರಿಂದ ಸೆಪ್ಟೆಂಬರ್ 14, 2021 ರವರೆಗೆ ಲಭ್ಯವಿರುತ್ತದೆ.  ಗ್ರಾಹಕರು ಹೆಚ್ಚಿನ ಸಂಖ್ಯೆಯ ಯೋಜನೆಯನ್ನು ಆಯ್ಕೆ ಮಾಡಿ ಎಂದು ತಿಳಿಸಿದೆ.

ಗ್ರಾಹಕರಿಗೆ ಠೇವಣಿ ಆಯ್ಕೆಗಳು ಹೀಗಿವೆ 

  1. ಪ್ಲಾಟಿನಂ 75 ದಿನಗಳು- ಪ್ಲಾಟಿನಂ 525 ದಿನಗಳು- ಪ್ಲಾಟಿನಂ 2250 ದಿನಗಳು

  2. NRE ಮತ್ತು NRO ಅವಧಿ ಠೇವಣಿಗಳು (<Rs 2 ಕೋಟಿ) ಒಳಗೊಂಡಂತೆ ದೇಶೀಯ ಚಿಲ್ಲರೆ ಅವಧಿ ಠೇವಣಿಗಳು

  3. (DRTD)- ಹೊಸ ಮತ್ತು ನವೀಕರಣ ಠೇವಣಿಗಳು- ಅವಧಿ ಠೇವಣಿ ಮತ್ತು ವಿಶೇಷ ಅವಧಿ ಠೇವಣಿಗಳು

  4.  NRE ಠೇವಣಿಗಳು 525 ದಿನಗಳು ಮತ್ತು 2250 ದಿನಗಳವರೆಗೆ ಮಾತ್ರ ಅರ್ಹವಾಗಿವೆ.


ಬಡ್ಡಿ ಪಾವತಿ   

ಅವಧಿ ಠೇವಣಿಗಳು - ಮಾಸಿಕ ಅಥವಾ ತ್ರೈಮಾಸಿಕ ಠೇವಣಿಗಳಲ್ಲಿ ಮಾತ್ರ ಪಡೆಯಬಹುದು  2 ಕೋಟಿಗಿಂತ ಕಡಿಮೆ ಇರುವ ಡಿಆರ್‌ಟಿಡಿಗೆ ಬಡ್ಡಿ ದರ ಮತ್ತು ಎನ್‌ಆರ್‌ಇ ಮತ್ತು ಎನ್‌ಆರ್‌ಒ ಟರ್ಮ್‌ ಠೇವಣಿಗಳು ಬದಲಾಗುವುದಿಲ್ಲ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: