Noodlesಗೆ ಗುಡ್‌ ಬೈ ಹೇಳಿ, ಈಗ Voodles ತಿನ್ನಿ! ಹೊಸ Food ಬಗ್ಗೆ ಇಲ್ಲಿದೆ ಮಾಹಿತಿ

ಜಗತ್ತಿನಾದ್ಯಂತ ಹೆಚ್ಚಾಗಿ ಸೇವಿಸುವ ಅತ್ಯಂತ ಸಾಮಾನ್ಯ ಆಹಾರಗಳಲ್ಲಿ ನೂಡಲ್ಸ್‌ಗೂ ತನ್ನದೇ ಆದ ಸ್ಥಾನವಿದೆ. ಇದನ್ನು ಗೋಧಿಯಿಂದ ಮಾಡಲಾಗುತ್ತಿದ್ದು ಗೋಧಿಯ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಕೆಲವು ಅಡ್ಡ ಪರಿಣಾಮಗಳು ಕೂಡ ಉಂಟಾಗುತ್ತವೆ. ಆದರೆ ಈ ವೂಡಲ್ಸ್‌ನಲ್ಲಿ ದೇಹಕ್ಕೆ ಬೇಕಾದ ತರಕಾರಿಗಳಿರುತ್ತವೆ.

ಇಂಟರ್‌ನೆಟ್ ಚಿತ್ರ

ಇಂಟರ್‌ನೆಟ್ ಚಿತ್ರ

  • Share this:
    ಈ ದಿನಗಳಲ್ಲಿ ನೂಡಲ್ಸ್‌ (Noodles) ಅನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ..? ಮಕ್ಕಳಿಂದ ಹಿಡಿದು ಮುದುಕರಾದಿಯಾಗಿ ಹೆಚ್ಚಿನ ಮಂದಿ ಚಪ್ಪರಿಸಿ ತಿನ್ನುವ ಆಹಾರಗಳಲ್ಲಿ (Food) ನೂಡಲ್ಸ್ ಕೂಡ ಒಂದು. ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಹೆಚ್ಚಾಗಿ ಸೇವಿಸುವ ಅತ್ಯಂತ ಸಾಮಾನ್ಯ ಆಹಾರಗಳಲ್ಲಿ ನೂಡಲ್ಸ್‌ಗೂ ತನ್ನದೇ ಆದ ಸ್ಥಾನವಿದೆ. ನೀವು ಅದನ್ನು ಪಾಸ್ತಾ (Pasta) ಎನ್ನಿ, ಚೌಮೆನ್ (Chowmen) ಎನ್ನಿ ಅಥವಾ ಸ್ಪಗೆಟ್ಟಿ (Spaghetti) ಎನ್ನಿ. ಆದರೆ ಅವೆಲ್ಲವನ್ನು ಮಾಡಲು ಉಪಯೋಗಿಸುವ ಮೂಲ ಸಾಮಗ್ರಿ ಒಂದೇ, ಅದುವೇ ಗೋಧಿ (Wheat). ಆದರೆ ಗೋಧಿಯ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಕೆಲವು ಅಡ್ಡ ಪರಿಣಾಮಗಳು ಕೂಡ ಉಂಟಾಗುತ್ತವೆ. ಅವುಗಳಲ್ಲಿ ಗೋಧಿ 14 ಗ್ಲೈಸಮಿಕ್ ಇಂಡೆಕ್ಸ್ ಅನ್ನು ಹೊಂದಿದ್ದು, ಇದನ್ನು ಮಧುಮೇಹಿಗಳ ಪಾಲಿಗೆ ಅನಾರೋಗ್ಯಕರ ಆಯ್ಕೆ ಎನ್ನಬಹುದು. ಗೋಧಿಯಲ್ಲಿ ಗ್ಲುಟೆನ್ ಇರುತ್ತದೆ. ಗ್ಲುಟೆನ್ ಅಲರ್ಜಿಗಳು ಮತ್ತು ಗ್ಲುಟೆನ್ ಅಸಹಿಷ್ಣುತೆ ಹೊಂದಿರುವ ಜನರಿಗೆ ಗೋಧಿ ತಿನ್ನಲು ಸೂಕ್ತವಾದ ಆಯ್ಕೆ ಅಲ್ಲ. ಸೆಲಿಕಯಾಕ್ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಗೋಧಿ ಮತ್ತು ಅದರ ಉಪ ಉತ್ಪನ್ನಗಳನ್ನು ಸೇವಿಸದಂತೆ ಶಿಫಾರಸು ಮಾಡಲಾಗುತ್ತದೆ.

