ಅಕ್ಟೋಬರ್​ಫೆಸ್ಟ್​: ಪ್ರಾರಂಭವಾಗಿದೆ ವಿಶ್ವದ ಅತಿ ದೊಡ್ಡ ಬಿಯರ್ ಉತ್ಸವ

news18
Updated:September 24, 2018, 2:45 PM IST
ಅಕ್ಟೋಬರ್​ಫೆಸ್ಟ್​: ಪ್ರಾರಂಭವಾಗಿದೆ ವಿಶ್ವದ ಅತಿ ದೊಡ್ಡ ಬಿಯರ್ ಉತ್ಸವ
news18
Updated: September 24, 2018, 2:45 PM IST
-ನ್ಯೂಸ್ 18 ಕನ್ನಡ

ಮದ್ಯಪಾನದ ಮೊದಲ ಹೆಜ್ಜೆ ಬಿಯರ್ ಎಂದರೆ ತಪ್ಪಾಗಲಾರದು. ಬಿಯರ್​ನಲ್ಲಿ ಅಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಇದ್ದರೂ ಹೆಚ್ಚಿನವರ ಪ್ರಿಯ ಪಾನೀಯದಲ್ಲಿ ಇದು ಕೂಡ ಒಂದು. ಇದಕ್ಕಾಗಿಯೇ ಜರ್ಮನಿಯ ಮ್ಯೂನಿಚ್​ ನಗರದಲ್ಲಿ ವಿಶ್ವದ ಅತಿ ದೊಡ್ಡ ಬಿಯರ್ ಉತ್ಸವವನ್ನು ಆಯೋಜಿಸಲಾಗುತ್ತದೆ. ಈ ಉತ್ಸವಕ್ಕಾಗಿ ಸಾವಿರಾರು ಮಂದಿ ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಶುಕ್ರವಾರ ಮ್ಯೂನಿಚ್​ನಲ್ಲಿ ಸೇರಿದ್ದರು. ಪ್ರತಿ ವರ್ಷದಂತೆ ಈ ಬಾರಿ ಕೂಡ ಅಕ್ಟೋಬರ್​ಫೆಸ್ಟ್ ನಲ್ಲಿ ಕುಡಿದು ಕುಪ್ಪಳಿಸಿದರು.​ಮ್ಯೂನಿಚ್ ನಗರದ ಮೇಯರ್ ಡೈಟರ್ ರೈಟರ್ ಬಿಯರ್ ಬಾಟಲ್​ನ್ನು ಓಪನ್ ಮಾಡುವ ಮೂಲಕ ವಿಶ್ವ ಬಿಯರ್ ಉತ್ಸವಕ್ಕೆ ಚಾಲನೆ ನೀಡಿದರು.  ಕೇಗ್ ಬಿಯರ್​ನ್ನು ಮೇಯರ್ ಒಪನ್ ಮಾಡಿದ ಮೇಯರ್ ಸಾಂಪ್ರದಾಯಿಕ ಘೋಷಣೆಗಳನ್ನು ಕೂಗುವ ಮೂಲಕ ಉತ್ಸವಕ್ಕೆ ಕಿಕ್​ ಏರಿಸಿದ್ದರು.

ಹಲವು ಬಗೆಯ ಬಿಯರ್​ಗಳ ರುಚಿ ಹೆಚ್ಚಿಸಲೆಂದೇ ಸೈಡ್ ಡಿಶ್​ಗಳಾಗಿ ಸಾಸೇಜ್, ಹಂದಿ ಮಾಂಸ ಭಕ್ಷ್ಯಗಳನ್ನು ಸಿದ್ಧಪಡಿಸಲಾಗಿತ್ತು. ಅಲ್ಲದೆ ಸಾಂಪ್ರದಾಯಿಕ ಓಂಪಾ ಬ್ಯಾಂಡ್​ಗಳ ಮೂಲಕ ಉತ್ಸವವನ್ನು ಮತ್ತಷ್ಟು ರಂಗೀನ್ ಗೊಳಿಸಿದ್ದು  ಪ್ರವಾಸಿಗರ ಆಕರ್ಷಣೆಗೆ ಕಾರಣವಾಯಿತು.

ಅಕ್ಟೋಬರ್​​ಫೆಸ್ಟ್​ ಹಿನ್ನಲೆ

1810 ರಲ್ಲಿ ಹಿಲ್ಡ್ಬರ್ಗ್​ಸನ್​ ರಾಜಕುಮಾರ ಲುಡ್​ವಿಗ್ ತಮ್ಮ  ವಿವಾಹ ಸಮಾರಂಭವನ್ನು ಆಚರಿಸಲು ಆಯೋಜಿಸಿದ ಕುದುರೆ ಓಟದ ಸ್ಪರ್ಧೆಯಿಂದ ಅಕ್ಟೋಬರ್​ಫೆಸ್ಟ್​ ಆರಂಭವಾಯಿತು. ಕ್ರಮೇಣ ಇದೊಂದು ಸಾಂಪ್ರದಾಯಿಕ ಉತ್ಸವವಾಗಿ ಮಾರ್ಪಟ್ಟಿದ್ದು, ಇದರೊಂದಿಗೆ ಮನರಂಜನೆ ಕೂಡ ಸೇರಿರುವುದರಿಂದ ಅಕ್ಟೋಬರ್​​ಫೆಸ್ಟ್​ ವಿಶ್ವದ ಗಮನ ಸೆಳೆಯಿತು. ಕಾಲ ಕ್ರಮೇಣ ಇದು ವಿಶ್ವದ ಅತಿ ದೊಡ್ಡ ಬಿಯರ್ ಉತ್ಸವ ಎಂದು ಖ್ಯಾತಿ ಪಡೆಯಿತು.ಅಕ್ಟೋಬರ್​ಫೆಸ್ಟ್​ ಸದ್ಯ ಜರ್ಮನಿಗೆ ಪ್ರವಾಸಿಗರನ್ನು ಪ್ರಮುಖ ಉತ್ಸವಗಳಲ್ಲಿ ಒಂದಾಗಿದೆ. ಈ ಹಬ್ಬಕ್ಕಾಗಿ ಪ್ರತಿವರ್ಷ ಆರು ಮಿಲಿಯನ್ ಪ್ರವಾಸಿಗರು ಮ್ಯೂನಿಚ್ ನಗರಕ್ಕೆ ಭೇಟಿ ನೀಡಿ ಕುಡಿದು ಕುಪ್ಪಳಿಸುತ್ತಾರೆ. ಈ ವರ್ಷದ ಉತ್ಸವ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ.

 
First published:September 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...