    ಇತ್ತೀಚೆಗೆ ಆರೋಗ್ಯ ಮತ್ತು ಸ್ವಾಸ್ಥ್ಯದ ಬಗ್ಗೆ ಪ್ರತಿಯೊಬ್ಬರಲ್ಲೂ ಕಾಳಜಿ ಮೂಡುತ್ತಿದೆ. ಅದಕ್ಕೆ ಅನುಗುಣವಾಗಿ ಆಹಾರ ಉದ್ಯಮದಲ್ಲೂ ಆರೋಗ್ಯಕರ ಆಹಾರಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಆನ್ವೇಷಣೆಗಳು ನಡೆಯುತ್ತಿವೆ. ಯಾವುದೇ ಆಹಾರಕ್ಕೆ, ಪರ್ಯಾಯವಾಗಿ ಆರೋಗ್ಯಕರ ಅಥವಾ ಸಸ್ಯ ಆಧಾರಿತ ಆಹಾರಗಳು ಲಭ್ಯ ಇವೆ ಎಂಬುದನ್ನು ಈ ದಿನಗಳಲ್ಲಿ ನಾವು ಖಷಿಯಾಗಿ ಹೇಳಿಕೊಳ್ಳಬಹುದು.

    ವೂಡಲ್ ವಿಧಗಳು

    ವೂಡಲ್ (Voodles) ಎಂದರೆ ತರಕಾರಿಗಳಿಂದ ಮಾಡಲ್ಪಟ್ಟಿರುವ ನೂಡಲ್ಸ್‌ಗಳು (ಮುಖ್ಯ ಘಟಕವಾಗಿ ಗೋಧಿಯನ್ನು ಹೊಂದಿರುವುದಿಲ್ಲ). ಅವುಗಳನ್ನು ಸಾಮಾನ್ಯವಾಗಿ ತರಕಾರಿ ನೂಡಲ್ಸ್ ಎಂದು ಕರೆಯಲಾಗುವುದು ಮತ್ತು ಇತ್ತೀಚಿನ ದಿನಗಳಲ್ಲಿ ಅದು ಹೆಚ್ಚು ಜನಪ್ರಿಯತೆಯನ್ನು ಕೂಡ ಪಡೆಯುತ್ತಿದೆ. ಇದನ್ನು ಸೇವಿಸುವುದರಿಂದ ಕಾರ್ಬೋಹೈಡ್ರೆಟ್ ಸೇವನೆ ಕಡಿತಗೊಳಿಸಬಹುದು ಮತ್ತು ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಆಹಾರವನ್ನು ಸೇವಿಸಿದಂತಾಗುತ್ತದೆ.

    ನೀವು ಆರೋಗ್ಯಕರ ನೂಡಲ್ಸ್ ತಿನ್ನಬೇಕು ಎಂದರೆ, ನಿಮ್ಮ ಆಹಾರ ಕ್ರಮದಲ್ಲಿ ಈ ಕೆಳಗೆ ತಿಳಿಸಿರುವ ವಿವಿಧ ವೂಡಲ್ಸ್‌ಗಳನ್ನು ಸೇರಿಸಬಹುದು.

    ಇದನ್ನೂ ಓದಿ: Chinese food ಅಂದ್ರೆ ಇಷ್ಟನಾ? ಇಲ್ನೋಡಿ ಈತ ಚೀನಾ ತಿಂಡಿ ತಿಂದು ಕೈಕಾಲು ಕಳೆದುಕೊಂಡ್ನಂತೆ!

    ಜುಕಿನಿ

    ಈ ತರಕಾಯಿಯಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಹೇರಳವಾಗಿದೆ ಮತ್ತು ರುಚಿಕರವಾದ ನೂಡಲ್ಸ್ ಅನ್ನು ಮಾಡಬಹುದು. ಜುಕಿನಿಯಲ್ಲಿ ಗ್ಲೈಸಮಿಕ್ ಇಂಡೆಕ್ಸ್ 1 ಇದೆ.

    ಕ್ಯಾರೆಟ್‍ಗಳು

    ಬೀಟಾ ಕ್ಯಾರೋಟಿನ್‍ನ ಖಜಾನೆಯಾಗಿರುವ ಕ್ಯಾರೆಟ್‍ಗಳನ್ನು ಕೂಡ ನೂಡಲ್ಸ್ ಮಾಡಲು ಬಳಸಬಹುದು. ಅದರಲ್ಲಿ ಹೇರಳ ವಿಟಮಿನ್ ಇ ಇದೆ. ಕ್ಯಾರೆಟ್‍ನ ಗ್ಲೈಸಮಿಕ್ ಇಂಡೆಕ್ಸ್ ಲೋಡ್ 2 ಆಗಿರುತ್ತದೆ.

    ಬೀಟ್‍ರೂಟ್

    ಬೀಟ್‍ರೂಟ್ ಅತ್ಯಧಿಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಫೈಬರ್‌ನ ಒಂದು ಮೂಲವೂ ಹೌದು. ಅಷ್ಟೇ ಅಲ್ಲ, ಬೀಟ್‍ರೂಟ್‍ನಲ್ಲಿ ವಿಟಮಿನ್ ಸಿ ಮತ್ತು ಕಬ್ಬಿಣಾಂಶವೂ ಇದೆ. ಬೀಟ್‍ರೂಟ್‍ನಲ್ಲಿ ಪೋಷಕಾಂಶಗಳು ಇವೆ ಎಂಬ ಒಂದೇ ಕಾರಣಕ್ಕೆ ಮಾತ್ರವಲ್ಲ, ಅದರ ಸುಂದರ ಬಣ್ಣದ ಕಾರಣದಿಂದಲೂ ಅದರಿಂದ ನೂಡಲ್ಸ್ ಮಾಡುವುದು ಖುಷಿ ಕೊಡುತ್ತದೆ. ಬೀಟ್‍ರೂಟ್‍ನ ಗ್ಲೈಸಮಿಕ್ ಇಂಡೆಕ್ಸ್ ಲೋಡ್ ಸುಮಾರು 4.

    ಸೌತೆಕಾಯಿ

    ದೇಹಕ್ಕೆ ಹೆಚ್ಚು ಉಲ್ಲಾಸ ನೀಡುವ ತರಕಾರಿಗೆ ಬಹುಮಾನ ನೀಡುವ ಸಾಧ್ಯತೆ ಏನಾದರೂ ಇದ್ದರೆ, ಆ ಬಹುಮಾನ ಖಂಡಿತಾ ಸೌತೆಕಾಯಿಯ ಪಾಲಾಗುತ್ತದೆ. ಸೌಂದರ್ಯ ಮತ್ತು ಆರೋಗ್ಯ ಎರಡಕ್ಕೂ ಪ್ರಯೋಜನಕಾರಿಯಾದ ತರಕಾರಿ ಇದು. ನೂಡಲ್ಸ್ ಮಾಡಲು ನೀವು ಸೌತೆಕಾಯಿಯನ್ನು ಕೂಡ ಬಳಸಬಹುದು. ಈ ತರಕಾರಿಯಲ್ಲಿ ಫೈಬರ್ ಮತ್ತು ನೀರು ಅತ್ಯಧಿಕ ಪ್ರಮಾಣದಲ್ಲಿದೆ. ಸೌತೆಕಾಯಿಯ ಗ್ಲೈಸಮಿಕ್ ಇಂಡೆಕ್ಸ್ ಲೋಡ್ 1 ಆಗಿದೆ.

    ಇದನ್ನೂ ಓದಿ: Breakfast Recipe: 15 ನಿಮಿಷಗಳಲ್ಲಿ ರೆಡಿಯಾಗುತ್ತೆ ಈ ಹೈಪ್ರೊಟೀನ್ ಬ್ರೇಕ್​​ಫಾಸ್ಟ್

    ಬ್ರೊಕೋಲಿ

    ಬ್ರೊಕೋಲಿಯಲ್ಲಿ ಕಡಿಮೆ ಕ್ಯಾಲೊರಿಗಳು , ಕಡಿಮೆ ಕಾರ್ಬ್ಸ್‌ ಇದೆ. ಫೈಬರ್ ಮತ್ತು ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿದೆ. ಅದರ ಗ್ಲೈಸೆಮಿಕ್ ಇಂಡೆಕ್ಸ್ ಲೋಡ್ 1 ಆಗಿದೆ.

    ಹಾಗಿದ್ರೆ ಇನ್ನೇಕೆ ತಡ, ನೂಡಲ್ಸ್‌ಗೆ ಗುಡ್  ಬೈ ಹೇಳಿ, ಈಗಲೇ ಈ ವೂಡಲ್ಸ್‌ಗಳನ್ನು ಮನೆಯಲ್ಲೇ ಟ್ರೈ ಮಾಡಿ.
    Published by:Annappa Achari
    First published: